ಒಂದು ಬಾರಿಗೆ UPI ಮೂಲಕ ಏಷ್ಟು ಹಣ ವರ್ಗಾವಣೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

upi limit per day

ಈಗ ಒಂದು ರೂಪಾಯಿ ನಿಂದ ಹಿಡಿದು ಲಕ್ಷಾಂತರ ರೂಪಾಯಿ ವಹಿವಾಟಿಗೆ ಆನ್ಲೈನ್ ಪೇಮೆಂಟ್ ಮಾಡುವುದು ಹೆಚ್ಚು. ಆದರೆ ನಾವು ಒಮ್ಮೆಲೆ ಏಷ್ಟು ಹಣವನ್ನು transaction ಮಾಡಬಹುದು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ. ಅದಕ್ಕೆ ಸಮರ್ಪಕವಾದ ಮಾಹಿತಿ ತಿಳಿದಿರುವುದಿಲ್ಲ. ಇಂದು UPI ಮೂಲಕ ಪೇಮೆಂಟ್ ಮಾಡಲು ಹಲವಾರು ಅಪ್ಲಿಕೇಶನ್ ಇದೆ. ಆದರೆ ಯಾವ ಅಪ್ಲಿಕೇಶನ್ ಮೂಲಕ ಒಮ್ಮೆಲೆ ಏಷ್ಟು ಹಣ ವರ್ಗಾವಣೆ ಮಾಡಬಹುದು ಎಂಬ ವಿಚಾರ ನಮಗೆ ತಿಳಿದಿರುವುದಿಲ್ಲ. ಯಾವ ಯಾವ ಆ್ಯಪ್ ನಲ್ಲಿ ಒಮ್ಮೆ ಪೇಮೆಂಟ್ ಮಾಡಲು ಏಷ್ಟು ಗರಿಷ್ಠ ಮಿತಿ ಇದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

Amazon Pay ಅಪ್ಲಿಕೇಷನ್ ಮೂಲಕ ಏಷ್ಟು ಹಣ ವರ್ಗಾವಣೆ ಮಾಡಬಹುದು?

Amazon Pay ಯುಪಿಐ ಅಪ್ಲಿಕೇಶನ್ ಹೊಂದಿದ್ದರೆ ನೀವು ಒಂದು ದಿನಕ್ಕೆ 1 ಲಕ್ಷಕ್ಕಿಂತ ಜಾಸ್ತಿ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ನೀವು ಮೊದಲ ಬಾರಿಗೆ ಅಂದರೆ Amazon Pay ನಲ್ಲಿ ನೋಂದಾಯಿಸಿದ 24 ಗಂಟೆಗಳವರೆಗೆ ಕೇವಲ 5,000 ರೂಪಾಯಿಗಳನ್ನು ಪೇಮೆಂಟ್ ಮಾಡಲು ಅವಕಾಶ ಇದೆ.

Google Pay ಅಪ್ಲಿಕೇಶನ್ ಮೂಲಕ ದಿನಕ್ಕೆ ಎಷ್ಟು ಹಣವನ್ನು ವರ್ಗಾಯಿಸಲು ಅನುಮತಿ ಇದೆ?: Amazon Pay ಅಪ್ಲಿಕೇಶನ್ ನಿಯಮದ ಅಂತೆಯೇ Google Pay ಅಪ್ಲಿಕೇಶನ್ ನಲ್ಲಿಯೂ ಸಹ ನಿಮ್ಮ ಖಾತೆಯಿಂದ ಒಂದು ದಿನಕ್ಕೆ ನೀವು 1 ಲಕ್ಷಕ್ಕಿಂತ ಜಾಸ್ತಿ ಹಣವನ್ನು ವರ್ಗಾಯಿಸಲು ಆಗುವುದಿಲ್ಲ. ಇದರ ಜೊತೆಗೆ ಇನ್ನೊಂದು ನಿಯಮ ಏನೆಂದರೆ ನೀವು ಒಂದು ದಿನದಲ್ಲಿ 10 transaction ಗಿಂತ ಹೆಚ್ಚಿನ transaction ಮಾಡಲು ಸಾಧ್ಯವಿಲ್ಲ. ಈ ನಿಯಮವು ಎಲ್ಲಾ UPI ಬಳಕೆದಾರರಿಗೆ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಫೋನ್ ಪಾವತಿ ಅಪ್ಲಿಕೇಶನ್ ನಲ್ಲಿ ಏಷ್ಟು ಹಣ ವರ್ಗಾವಣೆ ಮಾಡಬಹುದು?: ಫೋನ್ ಪೇ ಅಪ್ಲಿಕೇಶನ್ ಹೊಂದಿರುವವರು ಒಂದು ದಿನಕ್ಕೆ 1 ಲಕ್ಷದವರೆಗೆ ಹಣವನ್ನು ವರ್ಗಾವಣೆ ಮಾಡಲು ಅನುಮತಿ ಇದೆ. ಆದರೆ ಈ ಮಿತಿಯು ಬ್ಯಾಂಕ್ ಖಾತೆ ಹಾಗೂ ಫೋನ್ ಪೇ ಅಪ್ಲಿಕೇಶನ್ ಹೊಂದಿರುವ ವ್ಯಕ್ತಿಯ ಬಳಕೆಯ ಮೇಲೆ ಬೇರೆ ಬೇರೆಯಾಗಿ ಇರುತ್ತದೆ.

ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಯನ್ನು ಮೀರಿಸುವ ಬಡ್ಡಿ ಮತ್ತು ತೆರಿಗೆ ಪ್ರಯೋಜನಗಳೊಂದಿಗೆ ಸುರಕ್ಷಿತ ಹೂಡಿಕೆ ಮಾಡಿ! 

Paytm ಅಪ್ಲಿಕೇಶನ್ ನಲ್ಲಿ ಗರಿಷ್ಠ ಮಿತಿ ಏಷ್ಟು?

Paytm application ನಲ್ಲಿಯೂ ಸಹ ಗರಿಷ್ಠ 1 ಲಕ್ಷದವರೆಗಿನ ಮೊತ್ತವನ್ನು ವರ್ಗಾವಣೆ ಮಾಡಬಹುದು. ಇನ್ನೊಂದು ನಿಯಮ ಏನೆಂದರೆ ನೀವು Paytm application ಹೊಂದಿದ್ದರೆ ನೀವು ಒಂದು ಗಂಟೆಯಲ್ಲಿ 20,000 ರೂಪಾಯಿಗಳನ್ನು ಮಾತ್ರ ವರ್ಗಾವಣೆ ಮಾಡಲು ಸಾಧ್ಯವಿದೆ ಹಾಗೂ Paytm UPI ನಿಂದ ನೀವು ಪ್ರತಿ ಗಂಟೆಗೆ ಗರಿಷ್ಠ 5 ವಹಿವಾಟುಗಳನ್ನು ಮಾತ್ರ ಮಾಡಲು ಅವಕಾಶ ಇದೆ. ಹಾಗೂ ದಿನಕ್ಕೆ 20 ವಹಿವಾಟುಗಳನ್ನು ಮಾತ್ರ ಮಾಡಬಹುದು ಎಂಬ ನಿಯಮ ಇದೆ. ಈ ಅಪ್ಲಿಕೇಶನ್ ನಲ್ಲಿ ದಿನದ UPI ಮಿತಿಯು ಬಳಕೆದಾರರ ಮಿತಿಯೂ ಬ್ಯಾಂಕ್ ಮತ್ತು ಖಾತೆಯನ್ನು ಅವಲಂಬಿಸಿ ಬೇರೆ ಬೇರೆ ಆಗಿರುತ್ತದೆ.

ಈ ಎಲ್ಲಾ ನಿಯಮಗಳನ್ನು ಸರಿಯಾಗಿ ತಿಳಿದು ನಿಮಗೆ ಯಾವ ಅಪ್ಲಿಕೇಶನ್ ಮೂಲಕ ಹಣ ವರ್ಗಾವಣೆ ಮಾಡಲು ಸೂಕ್ತ ಎಂದು ಅನ್ನಿಸ್ತದೆಯೋ ಅಂತಹ ಅಪ್ಲಿಕೇಶನ್ ಅನ್ನು ನೀವು ಬಳಸಬಹುದು.

ಇದನ್ನೂ ಓದಿ: ಬಜೆಟ್ ಸ್ನೇಹಿ, ಉತ್ತಮ ಮೈಲೇಜ್ ಅನ್ನು ಹೊಂದಿರುವ ಹೋಂಡಾ ಶೈನ್ 100 ನಿಮ್ಮ ಪ್ರಯಾಣವನ್ನು ಸುಗಮಗೊಳಿಸುತ್ತದೆ!