ಸಾಮಾನ್ಯವಾಗಿ ನಾವು ಯಾವುದೇ ಅಂಗಡಿ ಅಥವಾ ಮಾಲ್ ನಲ್ಲಿ ಹಣ ಪಾವತಿ ಮಾಡುವಾಗ UPI ಬಳಸುತ್ತೇವೆ. ಹಾಗೆಯೇ ನಮ್ಮ ಸ್ನೇಹಿತರಿಗೆ ಹಣ ಹಾಗೂ ನಮ್ಮ ಬಾಡಿಗೆ ಹಣ ಹೀಗೆ ಎಲ್ಲವನ್ನೂ without cash ಎಂದರೆ ಆನ್ಲೈನ್ UPI ಪೇಮೆಂಟ್ ಅಪ್ಲಿಕೇಶನ್ ಮೂಲಕ ಮಾಡುತ್ತೇವೆ. ಆದರೆ ನಾವು ವರುಷಕ್ಕೆ ಪಾವತಿಸುವ ಹಣಕ್ಕೆ ನಾವು ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ರಹಿತವಾಗಿ ಏಷ್ಟು ಹಣವನ್ನು transaction ಮಾಡಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ತೆರಿಗೆ ನಿಯಮದ ಪ್ರಕಾರ ಒಂದು ದಿನಕ್ಕೆ ಏಷ್ಟು ಹಣವನ್ನು UPI ಮೂಲಕ ವರ್ಗಾವಣೆ ಮಾಡಬಹುದು?: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ನಿಯಮದ ಪ್ರಕಾರ, ಒಂದು ದಿನದಲ್ಲಿ UPI ಮೂಲಕ ಗರಿಷ್ಠ 1 ಲಕ್ಷದವರೆಗೆ ವರ್ಗಾವಣೆ ಮಾಡಬಹುದು. ಆದರೆ ನೀವು ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವೈದ್ಯಕೀಯ ಸೇವೆಗೆ ಹಣ ವರ್ಗಾವಣೆ ಮಾಡಿದ್ರೆ ಗರಿಷ್ಠ ಮಿತಿ 5 ಲಕ್ಷ ರೂಪಾಯಿ ಆಗಿರುತ್ತದೆ. ಹಾಗೆಯೇ ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ 25,000 ರೂಪಾಯಿಯಿಂದ 1 ಲಕ್ಷದವರೆಗೆ UPI payment ಮಾಡಲು ಅವಕಾಶ ನೀಡುತ್ತದೆ. ಇದು ಬ್ಯಾಂಕ್ ನ ನಿಯಮಗಳಿಗೆ ಅನುಗುಣವಾಗಿ ಇರುತ್ತದೆ.
ಐಟಿಆರ್ ಫೈಲ್ ಮಾಡಲು ಆದಾಯದ ಮಿತಿ ಎಷ್ಟಿರಬೇಕು?: ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139 (1) ರ ಪ ಅನುಸಾರವಾಗಿ ಯಾವುದೇ ಕಂಪನಿ ಅಥವಾ ಸಂಸ್ಥೆಯು ಐಟಿಆರ್ ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಯಾವುದೇ ಸಾಮಾನ್ಯ ವ್ಯಕ್ತಿಯ ಅವನ ಆದಾಯಕ್ಕಿಂತ 2,50,000 ರೂಪಾಯಿ ಹೆಚ್ಚಿನ ಆದಾಯ ಹೊಂದಿದ್ದರೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿದ್ಯುತ್ ಬಿಲ್‌ಗಳಿಗೆ ಗುಡ್‌ಬೈ ಹೇಳಿ! ನಿಮ್ಮ ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಹಣವನ್ನು ಉಳಿಸಿರಿ!
ಯಾವ ಸಂದರ್ಭಗಳಲ್ಲಿ ITR ಸಲ್ಲಿಸಬೇಕಾಗುತ್ತದೆ?
ಆದಾಯ ತೆರಿಗೆ ನಿಯಮದ ಪ್ರಕರ ಯಾವುದೇ ವ್ಯಕ್ತಿ ಹಲವು ಸಮಯದಲ್ಲಿ ITR ಸಲ್ಲಿಸಬೇಕಾಗುತ್ತದೆ.
- ಠೇವಣಿಯ ಮಿತಿ :- ಯಾವುದೇ ವ್ಯಕ್ತಿ ಒಂದು ಅಥವಾ ಹಲವು ಖಾತೆಗಳಲ್ಲಿ ಒಂದು ವರುಷದಲ್ಲಿ 1 ಕೋಟಿ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ITR file ಮಾಡಲೇಬೇಕು.
- ಉಳಿತಾಯ ಖಾತೆಯ ಠೇವಣಿ ಮಿತಿ :- ಉಳಿತಾಯ ಖಾತೆಯಲ್ಲಿ 50 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಹಣವನ್ನು ಠೇವಣಿ ಮಾಡಿದ್ದರೆ ಕಡ್ಡಾಯವಾಗಿ ITR file ಮಾಡಲೇಬೇಕು.
- ವಿದೇಶಿ ಪ್ರಯಾಣದ ಖರ್ಚು :- ವಿದೇಶಿ ಪ್ರಯಾಣ ಮಾಡುವಾಗ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಖರ್ಚು ಮಾಡಿದರೆ ITR file ಸಲ್ಲಿಸಬೇಕು.
- ಕರೆಂಟ್ ಬಿಲ್ :- ಒಂದು ವರುಷದಲ್ಲಿ ನೀವು ಕರೆಂಟ್ ಬಿಲ್ ಗೆ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಿದರೆ.
- ಬಿಲ್ :- ನೀವು ವರುಷದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮಾಡಿದರೆ ITR file ಸಲ್ಲಿಸಬೇಕಾಗಿತ್ತದೆ.
- ವಹಿವಾಟು:- ಯಾವುದೇ ವ್ಯಾಪಾರ ವಹಿವಾಟಿಗೆ 60,000 ರೂಪಾಯಿಗಿಂತ ಹೆಚ್ಚಿನ ಹಣ ಖರ್ಚು ಮಾಡಿದರೆ ITR file ಸಲ್ಲಿಸಬೇಕು.
- ವಿದೇಶಿ ಆಸ್ತಿ :- ಭಾರತೀಯರು ಯಾವುದೇ ದೇಶದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಅದರ ಮೇಲೆ ITR file ಮಾಡಬೇಕು.
- ವಿದೇಶಿ ಬ್ಯಾಂಕ್ ಖಾತೆ :- ವಿದೇಶಿ ಬ್ಯಾಂಕ್ ಖಾತೆ ಹೊಂದಿರುವ ಭಾರತೀಯರು ಆಗಿದ್ದರೆ ನೀವು ITR file ಮಾಡಬೇಕು.
ಇದನ್ನೂ ಓದಿ: LIC ಪಿಂಚಣಿ ಯೋಜನೆಯಲ್ಲಿ ಒಮ್ಮೆ ಠೇವಣಿ ಮಾಡಿದರೆ ಪ್ರತಿ ವರ್ಷ 60 ಸಾವಿರ ಪಿಂಚಣಿ ಪಡೆಯಬಹುದು.