ವಿನೋದ್ ರಾಜ್ ಹೆಂಡತಿ ಮತ್ತು ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ

ಮೊನ್ನೆಯಷ್ಟೇ ನಿರ್ದೇಶಕರೊಬ್ಬರು ಸ್ಫೋಟಕ ಸುದ್ದಿ ಯೊಂದನ್ನ ಸೋಷಿಯಲ್ ಮೀಡಿಯಾ ದಲ್ಲಿ ಹರಿಬಿಟ್ಟಿದ್ರು, ಅದೇನೆಂದರೆ ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆ ಯಾಗಿದೆ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಅಂತ ಸುದ್ದಿ ಆಗಿತ್ತು. ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ ಬುಕ್‌ ಪೇಜ್ ನಲ್ಲಿ ಸ್ಪೋಟಕ ಮಾಹಿತಿ ಯನ್ನ ಹಂಚಿಕೊಂಡಿದ್ರು, ಅದಕ್ಕೆ ಎಲ್ಲರು ತರೆವಾರಿ ಕಮೆಂಟ್ಸ್ ಗಳನ್ನ ಕೂಡ ಮಾಡಿದ್ರು. ಇದೀಗ ಈ ವಿಚಾರದ ಕುರಿತಂತೆ ಮೊದಲ ಬಾರಿಗೆ ಲೀಲಾವತಿ ಅಮ್ಮ ಮತ್ತು ಮಗ ವಿನೋದ್ ರಾಜ್‌ ಕುಮಾರ್ ಅವ್ರು ತುಟಿ ಬಿಚ್ಚಿದ್ದಾರೆ.

WhatsApp Group Join Now
Telegram Group Join Now

ಹೌದು ಲೀಲಾವತಿ ಯವರ ಗಂಡ ಮಹಾಲಿಂಗ ಭಾಗವತರ್ ಮತ್ತು ವಿನೋದ್‌ ರಾಜ್‌ ಅವರು ಮದುವೆ ಆಗಿದ್ದಾರೆ ಅವ್ರಿಗೆ ಒಬ್ಬ ಮಗನಿದ್ದಾನೆ ಅನ್ನೋದಕ್ಕೆ ವಿನೋದ್‌ ರಾಜ್‌ ಅವರದೇ ಮನೆಯಲ್ಲಿ ತೆಗೆದಿರುವ ಫೋಟೊ ಗಳು ಹಾಗೂ ಆಸ್ತಿಗೆ ಸಂಬಂಧಿಸಿದ ಕೆಲವು ಮಾಹಿತಿ ಯನ್ನ ಹಂಚಿಕೊಳ್ಳುವುದರ ಮೂಲಕ ನಿರ್ದೇಶಕರು ಈ ಸುದ್ದಿ ವೈರಲ್ ಆಗುವಂತೆ ಮಾಡಿದ್ರು.
ಸುದ್ದಿ ವೈರಲ್‌ ಆಗ್ತಿದ್ದಂತೆ ತುಂಬಾ ಜನ ಕೆಟ್ಟ ದಾಗಿಯೇ ಕಾಮೆಂಟ್ ಮಾಡಿದ್ರು. ಇದೆಲ್ಲವನ್ನ ಸೂಕ್ಷ್ಮವಾಗಿ ಗಮನಿಸಿದ ಅಮ್ಮ ಮಗ ಇದೀಗ ಸತ್ಯ ವನ್ನ ತೆರೆ ಮುಂದೆ ತಂದಿದ್ದಾರೆ.

ಮಗ, ಸೊಸೆ, ಮೊಮ್ಮಗನ ಬಗ್ಗೆ ಲೀಲಾವತಿ ಅವ್ರು ಹೇಳಿದ್ದೇನು ಗೊತ್ತಾ?

ಖಾಸಗಿ ವಾಹಿನಿ ಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಎಲ್ಲವನ್ನು ಬಾಯಿ ಬಿಟ್ಟಿದ್ದಾರೆ.. ಹೌದು ನನ್ನ ಮಗನಿಗೆ ಮದುವೆ ಯಾಗಿದೆ.. ಎಲ್ಲರು ಮಾಡುವಂತೆ ದೊಡ್ಡ ದೊಡ್ಡ ಪ್ಯಾಲೇಸ್ ನಲ್ಲಿ ನನ್ನ ಮಗನಿಗೆ ನಾನು ಮದುವೆ ಮಾಡಿಲ್ಲ ನಾನು ತುಂಬಾ ಬಡವಳು. ನಮ್ಮ ಕುಟುಂಬದ ಬಗ್ಗೆ ಮಾತಾ ನಾಡುವ ನೈತಿಕತೆ ನಿಮಗಿಲ್ಲ ಅಂತಲೂ ನಿರ್ದೇಕರಿಗೆ ಟಾಂಗ್ ಕೊಟ್ಟಿದ್ದಾರೆ ಲೀಲಾವತಿ ಯವರು. ಈ ವಿಚಾರ ವನ್ನ ಮುಚ್ಚಿಡಲು ಕಾರಣ ಏನು ಅನ್ನೋದನ್ನ ಸ್ಪಷ್ಟಪಡಿಸದ ಲೀಲಾವತಿ ಯವ್ರು ತಾಯಿ ಮಗನಿಗೆ ಅನ್ಯಾಯ ಆಗೋಕೆ ಬಿಡಲ್ಲ ಹಾಳಾಗಲಿ ಅಂತ ಯಾವತ್ತೂ ಹೇಳಲ್ಲ ಅದೇ ರೀತಿ ನನ್ನ ಹತ್ತಿರ ಹಣ ಆಸ್ತಿ ಇಲ್ಲದಿದ್ರೂ ನನ್ನ ಮಗನಿಗೆ ಮಾಡಬೇಕಾಗಿರೋದನ್ನೆಲ್ಲ ಮಾಡಿದ್ದೀನಿ ಅವನು ಸುಖವಾಗಿದ್ದಾನೆ ಅಂತ ಹೇಳಿದ್ದಾರೆ.

ಅಲ್ದೆ ನಿಮ್ಮ ಬಗ್ಗೆ ಅವರಿಗೇನು ದ್ವೇಷ ಈ ರೀತಿ ಆಧಾರ ಗಳ ಸಮೇತ ಇದೆಲ್ಲ ವನ್ನ ವೈರಲ್ ಮಾಡೋದೇನಿತ್ತು ಅಂತ ಕೇಳಿದಕ್ಕೆ ಅವ್ರಿಗಂತೂ ಒಳ್ಳೆದಾಗಲ್ಲ ಅವ್ನ ತಲೇಲಿ ಸೈತಾನ ಇದ್ದಾನೆ ಅಂತ ಲೀಲಾವತಿ ಅಮ್ಮ ನೇರವಾಗಿಯೇ ಮಾತನಾಡಿದ್ದಾರೆ. ಈ ಮಧ್ಯೆ ಅಮ್ಮ ಸುಮ್ಮನಿದ್ದರೆ ವಿನೋದ್ ರಾಜ್ ಕೂಡ ನಿರ್ದೇಶಕರು ಸೇರಿದಂತೆ ತಮ್ಮ ಮತ್ತು ಕುಟುಂಬದ ಹೆಸರು ಹಾಳು ಮಾಡಿ ಇಲ್ಲ ಸಲ್ಲದನ್ನ ಹೇಳ್ತಿರಿದಿರ ಅಂತ ಬಹಳ ಖಾರವಾಗಿಯೇ ಎಚ್ಚರಿಕೆ ನೀಡುದ್ರು.

ಇದನ್ನು ಓದಿ: IPL ನಿಂದ ಬದಲಾಯ್ತು ಹಣೆಬರಹ, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವಾಚ್ ಮ್ಯಾನ್ ಮಗ

ಲೀಲಾವತಿ ಈ ನಾಡಿನ ಆಸ್ತಿ, ಅಸ್ತಿ ಮಾಡೋಕೋಗ್ಬೇಡಿ

ಹೌದು ನನ್ನ ತಾಯಿ ಈ ನಾಡಿನ ಆಸ್ತಿ ಅವ್ರನ್ನ ಅಸ್ತಿ ಮಾಡೋಕೆ ನೋಡ್ಬೇಡಿ. ನಮ್ಮಮ್ಮ ಏನು ಮಾಡಿಲ್ಲ ಅಂತ ನಾನು ಯಾವುತ್ತು ಅನ್ಕೊಂಡಿಲ್ಲ ನಮ್ಮಮ್ಮನೇ ನಂಗೆ ದೊಡ್ಡ ಆಸ್ತಿ. ನಾನೊಬ್ಬನೇ ಅಂತ ಯಾರು ಮೇರಿಬಾರದು. ಎರಡು ಕೈ ಸೇರುದ್ರೇನೆ ಚಪ್ಪಾಳೆ ಬರೋಕೆ ಸಾಧ್ಯ. ನಮ್ ಬಗ್ಗೆ ಕೆಟ್ಟದಾಗಿ ಮಾತಾಡೋಕೆ ನೀನು ಯಾರು, ಅಣ್ಣಾವ್ರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿರುತ್ತೆ ನೀನು ಯಾಕ್ ಹಿಂಗ್ ಮಾಡಿದ್ಯಾ ಅಂತ, ನಮ್ಮ ಕುಟುಂಬದ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ, ಇಂತ ಇಳಿ ವಯಸ್ಸಿನಲ್ಲಿ ನಮ್ಮ ಅಮ್ಮ ನಿಗೆ ಯಾಕೆ ಈ ಥರ ನೋವು ಕೊಡ್ತಿದೀರಾ ನಿಮಗೆ ಮನುಷ್ಯತ್ವ ಮಾನವೀಯತೆ ಇದಿಯಾ ಅಂತ ಬಹಳ ಏರು ಧ್ವನಿಯಲ್ಲೇ ಮಾತಾನಾಡಿದ್ದಾರೆ.

ಒಟ್ಟಿ ನಲ್ಲಿ ಮದುವೆ ಮಗ ಇದೆಲ್ಲವೂ ನಿಜ ಅಂತ ಒಪ್ಪಿ ಕೊಂಡಿರೋ ಅಮ್ಮ ಮಗ ವಿಷಯ ವನ್ನ ಮುಚ್ಚಿಟ್ಟಿದ್ದು ಯಾಕೆ ಅನ್ನೋದು ಮಾತ್ರ ಬಹಿರಂಗ ವಾಗಿಲ್ಲ. ಈ ರೀತಿ ಲೀಲಾವತಿ ಕುಟುಂಬದ ಬಗ್ಗೆ ಆರೋಪ ಮಾಡೋದ್ರಿಂದ ನಿರ್ದೇಶಕರಿಗೆ ಲಾಭ ಆದ್ರೂ ಏನು ಅಂತಲೂ ಅರ್ಥವಾಗ್ತಿಲ್ಲ.. ಇಬ್ಬರ ನಡುವಿನ ಮುಸುಕಿನ ಗುದ್ದಾಟ ಯಾವಾಗ ಹೇಗೆ ಅಂತ್ಯವಾಗುತ್ತೋ ಕಾದು ನೋಡ ಬೇಕು.

ಇದನ್ನು ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?