ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) 506 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು. ಹುದ್ದೆಗಳ ಬಗ್ಗೆ ಪೂರ್ಣ ವಿವರಗಳು ಹಾಗೂ ಅಪ್ಲೈ ಮಾಡುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. :-
ನೀವು ಕಾಂಪಿಟೇಷನ್ ಎಕ್ಸಾಮ್ ಗಳನ್ನೂ ಬರೆದು ಸರ್ಕಾರಿ ಹುದ್ದೆಗಳ ಪಡೆಯಬೇಕು ಎಂದಾದರೆ ಕೇಂದ್ರ ಲೋಕಸೇವಾ ಆಯೋಗ(UPSC) CAPF ಸಹಾಯಕ ಕಮಾಂಡೆಂಟ್ ಹುದ್ದೆಗಳ ಭರ್ತಿಗೆ ಮುಂದಾಗಿದ್ದು 14 ಮೇ 2024 ರ ಒಳಗಾಗಿ ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ. ಖಾಲಿ ಇರುವ 506 ಹುದ್ದೆಗಳಲ್ಲಿ ಗಡಿ ಭದ್ರತಾ ಪಡೆಯಲ್ಲಿ ಅಂದರೆ ಬಿಎಸ್ಎಫ್ ಹುದ್ದೆಗಳ ಸಂಖ್ಯೆ 186 ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ ಎಂದರೆ ಸಿಆರ್‌ಪಿಎಫ್ ಹುದ್ದೆಗಳ ಸಂಖ್ಯೆ 120 ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಎಂದರೆ ಸಿಐಎಸ್ಎಫ್ ಹುದ್ದೆಗಳ ಸಂಖ್ಯೆ 100 ಹಾಗೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಎಂದರೆ ಐಟಿಬಿಪಿ ಹುದ್ದೆಗಳ ಸಂಖ್ಯೆ 58 ಹಾಗೂ ಸಶಸ್ತ್ರ ಸೀಮಾ ಬಲ್ ಎಂದರೆ ಎಸ್ಎಸ್‌ಬಿ ಹುದ್ದೆಗಳ ಸಂಖ್ಯೆ 42 ಹುದ್ದೆಗಳನ್ನು ಇಲಾಖೆ ಭರ್ತಿ ಮಾಡಲು ಮುಂದಾಗಿದೆ. ಹುದ್ದೆಗಳಿಗೆ ಪುರುಷರು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಲು ಅವಕಾಶ ಇದೆ.
ವಿದ್ಯಾರ್ಹತೆಯ ವಿವರ :- ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ :- ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 25 ವರ್ಷ ಆಗಿರಬೇಕು. ಸರಕಾರಿ ಮೀಸಲಾತಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ ಮತ್ತು ಎಸ್‌ಟಿ, ಕೇಂದ್ರ ಸರ್ಕಾರಿ ನೌಕರ ಅಭ್ಯರ್ಥಿಗಳಿಗೆ 5 ವರ್ಷಗಳ ಕಾಲ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ ಬಗ್ಗೆ ಮಾಹಿತಿ:- ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಅಥವಾ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂಪಾಯಿ ಇರುತ್ತದೆ.
ಅಭ್ಯರ್ಥಿಗಳ ಆಯ್ಕೆ ವಿಧಾನ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಮತ್ತು ದೈಹಿಕ ದಕ್ಷತೆ ಪರೀಕ್ಷೆ ಅಥವಾ ದೈಹಿಕ ಮಾಪನ ಪರೀಕ್ಷೆ ನಡೆಸುತ್ತಾರೆ. ನಂತರ ಸಂದರ್ಶನ ನಡೆಸುತ್ತಾರೆ. ಈಗಾಗಲೇ ಲಿಖಿತ ಪರೀಕ್ಷೆ ದಿನ ನಿಗದಿ ಆಗಿದ್ದು ಲಿಖಿತ ಪರೀಕ್ಷೆ ಆಗಸ್ಟ್ 4 2024ರಂದು ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವ ವಿಧಾನ :-
ಮೊದಲನೆಯದಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ. ಮುಖಪುಟದಲ್ಲಿ ಕಾಣುವ Registration ಬಟನ್ ಕ್ಲಿಕ್ ಮಾಡಿ ನಂತರ ನಿಮ್ಮ ಹೆಸರು ನೋಂದಾಯಿಸಲು ಮೊಬೈಲ್ ನಂಬರ್ ಹಾಗೂ ಇ ಮೇಲ್ ಐಡಿ ಹಾಕಬೇಕು. ನಂತರ ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್‌ವರ್ಡ್ ಬಳಿಸಿ ಲಾಗಿನ್ ಆಗಬೇಕು. ನಿಮ್ಮ ವೈಯಕ್ತಿಕ ವಿವರಗಳು ಹಾಗೂ ನಿಮ್ಮ ವಿದ್ಯಾರ್ಹತೆ ವಿವರಗಳನ್ನು ಫಾರ್ಮ್ ನಲ್ಲಿ ತುಂಬಿ. ನಂತರ ಅಗತ್ಯ ದಾಖಲೆಗಳು ಮತ್ತು ಸಹಿ ಹಾಗೂ ಫೋಟೊವನ್ನು ಅಪ್‌ಲೋಡ್ ಮಾಡಿ. ನಂತರ ಆನ್ಲೈನ್ ಮೂಲಕ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SSLC ಫಲಿತಾಂಶ ನೋಡುವುದು ಹೇಗೆ?
ಇದನ್ನೂ ಓದಿ: ಅತ್ಯುನ್ನತ ಮೈಲೇಜ್ ಅನ್ನು ಹೊಂದಿರುವ ನಾಲ್ಕು ಪೆಟ್ರೋಲ್ ವಾಹನಗಳು ಕೇವಲ 4 ಲಕ್ಷದಿಂದ ಪ್ರಾರಂಭ!