ಕಾರ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಇಂದಿನ ಕಾಲದಲ್ಲಿ ಬಡವರು ಸಹ ಪುಟ್ಟ ಕಾರು ಇರಬೇಕು ಎಂದು ಬಯಸುತ್ತಾರೆ. ಅವರಿಗೂ ಕೈಗೆಟುಕುವ ಬೆಲೆಯಲ್ಲಿ ಹಲವಾರು ಕಾರ್ ಗಳು ಇವೆ. ಸಿರಿವಂತರಿಗೆ ಅಂತು ಕೋಟಿ ರೂಪಾಯಿಯ ಕಾರ್ ಸಹ ನಾವು ಮಾರುಕಟ್ಟೆಯಲ್ಲಿ ನಾವು ನೋಡಬಹುದು. ಈಗ ವರುಷದಿಂದ ವರುಷಕ್ಕೆ ಮಾಡರ್ನ್ ಕಾರ್ ಗಳು ಬರುತ್ತಲೇ ಇರುತ್ತವೆ. ಬಿಡುಗಡೆ ಆಗುವ ಮೊದಲೇ ಕಾರ್ ಗಳ ಮಾಹಿತಿಗಳು, ಕಾರ್ ಬುಕಿಂಗ್ ಗಳು ಈಗ ಸಾಮಾನ್ಯ ಆಗಿದೆ. ಹಾಗಾದರೆ 2024 ರಲ್ಲಿ ಬಿಡುಗಡೆ ಆಗಲಿರುವ ಕಾರ್ ಮಾಹಿತಿ ಇಲ್ಲಿ ತಿಳಿಯೋಣ.
2024 ರಲ್ಲಿ ಬಿಡುಗಡೆ ಆಗುವ ಕಾರ್ ಗಳು :-
ಮಾರುತಿ ಸುಜುಕಿ ಸ್ವಿಫ್ಟ್ :- ಮಾರುತಿ ಕಂಪನಿ ಕಾರ್ ಭಾರತದಲ್ಲಿ ಹೆಚ್ಚು ಮಾರಾಟ ಆಗುತ್ತದೆ. ಈಗಾಗಲೇ ಹಲವು ಕಾರ್ ಗಳು ದಾಖಲೆಯ ಮಾರಾಟ ಕಂಡಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರು ಇದೆ ಬರುವ ಮೇ 9 2024 ರಂದು ಬಿಡುಗಡೆ ಆಗಲಿದ್ದು, ಈಗಾಗಲೇ ಈ ಕಾರ್ ಮಾರಾಟ ಆಗುತ್ತಿದೆ. ಸ್ವೀಫ್ಟ್ ಕಾರ್ 2005 ರಲ್ಲಿ ಮೊದಲೂ ಪರಿಚಯ ಮಾಡಲಾಯಿತು. ಈಗ ಇದರ 4ನೇ ಜನರೇಷನ್ ಬಿಡುಗಡೆ ಆಗಲಿದೆ. ಹೊಸ ಜನ್ ಕಾರು ಹೊಸ ವಿಶೇಷತೆಗಳನ್ನು ಒಳಗೊಂಡಿರಲಿದೆ.
ಫೋರ್ಸ್ ಗೂರ್ಖ:– ಫೋರ್ಸ್ ಮೋಟಾರ್ಸ್ ಕಂಪನಿಯು ಆಫ್ ರೋಡ್ ಎಸ್ ಯುವಿ ಆವೃತ್ತಿಯಾದ ಗೂರ್ಖಾದಲ್ಲಿ 5 ಡೋರ್ ವರ್ಷನ್ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಇದು ಈಗ ಮತ್ತೆ ಹೊಸ ರೂಪದಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದು ಪ್ರತಿಷ್ಠಿತ ಥಾರ್ ನೊಂದಿಗೆ ಪ್ರತಿಸ್ಪರ್ಧೆ ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಾರುತಿ ಸುಜುಕಿ ಡಿಸೈರ್:- ಇದು ಸಹ ಮಾರುತಿ ಕಾರ್ ಕಂಪೆನಿ ಬಿಡುಗಡೆ ಮಾಡುತ್ತಿರುವ ಕಾರ್ ಆಗಿದ್ದು ಈ ಕಾರ್ ನ ವಿಶೇಷತೆ ಎಂದರೆ ಇದು ಉಪ -4M ಸೆಡಾನ್ ಸನ್ ರೂಪ್ ಒಳಗೊಂಡಿದೆ. ಸ್ವೀಪ್ಟ್ ಬಿಡುಗಡೆ ಆದ ನಂತರ ಡಿಸೈರ್ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಉನ್ನತ ಮೂಲಗಳು ತಿಳಿಸಿವೆ.
ಮಹೇಂದ್ರ ಥಾರ್ -5ಡೋರ್:- ಇದು ಭಾರತದಲ್ಲಿ ಆಗಸ್ಟ್ 15 ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಲ್ಲಿ ಗೂರ್ಖ ಮತ್ತು ಜಿಮ್ಮಿ ಕಾರ್ ಗಳ ಜೊತೆಗೆ ಸ್ಪರ್ಧೆ ಮಾಡಲಿದೆ. ಈಗಾಗಲೇ ಭಾರತದಲ್ಲಿ ಈ ಕಾರ್ ಅನ್ನು ಪರಿಚಯಿಸಲಾಗುತ್ತಿದೆ.
ಟಾಟಾ ಅಲ್ಟ್ರಿಜ್ ಫೇಸ್ ಲಿಫ್ಟ್(Tata Altroz Facelift) :- ಈಗಲೇ ಈ ಕಾರ್ ಭಾರತದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಇದು ಈ ವರ್ಷದ ಕೊನೆಯ ಒಳಗೆ ಭಾರತದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಕಾರ್ ರೆಸರ್ ಆವೃತ್ತಿಯಿಂದಿಗೆ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ. ಹುಂಡೈ I 20 n ನೋಂದಿಗೆ ಸ್ಪರ್ಧೆ ಮಾಡಲು ರೆಡಿ ಆಗಿದೆ.
ವಿಡಬ್ಲ್ಯೂ ಟಿಗುವಾನ್(VW Tiguan):- ಈ ಕಾರ್ ಭಾರತದಲ್ಲಿ ಹೊಸ ಆವೃತ್ತಿಯೊಂದಿಗೆ ಬರುವ ನಿರೀಕ್ಷೆ ಇದೆ. ಈಗಾಗಲೇ ಇದು ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯ ಆಗಿದೆ. ಇದು ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಟಾಟಾ ಕರ್ವ್ :- ಇದು ಒಂದು SUP ಕೂಪ್ ಆಗಿದ್ದು ಈ ಕಾರ್ ಸಹ ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಸುರಕ್ಷಿತ ಮತ್ತು ವೈಶಿಷ್ಟ್ಯಪೂರ್ಣ ಹ್ಯಾಚ್‌ಬ್ಯಾಕ್, ರೆನಾಲ್ಟ್ ಕ್ವಿಡ್ ನ ಬೆಲೆ ಎಷ್ಟು ಗೊತ್ತಾ?