ಮಡದಿಯನ್ನ ನೆನೆದು ಅಕ್ಷರಶಃ ಮಗುವಾದ ರಾಘು; ಕೆಲ್ಸಕ್ಕೆ ಹಾಜರಾದ ರಾಘು ಯಾವತ್ತೂ ಕಣ್ಣೀರಾಕಲ್ಲ ಎಂದಿದ್ದೆಕೆ?

ಸ್ಯಾಂಡಲ್ವುಡ್ ನಾ ಚಿನ್ನಾರಿ ಮುತ್ತ ಮಡದಿ ಇಲ್ಲದೆ ಅಕ್ಷರಸ ನರಕಯಾತನೆ ಅನುಭವಿಸುತ್ತಿದ್ದಾರೆ. ಹೌದು ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಅನೇಕರನ್ನು ಭಾವುಕರನ್ನಾಗಿಸಿದ್ದು ನಿಜ. ಸದ್ಯ ಇದೀಗ ಪತ್ನಿ ಸ್ಪಂದನಾ ಅಗಲಿಕೆಯ ಬಳಿಕ ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ ಸ್ವಲ್ಪ ಸ್ವಲ್ಪವೇ ಎಲ್ಲದರಿಂದ ಆಚೆ ಬಂದು ಎಲ್ಲರಂತೆ ಜೀವನ ನಡೆಸುವ ಅನಿವಾರ್ಯತೆಯಲ್ಲಿದ್ದಾರೆ ಕಾರಣ ಮಗನ ಭವಿಷ್ಯ ಅವ್ರ ಕೈಲೇ ಇದೆ.. ಅದು ಸ್ಪಂದನ ಅವ್ರ ಕೊನೆ ಆಸೆ ಕೂಡ ಹೌದು.

WhatsApp Group Join Now
Telegram Group Join Now

ಇನ್ನು ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ `ಕದ್ದ ಚಿತ್ರ’ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ. ಈ ವೊಂದು ಕಾರ್ಯಕ್ರಮದಲ್ಲಿ ರಾಘು ಕೂಡ ಬಾರದ ಮನಸ್ಸಿನಿಂದಲೇ ಭಾಗಿಯಾಗಿದ್ದಾರೆ. ಇನ್ನು ಇದೇ ಆಗಸ್ಟ್ 26ಕ್ಕೆ ತೆರೆ ಕಾಣಬೇಕಿದ್ದ ಸಿನಿಮಾ ಸ್ಪಂದನಾ ನಿಧನದಿಂದ ಮುಂದೂಡಲಾಗಿತ್ತು. ಆದ್ರೆ ಈಗ ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ 16ನೇ ವಿವಾಹ ವಾರ್ಷಿಕೋತ್ಸವದ ನೆನಪಿನೊಂದಿಗೆ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ್ದು, ನಟ ವಿಜಯ್ ರಾಘವೇಂದ್ರ ಈ ಸಿನಿಮಾವನ್ನ ಪತ್ನಿ ಸ್ಪಂದನಾಗೆ ಅರ್ಪಿಸಿದ್ದಾರೆ. ಅಲ್ದೇ ಮಗುವಿನಂತೆ ಅತ್ತು, ಇನ್ಮೇಲೆ ನಾನು ಆಳಲ್ಲ ಅದು ಅವ್ಳಿಗೆ ಇಷ್ಟ ಆಗಲ್ಲ ಅಂತ ಬಹಳ ದುಃಖದಿಂದಲೇ ರಾಘು ಮಾತನಾಡಿದ್ದಾರೆ.

ಸ್ನೇಹಿತರೆ ಮೊನ್ನೆಯಷ್ಟೇ ಮಡದಿಯ ಬಗ್ಗೆ ಮನಸ್ಸು ಬಿಚ್ಚಿ ಕೆಲ ಸಾಲುಗಳ ಮೂಲಕ ಸ್ಪಂದನಾ ಬಗ್ಗೆ ರಾಘು ಹೇಳಿಕೊಂಡಿದ್ರು. ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು. ಸದ್ಯ ಇದೀಗ ಎಲ್ಲವನ್ನು ಅರಗಿಸಿಕೊಂಡು ಬದುಕುವುದು ಅವಶ್ಯಕವಾಗಿರೋದ್ರಿಂದ ರಾಘು ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ ಅಂದ್ರೆ ಅವ್ರ ಕೆಲಸ ಆರಂಭಿಸಿದ್ದಾರೆ. 

ಇದನ್ನೂ ಓದಿ: ಮುನಿಸು ಮರೆತು ಒಂದಾದ್ರ ದಚ್ಚು ಕಿಚ್ಚ; ಇವರಿಬ್ಬರನ್ನ ಒಂದು ಮಾಡಲು ರಾಕ್ ಲೈನ್ ಮಾಡಿದ್ದೇನು?

ಪತ್ನಿಯಿಲ್ಲ ಮೊದಲ ವಿವಾಹ ವಾರ್ಷಿಕೋತ್ಸವ, ಬಿಕ್ಕಿ ಅತ್ತ ಚಿನ್ನಾರಿ ಮುತ್ತ

ಹೌದು ಇದೇ ಆಗಸ್ಟ್ 26ಕ್ಕೆ ತೆರೆ ಕಾಣಬೇಕಿದ್ದ ಕದ್ದ ಚಿತ್ರ ಸಿನಿಮಾ ಸ್ಪಂದನಾ ನಿಧನದಿಂದ ಮುಂದೂಡಲಾಗಿತ್ತು. ಅದ್ರಿಗ ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ 16ನೇ ವಿವಾಹ ವಾರ್ಷಿಕೋತ್ಸವದ ನೆನಪಿನೊಂದಿಗೆ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ರಾಘು ಭಾಗಿಯಾಗಿ ಸಿನಿಮಾ ಜೊತೆಗೆ ಸ್ಪಂದನ ಬಗ್ಗೆ ಮಾತಾನಾಡಿ ಬಹಳ ಭಾವುಕಾರಾಗಿದ್ದಾರೆ. ಮೊದಲಿಗೆ `ಕದ್ದ ಚಿತ್ರ’ ಚಿತ್ರದ ಕುರಿತು ಮಾತನಾಡಿದ ವಿಜಯ್ ರಾಘವೇಂದ್ರ, ಇದು ಬರೀ ತಂಡ ಅಲ್ಲ, ಸ್ನೇಹಿತರ ಬಳಗ, ವಿಶ್ವಾಸದ ಕನಸು ಇದು. ಮೊದಲು ಹಿಂಜರಿದಿದ್ದೆ, ನಂಬಿಕೆ ಮೇಲೆ ಕೆಲಸ ಮಾಡ್ತೀನಿ ಅಂದಿದ್ದೆ. ಒಳ್ಳೆಯ ತಂಡ ಬಂದಾಗ ಹೊರೆ ಆಗ್ತಿನೇನೋ ಅನಿಸುತ್ತೆ. ಈಗ ಟ್ರೈಲರ್‌ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆದ ಬಳಿಕ ಮಾತನಾಡೋಕೆ ಸಾಕಷ್ಟು ವಿಷಯಗಳು ಇರುತ್ವೆ. ಆಗ ಮಾತಾಡೋಕೆ ಕಾಯ್ತಾ ಇರ್ತಿನಿ ಅಂತ ಹೇಳಿದ್ದಾರೆ.

ಇನ್ನು ಮಾತು ಮುಂದುವರೆಸಿದ ರಾಘು ಮಾತಾಡುವ ಕಥೆ ನಾವೇ ಆದಾಗ ನೀವೆಲ್ಲಾ ಜೊತೆಗೆ ನಿಂತ್ರಿ, ತಾಯಿ ಸ್ಥಾನದಲ್ಲಿ ನಿಂತಿದ್ರಿ, ಯಾರೂ ಹೊರಗಿನವರ ರೀತಿ ಇರಲಿಲ್ಲ ಮನೆಯವರ ರೀತಿ ಇದ್ರಿ. ಕಣ್ಣೀರು ಹಾಕಬಾರದು ಅಂತಾ ನಿರ್ಧಾರ ಮಾಡ್ಕೊಂಡು ಬಂದಿದ್ದೀನಿ. ಅದು ಅವಳಿಗೂ ಇಷ್ಟ ಆಗ್ತಿರಲಿಲ್ಲ. ನಿಮ್ಮ ಕುಟುಂಬದಲ್ಲಿ ನನ್ನನ್ನೂ ಒಬ್ಬನನ್ನಾಗಿಸಿಕೊಂಡಿದ್ದೀರಿ. ಪ್ರಮೋಷನ್‌ಗೆ ನಿಲ್ಲೋದು ನನ್ನ ಕರ್ತವ್ಯ ನೀವೆಲ್ಲಾ ನನ್ನ ಜೊತೆ ಇರ್ತೀರಾ ಅಂದ್ಕೊಂಡಿದ್ದೀನಿ. ನನ್ನ ಹಾಗೂ ನನ್ನ ಮಗನನ್ನ ಕೈ ಹಿಡಿದು ನಡೆಸ್ತೀರಿ ಅಂದ್ಕೊಂಡಿದ್ದೀನಿ ಅಂತ ಬಹಳ ನೊಂದುಕೊಂಡೆ ದುಃಖದಿಂದಲೇ ಮಾತನಾಡಿದರೆ ರಾಘು ನಂತರ ಈ ಸಿನಿಮಾದ ಗೀತೆಗಳು ತುಂಬಾ ಚೆನ್ನಾಗಿವೆ. ಮ್ಯೂಸಿಕ್ ಡೈರೆಕ್ಟರ್ ಒಳ್ಳೆಯ ಸಾಂಗ್ ಕೊಟ್ಟಿದ್ದಾರೆ ಅಂತ ಮಾತಾಡುವಾಗಲೇ ಬಿಕ್ಕಳಿಸುತ್ತ ನಟ ರಾಘು ಭಾವುಕರಾದರು.

ಒಟ್ಟಿನಲ್ಲಿ ಪ್ರಾಣಕ್ಕಿಂತ ಹೆಚ್ಚಾಗಿದ್ದ ಮಡದಿ ಸಾವಿನ ನೋವು ಎಷ್ಟು ಹಿಂಸೆ ಅಂದ್ರೆ ನಿಜಕ್ಕೂ ಬಹಳ ನೋವುಂಟು ಮಾಡುತ್ತೆ. ಈ ನೋವಿನ ಜೊತೆಗೆ ಮಗನ ಭವಿಷ್ಯ ಕಟ್ಟುವ ಜವಾಬ್ದಾರಿ ತಲೆ ಮೇಲೆ ಇರೋದು ಮತ್ತೊಂದು ಕಡೆ. ಎರಡನ್ನು ನಿಭಾಯಿಸಿಕೊಂಡು ಹೋಗೋದು ನಿಜಕ್ಕೂ ಕೂಡ ರಾಘು ಗೆ ಎಷ್ಟು ಕಷ್ಟ ಅಂತ ಊಹಿಸೋದು ಕೂಡ ಅಸಾಧ್ಯ.

ಇದನ್ನೂ ಓದಿ: ಅಮೇರಿಕಾದಲ್ಲಿ ಮೃತಪಟ್ಟವರ ಮೃತ ದೇಹ ಕರ್ನಾಟಕಕ್ಕೆ ಬರ್ಲೆ ಇಲ್ಲ; ಕುಟುಂಬದವರಿಗೆ ಅಂತಿಮ ದರ್ಶನವು ಸಿಗಲಿಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram