ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ; ಖಾಲಿ ಇವೆ 1,500 ಹುದ್ದೆಗಳು || Village Accountant Recruitment 2024

Village Accountant Recruitment 2024

ನಿರುದ್ಯೋಗಿ ಯುವಕ ಯುವತಿಯರಿಗೆ ಸಿಹಿ ಸುದ್ದಿ. ನಿರೋದ್ಯೋಗಿ ಸಮಸ್ಯೆ ಇಂದ ಹಲವಾರು ಜನ ಕಷ್ಟ ಪಡುತ್ತಾ ಇದ್ದಾರೆ . degree (ಡಿಗ್ರಿ), double degree(ಡಬಲ್ ಡಿಗ್ರಿ) ಓದಿದ್ದರೂ ಉದ್ಯೋಗ ಇಲ್ಲದೆಯೇ ಮನೆಯಲ್ಲಿ ಸಾವಿರಾರು ಮಂದಿ ಇದ್ದಾರೆ . ಅಂತವರಿಗೆ ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾಲಿ ಇರುವ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ ಮಾಡಲಿದೆ. ಇದರಿಂದ ಹಲವಾರು ಜನರಿಗೆ ಉದ್ಯೋಗ ದೊರೆಯುತ್ತದೆ. ಇದು ಗ್ರಾಮ ಲೆಕ್ಕಾಧಿಕಾರಿ ಗೆ ಹುದ್ದೆ ಆಹ್ವಾನ ಮಾಡಲು ಇಲಾಖೆ ಯೋಚಿಸಿದೆ ಇದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಹುದ್ದೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ನೋಡಬಹುದು.

WhatsApp Group Join Now
Telegram Group Join Now

ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯೂ ಖಾಲಿ ಇದೆ. ಇದರಿಂದ ಸರಕಾರದ ಹಲವಾರು ಕೆಲಸಗಳು ನಿಂತಿವೆ ಹಾಗೂ ನಿರುದ್ಯೋಗ ಸಮಸ್ಯೆ ಯು ಬಹಳ ಹೇರಳವಾಗಿ ಕಾಣುತ್ತಿದೆ. ಆದರಿಂದ ಈಗ ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ ಆರಂಭ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ಒಪ್ಪಿಗೆಯನ್ನು ಪಡೆದಿರುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಯಾವ ಯಾವ ಉದ್ಯೋಗಗಳ ಭರ್ತಿ ಕಾರ್ಯ ಆರಂಭವಾಗುವ ಸಂಭವ ಇದೆ?
ರಾಜ್ಯದ ವಿವಿಧ ಭಾಗಗಳಲ್ಲಿ ಖಾಲಿ ಇರುವ 1,500 ಗ್ರಾಮ ಲೆಕ್ಕಾಧಿಕಾರಿ(village accountant) ಹುದ್ದೆಗೆ ತಕ್ಷಣದಲ್ಲಿ ಅರ್ಜಿ ಆಹ್ವಾನ ಮಾಡವರು . ಹಾಗೆಯೇ 357 ಸರ್ವೆಯರ್ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. ಇನ್ನು 590 ಸರಕಾರಿ ಹುದ್ದೆಗಳ ಭರ್ತಿಗೆ ಸಚಿವ ಸಂಪುಟದ ಅನುಮತಿ ಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈಗಾಗಲೇ ಯಾವ ಹುದ್ದೆಯ ನೇಮಕಾತಿ ಪೂರ್ಣ ಆಗಿದೆ?: ಈಗಾಗಲೇ 750 ಸರ್ವೆಯರ್‌ (serveyer) ಹುದ್ದೆಗೆ ನೇಮಕಾತಿ ಪೂರ್ಣ ಆಗಿದೆ. ಅವರನ್ನು ಟ್ರೇನಿಂಗ್ ಗೆ ಕಳುಹಿಸಲಾಗಿದೆ. ಅವರ ಟ್ರೇನಿಂಗ್ ಅವಧಿಯು ಮುಗಿದ ನಂತರ ಜಮೀನಿನ ಸರ್ವೇ ಸಮಸ್ಯೆ ಬಗೆಹರಿಯಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಯ ನೇಮಕಾತಿ ಪ್ರಕ್ರಿಯೆ ಹೇಗಿರಬಹುದು?

  • ಅರ್ಜಿ ಸಲ್ಲಿಸುವವರು ಮೊದಲು ಆಫ್‌ಲೈನ್ ಅಲ್ಲಿ ಪರೀಕ್ಷೆಯನ್ನು ಬರೆಯಬೇಕು.
  • ಪರೀಕ್ಷೆಯಲ್ಲಿ ತೇರ್ಗಡೆಯದವರನ್ನು ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುವುದು.
  • ಆಯ್ಕೆಯಾದ ಅಭ್ಯರ್ಥಿಗಳಿಗೆ 3 ತಿಂಗಳು ಟ್ರೇನಿಂಗ್ ನೋಡಿ ಅಲ್ಲಿ ಪಾಸ್ ಆದವರು ಹುದ್ದೆಗೆ ಅರ್ಹರೆಂದು ಗುರುತಿಸುವರು.
  • ಕರ್ನಾಟಕದ ಯಾವ ಜಿಲ್ಲೆಯಲ್ಲಿ ಆದರೂ ಅವರಿಗೆ ಪೋಸ್ಟಿಂಗ್ ಆಗಬಹುದು.

ಅರ್ಜಿ (application) ಹಾಕಲು ಇರುವ ಮಾನದಂಡಗಳು:-

  • ಅರ್ಜಿ ಹಾಕಲು ಬಯಸುವವರು ಯಾವುದೇ ವಿದ್ಯಾಲಯದಿಂದ ಪಿ ಯು ಸಿ ಪರೀಕ್ಷೆಯಲ್ಲಿ 60% ಮಾರ್ಕ್ಸ್ ಪಡೆದಿರಬೇಕು.
  • ಅರ್ಜಿದಾರರ ವಯಸ್ಸು 18 ರಿಂದ 28 ವರ್ಷ. ಮೀಸಲಾತಿಯ ಆಧಾರದ ಮೇಲೆ 3 ವರ್ಷ 5 ವರ್ಷ ಹಾಗೂ 10 ವರ್ಷಗಳ ರಿಯಾಯಿತಿ ಇದೆ.
  • ಯಾವುದೇ ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ.
  • ಮಾರ್ಕ್ಸ್ ಕಾರ್ಡ್ ಸ್ಕ್ಯಾನ್ ಮಾಡಿ ಅರ್ಜಿ ತುಂಬಬೇಕು.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರುವವರು ಅದರ ಒರಿಜಿನಲ್ ಪ್ರತಿಯನ್ನು ಸ್ಕ್ಯಾನ್ ಮಾಡಬೇಕು.
  • ವಿಕಲಚೇತನ ಅರ್ಜಿದಾರರು ವಿಕಲಚೇತನ ಐ ಡಿ ಹೊಂದಿರಬೇಕು.

ಇದನ್ನೂ ಓದಿ: ಮಹಿಳಾ ರೈತರಿಗೆ ಬಂಪರ್ ಗಿಫ್ಟ್; ಪಿ.ಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಹಣ ಡಬಲ್..

ಇದನ್ನೂ ಓದಿ: ಕೇವಲ ಏಳು ಸಾವಿರ ರೂಪಾಯಿಗಳಲ್ಲಿ Poco C65 ಮೊಬೈಲ್ ಫೋನ್, ವೈಶಿಷ್ಟ್ಯವನ್ನು ಕೇಳಿದರೆ ಬೆಚ್ಚಿ ಬೀಳ್ತಿರಾ