ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ, ಇಂದು ಸ್ಟಾರ್ ನಟಿ?

ಸಾವು ಖಂಡಿತ ಒಂದಲ್ಲಾ ಒಂದು ದಿನ ನನ್ ಕಣ್ಣೆದುರಿಗೆಬಂದು ನಿಂತೇ ನಿಲ್ಲುತ್ತೆ. ಅವತ್ತು ಕೂಡ ನನ್ ಕೈ ಮೀಸೆ ಮೇಲೆ, ಮುಖದ ಮೇಲೆ ನಗು ಇರಬೇಕು ಎನ್ನೋದೆ ಈ ಮದಕರಿ ಆಸೆ. ಇದೆ ರೀತಿ ಸಾಕಷ್ಟು ಡೈಲಾಗ್ ಗಳ ಮೂಲಕವೇ ವೀರಮದಕರಿ ಸಿನಿಮಾ ಯುವಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು ಅದ್ರಲ್ಲೂ ಜಿಂತಾತ ಜಿಂತ ಜಿಂತ ತಾ ಡೈಲಾಗ್ ಮಾತ್ರ ಸಖತ್ ಫೇಮಸ್ ಆಗಿತ್ತು ರಿಮೇಕ್ ಸಿನಿಮಾ ಆದ್ರೂ ಕೂಡ ಸಖತ್ ಸೌಂಡ್ ಮಾಡಿತ್ತು. ಹೌದು ತೆಲುಗಿನ ಹಿಟ್ ಚಿತ್ರ ವಿಕ್ರಮಾರ್ಕುಡು ಸಿನಿಮಾದ ರಿಮೇಕ್ ಕನ್ನಡದಲ್ಲಿ ವೀರಮದಕರಿ ಅಯ್ತು. ಇದು ಒಂಥರಾ ಪೊಲೀಸ್, ಇನ್ನೊಂಥರಾ ಲವ್ ಸ್ಟೋರಿ ಅಂತ ಹೇಳಬಹುದು.

WhatsApp Group Join Now
Telegram Group Join Now

ಇನ್ನು ಎರಡನ್ನೂ ಸರಿ ದೂಗಿಸಲು ಸುದೀಪ್ ಹೋರಾಡಿರೋದೇ ಸಿನಿಮಾ, ಸಿನಿಮಾದಲ್ಲಿ ಅವರದ್ದು ದ್ವಿಪಾತ್ರ. ಕಳ್ಳ ಪೊಲೀಸ್ ಆಗಿ ಅಂದ್ರೆ ಅವ ಇವನಾಗಿ, ಇವ ಅವನಾಗಿ ಇನ್ನೇನೇನೋ ಆಗಿ, ಕ್ಲೈಮ್ಯಾಕ್ಸ್ನಲ್ಲಿ ಚಿಂದಿ ಉಡಾಯಿಸಿರೋದೇ ವೀರ ಮದಕರಿ ಸಿನಿಮಾ. ಅಲ್ಲ ಸಿನಿಮಾ ಬಗ್ಗೆ ಈಗ ಯಾಕೆ ಹೇಳ್ತಿದ್ದೀನಿ ಅಂತ ಯೋಚಿಸುತ್ತಿದ್ದೀರಾ?? ಅದಕ್ಕೆ ಕಾರಣನು ಇದೆ…. ಈ ಸಿನಿಮಾದಲ್ಲಿ ಪೊಲೀಸ್ ಪಾತ್ರ ನಿಭಾಯಿಸಿರೋ ಸುದೀಪ್ ಅವ್ರ ಮಗಳಾಗಿ ಒಬ್ಬಳು ಬಾಲ ನಟಿ ಕಾಣಿಸಿಕೊಂಡಿದ್ರು, ಅವ್ರು ನಿಮಗೂ ಕೂಡ ನೆನೆಪುರುತ್ತಾರೆ ಯಾಕಂದ್ರೆ ಅಷ್ಟು ಕ್ಯೂಟ್ ಆಗಿ ಸಿನಿಮಾದಲ್ಲಿ ನಟಿಸಿದ್ದ ಆ ಬಾಲ ನಟಿ ಇಂದು ಸ್ಟಾರ್ ನಟಿ.

ಹೌದು ತೆಲುಗಿನ ‘ವಿಕ್ರಮಾರ್ಕುಡು’ ರಿಮೇಕ್ ಚಿತ್ರ ವೀರ ಮದಕರಿ. ಕಿಚ್ಚ ಸುದೀಪ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ‘ವೀರ ಮದಕರಿ’ 2009ರಲ್ಲಿ ತೆರೆಕಂಡಿತ್ತು. ಅಂದು ವೀರ ಮದಕರಿ ಚಿತ್ರದಲ್ಲಿ ಸುದೀಪ್ ಅವ್ರಿಗೆ ಮಗಳಾಗಿ ನಟಿಸಿದ್ದ ನಟಿ, ಇಂದು ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ತುಂಬಾ ಕ್ಯೂಟ್ ಆಗಿ ಮಾತನಾಡುವ ಜೆರುಶಾ, ವೀಕ್ಷಕರನ್ನು ಅದಾಗಲೇ ಇಂಪ್ರೆಸ್​ ಮಾಡಿಬಿಟ್ಟಿದ್ದಾರೆ. ಹೌದು ಇದೀಗ ಈ ನಟಿಯ ಸಂದರ್ಶನ ಒಂದರ ಸಣ್ಣ ತುಣುಕು ಎಲ್ಲಾ ಕಡೆ ವೈರಲ್ ಆಗಿದೆ. ಅಂದು ಬಾಲ ನಟಿಯಾಗಿದ್ದ ಜೆರುಶಾ ಕ್ರಿಸ್ಟೋಫರ್ ಇಂದು ಸ್ಟಾರ್ ಹೀರೋಹಿನ್. ಹೌದು ಈ ಹಿಂದೆ ಬಾಲನಟಿಯಾಗಿ ಕಿಚ್ಚ ಸುದೀಪ್ ಚಿತ್ರದಲ್ಲಿ ನಟಿಸಿದ್ದ ಇವ್ರು ಈಗ ಬಹು ಬೇಡಿಕೆಯ ಸ್ಟಾರ್ ನಟಿಯಾಗಿ ಬೆಳೆದು ನಿಂತಿದಾರೆ. ಹೌದು, ವೀರ ಮದಕರಿ ಚಿತ್ರದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದೆ ಅಂತ ಸ್ವತಃ ಜೆರುಶಾ ಅವ್ರೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ತುಣುಕು ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.

ವೈರಲ್ ಆಗ್ತಿದೆ ಸ್ಟಾರ್ ನಟಿಯರು ಇಂಟರ್ವ್ಯೂ ವಿಡಿಯೋ!

ಬೆಂಗಳೂರಿನವರಾದ ಜೆರುಶಾ ಮೊದಲಿಗೆ ಬಾಲ ನಟಿಯಾಗಿ ಎಂಟ್ರಿ ಕೊಟ್ರು ನಂತರ ಹಲವು ಜಾಹೀರಾತುಗಳಲ್ಲೂ ಕೂಡ ಕಾಣಿಸಿಕೊಂಡಿದ್ರು. ಅದ್ರಿಗ ಬಹಳ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೌದು ಕಳೆದ ಜೂನ್ 23 ರಂದು ತೆರೆ ಕಂಡಿದ್ದ ಪವನ್ ಕುಮಾರ್ ನಿರ್ದೇಶನದ ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ ಇದೀಗ ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ನಟಿ ಜೆರುಶಾ ಕ್ರಿಸ್ಟೋಫರ್ ಸುದ್ದಿ ಆಗುತ್ತಿದ್ದಾರೆ.

ಹೌದು ಅದು ಕೂಡ ವೀರ ಮದಕರಿ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದು ತಾನೇ ಅಂತ ಹೇಳಿರುವ ಸಂದರ್ಶನದ ವಿಡಿಯೋ ತುಣುಕನ್ನು 7 ದಿನಗಳ ಹಿಂದಷ್ಟೇ ಇನ್​ಸ್ಟಾಗ್ರಾಮ್​​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ 23 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದ್ದು, ಫಾಲೋವರ್ಸ್​ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ನಿಮಗೆ ಕನ್ನಡ ಕೂಡ ಬರುತ್ತಾ? ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಅಂದು ಸುದೀಪ್​ಗೆ ಮಗಳಾಗಿ ನಟಿಸಿದ್ದೀರಿ. ಇವತ್ತು ಹೀರೋಯಿನ್ ಕೂಡ ಆಗಿದ್ದೀರಾ ಅಂತೆಲಾ ಖುಷಿ ವ್ಯಕ್ತಿಪಡಿಸುತ್ತಿದ್ದಾರೆ.

 

View this post on Instagram

 

A post shared by Adarsh Sakare (@adarshsakare)

ಇದನ್ನೂ ಓದಿ: ಕರಿಮಣಿ ಮಾಲೀಕ ಇನ್ಮುಂದೆ ನಾನಲ್ಲ; ಅಧಿಕೃತವಾಗಿ ವಿಚ್ಚೇಧನದ ಬಗ್ಗೆ ಹೇಳಿಕೊಂಡ ಕಿರಿಕ್ ಕೀರ್ತಿ

ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾಗೆ ನಾಯಕಿಯಾಗಿ ಆಂಕರ್ ಜಾಹ್ನವಿ ಎಂಟ್ರಿ!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram