ಕರ್ನಾಟಕದಲ್ಲಿ 1000 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಆಗಿದೆ.

Village Administrative Officer Recruitment Last Date

ಈಗಾಗಲೇ ಎಲ್ಲರಿಗೂ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಇಲಾಖೆ ಅರ್ಜಿ ಆಹ್ವಾನ ಮಾಡಿರುವ ಬಗ್ಗೆ ತಿಳಿದಿದೆ. ಈಗ ಇಲಾಖೆಯು ಮತ್ತೆ ಅಧಿಸೂಚನೆ ಹೊರಡಿಸಿದ್ದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಅದ ಬಗ್ಗೆ ಮಾಹಿತಿ ನೀಡಿದೆ.

WhatsApp Group Join Now
Telegram Group Join Now

ಈಗಾಗಲೇ ಒಮ್ಮೆ ಕೊನೆಯ ದಿನಾಂಕ ವಿಸ್ತರಣೆ ಆಗಿತ್ತು :- ಮೊದಲು ಹುದ್ದೆಯ ನೇಮಕಾತಿಯ ಪ್ರಕಾರ ಅರ್ಜಿ ಸಲ್ಲಿಸಲು ಏಪ್ರಿಲ್ 3 2024 ಕೊನೆಯ ದಿನ ಆಗಿತ್ತು ನಂತರ ಇಲಾಖೆಯು ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಬಗ್ಗೆ ಮಾಹಿತಿ ನೀಡಿತ್ತು. ಆಗ ಮೇ 4 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಆಗಿತ್ತು. ಈಗ ಮತ್ತೆ ಕೊನೆಯ ದಿನ ವಿಸ್ತರಣೆ ಆಗಿದೆ.

ಈಗ ಇಲಾಖೆಯ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು?: ಈಗ ಇಲಾಖೆಯು ಹೇಳಿರುವ ಪ್ರಕಾರ ಮೇ 15 2024 ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಯ ಬಗ್ಗೆ ವಿವರಗಳು ಹೀಗಿವೆ:-

ಕರ್ನಾಟಕ ಕಂದಾಯ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ. ಬೆಂಗಳೂರು ನಗರ- 32, ಬೆಂಗಳೂರು ಗ್ರಾಮಾಂತರದಲ್ಲಿ 34 ಹುದ್ದೆ, ಚಿತ್ರದುರ್ಗದಲ್ಲಿ 32 ಹುದ್ದೆ , ಕೋಲಾರದಲ್ಲಿ 45 ಹುದ್ದೆ, ತುಮಕೂರಿನಲ್ಲಿ 73 ಹುದ್ದೆ, ರಾಮನಗರದಲ್ಲಿ 51 ಹುದ್ದೆ, ಚಿಕ್ಕಬಳ್ಳಾಪುರದಲ್ಲಿ 42 ಹುದ್ದೆ, ಶಿವಮೊಗ್ಗದಲ್ಲಿ 31ಹುದ್ದೆ, ಮೈಸೂರಿನಲ್ಲಿ 66 ಹುದ್ದೆ, ಚಾಮರಾಜನಗರದಲ್ಲಿ 55 ಹುದ್ದೆ, ಮಂಡ್ಯದಲ್ಲಿ 60 ಹುದ್ದೆ, ಹಾಸನ ದಲ್ಲಿ 54 ಹುದ್ದೆ, ಚಿಕ್ಕಮಗಳೂರಿನಲ್ಲಿ 23 ಹುದ್ದೆ, ಕೊಡಗಿನಲ್ಲಿ 6 ಹುದ್ದೆ, ಉಡುಪಿಯಲ್ಲಿ 22 ಹುದ್ದೆ, ದಕ್ಷಿಣ ಕನ್ನಡ ದಲ್ಲಿ 50 ಹುದ್ದೆ, ಬೆಳಗಾವಿಯಲ್ಲಿ 64 ಹುದ್ದೆ, ವಿಜಯಪುರದಲ್ಲಿ 7 ಹುದ್ದೆ, ಬಾಗಲಕೋಟೆಯಲ್ಲಿ 22 ಹುದ್ದೆ, ಧಾರವಾಡ ದಲ್ಲಿ 12 ಹುದ್ದೆ, ಗದಗದಲ್ಲಿ 30 ಹುದ್ದೆ, ಹಾವೇರಿ ಯಲ್ಲಿ 34 ಹುದ್ದೆ, ಉತ್ತರ ಕನ್ನಡ ದಲ್ಲಿ 2 ಹುದ್ದೆ, ಕಲಬುರಗಿಯಲ್ಲಿ 67 ಹುದ್ದೆ, ರಾಯಚೂರಿನಲ್ಲಿ 4 ಹುದ್ದೆ, ಕೊಪ್ಪಳದಲ್ಲಿ 19 ಹುದ್ದೆ, ಬಳ್ಳಾರಿಯಲ್ಲಿ 17 ಹುದ್ದೆ, ಬೀದರ್ ನಲ್ಲಿ 24 ಹುದ್ದೆ, ಯಾದಗಿರಿಯಲ್ಲಿ 9 ಹುದ್ದೆ ಹಾಗೂ
ವಿಜಯನಗರದಲ್ಲಿ 3 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ವಿದ್ಯಾರ್ಹತೆ :- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ ಅಥವಾ ಡಿಪ್ಲೊಮಾ ಅಥವಾ ITI ಪಾಸ್ ಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಯಸ್ಸಿನ ಮಿತಿ :- ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು. ಹಾಗೂ ಗರಿಷ್ಠ 35 ವರ್ಷ ಆಗಿರಬೇಕು.. ಸರ್ಕಾರೀ ಮೀಸಲಾತಿ ನಿಯಮ ಇಲ್ಲೂ ಅನ್ವಯ ಆಗುತ್ತದೆ.

ಅರ್ಜಿ ಶುಲ್ಕ ವಿವರಗಳು :- ಸಾಮಾನ್ಯ ವರ್ಗ2A, 2B, 3A, 3B ಅಭ್ಯರ್ಥಿಗಳು 750 ರೂಪಾಯಿಗಳು ಹಾಗೂ SC, ST ಅಭ್ಯರ್ಥಿಗಳು 500 ರೂಪಾಯಿ ಶುಲ್ಕ ಪಾವತಿಸಬೇಕು.

ಶುಲ್ಕ ಪಾವತಿಸಲು ಕೊನೆಯ ದಿನಾಂಕ :- ಮೇ 18, 2024 ಆಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :-

ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ತೆರಳಿ ನಿಮ್ಮ ವಿದ್ಯಾರ್ಹತೆ ಮತ್ತು ನಿಮ್ಮ ವಯಕ್ತಿಕ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ಮುಂಬರುವ ಜೂನ್‌ ತಿಂಗಳಿಂದ APL ಪಡಿತರ ಚೀಟಿ ವಿತರಣೆಗೆ ಮರುಚಾಲನೆ ದೊರೆಯಲಿದೆ 

ಇದನ್ನೂ ಓದಿ: ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು.