ಹಲವಾರು ಯುವಕರ ಪಾಲಿನ ಕನಸು ಯುಪಿಎಸ್‌ಸಿ ಪಾಸ್ ಆಗುವುದು. ಈಗ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆ 312 ಹುದ್ದೆಗಳ ಭರ್ತಿಗೆ ಮುಂದಾಗಿದ್ದು. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಲಭ್ಯ ಇದೆ.
ಯುಪಿಎಸ್‌ಸಿ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಟ್ರೈನಿಂಗ್ ಆಫೀಸರ್ ಹಾಗೂ ಎಂಜಿನಿಯರ್ ಹಾಗೂ ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಹಾಗೂ ಇನ್ನಿತರ ಹುದ್ದೆ ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಜೂನ್ 13 2024 ರ ಒಳಗಾಗಿ ಅರ್ಜಿ ಸಲ್ಲಿಸಲು ಇಲಾಖೆ ಸೂಚಿಸಿದೆ.
ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ :-
ಹಲವು ಇಲಾಖೆಗಳಲ್ಲಿ ಹುದ್ದೆಗಳು ಲಭ್ಯವಿದ್ದು ಯಾವ ಇಲಾಖೆಯಲ್ಲಿ ಏಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಇಲ್ಲಿದೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಒಟ್ಟು ಸಚಿವಾಲಯದ ಅಡಿಯಲ್ಲಿ ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರೊಫೆಸರ್ (ಫೊರೆನ್ಸಿಕ್ ಮೆಡಿಸಿನ್) ಹುದ್ದೆಗಳು ಇವೆ.
- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ 4 ಸಹಾಯಕ ನಿರ್ದೇಶಕ ಹುದ್ದೆಗಳು ಖಾಲಿ ಇವೆ.
- ಗುಪ್ತಚರ ಇಲಾಖೆಯಲ್ಲಿ 9 ಉಪ ಕೇಂದ್ರ ಗುಪ್ತಚರ ಅಧಿಕಾರಿ ಹುದ್ದೆಗಳು ಖಾಲಿ ಇವೆ.
- ಇಂಟಿಗ್ರೇಟೆಡ್ ಹೆಡ್ಕ್ವಾರ್ಟರ್ಸ್ ಎಂದರೆ ನೌಕಾಪಡೆ) ಹಾಗೂ ನಾಗರಿಕ ಸಿಬ್ಬಂದಿ ನಿರ್ದೇಶನಾಲಯ ದಲ್ಲಿ 4 ಸಿವಿಲ್ ಹೈಡ್ರೋಗ್ರಾಫಿಕ್ ಅಧಿಕಾರಿ ಹುದ್ದೆಗಳು ಖಾಲಿ ಇದೆ.
- ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಕೇಂದ್ರದಲ್ಲಿ 5 ಮಹಿಳಾ ತರಬೇತಿ ಹುದ್ದೆಗಳು ಖಾಲಿ ಇವೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದಲ್ಲಿ 1 ಸಹಾಯಕ ಪ್ರಾಧ್ಯಾಪಕರು (ಮೂತ್ರಶಾಸ್ತ್ರ) ಹುದ್ದೆ ಖಾಲಿ ಇದೆ.
- ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ 4 ಉಪ ಅಧೀಕ್ಷಕ ಪುರಾತತ್ವ ರಸಾಯನಶಾಸ್ತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದಲ್ಲಿ 61 ಸ್ಪೆಷಲಿಸ್ಟ್ ಗ್ರೇಡ್ III ಹುದ್ದೆಯು ಜನರಲ್ ಮೆಡಿಸಿನ್ ವಿಭಾಗದಲ್ಲಿ ಹಾಗೂ 2 ಅರವಳಿಕೆ ಶಾಸ್ತ್ರ ವಿಭಾಗದಲ್ಲಿ ಹಾಗೂ 39 ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಹಾಗೂ 3 ಪೀಡಿಯಾಟ್ರಿಕ್ ನೆಫ್ರಾಲಜಿ ವಿಭಾಗದಲ್ಲಿ ಹಾಗೂ 2 ಡರ್ಮಟಾಲಜಿ, ವೆನೆರಿಯೊಲಾಜಿ, ಕುಷ್ಠರೋಗ ವಿಭಾಗದಲ್ಲಿ ಹುದ್ದೆಗಳು ಖಾಲಿ ಇದೆ.
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ದಲ್ಲಿ 2 ಸಹಾಯಕ ನಿರ್ದೇಶಕ ಗ್ರೇಡ್-II (IEDS) (ಮೆಟಲ್ ಫಿನಿಶಿಂಗ್) ಹುದ್ದೆಗಳು ಖಾಲಿ ಇವೆ.
- ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ದಲ್ಲಿ 3 ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಹುದ್ದೆಗಳು ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ :- ಪ್ರತಿಯೊಂದು ಹುದ್ದೆಗೆ ಬೇರೆ ಬೇರೆ ರೀತಿಯ ವಿದ್ಯಾರ್ಹತೆ ಮಾನದಂಡಗಳು ಇರುತ್ತದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಬಿಡುಗಡೆ ಮಾಡಿರುವ ಅಧಿಸೂಚನೆ ಓದಿಕೊಂಡು ನಿಮ್ಮ ವಿದ್ಯಾರ್ಹತೆ ಗೆ ಅನುಗುಣವಾಗಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ ವಿವರ :- ಸಾಮಾನ್ಯ ಅಭ್ಯರ್ಥಿಗಳು 25 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ OBC ಅವರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಂಧನ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶಗಳು! ಈ ದಿನದೊಳಗಾಗಿ ಅರ್ಜಿ ಸಲ್ಲಿಸಿ!
ಇದನ್ನೂ ಓದಿ: 20 ವರ್ಷಗಳ ಅವಧಿಗೆ ಹೊಮ್ ಲೋನ್ ತೆಗೆದುಕೊಂಡರೆ EMI ಎಷ್ಟು ಪಾವತಿಸಬೇಕು ಎಂಬುದನ್ನು ತಿಳಿಯೋಣ