ಶ್ರಾವಣ ಮಾಸ ಆರಂಭವಾಯ್ತು ಅಂದ ತಕ್ಷಣ ಹಬ್ಬಗಳು ಶುರುವಾಯ್ತು ಅಂತಲೇ ಅರ್ಥ ಅದರಲ್ಲೂ ಶ್ರಾವಣ ಮಾಸದ ಮೊದಲ ಶುಕ್ರವಾರದ ಮಹಿಳೆಯರು ಅತೀ ಹೆಚ್ಚು ಶ್ರದ್ಧಾ ಭಕ್ತಿ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಅಂದ್ರೆ ವರಮಹಾಲಕ್ಷ್ಮಿ. ಅದರಲ್ಲೂ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ವ್ರತವನ್ನು ಇಡೀ ಕುಟುಂಬಕ್ಕೆ, ವಿಶೇಷವಾಗಿ ಅವರ ಪತಿ ಮತ್ತು ಮಕ್ಕಳಿಗೆ ಆಶೀರ್ವಾದವನ್ನು ಪಡೆಯಲು ಆಚರಿಸುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಮಂಗಳಕರ ದಿನದಂದು ಲಕ್ಷ್ಮಿಯನ್ನು ಆರಾಧಿಸುವುದು ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾದ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಬಹಳಷ್ಟು ವಿಶೇಷವಾದ ಸ್ಥಾನ ಮಾನವಿದೆ ಅಲ್ದೇ ಹಬ್ಬದ ಪೂಜೆಯಿಂದ ಸಂಪತ್ತು, ಶಕ್ತಿ, ಶಾಂತಿ, ಕೀರ್ತಿ, ಸಂತೋಷ, ಭೂಮಿ ಮತ್ತು ಶಿಕ್ಷಣ ಲಭಿಸುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಇನ್ನು ಈ ವರ್ಷದ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಸೂಕ್ತ ಸಮಯ, ಕಳಶ ಪ್ರತಿಷ್ಠಾಪನೆ ಸೇರಿದಂತೆ ಹಬ್ಬದ ಆಚರಣೆ ಬಗ್ಗೆ ನೋಡೋಣ ಬನ್ನಿ
ಹೌದು ನಮ್ಮ ಹಿಂದೂ ಧರ್ಮದಲ್ಲಿ, ವಿವಿಧ ರೀತಿಯ ವ್ರತಗಳನ್ನು ಆಚರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದರಲ್ಲೂ ವರ ಮಹಾಲಕ್ಷ್ಮೀ ವ್ರತಕ್ಕೆ ಹೆಚ್ಚಿನ ಪ್ರಮುಖ್ಯತೇ ಇದೆ. ಇನ್ನು ಶ್ರಾವಣ ಮಾಸದ ಹುಣ್ಣಿಮೆಯ ಮೊದಲ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸುವ ಪರಿಪಾಟಲು ಅನಾದಿ ಕಾಲದಿಂದಲೂ ಇದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಶಕ್ತಿಗೆ ಅನುಸಾರವಾಗಿ ಹಬ್ಬವನ್ನು ಆಚರಿಸೋದು ವಾಡಿಕೆ. ಇನ್ನು ಈ ವರ್ಷ ವರಮಹಾಲಕ್ಷ್ಮಿ ಹಬ್ಬ 25 ಆಗಸ್ಟ್ 2023 ರಂದು ಆಚರಿಸಲಾಗುತ್ತಿದೆ. ಹೌದು ವರಮಹಾಲಕ್ಷ್ಮಿ ಹಬ್ಬದ ದಿನದಂದು ಮಹಿಳೆಯರು ತಮ್ಮ ಕುಟುಂಬದ ಸಂತೋಷಕ್ಕಾಗಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಈ ವ್ರತವನ್ನು ವಿಶೇಷವಾಗಿ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಪರಿಗಣಿಸಲಾಗಿದೆ ಅದೇ ರೀತಿ ಈ ಹಿಂದೆಯೇ ಹೇಳಿದಂತೆ ಅವರವರ ಶಕ್ತಿಗನುಸಾರ ಆಚರಣೆ ಮಾಡೋದು ವಾಡಿಕೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳ ಹಣ ಏಕೆ ಬಂದಿಲ್ಲ! ಯಾವಾಗ ಬರುತ್ತೆ?
ಆಗಸ್ಟ್ 25ರ ಶುಕ್ರವಾರದ ಅದೃಷ್ಟದ ಟೈಮ್ ಮತ್ತು ಹಬ್ಬ ಆಚರಿಸುವ ವಿಧಾನ!
ಇನ್ನು ಶ್ರಾವಣ ಮಾಸದ ಶುಕ್ಲ ಪಕ್ಷ ನವಮಿ ತಿಥಿ ಶುಕ್ರವಾರ ಬರುತ್ತಿದೆ. ಅದಕ್ಕಾಗಿಯೇ ಈ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಆಗಸ್ಟ್ 25 ರ ಶುಕ್ರವಾರ ಆಚರಿಸಲಾಗುತ್ತದೆ. ಇನ್ನು ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತದ ಬಗ್ಗೆ ನೋಡೋದಾದ್ರೆ ಮೊದಲಿಗೆ ಸಿಂಹ ಲಗ್ನ ಪೂಜೆ ಮುಹೂರ್ತ – ಆಗಸ್ಟ್ 25, 2023 ರಂದು ಬೆಳಿಗ್ಗೆ 6.10 ರಿಂದ 7.50 ರವರೆಗೆ ನೀವು ದೇವಿಯನ್ನ ಪ್ರತಿಷ್ಠಾಪಿಸಿ ಪೂಜೆ ಮಾಡಬಹುದು ಅಥವಾ
ವೃಶ್ಚಿಕ ಲಗ್ನ ಪೂಜೆ ಮುಹೂರ್ತ ದಲ್ಲಿ ಅಂದ್ರೆ ಆಗಸ್ಟ್ 25 ಮಧ್ಯಾಹ್ನ 12.15 ರಿಂದ 2.31 ರವರೆಗೆ ಕೂಡ ಪೂಜೆ ಮಾಡಬಹುದು. ಜೊತೆಗೆ
ಕುಂಭ ಲಗ್ನ ಪೂಜೆ ಮುಹೂರ್ತ ಆಗಸ್ಟ್ 25, ಸಂಜೆ 6.23 ರಿಂದ 7.56 ರವರೆಗೆ ಇರುತ್ತೆ ಇನ್ನು ವೃಷಭ ಲಗ್ನ ಪೂಜೆ ಮುಹೂರ್ತ – ಆಗಸ್ಟ್ 25, ರಾತ್ರಿ 11.06 ರಿಂದ ಆಗಸ್ಟ್ 26 ರ ಬೆಳಿಗ್ಗೆ 1.04 ರವರೆಗೆ ನಿಮಗೆ ಒಳ್ಳೆಯ ಸಮಯದ ಲಗ್ನಗಳು ಇರುತ್ತೆ. ಇದರಲ್ಲಿ ನಿಮ್ಮ ಸಮಯಕ್ಕಾನುಸಾರ ಯಾವುದು ಸೂಕ್ತವೋ ಆ ಸಮಯದಲ್ಲಿ ಪೂಜೆ ಸಲ್ಲಿಸಬಹುದು.
ಹೌದು ಎಲ್ಲರಿಗೂ ಸಮೃದ್ಧಿ, ಏಳ್ಗೆಯ ಸಂಕೇತವಾದ ಲಕ್ಷ್ಮೀದೇವಿಯನ್ನು ಮನೆಗೆ ಬರಮಾಡಿಕೊಳ್ಳುವ ಕಾತರ ಇದ್ದೆ ಇರುತ್ತೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಸಂಪತ್ತಿನ ಅಧಿದೇವತೆಯೆಂದೇ ಕರೆಸಿಕೊಳ್ಳುವ ಲಕ್ಷ್ಮೀ ದೇವಿಯನ್ನು ಆರಾಧಿಸಿ ವಿಶೇಷ ವರ ಕೊಡು ಎಂದು ಬೇಡಿಕೆಯಿಡುವ ವರಮಹಾಲಕ್ಷ್ಮಿ ವ್ರತ ಬಹಳ ವಿಶೇಷ. ಬಹುಮುಖ್ಯವಾಗಿ ಮನೆಯಲ್ಲಿನ ದಾರಿದ್ರ್ಯ, ಕಿರಿಕಿರಿ, ಅಸಮಾಧಾನವನ್ನು ತೊಲಗಿಸಿ ತಮ್ಮ ಕುಟುಂಬದ ಸುಖ ಸಮೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ಆಕೆಯನ್ನು ಒಲಿಸಿಕೊಳ್ಳಲು ಮಹಿಳೆಯರು ಈ ವ್ರತವನ್ನು ಕೈಗೊಳ್ಳುತ್ತಾರೆ. ಇನ್ನು ಲಕ್ಷ್ಮೀ ಅಲಂಕಾರಪ್ರಿಯೆ. ಹೀಗಾಗಿ ಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸುವುದು ಈ ಹಬ್ಬದ ಒಂದು ವೈಶಿಷ್ಟ್ಯವೆಂದೇ ಹೇಳಬಹುದು.
ಇನ್ನು ಕಳಸಕ್ಕೆ ಸೀರೆ ಉಡಿಸಿ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡುವುದರೊಂದಿಗೆ ಸಾಂಪ್ರದಾಯಿಕ ರಂಗೋಲಿ ಹಾಕಿ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಪೂಜೆ ಬಳಿಕ 9 ಗಂಟುಗಳು ಇರುವ ಮತ್ತು ಮಧ್ಯದಲ್ಲಿ ಹೂವಿರುವ ದಾರವನ್ನು ಬಲ ಕೈಗೆ ಕಟ್ಟಿಕೊಳ್ಳಬೇಕು. ಇದು ಆಚರಣೆಯ ಪ್ರಮುಖ ಅಂಶ. ಇನ್ನು ಪೂಜೆ ನೆರವೇರಿಸುವಾಗ ಲಕ್ಷ್ಮೀ ಸಹಸ್ರನಾಮ ಹಾಗೂ ಲಕ್ಷ್ಮೀ ಅಷ್ಟೋತ್ತರಗಳನ್ನು ಪಠಿಸಬೇಕು. ಕೆಲವರು ಪೂಜೆ ನೆರವೇರಿಸಲು ಉಪವಾಸ ಇರುತ್ತಾರೆ. ಮತ್ತೂ ಕೆಲವರು ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ ಅರ್ಪಿಸಿ ನಂತರ ಸೇವಿಸುತ್ತಾರೆ. ಪೂಜೆ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು.
ಇದನ್ನೂ ಓದಿ: ತಂದೆ ತಾಯಿಯ ಸ್ಥಾನ ತುಂಬಿ ಮಗಳ ನಾಮಕರಣ ಕಿರುತೆರೆ ನಟಿ ದಿವ್ಯ ಶ್ರೀಧರ್.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram