ವರುಣ್ – ವರ್ಷ ಲವ್ ಬ್ರೇಕಪ್.! ಸೋಶಿಯಲ್ ಮೀಡಿಯಾ ಸ್ಟಾರ್ ನಡುವೆ ಆಗಿದ್ದೇನು ಗೊತ್ತಾ? ವರ್ಷಾಗೆ ವರುಣ್ ಮೋಸ ಮಾಡಿದ್ನಾ?

ಸ್ನೇಹಿತರೆ ಡಿಜಿಟಲ್‌ ಯುಗದಲ್ಲಿ ಪ್ರೀತಿ ಪ್ರೇಮ ಎಲ್ಲ ಸಾಮಾನ್ಯವಾಗಿದೆ. ಅದರಲ್ಲೂ ಒಂದು ತಾಸಿಗೆ ಲವ್‌ ಇನ್ನೊಂದು ತಾಸಿಗೆ ಬ್ರೇಕಪ್‌ ಎನ್ನುವಂತಾಗಿದೆ. ಹಾಗಂತ ನಿಜವಾದ ಪ್ರೀತಿ ಆಗುವುದೇ ಇಲ್ಲ ಅಂತ ಹೇಳೋಕಾಗಲ್ಲ. ಆಗುತ್ತೆ, ಆದರೆ ಅದು ನೂರಾರು ಜೋಡಿಗಳಲ್ಲಿ, ಕೆಲವರಲ್ಲಿ ಮಾತ್ರ ನಿಜವಾದ ಪ್ರೀತಿ ಇರುತ್ತದೆ. ಪ್ರೀತಿ ಕುರುಡು ಎನ್ನುವ ಮಾತಿನಂತೆ ಪ್ರೀತಿಸಿದವರನ್ನು ಹುಚ್ಚರಂತೆ ನಂಬುವವರು ಇದ್ದಾರೆ. ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸತ್ಯವಲ್ಲ. ಹಾಗಂತ ಎಲ್ಲವೂ ಸುಳ್ಳಲ್ಲ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮಿಡಿಯಾಗಳೇ ಎಷ್ಟೋ ಜನರ ಜೀವನವಾಗಿವೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಲು ಏನೇನೋ ಸರ್ಕಸ್‌ ಮಾಡುತ್ತಾರೆ. ಅದೇ ರೀತಿ ರೀಲ್ಸ್‌ ಮಾಡುವ ಮೂಲಕ ಫೇಮಸ್‌ ಆಗಿರುವ ಇಬ್ಬರು ಪ್ರೇಮಿಗಳು ಸದ್ಯ ದೂರವಾಗಿದ್ದಾರೆ.

WhatsApp Group Join Now
Telegram Group Join Now

ಹೌದು ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಟಿಕ್‌ಟಾಕ್‌ ಜೋಡಿ ಪ್ರತಿದಿನ ರೀಲ್ಸ್‌ ಮಾಡುವ ಮೂಲಕ ಎಲ್ಲರನ್ನು ರಂಜಿಸುತ್ತಿದ್ದರು. ಆದರೆ ಇದೀಗ ಇವರಿಬ್ಬರ ಪ್ರೇಮ ಸಂಬಂಧ ಮಧ್ಯೆ ಬಿರುಕು ಉಂಟಾಗಿದ್ದು, ಬ್ರೇಕಪ್‌ ಮಾಡಿಕೊಂಡಿರುವುದಾಗಿ ತಿಳಸಿದ್ದಾರೆ. ಹಾಗಾದ್ರೆ ಯಾರು ಆ ಕಪಲ್?‌ ದೂರವಾಗಲು ಕಾರಣವಾದ್ರು ಏನು? ಇನ್ಸ್ಟಾಗ್ರಾಮ್ ನಲ್ಲಿ ಲವ್ ಬ್ರೇಕಪ್ ಬಗ್ಗೆ ಆಕೆ ಹೇಳಿದ್ದೇನು? ಎಲ್ಲವನ್ನ ನೋಡ್ತಾ ಹೋಗೋಣ ಬನ್ನಿ

ಹೌದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡಿ ಖ್ಯಾತಿ ಪಡೆದಿರುವ ವರುಣ್‌ ಆರಾಧ್ಯಾ ಹಾಗೂ ವರ್ಷಾ ಕಾವೇರಿ ಸದ್ಯ ದೂರವಾಗಿರುವ ಜೋಡಿ ಹಕ್ಕಿಗಳು. ಇಬ್ಬರ ಮಧ್ಯೆ ಇದೀಗ ವೈ ಮನಸ್ಸು ಮೂಡಿ ಇಬ್ಬರು ಕೂಡ ದೂರವಾಗಿದ್ದಾರೆ. ಇನ್ನು ಇವರಿಬ್ಬರೂ ದೂರವಾಗಿರುವುದಕ್ಕೆ ಕಾರಣ ವರುಣ್‌ ಅವರು ಬೇರೆ ಯಾವುದೋ ಹುಡುಗಿಯ ಜೊತೆ ಸಂಬಂಧ ಹೊಂದಿರುವುದು ಎಂದು ಹೇಳಲಾಗುತ್ತಿದ್ದು, ಸದ್ಯ ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಕನ್ನಡ ಸೀಸನ್ 10 ಶೋನ ಸ್ಪರ್ಧಿಗಳು ಯಾರು ಯಾರು ಅಂತ ಭಾರೀ ಚರ್ಚೆ ನಡೆಯುತ್ತಿದೆ.

ಅದರಲ್ಲೂ ಈ ಬಾರಿ ಯುಟ್ಯೂಬರ್ಸ್ ಇರುತ್ತಾರೆ ಅಂತ ಎಲ್ರು ಕೂಡ ತಿಳಿದುಕೊಂಡಿದ್ರು. ಅದರಲ್ಲೂ ರಿಯಲ್ ಪ್ರೇಮಿಗಳಾದ ವರ್ಷಾ ಕಾವೇರಿ ಮತ್ತು ವರುಣ್ ಜೋಡಿ ಬಿಗ್ ಬಾಸ್ ಶೋಗೆ ಬರುತ್ತಾರೆ ಅಂತ ಅವ್ರ ಅಭಿಮಾನಿಗಳು ಅಂದುಕೊಂಡಿದ್ರು. ಆದರೆ ಈಗ ವರ್ಷಾ ಅವರು ಬ್ರೇಕಪ್ ಮಾಡಿಕೊಂಡಿರೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ವತಃ ವರ್ಷಾ ಕಾವೇರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವು ದೂರಾಗುತ್ತಿರುವ ವಿಷಯದ ಜೊತೆಗೆ ಕಾರಣವನ್ನು ತಿಳಿಸಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್‌ ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಆಕೆಗೆ ಧೈರ್ಯ ಹೇಳುತ್ತಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇನ್ಸ್ಟಾಗ್ರಾಮ್ ನಲ್ಲಿ ವರ್ಷ ಬರೆದುಕೊಂಡಿರೋದೇನು?

ಇನ್ಸ್ಟಾಗ್ರಾಮ್ ನಲ್ಲಿ ಬ್ರೇಕ್ ಅಪ್ ಹೇಳಿಕೊಂಡಿರುವ ವರ್ಷ, ಎಲ್ಲರಿಗೂ ನಮಸ್ಕಾರ, ತುಂಬ ದಿನದಿಂದ ನೀವೆಲ್ಲ ನನಗೆ ಕೇಳಿದ್ದಂತಹ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ, ವರುಣ್‌ಗೂ ಏನಾಯಿತೆಂದು.. ಆ ವಿಷಯದ ಬಗ್ಗೆ ನಾನು ಇವತ್ತು ಮಾತನಾಡಲು ಮುಂದೆ ಬಂದಿದ್ದೇನೆ. ನಿಮಗೆಲ್ಲ ಗೊತ್ತಿರುವ ವಿಷಯ, ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ, ವರುಣ್ ಮಧ್ಯೆ ಮನಸ್ತಾಪಗಳು ಬಂದಿದ್ದು ನಾನು ಎಷ್ಟೇ ಹೇಳಿದರೂ ಸಹ ಅವನು ಆ ಹುಡುಗಿಯನ್ನು ಬಿಡೋದಿಕ್ಕೆ ತಯಾರಿಲ್ಲ. ಆದ್ದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ, ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಅಂತ ಹೇಳಿದಾಗ ನನ್ನ ಮನಸ್ಸಿಗೆ ತುಂಬ ನೋವಾಯ್ತು. ಆದ್ದರಿಂದ ನಾನು ಕಳೆದ ಎರಡು ತಿಂಗಳಿಂದ ನನ್ನ, ವರುಣ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ರೆ ನನಗೆ ನಾನೇ ಮೋಸ ಮಡಿಕೊಳ್ತೀನಿ ಅಂತ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡ್ತಿದ್ದೀನಿ.

ಇನ್ನು ಮುಂದೆ ನನ್ನ ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರೋದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲಿ. ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ, ನಾನು ಅವರಿಗಾಗಿ ಜೀವನವನ್ನು ನಡೆಸಬೇಕು, ಆದ್ದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ, ಇನ್ನುಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳುತ್ತಿರ ಅಂತ ನಾನು ಭಾವಿಸಿರುವೆ. ಇನ್ನು ಇದು ಯಾವುದೇ ಪ್ರಾಂಕ್ ಅಲ್ಲ, ಕಳೆದ ಎರಡು ತಿಂಗಳಿನಿಂದ ನಾನು ಇದನ್ನು ಅನುಭವಿಸುತ್ತಿದ್ದೇನೆ. ನಿಮಗೆ ಇದು ಅರ್ಥವಾಗುತ್ತದೆ ಎಂದುಕೊಂಡಿರುವೆ ಅಂತ ತಮ್ಮಿಬ್ಬರ ನಡುವೆ ಏನಾಗಿದೆ? ಅದಕ್ಕೆ ಕಾರಣ ಏನು ಅನ್ನೋದಕ್ಕೆ ವರ್ಷ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by varsha.kaveri17 (@varsha.kaveri)

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಯಾವಾಗ ಜಮೆ ಆಗುತ್ತೆ ಗೊತ್ತಾ? ಮೊದಲನೇ ಕಂತಿನ ಹಣವೇ ಬಂದಿಲ್ಲ ಅನ್ನೋರು ಏನ್ ಮಾಡಬೇಕು?

ಇದನ್ನೂ ಓದಿ: ನಮ್ರತಾ ಗೌಡ ನೂತನ ಮನೆ ಗೃಹ ಪ್ರವೇಶ; ಪೂಜೆಯಲ್ಲಿ ಭಾಗಿಯಾದ ಸಹ ಕಲಾವಿದರು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram