ಇಂಟರ್ನೆಟ್ ಇಲ್ಲದೆಯೇ UPI payment ಮಾಡಲು ಈ ಮಾರ್ಗವನ್ನು ಅನುಸರಿಸಿ

UPI Paymenta Without Internet

ಈಗ ಗಲ್ಲಿಯ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕ್ಯಾಶ್ transaction ತೀರಾ ಕಡಿಮೆ ಆಗಿದೆ. ಚಿಲ್ಲರೆ ಸಮಸ್ಯೆ, ತುಂಬಾಹಣವನ್ನು ಒಮ್ಮೆಲೆ ತೆಗೆದುಕೊಂಡು ಹೋಗುವ ಭಯ ಇಲ್ಲದೆಯೇ ಮೊಬೈಲ್ ಮೂಲಕವೇ ನಮ್ಮ ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತವನ್ನು ಪಾವತಿ ಮಾಡುವ ವ್ಯವಸ್ಥೆ ಜನರಿಗೆ ಹೆಚ್ಚು ಉಪಯೋಗ ಆಗಿದೆ. ಸಾಮಾನ್ಯವಾಗಿ ನಾವು UPI payment ಮಾಡುವಾಗ ನಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸಂಪರ್ಕ ಇರಲೇಬೇಕು. ಇಲ್ಲದೆ ಇದ್ದರೆ ನಾವು ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಮೊಬೈಲ್ ಸಿಗ್ನಲ್ ಇದ್ದರೂ ಇಂಟರ್ನೆಟ್ ಸ್ಪೀಡ್ ಕಡಿಮೆ ಇದ್ದರೆ UPI payment ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಮೊಬೈಲ್ ಸಿಗ್ನಲ್ ಇದ್ದರೆ ನೀವು UPI payment ಮಾಡುವ ಸರಳ ವಿಧಾನದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

USSD ಸೇವೆಯನ್ನು ಬಗ್ಗೆ ಮಾಹಿತಿ :-

ನೀವು ನಿಮಗೆ ಆನ್‌ಲೈನ್ ಮೂಲಕ ಹಣ ಪಾವತಿ ಮಾಡುವಾಗ ಇಂಟರ್ನೆಟ್ ಸಮಸ್ಯೆ ಆಗುತ್ತ ಇದ್ದರೆ ನೀವು ನಿಮ್ಮ ಮೊಬೈಲ್ ನಲ್ಲಿ “*99#” ಗೆ ಕರೆ ಮಾಡಬಹುದು. ಇದು ಒಂದು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಆಗಿದ್ದು, ಇದು ನಿಮಗೆ ಡೇಟಾ ಚಾಲಿತ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಅದು ದೇಶದಾದ್ಯಂತ ಸೇವೆ ಒದಗಿಸಲಿದೆ. ಈ ಸೇವೆಯು ನಿಮಗೆ ಹಿಂದಿ, ಇಂಗ್ಲಿಷ್ ಮತ್ತು ಇತರ 13 ಭಾಷೆಗಳಲ್ಲಿ ಲಭ್ಯವಿದೆ. ಈ ಸೇವೆಯಿಂದ ಯುಪಿಐ ಪಿನ್ ಅನ್ನು ಬಳಸಿ ಇಂಟರ್ನೆಟ್ ಇಲ್ಲದೆ ಹಣವನ್ನು ಪಾವತಿ ಮಾಡಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

USSD ಸೇವೆಯನ್ನು ಬಳಸುವ ವಿಧಾನ :-

  • ಸ್ಟೆಪ್ 1:- ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ *99# ನಂಬರ್ ಗೆ ಡಯಲ್ ಮಾಡಬೇಕು.
  • ಸ್ಟೆಪ್ 2:- ನಿಮಗೆ ಭಾಷೆಯ ಆಯ್ಕೆ ಮಾಡಿಕೊಳ್ಳಲು ಕೇಳುತ್ತದೆ. ನೀವು ಯಾವ ಭಾಷೆಯಲ್ಲಿ ಮುಂದಿನ ಹಂತಗಳ ಮಾಹಿತಿ ಪಡೆಯಬೇಕೋ ಆ ಭಾಷೆಯನ್ನು ಆಯ್ಕೆ ಮಾಡಬೇಕು.
  • ಸ್ಟೆಪ್ 3:- ನಿಮ್ಮ ಬ್ಯಾಂಕ್ ಖಾತೆಯ ಯಾವ ಬ್ಯಾಂಕ್ ನಲ್ಲಿ ಇದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಸ್ಟೆಪ್ 4:- ನಿಮ್ಮ ಡೆಬಿಟ್ ಕಾರ್ಡ್ ನ ಕೊನೆಯ 6 ಅಂಕೆಗಳನ್ನು ಟೈಪ್ ಮಾಡಬೇಕು.
  • ಸ್ಟೆಪ್ 5:- ನಿಮ್ಮ ಕಾರ್ಡ್ ಮುಕ್ತಾಯದ ದಿನಾಂಕವನ್ನು ನಮೂದಿಸಬೇಕು. 

ಈ ಮೇಲಿನ ಹಂತಗಳನ್ನು ಅನುಸರಿಸಿದರೆ ನೀವು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಅಂದರೆ UPI ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ.

USSD ಮೂಲಕ ಹಣ ಪಾವತಿಸುವುದು ಹೇಗೆ?

  • ಸ್ಟೆಪ್ 1:- ಬ್ಯಾಂಕ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ *99# ನಂಬರ್ ಡಯಲ್ ಮಾಡಿ ಹಣ ಕಳುಹಿಸಲು ಒಂದನ್ನು ಒತ್ತಿ.
  • ಸ್ಟೆಪ್ 2:- ನೀವು ಹಣವನ್ನು ಕಳುಹಿಸುವ ವ್ಯಕ್ತಿಯ UPI ಐಡಿ ಅಥವಾ ಫೋನ್ ಸಂಖ್ಯೆಯನ್ನು ಟೈಪ್ ಮಾಡಬೇಕು.
  • ಸ್ಟೆಪ್ 3:- payment ಮಾಡುವ ಹಣದ ಮೊತ್ತವನ್ನು ಟೈಪ್ ಮಾಡಿ ನಂತರ ನಿಮ್ಮ UPI pin ಹಾಕಬೇಕು.

ಮೇಲಿನ ಹಂತಗಳನ್ನು ಅನುಸರಿಸಿ ನೀವು payemnt ಮಾಡಲು ಸಾಧ್ಯವಾಗುತ್ತದೆ. ಆದರೆ ನೀವು ಈ ಸೇವೆಯಿಂದ ಗರಿಷ್ಠ 5,000 ರೂಪಾಯಿಯ ವರೆಗೆ ಹಣ ಪಾವತಿಸಲು ಸಾಧ್ಯವಾಗುತ್ತದೆ. ಈ ಸೇವೆಯು ನಿಮ್ಮ emergency ಸಮಯದಲ್ಲಿ ಈ ಸೇವೆ ಬಹಳ ಆಗುತ್ತದೆ.

ಇದನ್ನೂ ಓದಿ: Jio ದ ಈ ರೀಚಾರ್ಜ್ ಯೋಜನೆಗಳೊಂದಿಗೆ, ನೀವು ಉಚಿತ ಡೇಟಾವನ್ನು ಪಡೆಯಬಹುದು!

ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಆರ್ಥಿಕ ಭಧ್ರತೆ ಒದಗಿಸುತ್ತವೆ ಪೋಸ್ಟ್ ಆಫೀಸ್ ಯೋಜನೆಗಳು