ತಮಿಳು ನಟ, ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ(Vijay Antony) ಅವರ ಮಗಳು ಮೀರಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡರು. ಬುಧವಾರ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಹೌದು ಮೀರಾ ಅವರು ಮಂಗಳವಾರ ಮುಂಜಾನೆ ನೇಣುಬಿಗಿದುಕೊಂಡು ಮೃತಪಟ್ಟರು. ಇನ್ನು ಮೀರಾ ಬಹಳ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಅಂತ ಅಂತ್ಯ ಸಂಸ್ಕಾರದ ವೇಳೆ ಮೀರಾ ತಾಯಿ ಫಾತಿಮಾ ಕಣ್ಣೀರು ಹಾಕಿದ್ದಾರೆ. ‘ನಾನು ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡಿದ್ದೆ. ನೀನು ನನಗೆ ಒಂದು ಮಾತು ಹೇಳಬಹುದಿತ್ತು’ ಅಂತ ಅಳುತ್ತಿದ್ರು ಅಂತ ಕೂಡ ಹೇಳಲಾಗಿತ್ತು. ಇನ್ನು ಮೀರಾ ಖಾಸಗಿ ಸ್ಕೂಲ್ನಲ್ಲಿ 12 ನೇ ತರಗತಿ ಓದುತ್ತಿದ್ದರು, ಅಲ್ದೇ ಮೀರಾ ಅವರಿಗೆ ವೈದ್ಯೆ ಆಗಬೇಕು ಎನ್ನುವ ಕನಸಿತ್ತು. ಅದ್ರೆ ಕೇವಲ 16ನೇ ವಯಸ್ಸಿಗೆ ಅವರು ಜೀವನವನ್ನು ಅಂತ್ಯ ಮಾಡಿಕೊಂಡರು.
ಇನ್ನು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸೆಪ್ಟೆಂಬರ್ 19 ರಂದು ತೇನಾಂಪೇಟ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೀರಾ ಶವ ಪತ್ತೆಯಾಗಿತ್ತು. ಮುಂಜಾನೆ 3 ಗಂಟೆ ಸುಮಾರಿಗೆ ಆಕೆಯನ್ನು ಕುಟುಂಬಸ್ಥರು ಸಿಟಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆಕೆಯನ್ನು ಕರೆದುಕೊಂಡು ಬರುವಷ್ಟರಲ್ಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಜೊತೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇದೀಗ ಮಗಳ ಸಾವಿನ ಬಗ್ಗೆ ವಿಜಯ್ ಇಷ್ಟು ದಿನ ಮೌನವಾಗಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರು ಮಗಳ ಬಗ್ಗೆ ಬರೆದುಕೊಂಡಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಮಗಳನ್ನ ಕಳೆದುಕೊಂಡು ಭಾವುಕ ಸಾಲುಗಳನ್ನ ಬರೆದ ನಟ
ಹೌದು ಮಗಳ ಸಾವಿನ ನೋವಿನ ದುಃಖವನ್ನ ಇದೀಗ ಸೋಷಿಯಲ್ ಮೀಡಿಯಾ ಮೂಲಕ ನಟ ವಿಜಯ್ ಹೊರಹಾಕಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಅವ್ರು, ಮಗಳು ಸತ್ತಾಗಲೇ ನಾನೂ ಒಳಗಿನಿಂದ ಸತ್ತು ಹೋದೆ’ ಎಂದು ಅವರು ಹೇಳಿದ್ದಾರೆ. ಸದ್ಯ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ಇನ್ನು ನನ್ನ ಮಗಳು ಮೀರಾ ಕರುಣಾಮಯಿ ಮತ್ತು ಧೈರ್ಯಶಾಲಿ ಆಗಿದ್ದಳು. ಅವಳು ಇಹಲೋಕ ತ್ಯಜಿಸಿ, ಮತ, ಜಾತಿ, ಧರ್ಮ, ಹಣ, ಬಡತನ, ಅಸೂಯೆ, ನೋವು, ದುಶ್ಚಟಗಳು ಇಲ್ಲದ ಕಡೆಗೆ ಹೋಗಿದ್ದಾಳೆ. ಅವಳು ಹೋಗಿರುವ ಸ್ಥಳ ಶಾಂತವಾಗಿದೆ. ಅವಳು ಇನ್ನೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅನಿಸುತ್ತದೆ’ ಎಂದು ವಿಜಯ್ ಪತ್ರ ಆರಂಭಿಸಿದ್ದಾರೆ. ಅವಳು ಮೃತಪಟ್ಟಾಗ ನಾನು ಒಳಗಿನಿಂದ ಸತ್ತುಹೋದೆ. ಈಗ ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ನಾನು ಪ್ರಾರಂಭಿಸುವ ಎಲ್ಲಾ ಒಳ್ಳೆಯ ಕಾರ್ಯವು ಅವಳ ಹೆಸರಿನಲ್ಲಿ ಇರುತ್ತದೆ. ಇವೆಲ್ಲವೂ ಅವಳಿಂದ ಪ್ರಾರಂಭ ಆಗಿದೆ ಎಂದು ನಾನು ನಂಬಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಹೌದು ಹಲವು ದಿನಗಳ ಹಿಂದೆ ನಟ ವಿಜಯ್ ಆಂಟೋನಿ(Vijay Antony) ಆತ್ಮಹತ್ಯೆ ಬಗ್ಗೆ ಮಾತಾಡಿದ್ರು. ಆತ್ಮಹತ್ಯೆ ಮಾಡಿಕೊಳ್ಳಬಾರದು. ಯಾರು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ನಮ್ಮ ಬದುಕು ಎಷ್ಟೇ ಕಷ್ಟಗಳಿಂದ ಕೂಡಿದ್ದರೂ ಅಥವಾ ನೀವು ಅನುಭವಿಸಬೇಕಾದ ತೊಂದರೆಗಳು ಎಷ್ಟೇ ಇದ್ದರೂ, ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಇದು ನಮ್ಮ ಮಕ್ಕಳ ಹೃದಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ನಾನು 7 ವರ್ಷದವನಾಗಿದ್ದಾಗ, ನನ್ನ ಸಹೋದರಿಗೆ 5 ವರ್ಷ. ಆಗ ನಮ್ಮ ನನ್ನ ತಂದೆ ನಿಧನರಾದರು. ಆ ಬಳಿಕ ನನ್ನ ತಾಯಿ ಎಷ್ಟು ಕಷ್ಟಪಟ್ಟರು, ಅವರು ಏನೆಲ್ಲ ಕಷ್ಟಗಳನ್ನು ಅನುಭವಿಸಿದರು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ವಿಡಿಯೋದಲ್ಲಿ ವಿಜಯ್ ಆಂಟೋನಿ ಹೇಳಿಕೊಂಡಿದ್ದರು.
ಆದ್ರೆ ಇದೀಗ ಅವರ ಪುತ್ರಿ ಮೀರಾಳೆ ಆತ್ಮಹತ್ಯೆ ಮಾಡಿಕೊಂಡಿದ್ದು ಜೀವನ ಕೊನೆಯಾಗಿಸಿಕೊಂಡಿದ್ದಾರೆ. ಹೌದು ವಿಜಯ್ ಆಂಟೋನಿ ಅವರ 16 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಇಡೀ ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಖಿನ್ನತೆಯಿಂದ ಬಳಲುತ್ತಿದ್ದ 16 ವರ್ಷದ ಮೀರಾ ಡೆತ್ ನೋಟ್ ಬರೆದಿಟ್ಟು, ಸಾವಿಗೆ ಶರಣಾಗಿದ್ದರು. ಚಿಕ್ಕವಯಸ್ಸಲ್ಲಿ ಬಾಲಕಿಯ ಈ ಕೆಟ್ಟ ನಿರ್ಧಾರ ಎಲ್ಲರಿನ್ನು ಶಾಕ್‌ಗೆ ದೂಡಿತ್ತು. ಇತ್ತ ತಂದೆ ವಿಜಯ್ ಆಂಟೋನಿ ಸಹ ಮೂಕವಿಸ್ಮಿತರಾಗಿದ್ದರು. ಈಗ ಮೂರು ದಿನಗಳ ಬಳಿಕ ಮಗಳ ಸಾವಿನ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗಳ ಸಾವಿನ ನೋವಿನಲ್ಲಿರುವ ವಿಜಯ್, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: 3 ವರ್ಷಗಳ ಬಳಿಕ ಮುಖಾಮುಖಿ ಆದ ಅಮ್ಮ-ಮಗ! ಮುಖ ಮುಚ್ಚಿದ್ದರೂ ಮಗನನ್ನು ಗುರುತು ಹಿಡಿದ ತಾಯಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram