Kannada Serial TRP: ಅಮೃತಧಾರೆ ಹಾಗೂ ಸೀತಾರಾಮ ಟಿಆರ್ ಪಿ ಏರಿಕೆ! ಬಿಗ್ ಬಾಸ್ ಟಿಆರ್ ಪಿ ಎಷ್ಟು ಗೊತ್ತಾ?

Kannada Serial TRP

Kannada Serial TRP: ಪ್ರತಿ ಗುರುವಾರ ಟಿ ಆರ್ ಪಿ ಬಿಡುಗಡೆಯಾಗಲಿದೆ. ಆದರೆ ಈ ವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇದ್ದ ಕಾರಣ ಇಂದು ಟಿ.ಆರ್. ಪಿ ಹೊರಬಂದಿದ್ದೆ. ಒಂದು ವಾರ ಟಾಪ್ ನಲ್ಲಿ ಇದ್ದ ಧಾರವಾಹಿ ಮುಂದಿನ ವಾರ ಕೆಳಗೆ ಕೂಡ ಹೋಗಬಹುದು ಹಾಗೆ ಪ್ರತಿ ವಾರ ಕೂಡ ಕಥೆಗಳಲ್ಲಿ ಟ್ವಿಸ್ಟ್ ಗಳು ನೀಡುವ ಮೂಲಕ ಧಾರಾವಾಹಿಗಳ ಟಿ ಆರ್ ಪಿ ಕೂಡ ಹೆಚ್ಚಾಗುತ್ತದೆ. ಹೌದು ಕಳೆದ ವಾರ ಭಾಗ್ಯಲಕ್ಷ್ಮಿ ಸೀರಿಯಲ್ ಉತ್ತಮ ಟಿ ಆರ್ ಪಿ ಪಡೆದು ಎರಡನೇ ಸ್ಥಾನಕ್ಕೆ ಏರಿತ್ತು. ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಾಕಷ್ಟು ತಿಂಗಳುಗಳಿಂದ ತನ್ನ ನಂಬರ್ ಒನ್ ಸ್ಥಾನವನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ ಕರ್ನಾಟಕದ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಈ ಸೀಸನ್ ಕಳೆದ ಸೀಸನ್ ಗಳಿಗಿಂತ ಹೆಚ್ಚು ಟಿಆರ್‌ಪಿ ಪಡೆದು ನಂಬರ್ ಒನ್ ರಿಯಾಲಿಟಿ ಶೋ ಆಗಿದೆ ಹಾಗಾದರೆ ಈ ವಾರದ ಟಿ ಆರ್ ಪಿ ಯಲ್ಲಿ ಯಾರು ನಂಬರ್ ಒನ್ ಬಿಗ್ ಬಾಸ್ ಗೆ ಸಿಕ್ಕ ಟಿ ಆರ್ ಪಿ ಎಷ್ಟು ನೋಡೋಣ ಬನ್ನಿ., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಈ ವಾರದ ಟಾಪ್ 10 ಧಾರಾವಾಹಿಗಳು

ಪುಟ್ಟಕ್ಕನ ಮಕ್ಕಳು: 10.7 TVR ಪಡೆದು ಕರ್ನಾಟಕದ ನಂಬರ್ ಒನ್ ಧಾರಾವಾಹಿಯಾಗಿದ್ದೆ. ಹಲವಾರು ತಿಂಗಳುಗಳಿಂದ ತನ್ನ ನಂಬರ್ ಒನ್ ಸ್ಥಾನವನ್ನು ಈ ಧಾರಾವಾಹಿ ಯಾರಿಗೂ ಬಿಟ್ಟುಕೊಟ್ಟಿಲ್ಲ. ಈ ಧಾರಾವಾಹಿಯಲ್ಲಿ ಉಮಾಶ್ರೀ, ಧನುಷ್ ಗೌಡ, ಸಂಜನಾ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಅಮೃತಧಾರೆ: 8.6 TVR ಪಡೆದು ಈ ವಾರ ಅಮೃತಧಾರೆ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಕಳೆದ ವಾರ 4ನೇ ಸ್ಥಾನವನ್ನು ಪಡೆದಿದ್ದ ಅಮೃತಧಾರೆ ಈ ವಾರ ಭರ್ಜರಿ ಟಿ.ಆರ್.ಪಿ ಪಡೆದ್ದು 2ನೇ ಸ್ಥಾನಕ್ಕೆ ಬಂದಿದ್ದೆ.

ಶ್ರೀರಸ್ತು ಶುಭಮಸ್ತು: 7.4 TVR ಪಡೆದು ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಕಳೆದ ವಾರ ಐದನೇ ಸ್ಥಾನದಲ್ಲಿತ್ತು. ಕಥೆಯಲ್ಲಿ ಆದ ಬದಲಾವಣೆಗಳಿಂದ ತನ್ನ ವೀಕ್ಷಕರನ್ನು ಈ ಧಾರಾವಾಹಿ ಹೆಚ್ಚಿಸಿಕೊಂಡಿದೆ.

ಸತ್ಯ: 7.1 TVR ಪಡೆದು ಸತ್ಯ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. ಈ ಧಾರಾವಾಹಿಯಲ್ಲಿ ಸಾಗರ್ ಬಿಳಿಗೌಡ, ಗೌತಮಿ ಜಾಧವ್ ಸೇರಿದಂತೆ ಸಾಕಷ್ಟು ಹಿರಿಯ ಕಲಾವಿದರು ನಟಿಸುತ್ತಿದ್ದಾರೆ.

ಗಟ್ಟಿಮೇಳ: ಅಂತಿಮ ಅಂತದಲ್ಲಿರುವ ಗಟ್ಟಿಮೇಳ ಧಾರಾವಾಹಿ ಈ ವಾರ 7.0 TVR ಪಡೆದು ಐದನೇ ಸ್ಥಾನದಲ್ಲಿದೆ. ಅಂತಿಮ ಎಪಿಸೋಡ್ ನ ಶೂಟಿಂಗ್ ಈಗಾಗಲೇ ಮುಗಿದಿದ್ದು. ಕೆಲವೇ ದಿನಗಳಲ್ಲಿ ಗಟ್ಟಿಮೇಳ ಧಾರಾವಾಹಿ ಅಂತ್ಯವಾಗುತ್ತದೆ.

  • 6.7 TVR ಪಡೆದು ಭಾಗ್ಯಲಕ್ಷ್ಮೀ ಧಾರಾವಾಹಿ ಆರನೇ ಸ್ಥಾನದಲ್ಲಿದೆ.
  • 6.6 TVR ಪಡೆದು ಸೀತಾರಾಮ ಧಾರಾವಾಹಿ ಏಳನೇ ಸ್ಥಾನದಲ್ಲಿದೆ.
  • 6.3 TVR ಪಡೆದು ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಂಟನೇ ಸ್ಥಾನದಲ್ಲಿದೆ.
  • 6.2 TVR ಪಡೆದು ಹಿಟ್ಲರ್ ಕಲ್ಯಾಣ ಧಾರಾವಾಹಿ ಒಂಬತ್ತನೇ ಸ್ಥಾನದಲ್ಲಿದೆ.
  • 5.8 TVR ಪಡೆದು ಬೃಂದಾವನ ಧಾರಾವಾಹಿ ಹತ್ತನೇ ಸ್ಥಾನದಲ್ಲಿದೆ.

ಬಿಗ್ ಬಾಸ್ ಸೀಸನ್ 10 ಟಿ.ಆರ್.ಪಿ ಹಿಂದಿನ ವಾರಗಳಿಗೆ ಹೋಲಿಸಿಕೊಂಡರೆ ಕಳೆದ ವಾರ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ವಾರದ ದಿನಗಳಲ್ಲಿ 6.1 TVR ಬಂದಿದ್ದು, ವೀಕೆಂಡ್ ನಲ್ಲಿ 7.7 TVR ಪಡೆದುಕೊಂಡಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LPG ಗ್ಯಾಸ್ E-KYC ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ! ಡಿಸೆಂಬರ್ 31 ಕೊನೆಯ ದಿನಾಂಕವಲ್ಲ..