Vinod Raj: ಮದುವೆಯಾಗಿ ಸುಖವಾಗಿದ್ರು ವಿನೋದ್ ರಾಜ್ ಸುಳ್ಳು ಹೇಳುದ್ರ??

Vinod Raj: ಸ್ನೇಹಿತರೆ ಈಗಿನ ಕಾಲದಲ್ಲಿ ಯಾರನ್ನ ಯಾವಾಗ ಹೇಗೆ ಯಾವದ್ರಲ್ಲೂ ನಂಬೋಕೆ ಸ್ವಲ್ಪ ಕಷ್ಟನೇ ಬಿಡಿ. ಕೆಲವೊಬ್ಬರು ಹಣ ಆಸ್ತಿ ಮತ್ತಿತರ ಕಾರಣಗಳಿಗೆ ಸುಳ್ಳು ಹೇಳ್ತಾರೆ, ಇನ್ನು ಕೆಲವರು ಯಾಕೆ ಸತ್ಯ ಮುಚ್ಚಿಡ್ತಾರೆ ಅಂತ ಗೊತ್ತಾಗೋದೇ ಇಲ್ಲ.ಆಗಂತ ಆ ಸುಳ್ಳನ್ನ ಹೆಚ್ಚು ದಿನ ಮುಚ್ಚಿಡಲು ಸಾಧ್ಯನೇ ಇಲ್ಲ ಯಾಕಂದ್ರೆ ಅದು ಬೂದಿ ಮುಚ್ಚಿದ ಕೆಂಡದಂತೆ ಒಂದಿಲ್ಲೊಂದು ದಿನ ಗೊತ್ತಾಗಲೇ ಬೇಕು.. ಇದು ನಟಿ ಲೀಲಾವತಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವ್ರ ಜೀವನದಲ್ಲಿ ನಿಜವಾಗ್ತಿದೆ ಅನ್ನೋದು ಈಗ ವೈರಲ್ ಆಗ್ತಿರೋ ಫೋಟೋಗಳಿಂದ ಸಾಬೀತಾಗ್ತಿದೆ.

WhatsApp Group Join Now
Telegram Group Join Now

ಹೌದು ಡ್ಯಾನ್ಸ್‌ ರಾಜ ಡ್ಯಾನ್ಸ್‌ ಸೇರಿದಂತೆ ಮೊದಲಾದ ಕನ್ನಡ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಆಗಿನ ಕಾಲದಲ್ಲೇ ತಮ್ಮ ಡ್ಯಾನ್ಸ್ ಮೂಲಕ ದೊಡ್ಡ ಕ್ರೇಜ್ ಹುಟ್ಟು ಹಾಕಿದ್ದ ನಟ ವಿನೋದ್‌ ರಾಜ್‌ ನಂತರ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿ ಚಂದನವನದಿಂದ ದೂರ ಉಳಿದುಕೊಂಡು ಬಿಡುತ್ತಾರೆ. ಇನ್ನು ಕನ್ನಡದ ದೈತ್ಯ ಪ್ರತಿಭೆ ಲೀಲಾವಾತಿ ಕೂಡ ವರನಟ ಡಾ. ರಾಜ್ ಕುಮಾರ ಕಾಲದಲ್ಲಿ ಬಹಳ ಬೇಡಿಕೆಯಲ್ಲಿದ್ದ ನಟಿ. ಆದ್ರೆ ಕಾಲ ಉರುಳಿದಂತೆ ವಯಸ್ಸಾದ ಹಿನ್ನಲೆ ಸಿನಿ ಜಗತ್ತಿನಿಂದ ಮರೆಯಾಗ್ತಾರೆ. ನಂತರ ತಾಯಿ ಮಗ ಇಬ್ಬರು ನೆಲಮಂಗಲ ಬಳಿಯ ಹಳ್ಳಿಯೊಂದರಲ್ಲಿ ಕೃಷಿ ಮಾಡಿಕೊಂಡು ಆರಾಮವಾಗಿದ್ದಾರೆ ಅಂತ ಕೆಲವು ಮಾಧ್ಯಮಗಳ ಮೂಲಕ ವರದಿಯಾಗುತ್ತು..ಆಗಾಗ ಲೀಲಾವತಿ ಅವ್ರ ಆರೋಗ್ಯದ ಕುರಿತಾಗಿಯೂ ಕೆಲವೊಂದು ಸುದ್ದಿ ವೈರಲ್ ಆಗುತ್ತೆ… ಅಲ್ಲದೆ ಕೋವಿಡ್ ಸಂದರ್ಭದಲ್ಲೂ ತಾಯಿ ಮಗ ಕೋವಿಡ್ ಸಂತ್ರಸ್ತರಿಗೆ ನೆರವು ನೀಡಿ ನಮ್ಮಗೆ ಭಗವಂತ ಕೊಟ್ಟಿರೋದ್ರಲ್ಲಿ ನಾವು ಇನ್ನೊಬ್ಬರಿಗೆ ಕೊಡ್ತಿದಿವಿ ಅಂತೇಳಿ ಬಹಳ ಜನರ ಅಭಿಮಾನ ಗಿಟ್ಟಿಸಿಕೊಂಡಿದ್ರು, ಜೊತೆಗೆ ಸ್ವಲ್ಪ ಆಸ್ತಿ ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾಗಿದ್ದು ಕೂಡ ಜನರ ಹೃದಯ ಗೆಲ್ಲುವಲ್ಲಿ ಸಹಾಯವಾಗುತ್ತೆ. ಇನ್ನು ಲೀಲಾವತಿ ಅವರು ಈಗ ಆರೋಗ್ಯ ಕೆಟ್ಟು,
ವಿನೋದ್‌ ರಾಜ್ ಒಟ್ಟಿಗೆ ತಮ್ಮ ತೋಟದ ಮನೆಯಲ್ಲಿ ವಾಸವಗಿದ್ದಾರೆ.ಹೀಗಾಗಿ ವಿನೋದ್‌ ರಾಜ್‌ ಅವರು ಮದುವೆಯಾಗಿದ್ದರೆ ಇಬ್ಬರಿಗೂ ಒಳ್ಳೆಯದಾಗುತ್ತಿತ್ತು , ಮಡದಿ ಇಬ್ಬರಿಗೂ ಆಧಾರವಾಗುತ್ತಿದ್ರು ಅಂತ ಅಭಿಮಾನಿಗಳು ಮಾತ್ರವಲ್ಲ ಅವ್ರ ಆಪ್ತ ವಲಯದ ಸ್ನೇಹಿತರೆ ತುಂಬಾ ಸಲ ಮರುಕ ವ್ಯಕ್ತ ಪಡಿಸಿದ್ದು ಇದೆ.

ಇದರ ಜೊತೆ ಜೊತೆಗೆ ಇದೀಗ ಸ್ಫೋಟಕ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆಯಾಗಿದೆ ಸಾಲದಕ್ಕೆ ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗ್ತಿದೆ… ಹೌದು ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ಬುಕ್‌ ಪೇಜ್ ನಲ್ಲಿ ಸ್ಪೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಅಮ್ಮನೊಟ್ಟಿಗೆ ಒಂಟಿ ಜೀವನದ ನಾಟಕ!?

ಲೀಲಾವತಿ ಅವರ ಆರೋಗ್ಯ ಹದಗೆಡುತ್ತಿದ್ದು, ಮಗ ವಿನೋದ್‌ ರಾಜ್‌ ಅವರ ಆರೈಕೆಯಲ್ಲಿ ಇದ್ದಾರೆ. ಆದರೆ ಇದುವರೆಗೂ ವಿನೋದ್‌ ರಾಜ್‌ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಅಮ್ಮನ ಆರೈಕೆ ಮಾಡಲು ಹೆಂಡತಿಯನ್ನು ಕೂಡ ಜೊತೆಯಲ್ಲಿಟ್ಟುಕೊಂಡಿಲ್ಲ ಯಾಕೆ ಅನ್ನುವಂತಹ ಪ್ರಶ್ನೆಗಳು ಮೂಡುತ್ತಿವೆ.. ಇನ್ನು ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಮತ್ತು ವಿನೋದ್‌ ರಾಜ್‌ ಅವರು ಮದುವೆಯಾಗಿದ್ದಾರೆ ಅವ್ರಿಗೆ ಒಬ್ಬ ಮಗನಿದ್ದಾನೆ ಅನ್ನೋದು ವಿನೋದ್‌ ರಾಜ್‌ ಅವರದೇ ಮನೆಯಲ್ಲಿ ತೆಗೆದಿರುವ ಫೋಟೊಗಳನ್ನು ಹಂಚಿಕೊಳ್ಳುವುದರ ಮೂಲಕ ನಿರ್ದೇಶಕ ಸಾಬೀತು ಪಡಿಸಿದ್ದಾರೆ.. ಈ ಸುದ್ದಿ ವೈರಲ್‌ ಆಗ್ತಿದ್ದಂತೆ ಹಲವಾರು ಅಣ್ಣವರಿಗೆ ಮಸಿ ಬಳೆಯಲು ಹೊರಟ್ಟಿದ್ರಿ ಇವತ್ತು ನಿಮ್ಮ ಬಣ್ಣ ಬಯಲಾಗಿದೆ ಮೇಲಾಗಿ ಯಾಕೆ ಈ ನಾಟಕ ಎಂದೆಲ್ಲ ಕಾಮೆಂಟ್ ಮಾಡ್ತಿದ್ರೆ ಇನ್ನು ಕೆಲವರು ನಿರ್ದೇಶಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ರೆ ಇತ್ತ ವಿನೋದ್ ರಾಜ್ ಮಾತ್ರ ಯಾವುದಕ್ಕೂ ಉತ್ತರವೇ ನೀಡುತ್ತಿಲ್ಲ…ವಿನೋದ್ ರಾಜ್ ಅಥವಾ ಲೀಲಾವತಿಯವರು ಮೌನ ಮುರಿದರೆ ಮಾತ್ರ ಅಸಲಿಯತ್ತು ತಿಳಿಯಲಿದೆ.

https://m.facebook.com/story.php?story_fbid=pfbid0ysPHun5d8T96i7jqptLR7BJ2UANcx5eJfaTS6RJeuUZzE7Lt3P9QVREn9xodMFuFl&id=100001170634047&mibextid=wIhsxK

ಇದನ್ನು ಓದಿ : ವಿಚಿತ್ರವಾಗಿ ಮೇಕಪ್ ಮಾಡಿಕೊಳ್ಳಬೇಡಿ,ನೀವು ನಿವಾಗಿಯೇ ಇರಿ ಅಂಕಿತಾ ಕುಂಡುಗೆ ಅಭಿಮಾನಿಗಳ ಮನವಿ