ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಬರಲಿದೆ 10 ಸಾವಿರ; ವಿದ್ಯಾಧನ್ ಸ್ಕಾಲರ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

Vidyadhan Scholarship Program karnataka

ಕಳೆದ ಮೂರ್ನಾಲ್ಕು ತಿಂಗಳಿನ ಹಿಂದೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಎಕ್ಸಾಮ್ ಗಳನ್ನು ಶಿಕ್ಷಣ ಇಲಾಖೆ ನಡೆಸಿದ. ಪರೀಕ್ಷೆ ಯನ್ನು ಲಕ್ಷಾಂತರ ಮಕ್ಕಳು ಬರೆದಿದ್ದು ಅವರ ಎಕ್ಸಾಮ್ನ ಫಲಿತಾಂಶ ಕೂಡ ಹೊರ ಬಂದಿದೆ. ಈಗ ಸದ್ಯಕ್ಕೆ ಮಕ್ಕಳು ನಾವು ಮುಂದೆ ಏನನ್ನು ಓದಬೇಕು ಎಂಬುದರ ಚಿಂತೆಯಲ್ಲೇ ಇರುತ್ತಾರೆ ! ಇನ್ನು ಕೆಲ ಮಕ್ಕಳಿಗೆ ಇರುವ ಚಿಂತೆ ಏನಂದರೆ, ಮುಂದಕ್ಕೆ ಓದುವುದಕ್ಕೆ ತುಂಬಾನೇ ಹಣ ಖರ್ಚಾಗುವುದರಿಂದ ತಮಗೆ ಆರ್ಥಿಕವಾಗಿ ಸಹಾಯವಾಗಲು ಯಾವುದಾದರೂ ಸ್ಕಾಲರ್ಶಿಪ್ ಸಿಗಬಹುದೇ ಅಥವಾ ಯಾವುದಾದರೂ ಒಂದು ಒಳ್ಳೆಯ ಮಾರ್ಗದಲ್ಲಿ ಹಣ ಸಿಗಬಹುದೇ ಎಂಬುದನ್ನು ಸದಾ ಚಿಂತಿಸುತ್ತಿರುತ್ತಾರೆ. ಅಂತ ಮಕ್ಕಳಿಗೆ ಸಹಾಯವಾಗಲಿ ಎಂಬ ಕಾರಣದಿಂದ ಒಂದು ಸ್ಕಾಲರ್ ಶಿಪ್ ಬಗ್ಗೆ ಮಾಹಿತಿಯನ್ನು ಇವತ್ತು ತಿಳಿಸುತ್ತಿದ್ದು, ಮುಖ್ಯವಾಗಿ ಮಕ್ಕಳಿಗೆ ಆರ್ಥಿಕವಾಗಿ ಸಹಾಯವಾಗಲಿ ಎಂದು ನಾವು ಈ ಈ ಲೇಖನದಲ್ಲಿ ನೀಡಿರುವ ಮಾಹಿತಿ ಏನೆಂದರೆ ಅದು ಸ್ಕಾಲರ್ ಶಿಪ್ ಅಥವಾ ಅಥವಾ ವಿದ್ಯಾರ್ಥಿ ವೇತನದ ಕುರಿತಾದ ಮಾಹಿತಿ.

WhatsApp Group Join Now
Telegram Group Join Now

ಹೌದು ಎಸ್ ಎಸ್ ಎಲ್ ಸಿ ಮುಗಿಸಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಪಡೆಯುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೂ, ಈ ವಿದ್ಯಾರ್ಥಿ ವೇತನ ಅಡಿಯಲ್ಲಿ ಮಕ್ಕಳು ಬರೋಬ್ಬರಿ 10,000 ರೂಪಾಯಿಗಳಷ್ಟು ಸ್ಕಾಲರ್ಶಿಪ್ ಅಥವಾ ವಿದ್ಯಾಭ್ಯಾಸ ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಇದರಿಂದ ಮಕ್ಕಳಿಗೆ ತಮ್ಮ ಭವಿಷ್ಯದಲ್ಲಿ ತಮಗೆ ಓದಲು ಬೇಕಾಗಿರುವ ಪುಸ್ತಕಗಳನ್ನು, ಕಾಲೇಜ್ಗಳ ಶುಲ್ಕವನ್ನು ಕಟ್ಟಲು ಅಥವಾ ಮತ್ತೊಂದು ಯಾವುದೋ ರೀತಿಯಲ್ಲಿ ಮಕ್ಕಳಿಗೆ ಉಪಯುಕ್ತವಾಗಲಿದೆ ! ಹಾಗಿದ್ದರೆ ಯಾವುದು ಈ ವಿದ್ಯಾರ್ಥಿ ವೇತನ ಈ ವಿದ್ಯಾರ್ಥಿ ವೇತನ ಅಡಿಯಲ್ಲಿ ಮಕ್ಕಳು ಎಷ್ಟು ಹಣವನ್ನು ಪಡೆಯಬಹುದು ಮತ್ತು ಇದನ್ನು ನೀಡುತ್ತಿರುವುದು ಯಾರು? ಅರ್ಜಿ ಸಲ್ಲಿಸೋದು ಹೇಗೆ? ಯಾರೆಲ್ಲ ಅರ್ಹರು? ದಾಖಲೆಗಳು ಏನ್ ಬೇಕು ಅನ್ನೋದರ ಸಂಪೂರ್ಣ ಮಾಹಿತಿಯನ್ನು ನೋಡೋಣ… ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಲ್ಲಿ ಸಿಗುತ್ತೆ ಉಚಿತ ವಿದ್ಯುತ್; 300ಯೂನಿಟ್ ಗಳವರೆಗೆ ಸಿಗಲಿದೆ ವಿದ್ಯುತ್; ಅರ್ಜಿ ಸಲ್ಲಿಸೋದು ಹೇಗೆ? ಏನ್ ಮಾಡ್ಬೇಕು ಗೊತ್ತ 

ಯಾರಿಗೆಲ್ಲ ಬರುತ್ತೆ?? ಏನ್ ಮಾಡಬೇಕು?

ಹೌದು ಸರೋಜಿನಿ ದಾಮೋದರ್ ಫೌಂಡೇಶನ್ ವತಿಯಿಂದ ಬಡ ಕುಟುಂಬದಲ್ಲಿನ ಮಕ್ಕಳಿಗೆ ವಿದ್ಯಾಧನ್ ವಿಧ್ಯಾರ್ಥಿ ವೇತನದ ಮೂಲಕ ₹10,000 ರೂಪಾಯಿಯನ್ನು ಸ್ಕಾಲರ್ಷಿಪ್ ರೂಪದಲ್ಲಿ ನೀಡಲಾಗುತ್ತದೆ. ಈ ಹಣವನ್ನು ವಿಧ್ಯಾರ್ಥಿಗಳು ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಬಹುದು. ಅಲ್ದೇ ಈ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಶೈಕ್ಷಣಿಕ ಭರವಸೆ ಮತ್ತು ಆರ್ಥಿಕವಾಗಿ ಕಡಿಮೆ ಸವಲತ್ತನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಬೆಂಬಲವನ್ನು ಸೂಚಿಸುವುದಾಗಿದೆ, ಇನ್ನು ಈ ವಿದ್ಯಾರ್ಥಿ ವೇತನಕ್ಕೆ ರಾಜ್ಯದಿಂದ ಯಾವುದೇ ಮಾನ್ಯತೆ ಪಡೆದ ಶಾಲೆಯಿಂದ 2023 ನೇ ಸಾಲಿನ ಹತ್ತನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು, ಹಾಗೂ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಈಗಿನ ಪ್ರಥಮ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಸಲುವಾಗಿ ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ವಿದ್ಯಾಧನ್ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಹೌದು ಸರೋಜಿನಿ ದಾಮೋದರ ಫೌಂಡೇಶನ್ ವತಿಯಿಂದ 10,000 ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.ಹಾಗಾದ್ರೆ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು?? ಅರ್ಜಿ ಸಲ್ಲಿಸೋದು ಹೇಗೆ?? ಎಲ್ಲಿ?? ಇದೆಲ್ಲವನ್ನ ನೋಡೋಣ.

ದಾಖಲೆಗಳು ಏನ್ ಬೇಕು

ಹೌದು ವಿದ್ಯಾಧನ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ವಿದ್ಯಾರ್ಥಿಯು ಕರ್ನಾಟಕದ ಪ್ರಜೆಯಾಗಿರಬೇಕು, 2023 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಜೊತೆಗೆ ವಿದ್ಯಾರ್ಥಿಯು SSLC ಯಲ್ಲಿ 90% ಅಂಕ ಪಡೆದಿರಬೇಕು. ಇನ್ನು ವಿಶೇಷವಾಗಿ ಅಂಗವಿಕಲ ಅಭ್ಯರ್ಥಿಗಳಿಗೆ ಕಟ್ ಆಫ್ ಮಾರ್ಕ್ಸ್ 75% ಇದ್ದರೂ ನಡೆಯುತ್ತೆ. ಜೊತೆಗೆ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 2,00,000 ಲಕ್ಷಕ್ಕಿಂತ ಕಡಿಮೆ ಇರಬೇಕು.

ಇನ್ನು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನಪ್ಪಾ ಅಂದ್ರೆ SSLC ಅಂಕಪಟ್ಟಿ, ವಿದ್ಯಾರ್ಥಿಯ ಭಾವಚಿತ್ರ, ಅಂಗವಿಕಲ ವಿದ್ಯಾರ್ಥಿಗಳ ಅಂಗವೈಕಲ್ಯದ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಹೆಸರಿನ ಇಮೇಲ್ ಐಡಿ ಬೇಕಾಗುತ್ತೆ. ಇನ್ನು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಅಂತ ನೋಡೋದಾದ್ರೆ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ 30 ಜೂನ್ 2024ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ವಿದ್ಯಾರ್ಥಿಗಳು ಅರ್ಜಿಯನ್ನು vidyadhan.org ವೆಬ್‌ಸೈಟ್‌ ಅಥವಾ SDF VIDYA ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಹೆಚ್ಚಿನ ಮಾಹಿತಿ ಬೇಕು ಅಂದ್ರೆ [email protected] ಗೆ ಮೇಲ್ ಅಥವಾ 9663517131 ಈಗ ನೀಡಿರುವ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಉಚಿತ ಹೊಸ ಸ್ಯಾಮ್ ಸಂಗ್ ಮೊಬೈಲ್ ವಿತರಣೆ

Leave a Reply

Your email address will not be published. Required fields are marked *