ವರಮಹಾಲಕ್ಷ್ಮೀ ಹಬ್ಬಕ್ಕೆ ತರಲೇಬೇಕಾದ ವಸ್ತುಗಳು; 5 ವಸ್ತುಗಳನ್ನ ತಂದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟೋಗಲ್ಲ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಹೌದು ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ ದಿನಗಳಲ್ಲಿ ಬಹುತೇಕರು ಸರಸ್ವತಿಗಿಂತ ಲಕ್ಷ್ಮಿಯನ್ನು ಒಲಿಸಿಕೊಳ್ಳಲೇ ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಾಗಿದೆ. ಹಾಗಾಗಿ ಈ ಕಲಿಯುಗದಲ್ಲಿ ಯಾವುದೇ ಜಾತಿಗಳ ತಾರತಮ್ಯವಿಲ್ಲದೆ ಪೂಜಿಸುವ ಏಕೈಕ ದೇವತೆ ಲಕ್ಷ್ಮಿ ಎಂದರೆ ಅತಿಶಯೋಕ್ತಿಯೇನಲ್ಲ.

WhatsApp Group Join Now
Telegram Group Join Now

ಇನ್ನು ಶ್ರಾವಣ ಮಾಸವೆಂದರೆ ಹಬ್ಬ ಹರಿದಿನಗಳ ಕಾಲ. ನಾಗರಪಂಚಮಿ ನಂತರ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಪ್ರಮುಖವಾದದ್ದು. ಬದುಕಿನ ಸಮೃದ್ಧಿ, ಏಳ್ಗೆ, ವಿದ್ಯೆ, ಬುದ್ಧಿ ಎಲ್ಲವನ್ನೂ ಕೊಡುವ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಲು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಪೌರ್ಣಮಿಗೆ ಮೊದಲು ಬರುವ ಶುಕ್ರವಾರ ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ಈ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಆದಿ ಲಕ್ಷ್ಮಿ, ಧನ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ವಿಜಯ ಲಕ್ಷ್ಮಿ ಧಾನ್ಯ ಲಕ್ಷ್ಮಿ , ಸಂತಾನ ಲಕ್ಷ್ಮಿ, ವಿದ್ಯಾ ಲಕ್ಷ್ಮಿಯ ಕೃಪೆಗೆ ಪಾತ್ರವಾಗಲು ಈ ಹಬ್ಬವು ಪ್ರಮುಖವಾಗಿದೆ. ಇನ್ನು ಈ ಹಬ್ಬದ ದಿನ ಕೆಲವೊಂದು ವಸ್ತುಗಳನ್ನ ಮರೆಯದೆ ತಂದು ನೋಡಿ ನಿಮಗೆ ಲಕ್ಷ್ಮೀಯ ಅನುಗ್ರಹ ಹೆಚ್ಚಾಗುತ್ತೆ, ನಿಮ್ಮ ಮನೆಯಿಂದ ಲಕ್ಷ್ಮೀ ದೇವಿ ಯಾವುದೇ ಕಾರಣಕ್ಕೂ ಹೊರ ಹೋಗಲ್ಲ.

Image Credit: Orginal Source

ಸ್ನೇಹಿತರೆ ವರಮಹಾಲಕ್ಷ್ಮಿ ಹಬ್ಬದ ದಿನ ನೀವು ಐದು ವಸ್ತುಗಳನ್ನ ಮರೆಯದೆ ನಿಮ್ಮ ಮನೆಗೆ ತೆಗೆದು ಕೊಂಡು ಬರಬೇಕು. ಈ ಐದು ವಸ್ತುಗಳನ್ನ ಮನೆಗೆ ತೆಗೆದುಕೊಂಡು ಬಂದು 24 ಗಂಟೆಗಳ ಕಾಲ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಆನಂತರ ಅವುಗಳನ್ನ ನೀವು ಬಳಸಿಕೊಂಡರೆ ನಿಮಗೆ ಲಕ್ಷ್ಮಿ ದೇವಿಯ ಕೃಪಕಟಾಕ್ಷ ಸಿಗುತ್ತೆ. ಎಂದಿಗೂ ಕೂಡ ಲಕ್ಷ್ಮಿದೇವಿ ನಿಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲ. ಮೊದಲಿಗೆ ಅಕ್ಕಿ, ನೀವು ಅಕ್ಕಿಯನ್ನು ಮನೆಗೆ ತರಬೇಕು ವರಮಹಾಲಕ್ಷ್ಮಿ ಹಬ್ಬದ ದಿನ ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಒಂದು ಕೆಜಿ ಅಕ್ಕಿ ಆಗಿರಬಹುದು ಎರಡು ಕೆಜಿ ಅಕ್ಕಿ ಆಗಿರಬಹುದು, ಎಷ್ಟಾಗುತ್ತೋ ಅಷ್ಟು ಅಕ್ಕಿಯನ್ನು ತಂದು ಅದರಲ್ಲಿ ಒಂದು ಹಿಡಿ ಅಕ್ಕಿಯನ್ನು ತಾಯಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಆನಂತರ ಶನಿವಾರದ ದಿನ ನೀವು ಅಕ್ಕಿ ತುಂಬಿರತಕ್ಕಂತ ಡಬ್ಬಿಗೆ ತುಂಬಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಧನ ಕನಕಕ್ಕೆ ಯಾವುದೇ ತೊಂದರೆ ಆಗೋದಿಲ್ಲ ನಿಮ್ಮ ಮನೆಯಲ್ಲಿ ಧಾನ್ಯ ತುಂಬಿ ತುಳುಕುತ್ತಾ ಇರುತ್ತೆ.

ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸ್ಥಿರವಾಗಿರುತ್ತೆ

ಇನ್ನು ಸ್ನೇಹಿತರೆ ಎರಡನೆಯದಾಗಿ ಹಾಲು ಮೊಸರು ಬೆಣ್ಣೆ, ತುಪ್ಪ ಇದರಲ್ಲಿ ಯಾವುದಾದರೂ ಸರಿ ನೀವು ವರಮಹಾಲಕ್ಷ್ಮಿ ಹಬ್ಬದ ದಿನ ಇದನ್ನ ತಂದು ತಾಯಿ ಲಕ್ಷ್ಮಿ ದೇವಿಗೆ ನೈವೇದ್ಯ ಇಟ್ಟು ನಂತರ ಇದನ್ನು ಬಳಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯ ಧನಾಕರ್ಷಣೆ ಆಗುತ್ತೆ ನಿಮ್ಮ ಮನೆಯಲ್ಲಿ ಧನ ತುಂಬಿ ತುಳುಕುತ್ತದೆ ಲಕ್ಷ್ಮಿ ದಿವ್ಯ ಅನುಗ್ರಹ ಪ್ರಾಪ್ತಿಯಾಗುತ್ತೆ ಇನ್ನು ಮೂರನೆಯದಾಗಿ ಸ್ನೇಹಿತರೆ ಬೆಳ್ಳಿ ಸ್ನೇಹಿತರೆ ಲಕ್ಷ್ಮಿ ದೇವಿಗೆ ಚಿನ್ನಕ್ಕಿಂತ ಬೆಳ್ಳಿ ಬಹಳ ಬೇಗನೆ ಇಷ್ಟವಾಗುತ್ತದೆ ಒಂದು ಬೆಳ್ಳಿಯ ನಾಣ್ಯವನ್ನು ತಂದು ಅದನ್ನ ಲಕ್ಷ್ಮಿ ದೇವಿಯ ಪಾದಕ್ಕೆ ಅರ್ಪಿಸಿ ಇಲ್ಲ ನಮಗೆ ಲಕ್ಷ್ಮಿದೇವಿಯ ಅನುಗ್ರಹ ಚೆನ್ನಾಗಿದೆ ಅನ್ನೋರು ಎರಡು ಅಂದ್ರೆ ಜೋಡಿ ಆನೆಯನ್ನ ತಂದು ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆನ ಸಲ್ಲಿಸಿ. ಹೀಗೆ ಮಾಡೋದ್ರಿಂದ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತೆ ಲಕ್ಷ್ಮೀದೇವಿಯ ಪಾದಕ್ಕೆ ಅರ್ಪಿಸಿದ ಬೆಳ್ಳಿಯ ನಾಣ್ಯವನ್ನು ನಿಮ್ಮ ದುಡ್ಡಿನ ಲಕೋಟಿಯಲ್ಲಿ ಇಟ್ಟುಕೊಂಡು ಪೂಜೆ ಮಾಡುವುದರಿಂದ ನಿಮಗೆ ಹಣಕಾಸಿಗೆ ಆರ್ಥಿಕ ಸಮಸ್ಯೆ ಬರುವುದಿಲ್ಲ.

ಇನ್ನು ಸ್ನೇಹಿತರೆ ನಾಲ್ಕನೆಯದಾಗಿ ತೆಂಗಿನ ಕಾಯಿ ವರಮಹಾಲಕ್ಷ್ಮಿ ಹಬ್ಬದ ದಿನ ಜೋಡಿ ತೆಂಗಿನಕಾಯಿಯನ್ನು ತಂದು ಲಕ್ಷ್ಮಿ ದೇವಿಯ ಮುಂದೆ ಇರಿಸಿ ನಂತರ ಮಾರನೇ ದಿನವಾದ ಶನಿವಾರ ಅದರಿಂದ ನೀವು ಸಿಹಿ ತಿಂಡಿಯನ್ನು ಮಾಡಿ ತಿನ್ನೋದ್ರಿಂದ ನಿಮಗೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರೋದಿಲ್ಲ ಮನೆಯಲ್ಲಿ ಊಟ ಉಪಚಾರಕ್ಕೆ ತೊಂದರೆ ಎನ್ನುವುದು ಆಗುವುದಿಲ್ಲ. ಇನ್ನು ಸ್ನೇಹಿತರೆ ಕೊನೆಯದಾಗಿ ಹಸಿರು ಏಲಕ್ಕಿ ನಿಮ್ಮ ಮನೆಗೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ಒಂದು ವಸ್ತುವನ್ನು ತಗೊಂಡು ಬರಬೇಕು ತಾಯಿ ಲಕ್ಷ್ಮಿ ದೇವಿಗೆ ಏಲಕ್ಕಿ ಅಂತ ಅಂದ್ರೆ ಪಂಚಪ್ರಾಣ ಹೀಗಾಗಿ ಒಂದಷ್ಟು ಏಲಕ್ಕಿಯನ್ನು ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಿ ಅದಾದ ನಂತರ ನೀವು ನಿಮ್ಮ ಅಡುಗೆಯ ದಿನನಿತ್ಯದ ಕಾರ್ಯದಲ್ಲಿ ಅದನ್ನ ಬಳಸಿಕೊಳ್ಳಬೇಕು ಅಥವಾ ಟೀ ಕಾಫಿ ಕುಡ ನೀವು ಏಲಕ್ಕಿಯನ್ನು ಬಳಸಿ ಅದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯವೃದ್ದಿ ಆಗುತ್ತೆ ತಾಯಿ ಲಕ್ಷ್ಮಿ ದೇವಿ ಕೂಡ ಪ್ರಸನ್ನಳಾಗಿ ನಿಮ್ಮ ಮನೆಯನ್ನು ಬಿಟ್ಟು ಹೋಗೋದಿಲ್ಲ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ತದನಂತರ ಏಲಕ್ಕಿಯನ್ನು ತಾಯಿ ಲಕ್ಷ್ಮಿ ಇಟ್ಟುಕೊಳ್ಳಬೇಕು ಜೊತೆಗೆ ಅಡುಗೆಗೂ ಕೂಡ ನೀವು ಬಳಸಿಕೊಳ್ಳಬಹುದು ಸ್ನೇಹಿತರೆ ಈ ಐದು ವಸ್ತುಗಳನ್ನ ನೀವು ಮರೆಯದೆ ವರಮಹಾಲಕ್ಷ್ಮಿ ಹಬ್ಬದ ದಿನ ತಂದು ನೋಡಿ ನಿಮಗೆ ಗೊತ್ತಾಗುತ್ತೆ ಚಮತ್ಕಾರ ಹೇಗೆ ಆಗುತ್ತೆ ಅಂತ.

ಇದನ್ನೂ ಓದಿ: ವರಮಹಾಲಕ್ಷ್ಮಿ ಕೂರಿಸುವ ಅದೃಷ್ಟದ ಸಮಯ; ಕಳಶ ಪ್ರತಿಷ್ಠಾಪನೆ ಮಾಡೋದು ಹೇಗೆ?

ಶ್ರದ್ಧಾ ಭಕ್ತಿಯಿಂದ ಲಕ್ಷ್ಮೀ ದೇವಿಯನ್ನು ಪೂಜೆ ಮಾಡಿ

ಸ್ನೇಹಿತರೆ ನಾವ್ ಹೇಳ್ದಂತ ಈ ಉಪಾಯವನ್ನ ನೀವು ಮಾಡೋದು ಮುಖ್ಯವಲ್ಲ ಅದನ್ನ ಒಳ್ಳೆ ರೀತಿಯಲ್ಲಿ ಮಾಡಿದ್ದೆ ಆದರೆ ಆಗ ನಿಮಗೆ ಲಕ್ಷ್ಮಿ ದೇವಿ ಒಲಿತಾಳೆ. ಹೀಗಾಗಿ ನಾವು ಹೇಳಿದಂತಹ ಈ ಉಪಾಯವನ್ನ ಮಾಡೋದ್ರಿಂದ ನಿಮಗೆ ಮನೆ ತೆಗೆದುಕೊಳ್ಳಬೇಕು ಅನ್ನೋ ಆಸೆ ಇದ್ರೆ ಅಥವಾ ಮನೆ ಕಟ್ಟಬೇಕು ಅನ್ನೋ ಆಸೆ ಇದ್ರೆ ಮನೆ ಕಟ್ತೀರಾ ವಾಹನ ತೆಗೆದುಕೊಳ್ಳಬೇಕು ಅನ್ನೋ ಆಸೆ ಇರೋರು ವಾಹನವನ್ನು ತೆಗೆದುಕೊಳ್ಳುತ್ತೀರಾ ಮದುವೆ ಆಗದೆ ಇರುವವರಿಗೆ ಮದುವೆ ಆಗುತ್ತೆ ಮಕ್ಕಳ ಆಗದೆ ಇರೋರ್ಗೆ ಮಕ್ಕಳಾಗದೆ ಇದೆಲ್ಲವೂ ಆಗಬೇಕು ಅಂತ ಅಂದ್ರೆ ನೀವು ಶುದ್ಧವಾದ ಮನಸ್ಸಿನಿಂದ ತಾಯಿ ಮಹಾಲಕ್ಷ್ಮಿ ದೇವಿಯನ್ನು ಬೇಡಿಕೊಂಡು ಪೂಜೆಯನ್ನು ಸಲ್ಲಿಸಬೇಕು.

ಈ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಈ ರೀತಿ ನಾವು ಹೇಳಿದ ವಸ್ತುಗಳನ್ನು ತಂದು ಶುರು ಮಾಡಿ ನೋಡಿ ಮುಂದಿನ ವರ್ಷದ ಒಳಗಡೆ ನಿಮ್ಮ ಎಲ್ಲಾ ಕೋರಿಕೆಗಳು ಕೂಡ ಈಡೇರುತ್ತೆ, ಎಲ್ಲ ಈಡೇ ಇರಬೇಕು ಅಂತ ಅಂದ್ರೆ ನಿಮಗೆ ಶುದ್ಧವಾದ ಮನಸ್ಸು ಇರಲೇಬೇಕು ಶುದ್ಧವಾದ ಮನಸ್ಸಿಟ್ಟು ಯಾರು ಪೂಜೆಯನ್ನು ಮಾಡ್ತಾರೋ ಜೊತೆಗೆ ಯಾರು ಕಷ್ಟಪಟ್ಟು ದುಡಿತಾರೋ ಅಂತವರಿಗೆ ಈ ರೀತಿಯ ರೆಮೆಡಿಗಳು ವರ್ಕ್ ಆಗುತ್ತೆ ಇಲ್ಲ ನಾನು ಕಷ್ಟ ಪಡಲ್ಲ ನೀವು ಹೇಳಿದಂಗೆ ಮಾಡ್ತೀವಿ ಅಷ್ಟೇ ನಾವು ಅದರಿಂದ ಬೇರೆ ಇನ್ನೇನನ್ನು ಮಾಡಕ್ ಹೋಗಲ್ಲ ಅಂತವರಿಗೆ ಖಂಡಿತವಾಗಿಯೂ ಈ ರೆಮಿಡಿಗಳು ವರ್ಕ್ ಆಗಲ್ಲ ಕಷ್ಟಪಟ್ಟು ಶ್ರದ್ಧೆಯಿಂದ ಭಯ ಭಕ್ತಿಯಿಂದ ಯಾರು ಮಾಡ್ತಾರೋ ಅವರಿಗೆ ಖಂಡಿತ ಲಕ್ಷ್ಮಿ ದೇವಿ ಒಲಿಯುತಾಳೆ.

ಇದನ್ನೂ ಓದಿ: 3ದಶಕಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಮಹಾಲಕ್ಷ್ಮೀ ಇಷ್ಟು ದಿನ ಎಲ್ಲಿದ್ರೂ ಏನ್ ಮಾಡ್ತಿದ್ರು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram