ಮೈಸೂರಿನಲ್ಲಿರುವ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗರಾಜ್..

Arun Yogiraj

ಅರುಣ್ ಯೋಗರಾಜ್ ಅವರ ಬಗ್ಗೆ ಒಂದೊಂದು ರೀತಿಯ ಹೊಸ ವಿಷಯಗಳು ಅವರು ಮಾಡಿದ ಸಾಧನೆಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಭಾರತದ ಭವ್ಯತೆಯ ಸಂಕೇತವಾದ ರಾಮ ಮಂದಿರದ ರಾಮ ಲಲ್ಲಾ ನ ಮೂರ್ತಿ ಕೆತ್ತನೆಯನ್ನು ಅರುಣ್ ಯೋಗಿರಾಜ್ ಮಾಡಿದ್ದಾರೆ. ಮೂರು ಶಿಲ್ಪಿಗಳು ಕೆತ್ತಿರುವ ಬಲರಾಮನ ಮೂರ್ತಿಯಲ್ಲಿ ಗರ್ಭಗುಡಿಯಲ್ಲಿ ವಿರಾಜಿಸುತ್ತ ಇರುವುದು ಅರುಣ್ ಯೋಗಿರಾಜ್ ಅವರು ಕೆತ್ತನೆಯ ಬಾಲ ರಾಮನ ಮೂರ್ತಿ. ಇಡೀ ವಿಶ್ವ ಇವರ ಶಿಲ್ಪ ಕಲೆಯನ್ನು ಮೆಚ್ಚಿಕೊಂಡಿದೆ.

WhatsApp Group Join Now
Telegram Group Join Now

ರಾಮನ ವಿಗ್ರಹ ಕೆತ್ತನೆಗೆ ಮೊದಲು ಈಗಾಗಲೇ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶಂಕರಾಚಾರ್ಯ ಮೂರ್ತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರ ಜೊತೆಗೆ ಈ ಹಿಂದೆ ಕರ್ನಾಟಕದ ಮೇರುನಟ ದಿವಂಗತ ಡಾ. ವಿಷ್ಣುವರ್ಧನ್ ಅವರ ಪುತ್ಥಳಿ ನಿರ್ಮಾಣವನ್ನು ಸಹ ಅರುಣ್ ಯೋಗಿರಾಜ್ ಅವರೇ ಮಾಡಿದ್ದಾರೆ. ಇದರ ಬಗ್ಗೆ ಫೇಸ್ಬುಕ್ ನಲ್ಲಿ ಹಂಚಿಕೊಂಡಿರುವ ಅನಿರುದ್ಧ್ ಅವರು, ಮೈಸೂರಿನಲ್ಲಿರುವ ಅಪ್ಪಜಿಯವರ ಪುತ್ಥಳಿಯ ನಿರ್ಮಾಣ ಮಾಡಿದ ಯೋಗಿರಾಜ್ ಹಾಗೂ ರಾಮನ ಮೂರ್ತಿ ಕೆತ್ತಿದ ಯೋಗರಾಜ್ ಅವರ ಜೊತೆಗೆ ಭಾರತಿ ವಿಷ್ಣುವರ್ಧನ್ ಅವರ ಫೋಟೋ ಹಂಚಿಕೊಂಡಿದ್ದಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಇಡೀ ಮಾರುಕಟ್ಟೆಯನ್ನು ಅಲುಗಾಡಿಸುವ Hero Xtreme 125R ಹೊಸ ವಿನ್ಯಾಸದೊಂದಿಗೆ

ಅರುಣ್ ಯೋಗಿರಾಜ್ ಅವರಿಗೆ ಭವ್ಯ ಸ್ವಾಗತ:-

ಅರುಣ್ ಯೋಗಿರಾಜ್ ಈಗ ಇಡೀ ದೇಶಕ್ಕೆ ಒಬ್ಬ ಹೀರೋ ಆಗಿದ್ದಾರೆ. ರಾಮನ ರೂಪ ಕಂಡು ಕಣ್ಣೀರು ಸುರಿಸಿದ ಅಸಂಖ್ಯ ಭಕ್ತರು ಅರುಣ್ ಯೋಗಿರಾಜ್ ಅವರಿಗೆ ಇಂತಹ ಅಪೂರ್ವ ಮೂರ್ತಿ ನಿರ್ಮಾಣ ಮಾಡಿರುವುದಕ್ಕೆ ತಮ್ಮದೇ ರೀತಿಯಲ್ಲಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. 7 ತಿಂಗಳಿನಿಂದ ರಾಮಲಲ್ಲಾ ಮೂರ್ತಿ ಯ ಕೆತ್ತನೆಯ ಕಾರ್ಯದಲ್ಲಿ ತೊಡಗಿರದ್ದ ಅರುಣ್ ಅವರು ಮನೆಗೆ ಬಂದಿರಲಿಲ್ಲ. ಈಗ ಅಯೋಧ್ಯೆಯ ಪ್ರತಿಷ್ಠೆ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಏರ್ಪೋರ್ಟ್ ಗೆ ಬಂದಿಳಿದ ಶಿಲ್ಪಿಗೆ ಭವ್ಯ ಸ್ವಾಗತ ಸಿಕ್ಕಿದೆ. ಈ ಬಗ್ಗೆ ಮಾತನಾಡಿದ ಯೋಗಿರಾಜ್ ಅವರು ಒಬ್ಬ ಶಿಲ್ಪಿಗೆ ಇಷ್ಟೊಂದು ಸ್ವಾಗತ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಯಾರ ಕಣ್ಣಿಗೂ ಕಾಣದೆ 7 ತಿಂಗಳಿಂದ ಕೊಠಡಿಯಲ್ಲಿ ಕುಳಿತಿದ್ದ ನನಗೆ ಇಂತಹ ಸ್ವಾಗತ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಹೇಳಿಕೊಂಡಿದ್ದಾರೆ.

ಯೋಗಿರಾಜ್ ಅವರ ಬಗ್ಗೆ ಮಾಹಿತಿ:-

ಅರುಣ್ ಯೋಗರಾಜ್ ಕರ್ನಾಟಕದ ಹೆಮ್ಮೆಯ ನಗರಿಯಲ್ಲಿ ಮೈಸೂರಲ್ಲಿ 1983 ರಲ್ಲಿ ಜನಿಸಿದರು. ಇವರು ಓದಿದ್ದು ಎಂಬಿಎ. ನಂತರ ಬೆಂಗಳೂರಿನ ಖಾಸಗಿ ಕಂಪನಿಗಯಲ್ಲಿ ಕೆಲಸ ಮಾಡುತಿದ್ದರು. ಆದರೆ ಅವರಿಗೆ ಶಿಲ್ಪ ಕಲೆಯ ಮೇಲಿರುವ ಆಸಕ್ತಿ ಕಂಪನಿಯ ಕೆಲಸವನ್ನು ಬಿಡುವಂತೆ ಮಾಡಿತು. 2008ರಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಬಿಟ್ಟು. ಕುಲಕಸುಬಾದ ಶಿಲ್ಪ ಕಲೆಯನ್ನೇ ಉದ್ಯೋಗವನ್ನಾಗಿ ಸ್ವೀಕರಿಸಿದರು. ಇವರಿಗೆ ಅಪ್ಪ, ಅಮ್ಮ ಚಿಕ್ಕಮ್ಮ, ಚಿಕ್ಕಪ್ಪ ಎಂದು ದೊಡ್ಡ ಬಳಗವೇ ಇದೆ. ಇವರದು ಕೂಡು ಕುಟುಂಬ. ಇವರ ಪತ್ನಿ ವಿಜೇತಾ ಇವರಿಗೆ ಎರಡು ಮಕ್ಕಳಿದ್ದಾರೆ.

ಇವರಿಗೆ ಶಿಲ್ಪ ಕಲೆಗೆ ಈಗಾಗಲೇ ಹಲವರು ಪ್ರಶಸ್ತಿಗಳು ಬಂದಿವೆ. ಭಾರತ ಸರ್ಕಾರದಿಂದ 2014 ರಲ್ಲಿ ದಕ್ಷಿಣ ವಲಯ ಯುವ ಕಲಾವಿದ ಪ್ರಶಸ್ತಿ ಲಭಿಸಿದೆ ಹಾಗೂ ಇದೆ ವರುಷ ಮೈಸೂರು ಜಿಲ್ಲಾಡಳಿತವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಕಲಾಸಾಧನೆಗೆ 2021 ರಲ್ಲಿ ಕರ್ನಾಟಕ ಸರ್ಕಾರದ ಜಕಣಾಚಾರಿ ಪ್ರಶಸ್ತಿಯನ್ನು ದೊರೆತಿದೆ. ಹಾಗೂ ಶಿಲ್ಪಿಗಳ ಸಂಘದವರು ಶಿಲ್ಪಾ ಕೌಸ್ತುಭ ಸನ್ಮಾನವನ್ನೂ ಮಾಡಿದ್ದಾರೆ. ಇವರ ಸಾಧನೆಗೆ ಇನ್ನಷ್ಟು ಪ್ರಶಸ್ತಿಗಳು ಸಿಗುವಂತೆ ಆಗಲಿ ಎಂದು ಭಾರತೀಯರ ಆಶಯವಾಗಿದೆ.

ಇದನ್ನೂ ಓದಿ: ಫೆಬ್ರುವರಿ 22 ರಂದು ಭಾರತೀಯ ಮಾರುಕಟ್ಟೆಗೆ ಕಾಲಿಡಲಿರುವ iQOO ನಿಯೋ 9 ಪ್ರೊ, ಅಬ್ಬಾ ! ಎಂತಹ ಅದ್ಭುತ ವೈಶಿಷ್ಟ್ಯತೆಗಳು