UPI ಪೇಮೆಂಟ್ಸ್ ಅಪ್ಲಿಕೇಶನ್ ಗಳಲ್ಲಿ ಹಣ ಟ್ರಾನ್ಸ್ಫರ್ ಮಾಡಲು ಹೊಸ ನಿಯಮ ಜಾರಿ ಮಾಡಲು ಯೋಜಿಸಿದೆ NPCI

UPI Platforms

UPI ಪೇಮೆಂಟ್ಸ್ ಅಪ್ಲಿಕೇಶನ್ ಗಳು ಈಗ ಭಾರತದಲ್ಲಿ ಹೆಚ್ಚಿನ ಜನರು ಉಪಯೋಗಿಸುವ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನಿಮಿಷಗಳಲ್ಲಿ ನಮ್ಮ ಖಾತೆಯಿಂದ UPI ಪೇಮೆಂಟ್ಸ್ ಮೂಲಕ ಹಣ ವರ್ಗಾವಣೆ ಮಾಡಲು ಅಥವಾ ಬೇರೆಯವರಿಂದ ಹಣ ಪಡೆಯಲು ಸಾಧ್ಯ. ಈಗ ನಾವು ಯಾವುದೇ UPI ಪೇಮೆಂಟ್ಸ್ ಅಪ್ಲಿಕೇಶನ್ ಬಳಸಿ ಸ್ನೇಹಿತರಿಗೆ, ನಾವು ತೆಗೆದುಕೊಂಡ ವಸ್ತುವಿಗೆ ಅಥವಾ ಸಿನಿಮಾ ಟಿಕೆಟ್, ಬಸ್ ಟಿಕೆಟ್ ಹೀಗೆ ಕ್ಯಾಶ್ ಕೊಡುವ ಕಡೆಗಳಲ್ಲಿ ಕ್ಯಾಶ್ ಬದಲಾಗಿ UPI ಪೇಮೆಂಟ್ಸ್ ಅಪ್ಲಿಕೇಶನ್ ಬಳಸಿ ಹಣ ಪಾವತಿ ಮಾಡುತ್ತೇವೆ. ಈಗ ಹೊಸದಾಗಿ NPCI ಪಾವತಿಸಲು ಕೆಲವು ನಿಬಂಧನೆಗಳನ್ನು ಹೇರಲು ಮುಂದಾಗಿದೆ. ಹಾಗಾದರೆ ಹೊಸ ನಿಯಮಗಳು NPCI ಎಂಬುದನ್ನು ನೋಡೋಣ.

WhatsApp Group Join Now
Telegram Group Join Now

ಮಾರುಕಟ್ಟೆಯಲ್ಲಿ ಹೆಚ್ಚು ಬಳಸುವ UPI ಪೇಮೆಂಟ್ಸ್ ಅಪ್ಲಿಕೇಶನ್ ಯಾವುವು ?

UPI ಮೂಲಕ ಹಣ ಪಾವತಿ ಮಾಡಲು ನೂರಾರು ಅಪ್ಲಿಕೇಶನ್ ಗಳು ಇವೆ. ಆದರೆ ಸದ್ಯದ ಮಾರುಕಟ್ಟೆಯ ಸರ್ವೇ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಎರಡು ಪೇಮೆಂಟ್ ಅಪ್ಲಿಕೇಶನ್ ಗಳು ಹೆಚ್ಚಿನ ಜನರು ಬಳಸುತ್ತಾ ಇದ್ದರೆ. ಅವು ಯಾವುವು ಎಂದರೆ ಫೋನ್ ಪೇ ಮತ್ತು ಗೂಗಲ್ ಪೇ. ಇವೆರಡೂ ಅಪ್ಲಿಕೇಶನ್ ಗಳು ಹೆಚ್ಚಿನ ಜನರು ನಂಬುವ ಮತ್ತು ಬಳಸುವ ಅಪ್ಲಿಕೇಶನ್ ಆಗಿದೆ.. ದೇಶದ 80% ಜನರು ಇವೆರಡೂ ಅಪ್ಲಿಕೇಶನ್ ಗಳು ಬಳಸುತ್ತಾರೆ ಎಂದು ವರದಿ ಆಗಿದೆ. ಇದನ್ನು ಗಮನಿಸಿ ಮಾರುಕಟ್ಟೆಯ ಸಮತೋಲನ ತರುವ ಉದ್ದೇಶದಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲು NPCI ಮುಂದಾಗಿದೆ.

NPCI ಜಾರಿಗೆ ತರಬಹುದಾದ ನಿಯಮಗಳು ಏನು?: ಈಗ ನಾವು ಬಳಸುವ UPI ಪೇಮೆಂಟ್ಸ್ ಗೆ ನಿತ್ಯ ಇಷ್ಟೇ ಹಣ ಪಾವತಿಸಬೇಕು ಅಂತ ಯಾವುದೇ ನಿಯಮ ಇಲ್ಲ. ಅದೇ ಕಾರಣದಿಂದ ನಾವು ಎಲ್ಲಾ ಕಡೆಯಲ್ಲಿ UPI ಬಳಸುತ್ತಾ ಇದ್ದೇವೆ. ಇದನ್ನು ಗಮನಿಸಿದ NPCI ಈಗ ಒಬ್ಬರು ಮಾಡಬಹುದಾದ ವಹಿವಾಟುಗಳ ಸಂಖ್ಯೆಯ ಮೇಲೆ ಗರಿಷ್ಠ ಮಿತಿಯನ್ನು ಹೇರಲು ಮುಂದಾಗಿದೆ. ಇದು ಜಾರಿಗೆ ಬಂದರೆ ನಾವು ನಿಯಮಿತ ಹಣವನ್ನು ಮಾತ್ರ ಪಾವತಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಗಳ ಮಿತಿಗೊಳಿಸುವಿಕೆಯ ಸಕಾರಾತ್ಮಕ ಪರಿಣಾಮಗಳು :-

  • UPI payments ಮೂಲಕ ಪಾವತಿ ಮಾಡುವುದನ್ನು ಮಿತಿಗೊಳಿಸುವುದರಿಂದ, ಹಣಕಾಸು ವ್ಯವಸ್ಥೆಯಲ್ಲಿ ಭದ್ರತೆ ಹೆಚ್ಚಾಗಬಹುದು. ಏಕೆಂದರೆ,  ಖಾತೆಗಳಿಂದ ದೊಡ್ಡ ಮೊತ್ತದ ಹಣವನ್ನು ಕಳ್ಳ ಸಾಗಣೆ ಮಾಡುವ ಸಂಖ್ಯೆ ಕಡಿಮೆ ಆಗುತ್ತದೆ.
  • ಹಣಕಾಸು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಬಹುದು.
  • ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಾಗಬಹುದು.

UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಗಳ ಮಿತಿಗೊಳಿಸುವಿಕೆಯ ನಕಾರಾತ್ಮಕ ಪರಿಣಾಮಗಳು:-

  • UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಗಳನ್ನು ಮಿತಿಗೊಳಿಸುವುದರಿಂದ, ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರಬಹುದು. ಏಕೆಂದರೆ, ಅವರಿಗೆ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಕಷ್ಟವಾಗುತ್ತದೆ.
  • UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಗಳನ್ನು ಮಿತಿಗೊಳಿಸುವುದರಿಂದ, ಜನರಿಗೆ ತೊಂದರೆ ಉಂಟಾಗಬಹುದು. ಏಕೆಂದರೆ, ಅವರಿಗೆ ದೊಡ್ಡ ಮೊತ್ತದ ಪಾವತಿಗಳನ್ನು ಮಾಡಲು ನಗದು ಅಥವಾ ಇತರ ಪಾವತಿ ವಿಧಾನಗಳನ್ನು ಅನುಸರಿಸಬೇಕು.
  • UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಗಳನ್ನು ಮಿತಿಗೊಳಿಸುವುದರಿಂದ, ಡಿಜಿಟಲ್ ಪಾವತಿಗಳ ಬಳಕೆ ಕಡಿಮೆಯಾಗಬಹುದು. ಏಕೆಂದರೆ, ಜನರ ನಗದು ಪಾವತಿ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಮಹಿಳೆಯರು ತೆಗೆದುಕೊಳ್ಳುವ ಗೃಹ ಸಾಲಕ್ಕೆ ಹಲವು ರೀತಿಯ ಪ್ರಯೋಜನಗಳು ಇವೆ

ಇದನ್ನೂ ಓದಿ: ಈಗ TVS ಬೈಕ್ ಖರೀದಿಸುವುದು ಬಹಳ ಸುಲಭ, ಅದೂ ಕೇವಲ 11000 ರೂ.ಗಳಲ್ಲಿ! ಹೇಗೆಂದು ತಿಳಿಯಬೇಕಾ?