ಭಾರತೀಯ ರೈಲು ಇಲಾಖೆಯಿಂದ ವಂದೆ ಭಾರತ್ ಸ್ಲೀಪರ್ ಟ್ರೈನ್ ಬಿಡುಗಡೆ ಆಗಲಿದೆ

Vande Bharat Sleeper Train

ಭಾರತೀಯ ರೈಲ್ವೆ ಇಲಾಖೆಯು ಹೊಸ ಹೊಸ ರೈಲು ಬಿಡುಗಡೆ ಮಾಡುತ್ತಿದೆ. ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್ ಟ್ರಾನ್ಸಿಟ್ನ ಕಾರ್ಬಾಡಿ ರಚನೆಯನ್ನು ಉದ್ಘಾಟನೆ ಮಾಡಲಾಗಿದೆ. ಈ ರೈಲನ್ನು BEML ನಿರ್ಮಾಣ ಮಾಡಲಾಗಿದೆ. ರಾತ್ರಿಯ ಪ್ರಯಾಣವನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ. ಇದರ ವಿಶೇಷತೆಗಳು ಏನೇನು ಹಾಗೂ ಇದು ಯಾವಾಗ ಸಂಚರಿಸಲಿದೆ ಎಂಬುದನ್ನು ತಿಳಿಯೋಣ.

WhatsApp Group Join Now
Telegram Group Join Now

ಯಾವಾಗ ನಿರ್ಮಾಣದ ಹಂತ ಪೂರ್ಣ ಆಗಲಿದೆ.?: ಮೊದಲ ರೈಲು ಮುಂದಿನ ತಿಂಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸ್ಲೀಪರ್ ಕೋಚ್ ಆಗಿದ್ದು ನಿಮಗೆ ಆರಾಮದಾಯಕವಾದ ಪ್ರಯಾಣಕ್ಕೆ ಇದು ಉಪಯೋಗ ಆಗಲಿದೆ. ಕಡಿಮೆ ಸಮಯದಲ್ಲಿ ಉತ್ತಮ ಪ್ರಯಾಣದ ಅನುಭವ ಆಗಲಿದೆ.

ರೈಲಿನ ವಿಶೇಷತೆಗಳ ಬಗ್ಗೆ ಸಚಿವರು ಹೇಳಿದ ಹೇಳಿಕೆಗಳು:- ಭಾರತ ಸರ್ಕಾರವು 10 ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಬಿಡುಗಡೆ ಮಾಡಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು ಹಾಗೂ ಈ ರೈಲುಗಳನ್ನು BEML ತಯಾರಿಸುತ್ತಿದೆ ಮತ್ತು ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಲು ಸಾಧ್ಯವಿದೆ ಎಂಬುದನ್ನು ತಿಳಿಸಿದರು. ವಂದೇ ಭಾರತ್ ಸ್ಲೀಪರ್ ರೈಲು 11 ಎಸಿ 3 ಟೈರ್ ಕೋಚ್ ಹಾಗೂ 4 ಎಸಿ 2 ಟೈರ್ ಕೋಚ್ ಹಾಗೂ 1 ಎಸಿ ಕೋಚ್ ಹೊಂದಿರುತ್ತದೆ. ಈ ರೈಲುಗಳು ರಾಜಧಾನಿ express ಗೆ ಹೋಲಿಸಿದರೆ ಹೆಚ್ಚಿನ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ವ್ಯವಸ್ಥೆಯನ್ನು ಹೊಂದಿದೆ ಎಂಬುದನ್ನು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ರೈಲಿನ ವಿಶೇಷತೆಗಳು ಏನು?

  • ಆಧುನಿಕ ಸೌಕರ್ಯಗಳು :- ಉತ್ತಮ ಬೆಳಕಿನ ಸೌಕರ್ಯಗಳು ಇವೆ. ಉತ್ತಮ ಬರ್ತ್ ಗಳು ಹೊಂದಿವೆ. ಸಾಮಾನ್ಯ ಪ್ರದೇಶಗಳಲ್ಲಿ ಸಂವೇದಿಕ ಆಧಾರಿತ ಲೈಟ್ ಗಳು ಒಳಗೊಂಡಿವೆ. ಜರ್ಕ್ ಫ್ರೆ ರೈಡ್ ಅನುಭವ ಪಡೆಯಬಹುದು.
  • ಅತ್ಯಾಧುನಿಕ ಶೌಚಾಲಯ :- ಕೆಟ್ಟ ವಾಸನೆಯೂ ಬರದಂತೆ ತಡೆಯಲು ಜೈವಿಕ ಶೌಚಾಲಯಗಳು ಈ ರೈಲಿನ ವಿಶೇಷತೆ ಆಗಿದೆ.
  • ಕ್ರ್ಯಾಶ್ ಯೋಗ್ಯ ವೈಶಿಷ್ಟ್ಯಗಳು :- ಇದು ಅಪಘಾತದ ಸಮಯದಲ್ಲಿ ಗಾಯದ ಅಪಾಯವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ವಿಶೇಷ ವ್ಯವಸ್ಥೆ ಆಗಿದ್ದು ಏರ್‌ಬ್ಯಾಗ್‌ಗಳು ಘರ್ಷಣೆಯ ಸಮಯದಲ್ಲಿ ಪ್ರಯಾಣಿಕರನ್ನು ರಕ್ಷಿಸಲು ತ್ವರಿತವಾಗಿ ಪಡೆದುಕೊಳ್ಳುವ ಸಾಧ್ಯತೆ ಇದೆ. ರೈಲಿಗೆ ಅಳವಡಿಸಲಾದ ಬಲವಾದ ಗಾಜು ಘರ್ಷಣೆಯ ಸಮಯದಲ್ಲಿ ಒಡೆಯುವ ಸಾಧ್ಯತೆ ಕಡಿಮೆ ಹಾಗೂ ಪ್ರಯಾಣಿಕರಿಗೆ ಗಾಯವಾಗುವ ಸಾಧ್ಯತೆ ಕಡಿಮೆ.
  • ಮಾಹಿತಿಗಳ ಪ್ರಕಟಣೆ:- ನೀವು ಸಂಚರಿಸುವ ಪ್ರದೇಶಗಳ ಬಗ್ಗೆ ದೃಶ್ಯಗಳ ಮಾಹಿತಿ ಮತ್ತು ಕೆಲವು ಸಾರ್ವಜನಿಕ ಪ್ರಕಟಣೆಗಳನ್ನು ವೀಕ್ಷಿಸಬಹುದು.
  • ವಿಕಲಚೇತನರಿಗೆ ವಿಶೇಷ ಬರ್ತ್ ಮತ್ತು ಶೌಚಾಲಯ ವ್ಯವಸ್ಥೆ:-ವ್ಹೀಲ್‌ಚೇರ್ ಬಳಕೆದಾರರಿಗೆ ಸುಲಭವಾಗಿ ತಿರುಗಲು ಮತ್ತು ಚಲಿಸಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲು ಬರ್ತ್ಗಳು ಅಗಲವಾಗಿ ಇರಲಿವೆ. ಹಾಗೂ ವ್ಹೀಲ್‌ಚೇರ್ ಬಳಕೆದಾರರಿಗೆ ಸುಲಭವಾಗಿ ವರ್ಗಾಯಿಸಲು ಶೌಚಾಲಯ ಸೀಟನ್ನು ಹೆಚ್ಚಿನ ಎತ್ತರದಲ್ಲಿ ಸ್ಥಾಪಿಸಲಾಗಿದೆ.
  • ಸ್ವಯಂ ಚಾಲಿತ ಬಾಗಿಲು ವ್ಯವಸ್ಥೆ :- ಪ್ರಯಾಣಿಕರು ಬಾಗಿಲುಗಳನ್ನು ತೆರೆಯಲು ಅಥವಾ ಮುಚ್ಚಲು ಕೈಯಿಂದ ಕೆಲಸ ಮಾಡಬೇಕಾಗಿಲ್ಲ. ನೀವು ಬಂದ ತಕ್ಷಣ ಆಟೋಮ್ಯಾಟಿಕ್ ಆಗಿ ಬಾಗಿಲುಗಳು ತೆರೆದುಕೊಳ್ಳುವ ವುವಸ್ಥೆ ಈ ಟ್ರೈನ್ ಗೆ ಇದೆ.
  • ಬಿಸಿ ನೀರಿನ ವ್ಯವಸ್ಥೆ :- 1 ನೇ ಎಸಿ ಬೋಗಿಯಲ್ಲಿ ನಿಮಗೆ ಬಿಸಿ ನೀರು ದೊರೆಯುತ್ತದೆ. ನೀವು ಕೈ ತೊಳೆಯಲು ಅಥವಾ ಸ್ನಾನ ಮಾಡಲು ಬಳಸಬಹುದು.

ಇದನ್ನೂ ಓದಿ: ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ಎಲೆಕ್ಟ್ರಿಕ್ ಕಾರುಗಳು ಇವು, ಇದರ ಬೆಲೆಗಳು ಎಷ್ಟು ಗೊತ್ತಾ?

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9144 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ