ಪ್ರತಿನಿತ್ಯ ದುಡಿಯುವುದು ನಮ್ಮ ನಾಳಿನ ಭವಿಷ್ಯಕ್ಕೆ. ನಮ್ಮ ನಿವೃತ್ತಿ ಜೀವನವು ಸುಖವಾಗಿ ಆರಾಮದಾಯಕವಾಗೀ ಇರಬೇಕು ಎಂದೇ ಎಲ್ಲರೂ ಬಯಸುತ್ತಾರೆ. ಈಗ ಬ್ಯಾಂಕ್ ನಲ್ಲಿ ಹಲವು ಕಂಪನಿಗಳಲ್ಲಿ ಪಿಂಚಣಿ ಯೋಜನೆಗಳು ಲಭ್ಯ ಇದೆ. ಅದರ ಜೊತೆಗೆ ಈಗ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನೂ(Atal Pension Scheme) ಆರಂಭಿಸಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಏನು ಲಾಭ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಈ ಯೋಜನೆಗೆ ಹೂಡಿಕೆ ಮಾಡಲು ವಯಸ್ಸಿನ ಮಿತಿ ಏಷ್ಟು :- ಅಟಲ್ ಪಿಂಚಣಿ ಯೋಜನೆಯಲ್ಲಿ(Atal Pension Scheme) ಹೂಡಿಕೆ ಮಾಡಲು ಕನಿಷ್ಟ 18 ವರ್ಷ ತುಂಬಿರಬೇಕು. ಹಾಗೂ ಈ ಯೋಜನೆಗೆ 40 ವರ್ಷ ವಯಸ್ಸಿನ ವರೆಗೆ ಹೂಡಿಕೆ ಮಾಡಲು ಸಾಧ್ಯವಿದೆ. ಈ ಯೋಜನೆಗೆ ತಿಂಗಳಿಗೆ ಅಥವಾ ತ್ರೈಮಾಸಿಕವಾಗಿ ಹಾಗೂ ವಾರ್ಷಿಕವಾಗಿ ಹಣ ಹೂಡಿಕೆ ಮಾಡಲು ಸಾಧ್ಯವಿದೆ.
ತಿಂಗಳಿಗೆ 5,000 ಪಿಂಚಣಿ ಪಡೆಯಲು ಹೂಡಿಕೆಯ ಮೊತ್ತ ಏಷ್ಟು?: ಅಟಲ್ ಪಿಂಚಣಿ ಯೋಜನೆಯಲ್ಲಿ(Atal Pension Scheme) ನಿಮ್ಮ ನಿವೃತ್ತಿಯ ನಂತರ ತಿಂಗಳಿಗೆ 5,000 ರೂಪಾಯಿ ಪಡೆಯಬೇಕು ಎಂದರೆ ನೀವು ಪ್ರತಿ ತಿಂಗಳು 376 ರೂಪಾಯಿ ಇಲ್ಲವೇ ತ್ರೈಮಾಸಿಕವಾಗಿ 1,121 ರೂಪಾಯಿ ಇಲ್ಲವೇ ವಾರ್ಷಿಕವಾಗಿ 2,219 ರೂಪಾಯಿ ಪಾವತಿಸಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕು ಹಾಗೂ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಟಲ್ ಪಿಂಚಣಿ ಯೋಜನೆ ಲಾಭಗಳು :-
- ನಿಶ್ಚಿತ ಪಿಂಚಣಿ: 60 ವರ್ಷ ತುಂಬಿದ ಬಳಿಕ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿಯವರುವೆ ನಿಶ್ಚಿತ ಪಿಂಚಣಿ ಸಿಗುತ್ತದೆ.
- ತೆರಿಗೆ ಪ್ರಯೋಜನಗಳು: ಯೋಜನೆಯಲ್ಲಿ ಸೇರಿದವರಿಗೆ ಆದಾಯ ತೆರಿಗೆ ಕಾಯಿದೆಯಡಿ 80 CCD (1) ಅಡಿಯಲ್ಲಿ ತೆರಿಗೆ ವಿನಾಯಿತಿ ಸಹ ಸಿಗುತ್ತದೆ.
- ಮರಣ ಪ್ರಯೋಜನ: ಯೋಜನೆಯಲ್ಲಿ ಸೇರಿದ ವ್ಯಕ್ತಿಯ ಅಕಾಲಿಕ ಮರಣ ಹೊಂದಿದರೆ ನಾಮಿನಿಗೆ ಪಿಂಚಣಿ ಮೊತ್ತ ಸಿಗುತ್ತದೆ.
- ಸ್ವಯಂ ಉದ್ಯೋಗಿಗಳಿಗೆ ಸೂಕ್ತ: ಈ ಯೋಜನೆಯು ಸ್ವಯಂ ಉದ್ಯೋಗಿಗಳಿಗೆ ಉತ್ತಮ ಪಿಂಚಣಿ ಯೋಜನೆಯಾಗಿದೆ.
- ಕಡಿಮೆ ಕನಿಷ್ಠ ಕೊಡುಗೆ: ಕಡಿಮೆ ಮೊತ್ತದಲ್ಲಿ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಸಾಧ್ಯವಿದೆ.
ನಿಮಗೆ ಮಾಸಿಕ ಏಷ್ಟು ಪಿಂಚಣಿ ಬೇಕೋ ಅಷ್ಟು ಹಣ ಹೂಡಿಕೆ ಮಾಡುವ ವ್ಯವಸ್ಥೆ ಇದೆ:- ನೀವು ಪ್ರತಿ ತಿಂಗಳು 1,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 76 ರೂಪಾಯಿ ಹಾಗೂ ತ್ರೈಮಾಸಿಕವಾಗಿ 226 ರೂಪಾಯಿ ಹಾಗೂ ಅದು ತಿಂಗಳಿಗೆ 449 ರೂಪಾಯಿ ಪಾವತಿ ಮಾಡಬೇಕು. ನೀವು ಪ್ರತಿ ತಿಂಗಳು 2,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 151 ರೂಪಾಯಿ ಹಾಗೂ ತ್ರೈಮಾಸಿಕವಾಗಿ 450 ರೂಪಾಯಿ ಹಾಗೂ ಅದು ತಿಂಗಳಿಗೆ 891 ರೂಪಾಯಿ ಪಾವತಿ ಮಾಡಬೇಕು. ನೀವು ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 226 ರೂಪಾಯಿ ಹಾಗೂ ತ್ರೈಮಾಸಿಕವಾಗಿ 674 ರೂಪಾಯಿ ಹಾಗೂ ಅದು ತಿಂಗಳಿಗೆ 1,334 ರೂಪಾಯಿ ಪಾವತಿ ಮಾಡಬೇಕು.ನೀವು ಪ್ರತಿ ತಿಂಗಳು 4,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 301 ರೂಪಾಯಿ ಹಾಗೂ ತ್ರೈಮಾಸಿಕವಾಗಿ 897 ರೂಪಾಯಿ ಹಾಗೂ ಅದು ತಿಂಗಳಿಗೆ 1776 ರೂಪಾಯಿ ಪಾವತಿ ಮಾಡಬೇಕು.ನಿಮ್ಮ ಹತ್ತಿರದ . ಬ್ಯಾಂಕ್ ನಲ್ಲಿ.ಹಾಗೂ ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಲು ಸಾಧ್ಯವಿದೆ.
ಇದನ್ನೂ ಓದಿ: ಈ ಸರ್ಕಾರಿ ಯೋಜನೆಯು ನಿಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸುತ್ತದೆ, 20 ರೂ.ಗೆ 2 ಲಕ್ಷ ಜೀವ ವಿಮೆಯ ವರದಾನ!
ಇದನ್ನೂ ಓದಿ: ನೀವು ಆನ್ಲೈನ್ ನಲ್ಲಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.