ಬಿಗ್ ಬಾಸ್ ನ ಹಿಂದಿಕ್ಕಿ ಟಿ.ಆರ್.ಪಿ ಹೆಚ್ಚಿಸಿಕೊಂಡ ಸೀತಾರಾಮ ಧಾರಾವಾಹಿ; ಬಿಗ್ ಬಾಸ್ ಗೆ ಸಿಕ್ಕ ಟಿ.ಆರ್.ಪಿ ಎಷ್ಟು?

Week52 Kannada serial TRP

ಪ್ರತಿ ವಾರ ಟಿ.ಆರ್.ಪಿ ಬಿಡುಗಡೆಯಾಗುತ್ತದೆ. ಟಿ.ಆರ್.ಪಿ ಯು ಎಲ್ಲಾ ಧಾರಾವಾಹಿಗಳು ಹಾಗೂ ಶೋಗಳಿಗೆ ತುಂಬಾ ಮುಖ್ಯ. ಕೆಲವು ಧಾರಾವಾಹಿಗಳು ಕಡಿಮೆ ಟಿ.ಆರ್.ಪಿ ಪಡೆದು ಕೆಲ ತಿಂಗಳುಗಳಲ್ಲೇ ಮುಕ್ತಾಯವಾಗಿದೆ. ಇನ್ನೂ ಟಿ.ಆರ್.ಪಿ ಅನ್ನುವುದು ಪ್ರತಿವಾರ ಕೂಡ ಬದಲಾವಣೆ ಆಗುತ್ತಿರುತ್ತದೆ ಒಂದು ವಾರ ಟಾಪ್ ನಲ್ಲಿ ಇದ್ದಂತ ಧಾರಾವಾಹಿಗಳು ಮುಂದಿನ ವಾರ ಕೆಳಗೆ ಕುಸಿಯಬಹುದು ಹಾಗೆ ಕೆಳಗೆ ಇದ್ದಂತ ಧಾರಾವಾಹಿಗಳು ಟಾಪ್ ಸ್ಥಾನವನ್ನು ಪಡೆಯಬಹುದು. ಇನ್ನೂ ಕೆಲ ತಿಂಗಳುಗಳಿಂದ ನಂಬರ್ ಒನ್ ಕನ್ನಡ ಧಾರಾವಾಹಿ ಆಗಿರುವ ಪುಟ್ಟಕ್ಕನ ಮಕ್ಕಳು ಈ ವಾರ ಎಷ್ಟು ಟಿ.ಆರ್.ಪಿ ಪಡೆದಿದೆ. ಹಾಗೆ ಕಳೆದ ವಾರ ಉತ್ತಮ ಟಿ.ಆರ್.ಪಿ ಪಡೆದಿದ್ದ ಅಮೃತಧಾರೆ ಹಾಗೂ ಸೀತಾರಾಮ ಧಾರಾವಾಹಿ ಈ ವಾರ ಎಷ್ಟನೇ ಸ್ಥಾನ ಪಡೆದಿದೆ. ಕರ್ನಾಟಕದ ನಂ 1 ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಗೆ ಸಿಕ್ಕಿರುವ ಟಿ.ಆರ್.ಪಿ ಎಷ್ಟು ಎಲ್ಲಾವನ್ನು ನೋಡ್ತಾ ಹೋಗೋಣ.., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಈ ವಾರದ ಟಾಪ್ 10 ಧಾರಾವಾಹಿಗಳು

ಪುಟ್ಟಕ್ಕನ ಮಕ್ಕಳು: ಪುಟ್ಟಕ್ಕನ ಮಕ್ಕಳು ಧಾರಾವಾಹಿ 9.8 TVR ಪಡೆದು ಕರ್ನಾಟಕದ ನಂಬರ್ ಒನ್ ಧಾರಾವಾಹಿಯಾಗಿ ಮುನ್ನುಗ್ಗುತ್ತಿದೆ. 2023 ವರ್ಷದ ಕೊನೆಯ ವಾರದಲ್ಲಿ ನಂಬರ್ ಒನ್ ಧಾರಾವಾಹಿಯಾಗಿದೆ. ಹಲವು ತಿಂಗಳುಗಳಿಂದ ತನ್ನ ನಂ1 ಪಟ್ಟವನ್ನು ಬಿಟ್ಟುಕೊಟ್ಟಿಲ್ಲ. ಉಮಾಶ್ರೀ, ಸಂಜನಾ, ಧನುಷ್ ಸೇರಿದಂತೆ ಸಾಕಷ್ಟು ಹಿರಿಯ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ..

ಅಮೃತಧಾರೆ: 8.5 TVR ಪಡೆದು ಅಮೃತಧಾರೆ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಶ್ರೀರಸ್ತು ಶುಭಮಸ್ತು: 7.2 TVR ಪಡೆದು ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಧಾರಾವಾಹಿ ಶುರುವಾದಗಿನಿಂದಲೂ ಟಾಪ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಧಾರಾವಾಹಿಯಲ್ಲಿ ಸುಧಾರಾಣಿ, ಅಜಿತ್ ಹಂದೆ, ಚಂದನ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಲಕ್ಷ್ಮೀ ಬಾರಮ್ಮ ಹಾಗೂ ಸೀತಾರಾಮ: ಈ ಎರಡು ಧಾರಾವಾಹಿಗಳು ಈ ವಾರ ಟಾಪ್ 5 ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿವೆ. ಹೌದು 7.1 TVR ಪಡೆದ ಈ ಧಾರಾವಾಹಿಗಳು ಈ ವಾರ ನಾಲ್ಕನೇ ಸ್ಥಾನವನ್ನು ಪಡೆದಿವೆ. ಸೀತಾರಾಮ ಧಾರಾವಾಹಿ ಬಿಗ್ ಬಾಸ್ ಶೋ ಗಿಂತ ಹೆಚ್ಚಿನ ಟಿ.ಆರ್.ಪಿ ಪಡೆದಿದೆ.

ಗಟ್ಟಿಮೇಳ: ಗಟ್ಟಿಮೇಳ ಧಾರಾವಾಹಿಯ ಕೊನೆಯ ಸಂಚಿಕೆಗಳು ಪ್ರಸಾರವಾಗುತ್ತಿದೆ ಇಂದು ಕೊನೆ ಎಪಿಸೋಡ್ ಆಗಿದ್ದು. ಕಳೆದ ವಾರ 7 TVR ಪಡೆದು 5ನೇ ಸ್ಥಾನದಲ್ಲಿದೆ. ಗಟ್ಟಿಮೇಳ ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸತತ ಎರಡು ವರ್ಷಗಳಿಂದ ಟಿ.ಆರ್.ಪಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಧಾರಾವಾಹಿ.

  • 6.8 TVR ಪಡೆದು ಸತ್ಯ ಧಾರಾವಾಹಿ ಆರನೇ ಸ್ಥಾನದಲ್ಲಿದೆ.
  • 6.5 TVR ಪಡೆದು ಭಾಗ್ಯಲಕ್ಷ್ಮೀ ಧಾರಾವಾಹಿ ಏಳನೇ ಸ್ಥಾನದಲ್ಲಿದೆ.
  • 5.9 TVR ಪಡೆದು ಬೃಂದಾವನ ಧಾರಾವಾಹಿ ಎಂಟನೇ ಸ್ಥಾನದಲ್ಲಿದೆ.
  • 5.7 TVR ಪಡೆದು ರಾಮಾಚಾರಿ ಧಾರಾವಾಹಿ ಒಂಬತ್ತನೇ ಸ್ಥಾನದಲ್ಲಿದೆ.
  • 5.6 TVR ಪಡೆದು ಹಿಟ್ಲರ್ ಕಲ್ಯಾಣ ಧಾರಾವಾಹಿ ಹತ್ತನೇ ಸ್ಥಾನದಲ್ಲಿದೆ.

ಕನ್ನಡದ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಟಿ.ಆರ್.ಪಿ ಸೋಮವಾರದಿಂದ-ಶುಕ್ರವಾರ 6.8 TVR, ಶನಿವಾರ 6.7 TVR, ಭಾನುವಾರ 7.0 TVR. ಶನಿವಾರ ಮತ್ತು ಭಾನುವಾರದ ಸಂಚಿಕೆಯ ಟಿ.ಆರ್.ಪಿ ಶೃತಿ ಹಾಗೂ ಶೈನ್ ಶೆಟ್ಟಿ ಬಂದಿದ್ದ ವಾರದ ಟಿ.ಆರ್.ಪಿ ಆಗಿದ್ದೆ ಆ ವಾರ CCL ಇದ್ದ ಕಾರಣ ಸುದೀಪ್ ಅವರು ಆ ವಾರಾಂತ್ಯದಲ್ಲಿ ಬಿಗ್ ಬಾಸ್ ಗೆ ಬಂದಿರಲಿಲ್ಲ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಇದನ್ನೂ ಓದಿ: 45% ರಿಯಾಯಿತಿಯೊಂದಿಗೆ Redmi A2, ನಿಮ್ಮ ಮನೆಗೆ ಆಗಮಿಸಲಿದೆ ಅದು ಕೇವಲ 5000 ರೂಪಾಯಿಗಳ ಕಮ್ಮಿ ಬೆಲೆಯಲ್ಲಿ