ವಿಜಯದಶಮಿ ದಿನ ಇದೊಂದು ಸಣ್ಣ ಕೆಲಸವನ್ನು ಮಾಡಿ, ವರ್ಷ ಪೂರ್ತಿ ನಿಮ್ಮ ಮನೆಯಲ್ಲಿ ಸಂಪತ್ತು ಧನ ತನಕ ಮಳೆಯ ಹಾಗೆ ಸುರಿಯುತ್ತೆ.

ವಿಜಯದಶಮಿ ಅಂದರೆ ಹೆಸರು ಹೇಳುವಂತೆ ವಿಜಯವನ್ನು ಸಾಧಿಸಿದ ದಿನ. ಆದರೆ ನವರಾತ್ರಿಯ ಕೊನೆಯ ದಿನ. ಪಾಂಡವರು ಯುದ್ಧ ಮಾಡಿ ವಿಜಯ ಪತಾಕೆಯನ್ನು ಹಾರಿಸಿದ ದಿನ. ಶಕ್ತಿ ಪೂಜೆಯ ಒಂಬತ್ತು ದಿನದ ಶರನ್ನವರಾತ್ರಿಯ ವಿಜಯದ ದಿನ. ಈ ದಿನ ತುಂಬಾ ವಿಶೇಷವಾದದ್ದು ತುಂಬಾ ಮಹತ್ವವಾದದ್ದು ಈ ದಿನದಲ್ಲಿ ಯಾವುದಾದರೂ ಒಳ್ಳೆಯ ಕೆಲಸವನ್ನು ನೀವು ಮಾಡಿದರೆ ವರ್ಷ ಪೂರ್ತಿ ಒಳ್ಳೆಯ ಫಲವನ್ನು ಅನುಭವಿಸಬಹುದು. ಹಾಗೆ ಯಾವುದೇ ಹೊಸ ಕೆಲಸವನ್ನ ಪ್ರಾರಂಭಿಸುವುದಕ್ಕೂ ಇದು ಅತ್ಯುತ್ತಮವಾದ ದಿನವಾಗಿದೆ. ಹಾಗೆ ಈ ದಿನದಂದು ವಿಶೇಷವಾಗಿ ಆಚರಿಸಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನದಂದು ಈ ಒಂದು ವಸ್ತುವನ್ನು ಮನೆಗೆ ತೆಗೆದುಕೊಂಡು ಬಂದರೆ ನಿಮಗೆ ವರ್ಷ ಪೂರ್ತಿ ಧನ ಸಮೃದ್ಧಿ, ಧನಕನಕ ಮಳೆ ಸುರಿಯುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಅದು ಯಾವ ವಸ್ತು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಇದೊಂದು ವಸ್ತುವನ್ನು ವಿಜಯದಶಮಿ ದಿನ ತರುವುದರಿಂದ ಮನೆಯಲ್ಲಿ ಜಗಳಗಳು ನಿಲ್ಲುತ್ತೆ ಯಾವುದೇ ರೀತಿಯ ಋಣಾತ್ಮಕತೆ ಇದ್ದಲ್ಲಿ ಅದು ಹೋಗಲಾಡಿಸುತ್ತೆ ಮನೆಯಲ್ಲಿರುವ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತೆ ನಮ್ಮ ಮನೆಗೆ ಒಳ್ಳೆಯದಾಗುತ್ತೆ ಜಗಳಗಳು ನಿಲ್ಲತ್ತೆ ಗಂಡ ಹೆಂಡತಿಯಲ್ಲಿ ಅನ್ಯೋನ್ಯತೆ ಬೆಳೆಯುತ್ತೆ ದಾಂಪತ್ಯ ಜೀವನ ಸುಖವಾಗಿರುತ್ತದೆ ಸಂತಾನೋತ್ಪತ್ತಿ ಉಂಟಾಗುತ್ತದೆ. ಎಲ್ಲ ದಾರಿದ್ರೆಗಳು ಕಳೆದು ಮನೆಗೆ ಒಳಿತಾಗುತ್ತದೆ.  ವಿಜಯದಶಮಿ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನದ ನೀರಿಗೆ ಒಂದು ಚಿಟಿಕೆ ಕಲ್ಲುಪ್ಪು ಅನ್ನು ಹಾಕಿ ಸ್ನಾನ ಮಾಡಬೇಕು. ವಿಜಯದಶಮಿ ದಿನ ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ಅರಿಶಿಣ ಮತ್ತು ಹರಳುಪ್ಪನ್ನ ಹಾಕಿ ನೆಲವನ್ನ ಒರೆಸಬೇಕು ಹೀಗೆ ಮಾಡುವುದರಿಂದ ಮಹಾಲಕ್ಷ್ಮಿ ಕೃಪೆ ದುರ್ಗಾದೇವಿ ಕೃಪೆ ನಮಗೆ ಸಿಗುತ್ತದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ತುಕಾಲಿ ಸಂತು ಅವರನ್ನ ಟಾರ್ಗೆಟ್ ಮಾಡ್ತಿದ್ದಾರೆ; ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸಂತು ಪತ್ನಿ ಮಾನಸ

ವಿಜಯದಶಮಿ ದಿನ ಯಾವ ವಸ್ತುವನ್ನು ಮನೆಗೆ ತಂದರೆ ಒಳ್ಳೆಯದು?

ವಿಜಯದಶಮಿ ದಿನ ತುಳಸಿ ಗಿಡವನ್ನು ಮನೆಗೆ ತೆಗೆದುಕೊಂಡು ಬಂದರೆ ಅದೃಷ್ಟ ಪ್ರಾಪ್ತಿಯಾಗುತ್ತದೆ ತುಳಸಿ ಗಿಡವನ್ನು ತೆಗೆದುಕೊಂಡು ಬಂದು ಅದನ್ನ ಪೂಜೆ ಮಾಡಿ ಸಾಯಂಕಾಲ ತುಪ್ಪದ ದೀಪವನ್ನು ಹಚ್ಚಿ ಒಂದು ಅಗರಬತ್ತಿಯನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ವರ್ಷ ಪೂರ್ತಿ ಸಕಲ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ ತುಳಸಿ ಎಂದರೆ ಶ್ರೀ ಸಾಕ್ಷಾತ್ ವಿಷ್ಣುದೇವ, ಶ್ರೀಮನ್ನಾರಾಯಣನನ್ನು ಮನೆಗೆ ಕರೆದುಕೊಂಡ ಬಂದ ಹಾಗೆ ಆಗುತ್ತದೆ. ಈ ದಿನ ಏನು ಮಾಡಿದರು ವಿಜಯ ಅಂತದ್ರಲ್ಲಿ ಶ್ರೀಮನ್ನಾರಾಯಣನನ್ನು ಮನೆಗೆ ಕರೆದುಕೊಂಡು ಬಂದರೆ ಎಂತಹ ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ನೀವೇ ಊಹಿಸಿ. ಆದ್ದರಿಂದ ಈ ದಿನದಂದು ತುಳಸಿ ಗಿಡವನ್ನು ತಂದು ಪೂಜಿಸಬೇಕು.

ಎರಡನೆಯದಾಗಿ ನವಿಲುಗರಿಯನ್ನು ಮನೆಗೆ ತೆಗೆದುಕೊಂಡ ಬರಬೇಕು ಯಾರು ವಿಜಯದಶಮಿ ದಿನ ನವಿಲುಗರಿಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ ಅಂತಹವರಿಗೆ ವಿಶೇಷವಾದ ಗೆಲುವು ಸಿಗುತ್ತೆ ವರ್ಷಪೂರ್ತಿ ಗೆಲುವನ್ನ ಸಾಧಿಸಬಹುದು ಅಂದರೆ ಈ ವಿಜಯದಶಮಿಯಿಂದ ಮುಂದಿನ ವಿಜಯದಶಮಿಯವರೆಗೂ ಗೆಲುವು ನಿಮ್ಮದೇ ಆಗಿರುತ್ತದೆ. ಹಾಗೆ ಮಕ್ಕಳಲ್ಲಿಯೂ ಕೂಡ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಬರುತ್ತದೆ ಕೆಲವು ಮಕ್ಕಳು ವಿದ್ಯೆಯಲ್ಲಿ ಆಸಕ್ತಿಯನ್ನು ತೋರಿಸುವದಿಲ್ಲ ಅಂತಹ ಮಕ್ಕಳು ವಿದ್ಯೆಯಲ್ಲಿ ಏಕಾಗ್ರತೆಯನ್ನ ತೋರಿಸುತ್ತಾರೆ, ತುಂಬಾ ಬದಲಾವಣೆ ಉಂಟಾಗುತ್ತದೆ.

ಇನ್ನು ವಿಜಯದಶಮಿ ದಿನ ಎರಡು ಅರಳಿ ಮರದ ಎಲೆಯನ್ನ ತೆಗೆದುಕೊಂಡು ಬನ್ನಿ. ಮನೆಗೆ ತಂದು ಸ್ವಚ್ಛವಾದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಒಣ ಬಟ್ಟೆಯಲ್ಲಿ ಒರೆಸಿ ಲಕ್ಷ್ಮಿ ಫೋಟೋದ ಮುಂದೆ ಎರಡು ಅರಳಿ ಎಲೆಯನ್ನ ಇಡಬೇಕು ಒಂದು ಅರಳಿ ಮರದ ಎಲೆಗೆ ಅರಿಶಿನ ಲೇಪನವನ್ನು ಮಾಡಿ, ನಂತರ ಆ ಅರಳಿ ಮರದ ಎಲೆಯ ಮೇಲೆ ನೀವು ಬಿಳಿ ಬಣ್ಣದ ಸಿಹಿತಿಂಡಿಯನ್ನ ಇಟ್ಟು ದೇವಿಗೆ ನೈವೇದ್ಯವನ್ನ ಮಾಡಬೇಕು. ಸ್ವಲ್ಪ ಒಂದು ಎರಡು ಗಂಟೆಗಳ ನಂತರ ಆ ಸಿಹಿ ತಿಂಡಿಯನ್ನ ಮನೆಯವರೆಲ್ಲರೂ ಸೇವಿಸಬೇಕು. ಅರಳಿ ಎಲೆಯನ್ನ ಒಂದು ದಿನ ದೇವರ ಮುಂದೆ ಇಟ್ಟು ಮಾರನೆಯ ದಿನ ಬೆಳಿಗ್ಗೆ ತೆಗೆದು ಯಾರು ಓಡಾಡದ ಜಾಗದಲ್ಲಿ ಯಾರು ತುಳಿಯದ ಜಾಗದಲ್ಲಿ ಒಂದು ಸ್ವಚ್ಛವಾದ ಜಾಗದಲ್ಲಿ ಒಂದು ಮರದ ಕೆಳಗಡೆ ಇಟ್ಟು ಬರಬೇಕು.

ಮತ್ತೊಂದು ಅರಳಿ ಎಲೆಯನ್ನ ದೇವರ ಮುಂದೆ ಇಟ್ಟು ಅರಿಶಿಣ ಕುಂಕುಮವನ್ನು ಹಾಕಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳಿ. ದೇವಿ ಆರ್ಥಿಕ ಸಂಕಷ್ಟ ಏನೇ ಇದ್ದರೂ ನಿವಾರಣೆ ಮಾಡಮ್ಮ ಎಂದು ಭಕ್ತಿಯಿಂದ ಕೇಳಿಕೊಂಡು ಆ ಅರಳಿ ಎಲೆಯನ್ನ ನಿಮ್ಮ ಹಣ ಇಡುವ ಜಾಗದಲ್ಲಿ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಹಣದ ಸಮಸ್ಯೆ ಯಾವುದೇ ಇರಲಿ ಏನೇ ಸಂಕಷ್ಟ ಇದ್ದರೂ ಕೂಡ ಪರಿಹಾರವಾಗುತ್ತದೆ. ಮುಂದಿನ ವಿಜಯದಶಮಿಯವರೆಗೂ ನಿಮಗೆ ಯಾವುದೇ ಆರ್ಥಿಕ ಸಂಕಷ್ಟ ಕಾಡುವುದಿಲ್ಲ ಯಾವುದೇ ಸಾಲ ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram