Upendra New House: ಕನ್ನಡ ಚಿತ್ರರಂಗದ ಅಪ್ರತಿಮ ಬುದ್ದಿವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಸಿನಿಮಾ ರಂಗದ ಜೊತೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯಾಗಿದ್ದಾರೆ. ತಮ್ಮದೇ ಅದ ರಾಜಕೀಯ ಪಕ್ಷ ಕಟ್ಟಿರುವ ಉಪ್ಪಿ ಆಗಾಗ ಕೆಲವೊಂದಷ್ಟು ವಿಷಯಗಳಿಂದ, ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕೀಯ ಉದ್ದೇಶದಿಂದಲೇ ಮೊದಲು ಒಂದು ಮನೆ ಖರೀದಿ ಮಾಡಿ ಅಲ್ಲಿಯೇ ಉಳಿಯುವ ನಿರ್ಧಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಉಪ್ಪಿ ಇದೀಗ ಹೊಸ ಮನೆಯನ್ನ ಖರೀದಿಸಿ ಗೃಹ ಪ್ರವೇಶ ಕೂಡ ಮಾಡಿ ಮುಗಿಸಿದ್ದಾರೆ.. ಗ್ರಹ ಪ್ರವೇಶ ಹೇಗಾಯಿತು? ಯಾರೆಲ್ಲ ಬಂದಿದ್ರು? ಮನೆ ಹೇಗಿದೆ ಎಲ್ಲಿದೆ? ಉಪ್ಪಿ ಹೊಸ ಮನೆ ಬಗ್ಗೆ ಹೇಳಿದ್ದೇನು ಎಲ್ಲವನ್ನ ನೋಡೋಣ ಬನ್ನಿ.
ರಿಯಲ್ ಸ್ಟಾರ್ ಉಪೇಂದ್ರ ಮನೆ ಎಲ್ಲಿದೆ ಹೇಗಿದೆ?
ಹೌದು ಬೆಂಗಳೂರಿ ನಲ್ಲಿ ಅದ್ಭುತ ಲೊಕೇಶನ್ ಅಂದ್ರೆ ಅದು ಸಾಂಕಿ ಟ್ಯಾಂಕಿ. ಹೌದು ನೂರಾರು ರೀತಿಯ ಪಕ್ಷಿಗಳು, ತಂಪು ತಂಪು ವಾತಾವರಣ, ಸಾಯಾಂಕಾಲ ವಾಕಿಂಗ್ ಹೊರಟ್ರೆ ಮತ್ತೆ ಮನೆಗೆ ವಾಪಸ್ ಬರಲು ಇಷ್ಟನೇ ಆಗೋದಿಲ್ಲ ಅಂತ ಒಳ್ಳೆಯ ಏರಿಯಾ. ಇದೀಗ ಇಂತದ್ದೇ ಸುಂದರ ತಾಣದಲ್ಲಿ ಹಸಿರು ಮಧ್ಯೆ ಉಪೇಂದ್ರ ಮನೆ ಖರೀದಿ ಮಾಡಿ ಗೃಹ ಪ್ರವೇಶ ಕೂಡ ಮಾಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದರೆ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಒಳ್ಳೆಯ ಲೊಕೇಶನ್ ಸರ್ ಅದ್ಭುತ ಜಾಗದಲ್ಲಿ ಮನೆ ಮಾಡಿದ್ದೀರಿ ಅಂತ ಹೇಳ್ತಿದ್ದಾರೆ.
ಉಪೇಂದ್ರ ಸಿನಿ ಜೀವನ
ಹೌದು 1967 ಸೆಪ್ಟಂಬರ್ 18 ರಂದು ಕುಂದಾಪುರದ ಕೊಟೇಶ್ವರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಉಪ್ಪಿ ಬಸವನಗುಡಿಯ ಎ.ಪಿ.ಎಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗಲೆ ನಿರ್ದೇಶನದ ಗೀಳನ್ನು ಅಂಟಿಸಿಕೊಡಿದ್ರು. ನಂತರ ಕನ್ನಡದ ಹೆಸರಾಂತ ನಿರ್ದೇಶಕ ‘ಕಾಶಿನಾಥ’ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಶುರು ಮಾಡ್ತಾರೆ. ಬಳಿಕ 1992ರಲ್ಲಿ ತೆರೆಗೆ ಬಂದ ‘ತರ್ಲೆನನ್ಮಗ’ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕ ರಾಗುತ್ತಾರೆ.. ‘ಶ್’ ಎಂಬ ಹಾರರ್ ಚಿತ್ರದ ನಿರ್ದೇಶನವನ್ನ ಮಾಡುತ್ತಾರೆ. ಅಲ್ಲದೆ 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರ ಇಡೀ ಭಾರತ ಚಿತ್ರರಂಗ ದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ಇದು ಉಪೇಂದ್ರ ಅವ್ರ ನಿರ್ದೇಶನದ ಸಿನಿ ಕ್ಯರಿಯರ್ ಅನ್ನೆ ಬದಲಾಯಿಸಿಬಿಡ್ತು. ಅಷ್ಟೇ ದೊಡ್ಡ ಮಟ್ಟದ ಅಭಿಮಾನಿ ಬಳಗ ಸೃಷ್ಟಿಯಾಗುತ್ತಾರೆ. ನಂತರ ‘ಆಪರೇಷನ್ ಅಂತ, ಸ್ವಸ್ತಿಕ್’ ಸೇರಿದಂತೆ ಹೀಗೆ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ರ ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?
ವಿಭಿನ್ನ ಪ್ರಯತ್ನದಲ್ಲಿ ಎ’ ಚಿತ್ರವನ್ನು ನಿರ್ದೇಶಿಸಿ ತಾವೇ ನಟಿಸಿ, ನಾಯಕನಾಗಿಯೂ ಪರಿಚಯವಾಗ್ತಾರೆ. ಮುಂದೆ ತೆರೆಗೆ ಬಂದ ‘ಉಪೇಂದ್ರ’ ಚಿತ್ರವು ಹಲವಾರು ದಾಖಲೆ ಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡ ದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗ ದಲ್ಲಿಯೂ ಶತ ದಿನ ಪೂರೈಸಿದವು. ಅದಾದ ಬಳಿಕ ಉಪ್ಪಿ 10 ವರ್ಷಗಳ ಕಾಲ ನಿರ್ದೇಶನವನ್ನು ಬಿಟ್ಟು, ಹಲವಾರು ಕನ್ನಡ ಚಿತ್ರ ಗಳಲ್ಲಿ ಅಭಿನಯಿಸಿದರು. ಇನ್ನು 2010 ರಲ್ಲಿ ನಿರ್ದೇಶಿಸಿದ ‘ಸೂಪರ್’ ಮತ್ತು 2015 ರಲ್ಲಿ ನಿರ್ದೇಶಿಸಿದ ‘ಉಪ್ಪಿ 2’ ಚಿತ್ರ ಗಳು ಶತದಿನ ಪೂರೈಸಿದ ಉಪೇಂದ್ರ ಅವ್ರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಡುತ್ತವೆ. ಇನ್ನು 2003 ರಲ್ಲಿ ಖ್ಯಾತ ನಟಿ ಪ್ರಿಯಾಂಕ ಅವರನ್ನು ಕೈಹಿಡಿಯುತ್ತಾರೆ. ಪ್ರಿಯಾಂಕ ಅವ್ರು ಉಪ್ಪಿ ಜೊತೆಗೆ H2O ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇನ್ನು ಸಾಕಷ್ಟು ವಿವಾದಗಳು ಇವ್ರ ಮದುವೆಯ ಕುರಿತಾಗಿದ್ರು, ಅಚ್ಚು ಕಟ್ಟಾಗ ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಉಪ್ಪಿ ಅವ್ರು ಅಷ್ಟೇ ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಭಿನ್ನವಾಗಿ ನಿಲ್ಲುವ ಇವರು ಕನ್ನಡ ಚಿತ್ರರಂಗದಲ್ಲಿ ದೈತ್ಯ ಪ್ರತಿಭೆಯಾಗಿ ಬೆಳೆದು ನಿಂತಿದ್ದಾರೆ.
ಇನ್ನು ಸಿನಿಮಾ ಹೊರತಾಗಿ ಉಪ್ಪಿ 2018ರ ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ಇಗಂತೂ ಕರ್ನಾಟಕ ವಿಧಾನಸಭಾ ಚುನಾವಣೆ ನಿಗಿದೀಯಾದ ಬಳಿಕ ಸಿಕ್ಕಾಪಟ್ಟೆ ವಿವಾದಗಳನ್ನ ಮೈ ಮೇಲೆ ಎಳೆದುಕೊಂಡ್ರು ಉಪೇಂದ್ರ ಅವರ ಯೋಚನಾ ಶಕ್ತಿಗೆ ಸಾಕಷ್ಟು ಅಭಿಮಾನಿಗಳಿದ್ದು ಅವ್ರಿಗೆ ಬೆಂಬಲ ನೀಡುತ್ತಾರೆ. ಇತ್ತೀಚಿಗೆ ಬನಶಂಕರಿಯಲ್ಲಿ ಮನೆ ಮಾಡುತ್ತಿದ್ದೂ ಅಲ್ಲಿಯೇ ಇರೋದಾಗಿ ಕೂಡ ಹೇಳಿದ್ರು ಇದೀಗ ಸದಾಶಿವ ನಗರದಲ್ಲಿ ಒಳ್ಳೆಯ ಮನೆಯನ್ನೇ ಖರೀದಿ ಮಾಡಿದ್ದಾರೆ.
ಹೊಸ ಮನೆ ಗೃಹ ಪ್ರವೇಶಕ್ಕೆ ತಾರೆಯರ ದಂಡು! ಹೇಗಿತ್ತು ಗೊತ್ತಾ ಕಾರ್ಯಕ್ರಮ
ತಮ್ಮ ಮನೆಯ ಕುರಿತಂತೆ ಉಪೇಂದ್ರ ಅವ್ರು ಮಾಡದಿಯೊಟ್ಟಿಗಿನ ಫೋಟೋ ಹಂಚಿಕೊಂಡಿರುವ ಉಪೇಂದ್ರ ಹೊಸ ಮನೆ ಕಾಲಿಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಮ್ಮ ಮನೆಯ ಅಂದವನ್ನ ಹೆಚ್ಚಿಸಿ ನಮ್ಮ ಮನೆ ಮತ್ತಷ್ಟು ಆಕರ್ಷಣಿಯವಾಗಿ ಕಾಣಲು ಕಾರಣ ಏನ್ ಗೊತ್ತಾ ನಮ್ಮ ಮನೆ ವಿಭಿನ್ನ ಯೂನಿಕ್ ಲೊಕೇಶನ್ ನಲ್ಲಿದೆ. ಸಾಂಕಿ ಟ್ಯಾಂಕಿ ನಮಗೆ ಡೋರ್ ಸ್ಟೆಪ್ ಲ್ಲೆ ಸಿಗುತ್ತೆ, ರಸ್ತೆ ಅಕ್ಕ ಪಕ್ಕ ಗಿಡ ಮರಗಳಿವೆ ಅದರಲ್ಲಿ ವಿಭಿನ್ನ ಜಾತಿಯ ಪಕ್ಷಿಗಳ ಕಲರವ ತುಬಿದ್ದು, ಅವುಗಳ ಚಿಲಿಪಿಲಿಗೆ ನಾವು ಎದ್ದೇಳ್ತಿವಿ ಅಂತ ಬರೆದುಕೊಂಡಿದ್ದಾರೆ.
ಕಳೆದ 15ನೆ ತಾರೀಖು ನೂತನ ಮನೆಯ ಗೃಹ ಪ್ರವೇಶ ಮಾಡಿರುವ ಉಪ್ಪಿ ಬಹಳ ಖುಷಿಯಲ್ಲಿದ್ದಾರೆ. ಈ ಒಂದು ಗೃಹ ಪ್ರವೇಶ ದಲ್ಲಿ ನಟಿ ಪ್ರಿಯಾಂಕ ಬಹಳ ಮುದ್ದಾಗಿ ಕಾಣಿಸಿದ್ದಾರೆ.. ಇನ್ನು ಈ ಒಂದು ಕಾರ್ಯಕ್ರಮಕ್ಕೆ ಸಾಕಷ್ಟು ಸಿನಿ ತಾರೆಯರು ಬಂದು ಉಪ್ಪಿ ಅವ್ರಿಗೆ ಶುಭಾಶಯಗಳು ಆರೈಸಿದ್ದಾರೆ. ಹೌದು ಗುರುಕಿರಣ್, ಗಣೇಶ್, ಶಿಲ್ಪಾ ಗಣೇಶ್, ಸಾಕಷ್ಟು ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಸೇರಿದಂತೆ ಯುವ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಅವರ ಹೆಂಡತಿ ಫೋಟೋವನ್ನ ಪೋಲೀಸರು ಡಿಲೀಟ್ ಮಾಡಿಸಿದ್ಯಾಕೆ?