ನಟ ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ? ಕುಟುಂಬದ ಜೊತೆಗೆ ಹಬ್ಬ ಆಚರಿಸಿದ ನಿಖಿಲ್

ಇಂದು ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು ತಾಯಿ ಮಹಾಲಕ್ಷ್ಮೀಯನ್ನು ಮನೆಯಲ್ಲಿ ಕೂರಿಸಿ ಅಲಂಕಾರ ಮಾಡುತ್ತಾರೆ. ಇನ್ನೂ ಸ್ಯಾಂಡಲ್ ವುಡ್ ನ ಯುವ ರಾಜ ನಿಖಿಲ್ ಕುಮಾರ್ ಸ್ವಾಮಿ ಅವರ ಮನೆಯಲ್ಲೂ ಇಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಅದರ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

WhatsApp Group Join Now
Telegram Group Join Now

ಫೋಟೋ ದಲ್ಲಿ ವೈಟ್ ಕಲರ್ ಬಟ್ಟೆಯಲ್ಲಿ ನಿಖಿಲ್ ಮಿಂಚುತ್ತಿದ್ದಾರೆ ಪತ್ನಿ ರೇವತಿ ಅವರು ಸಾಂಪ್ರಾದಾಯಿಕವಾಗಿ ಸೀರೆಯಲ್ಲಿ ಮಿಂಚಿದ್ದಾರೆ ನಿಖಿಲ್ ದಂಪತಿ ಮಗ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ತಂದೆ ತಾಯಿಯ ಜೊತೆ ನಿಖಿಲ್ ಮನೆಯಲ್ಲೇ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಿದ್ದಾರೆ. ಫೋಟೋದ ಕ್ಯಾಪ್ಶನ್ ನಲ್ಲಿ “ನಾಡಿನ ಸಮಸ್ತ ಜನರಿಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾಲಕ್ಷ್ಮೀ ಎಲ್ಲಾರಿಗೂ ಸಕಲ ಐಶ್ವರ್ಯ ಸಂಪತ್ತನ್ನು ನೀಡಿ ಆಶೀರ್ವದಿಸಲೆಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಮೊನ್ನೆ ತಾನೇ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಸಿನಿಮಾದ ಮುಹೂರ್ತ ನಡೆಯಿತು. ಈ ಬಾರಿ ರಾಮನಗರದಿಂದ ಎಲೆಕ್ಷನ್ ನಲ್ಲಿ ನಿಂತಿದ ನಿಖಿಲ್ ಅವರು ಸೋತಿದ್ದಾರು. ಸೋತ ಬಳಿಕವು ಹುಮ್ಮಸ್ಸು ಬಿಡದ ನಿಖಿಲ್ ಅವರು ಮುಂದಿನ ಲೋಕಸಭಾ ಎಲೆಕ್ಷನ್ ನಲ್ಲಿ ನಮ್ಮ ಪಕ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಮಾಧ್ಯಮದ ಮುಂದೆ ಹೇಳಿದ್ದರು. ಕಳೆದ ತಿಂಗಳು ಕುಟುಂಬದ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ ನಿಖಿಲ್. ಪ್ರವಾಸದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರು. ಪ್ರವಾಸ ಮುಗಿಸಿ ಬಂದ ಬಳಿಕ ತಮ್ಮ ಹೊಸ ಚಿತ್ರದ ಮುಹೂರ್ತ ಮಾಡಿ. ಇದೀಗ ಸಾಲು ಸಾಲು ಸಿನಿಮಾಗೆ ನಿಖಿಲ್ ಸೈನ್ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ನಿಖಿಲ್ ಇನ್ನೂ ಹೆಚ್ಚು ಸಿನಿಮಾಗಳು ಮಾಡಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಹಾಗೂ ಭುವನ್; ಇವ್ರ ಮದುವೆಯ ಸುಂದರ ಕ್ಷಣಗಳು ಫುಲ್ ವೈರಲ್

ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ – ಪ್ರೇರಣಾ ದಂಪತಿ; ಧ್ರುವ ಸರ್ಜಾ 2ನೇ ಮಗು ಮುಂದಿನ ತಿಂಗಳಲ್ಲಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram