ಈಗಾಗಲೇ 1000 ಹುದ್ದೆಗಳ ನೇಮಕಾತಿ ಕಂದಾಯ ಇಲಾಖೆಯು ನೇಮಕಾತಿಯ ಅರ್ಜಿಯನ್ನು 4-03-2024 ರಿಂದ ಆರಂಭಿಸುವುದಾಗಿ ತಿಳಿಸಿತ್ತು ಆದರೆ ಈಗ ಹೊಸದಾಗಿ ಅಭ್ಯರ್ಥಿಗಳಿಗೆ ಇನ್ನೊಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಬದಲಿಸಿದ ಮಾಹಿತಿಯನ್ನು ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನೇರವಾಗಿ ಅಧಿಕೃತ ವೆಬ್ಸೈಟ್ ಗೆ ತೆರಳಿ ಪರಿಶೀಲನೆ ಮಾಡಬಹುದು. ಹಾಗಾದರೆ ಯಾಕೆ ಈ ಬದಲಾವಣೆಯನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಮೊದಲು ತಿಳಿಯೋಣ.
ಅರ್ಜಿ ಆಹ್ವಾನ ಮುಂದೂಡಲು ಕಾರಣವೇನು?: ಕಂದಾಯ ಇಲಾಖೆಯ ಅಧಿಸೂಚನೆಯ ಪ್ರಕಾರ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇರ ನೇಮಕಾತಿ ಮಾಡಲು ಅರ್ಜಿಯನ್ನು ಮಾರ್ಚ್ ನಾಲ್ಕನೇ ತಾರೀಖಿನಿಂದ ಆರಂಭ ಮಾಡುವುದಾಗಿ ಈ ಹಿಂದೆ ತಿಳಿಸಲಾಗಿತ್ತು. ಆದರೆ ಶುಲ್ಕ ಪಾವತಿಸಲು ಇಂಟರ್ಫೇಸ್ ಪ್ರಕ್ರಿಯೆ ನಡೆಯುತ್ತಿದೆ. ಆದರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದನ್ನು ಸ್ವಲ್ಪ ದಿನ ಮುಂದೂಡಲಾಗಿದೆ. ಉಳಿದ ಎಲ್ಲಾ ಮಾಹಿತಿಗಳು 21-02-2024 ರಂದು ಬಿಡುಗಡೆ ಆದ ಅಧಿಸೂಚನೆಯಲ್ಲಿ ಇರುವಂತೆ ಮಾಹಿತಿಗಳು ಇರಲಿವೆ. ಅರ್ಜಿ ಸಲ್ಲಿಸುವ ದಿನಾಂಕದ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ ನಲ್ಲಿ ತಿಳಿಸಲಾಗುತ್ತದೆ.
21-02-2024 ರ ಅಧಿಸೂಚನೆಯಲ್ಲಿ ಇರುವ ಅರ್ಜಿ ಶುಲ್ಕದ ವಿವರ :- ಸಾಮಾನ್ಯ ವರ್ಗ ಮತ್ತು ಪ್ರವರ್ಗ 2A, 2B, 3B ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ 750 ರೂಪಾಯಿ . SC ಅಥವಾ ST ಮತ್ತು ಪ್ರವರ್ಗ-1 , ಮಾಜಿ ಸೈನಿಕ ಹಾಗೂ ವಿಕಲ ಚೇತನ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ 500 ರೂಪಾಯಿ ಎಂದು ಪ್ರಕಟಿಸಲಾಗಿದೆ.
ಹುದ್ದೆಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಪಿಯುಸಿ (ಸಿಬಿಎಸ್‌ಇ, ಐಸಿಎಸ್‌ಇ )ಕಂಪ್ಲೇಟ್ ಆಗಿರಬೇಕು. ಇಲ್ಲವೇ ಇನ್ ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ವತಿಯಿಂದ ಉನ್ನತ ಶಿಕ್ಷಣ ಕೋರ್ಸ್ ಮುಗಿಸಿರಬೇಕು. ಇಲ್ಲವಾದರೆ ಎಸೆಸೆಲ್ಸಿ ನಂತರ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಕಂಪ್ಲೀಟ್ ಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಲಾಖೆಯ ಅಧಿಸೂಚನೆಯ ಪ್ರಕಾರ ವಯೋಮಿತಿ ವಿವರ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.
- ಪ್ರವರ್ಗ 2A, 2B, 3B, ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
- SC/ST ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.
ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ LPG ಸಿಲಿಂಡರ್ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ
ಗ್ರಾಮ ಅಡಳಿತಾಧಿಕಾರಿ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ:
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ http://kea.kar.nic.in/ ಗೆ ಭೇಟಿ ನೀಡಿ.
- ಮುಖಪುಟದಲ್ಲಿ, “ಗ್ರಾಮ ಅಡಳಿತಾಧಿಕಾರಿ ಹುದ್ದೆಗೆ ನೇಮಕಾತಿ” ಎಂಬ ಅಧಿಸೂಚನೆಯನ್ನು ಕ್ಲಿಕ್ ಮಾಡಬೇಕು.
- ನಿಮಗೆ ಜಿಲ್ಲಾವಾರು ಹುದ್ದೆಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಂತರ ನೀವು ಅರ್ಜಿ ನಮೂನೆ ಆಯ್ಕೆ ಮಾಡಬೇಕು.
- ನಮೂನೆಯಲ್ಲಿ ನಿಮ್ಮ ಪೂರ್ಣ ಹೆಸರು, ಅಧಿಕೃತ ವಿಳಾಸ, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ಮತ್ತು ನೀವು ಅರ್ಜಿ ಸಲ್ಲಿಸುತ್ತಿರುವ ಜಿಲ್ಲೆಯ ವಿವರಗಳನ್ನು ಖಚಿತವಾಗಿ ಭರ್ತಿ ಮಾಡಬೇಕು. ಒಮ್ಮೆ ಭರ್ತಿ ಮಾಡಿದ ನಂತರ ಎಲ್ಲಾ ಮಾಹಿತಿಗಳು ಇವೆಯೇ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿ ಕೊಳ್ಳುವುದು ಉತ್ತಮ.
- ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ ನಿಮಗೆ ಏಷ್ಟು ಶುಲ್ಕ ಪಾವತಿ ಮಾಡಬೇಕು ಎಂಬ ಮಾಹಿತಿ ಅಧಿಸೂಚನೆಯಲ್ಲಿ ಇರುತ್ತದೆ. ಅದರಂತೆ ನೀವು ಆನ್ಲೈನ್ ಮೂಲಕ ಶುಲ್ಕ ಭರ್ತಿ ಮಾಡಬೇಕು.
- ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ, ದೃಢೀಕರಣ ಸಂದೇಶವನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಕೆ ದೃಢೀಕರಣದ ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು :-
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಮ್ಮ ಅರ್ಜಿಯನ್ನು ಸಲ್ಲಿಸುವುದು ಉತ್ತಮ.
- ಅರ್ಜಿ ನಮೂನೆಯಲ್ಲಿ ಯಾವುದೇ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸಿ. ಯಾವುದೇ ತಪ್ಪು ಮಾಹಿತಿ ತುಂಬಿದ ಪಕ್ಷದಲ್ಲಿ ನಿಮ್ಮ ಅರ್ಜಿ ತಿರಸ್ಕಾರ ಆಗಬಹುದು.
- ಅಗತ್ಯವಿರುವ ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸ್ಪಷ್ಟವಾಗಿ ಮತ್ತು ಓದಲು ಸುಲಭವಾಗಿ ಕಾಣುವಂತೆ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
- ಶುಲ್ಕ ಪಾವತಿಸುವಾಗ ಯಾವುದೇ ತೊಂದರೆಗಳನ್ನು ಎದುರಿಸಿದರೆ, ಸಹಾಯಕ್ಕಾಗಿ ವೆಬ್‌ಸೈಟ್‌ನಲ್ಲಿ ಇಲಾಖೆಯನ್ನು ಸಂಪರ್ಕಿಸಿ.
ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ 300 ರೂ ಸಬ್ಸಿಡಿ ಹಾಗೂ ಯೋಜನೆಯನ್ನು 2025 ರ ವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ