ಸದ್ಯದಲ್ಲೇ ಲಾಂಚ್ ಆಗಲಿವೆ 5 ಮಾಡೆಲ್ ಟಾಟಾ ಎಲೆಕ್ಟ್ರಿಕ್ ಕಾರುಗಳು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಚಾಪನ್ನ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈಗಲೇ ಭಾರತೀಯ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿದ್ದು ಮುಂಬರುವ ದಿನಗಳಲ್ಲಿ ತನ್ನ ಐದು ರೀತಿಯ ಎಲೆಕ್ಟ್ರಿಕ್ ಕಾರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ನಮ್ಮ ದೇಶದಲ್ಲಿ ಇನ್ನೂ ಕೂಡ ಚಾರ್ಜಿಂಗ್ ಸಿಸ್ಟಮ್ ಡೆವಲಪ್ ಆಗಿಲ್ಲ ಅಂತಹುದರಲ್ಲಿ ಇನ್ನೂ ಟಾಟಾ(TATA) ಕಂಪನಿ ತನ್ನ ಎಲೆಕ್ಟ್ರಿಕ್ ಕಾರ್ ಗಳನ್ನ(Electric Cars) ಒಂದರ ನಂತರ ಒಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

WhatsApp Group Join Now
Telegram Group Join Now

ಭಾರತದ ಮಾರುಕಟ್ಟೆಯಲ್ಲಿ ಖರೀದಿಸಬಹುದಾದಂತಹ ಐದು ಕಾರುಗಳು ಇವು: 

TATA ಪಂಚ್ ಎಲೆಕ್ಟ್ರಿಕ್ ಕಾರ್(Tata Punch Electric Car): ಮುಂಬರುವ ದಿನಗಳಲ್ಲಿ ಟಾಟಾ ಮೋಟರ್ಸ್ ತನ್ನ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುತ್ತಿದ್ದು ಈ ವರ್ಷದ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಮಹತ್ವಕಾಂಕ್ಷೆಯನ್ನು ಹೊಂದಿದೆ. ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಕಾರ್ ಗಳಿಗೆ ಕೆಲವು ಸೌಲಭ್ಯಗಳ ಇಲ್ಲದೆ ಇದ್ದರೂ ಕೂಡ ಟಾಟಾ ಮಾತ್ರ ಎಲೆಕ್ಟ್ರಿಕ್ ಕಾರ್ ಗಳನ್ನ ಬಿಡುಗಡೆ ಮಾಡುತ್ತಲೇ ಇದೆ. ಇದರ ಚಿತ್ರಗಳು ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿವೆ. ಇದು ಮುಚ್ಚಿದ ಗ್ರಿಲ್ ಮತ್ತು ಗೇರ್ ಬದಲಿಗೆ ವಿದ್ಯುತ್ ಗೇರನ್ನು ಹೊಂದಿದ್ದು ಅನೇಕ ಪ್ರಮುಖ ಬದಲಾವಣೆಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಟಾಟಾ ಕಾರ್ ಗಳಿಗೆ ಬೇಡಿಕೆಯಂತೂ ಕಮ್ಮಿ ಆಗೋದಿಲ್ಲ. ಈ ಮಾದರಿಯೂ ಜನಗಳಿಗೆ ಕೈಗೆಟುಕುವ ದರದಲ್ಲಿ ನಿರ್ಮಿತವಾಗಿದ್ದು, ಪೆಟ್ರೋಲ್ ಡೀಸೆಲ್ ಖರ್ಚನ್ನು ಉಳಿಸಬಹುದಾಗಿದೆ.

Image Credit: Original Source

ಟಾಟಾ ಹೆರಿಯರ್ ಎಲೆಕ್ಟ್ರಿಕ್ ಕಾರ್(Tata Harrier Electric Car): ಈ ಕಾರನ್ನು ಕೆಲವು ಸಮಯದ ಹಿಂದೆ ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾಗಿತ್ತು. ಟಾಟಾ ಹ್ಯಾರಿಯರ್ ಡೀಸೆಲ್ ಮಾದರಿಯಾಗಿದ್ದು ಕೆಲವು ಸಮಯದ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಫೇಸ್‌ಲಿಫ್ಟ್ ಅವತಾರದೊಂದಿಗೆ ಪ್ರಾರಂಭಿಸಲಾಗುತ್ತಿದ್ದು, ಇದಲ್ಲದೆ, ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಬಾರಿ ಪರೀಕ್ಷಿಸಲಾಗಿದೆ. ಮುಂದಿನ 2024 ರ ಮಧ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಟಾಟಾ ಸಫಾರಿ ಎಲೆಕ್ಟ್ರಿಕ್ ಕಾರ್(Tata Safari Electric Car) 

TATA ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ ಈಗ ತನ್ನ ಟಾಟಾ ಸಫಾರಿ ಎಲೆಕ್ಟ್ರಿಕ್ ಕಾರ್ ಜೊತೆ ತನ್ನ ಹೊಸತನವನ್ನು ತೋರಿಸುತ್ತಿದೆ. ಮತ್ತು ವಿನ್ಯಾಸಗಳೊಂದಿಗೆ ಟಾಟಾ ಸಫಾರಿ ಎಲೆಕ್ಟ್ರಿಕ್ ಕಾರ್ ಬರುತ್ತಿದ್ದು ಇದು ಡೀಸೆಲ್ ಸಫಾರಿಗೆ ಹೋಲಿಕೆಯಾಗುತ್ತದೆ. ಇನ್ನು ಇದರ ಬ್ಯಾಟರಿ ಮತ್ತು ಕೆಲವೊಂದು ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನ ಬಿಟ್ಟು ಕೊಟ್ಟಿಲ್ಲ 500 ರಿಂದ 600 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಈ ಕಾರನ್ನು ಸದ್ಯದಲ್ಲೇ ಟಾಟಾ ಮೋಟರ್ಸ್ ಬಿಡುಗಡೆ ಮಾಡಲಿದೆ.

Image Credit: original source

ಟಾಟಾ ಸಿಯೆರ ಎಲೆಕ್ಟ್ರಿಕ್ ಕಾರ್(Tata Sierra Electric Car): ಟಾಟಾ ಮೋಟಾರ್ಸ್ ಇದರ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನು ಬಿಡುಗಡೆ ಮಾಡಿಲ್ಲ. ಸುಮಾರು 2025ರ ಹೊತ್ತಿಗೆ ಮಾರುಕಟ್ಟೆಗೆ ಪರಿಚಯಿಸಲಿದೆ. ಇದರ ವೈಶಿಷ್ಟತೆಗಳ ಬಗ್ಗೆ ಹಾಗೂ ಬೆಲೆಗಳ ಬಗ್ಗೆ ಇನ್ನೂ ಕೂಡ ಯಾವುದೇ ರೀತಿಯ ಮಾಹಿತಿಯನ್ನು ಕೂಡ ಕೊಟ್ಟಿಲ್ಲ ಅಂತ ತಿಳಿದು ಬಂದಿದೆ.

ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರ್(Tata Curvv Electric Car): ಈಗಾಗಲೇ ಇದರ ಬಗ್ಗೆ ಹಲವು ಪರೀಕ್ಷೆಗಳು ನಡೆದಿದ್ದು ಈ ವರ್ಷ ಕೊನೆಯಲ್ಲಿ ಈ ಕಾರು ಬಿಡುಗಡೆಯಾಗುವ ಸಂಭವವಿದೆ ಎಂದು ತಿಳಿದುಬಂದಿದೆ. ಇದು ಕೂಪ್ ಶೈಲಿಯ ಎಸ್ ಯು ವಿ ಆಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡಕ್ಕೂ ಅನ್ವಯವಾಗಲಿದೆ. ಒಂದು ಬಾರಿ ಚಾರ್ಜ್ ಮಾಡಿದ ನಂತರ ಕನಿಷ್ಠ 400ರಿಂದ 500 ಕಿಮಿವರೆಗೆ ಕಿಲೋಮೀಟರ್ ವರೆಗೆ ನೀವು ಚಾಲನೆ ಮಾಡಬಹುದಾಗಿದೆ. ಒಟ್ಟಿನಲ್ಲಿ ಮುಂಬರುವ ಒಂದರಿಂದ ಎರಡು ವರ್ಷದ ಒಳಗಡೆ ಒಟ್ಟು ಐದು ರೀತಿಯ ಎಲೆಕ್ಟ್ರಿಕ್ ಕಾರನ್ನು ಟಾಟಾ ಮೋಟಾರ್ಸ್ ಪರಿಚಯಿಸಲಿದೆ. ಖರೀದಿದಾರರಿಗೆ ಇದು ಒಂದು ಸಿಹಿ ಸುದ್ದಿ ಅಂತ ಹೇಳಬಹುದು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸಂತು ಪತ್ನಿ ಮಾನಸ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram