ನಟ ಡಾಲಿ ಧನಂಜಯ್ ಚಿತ್ರರಂಗದಲ್ಲಿ ಯಾರೊಬ್ಬರ ಸಹಾಯವಿಲ್ಲದೆ, ಗಾಡ್ ಫಾದರ್ ಇಲ್ಲದೆ ತುಂಬಾನೇ ಕಷ್ಟ ಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕಂಪನಿ ಯಲ್ಲಿ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಇವ್ರಿಗೆ ಹಲವು ವರ್ಷಗಳ ಕಾಲ ಯಾವ ಸಿನಿಮಾನು ಕೈ ಹಿಡಿಲಿಲ್ಲ ಸಾಕಷ್ಟು ಅವಮಾನ ಗಳನ್ನು ಎದುರಿಸಿ ಕೊನೆಗೆ ಚಿತ್ರ ರಂಗದ ಸಹವಾಸವೇ ಬೇಡ ಅಂದುಕೊಂಡವರಿಗೆ ಚಿತ್ರರಂಗ ದಲ್ಲಿ ನೆಲೆಯುರೋ ನಂಬಿಕೆ ಮೂಡಿಸಿದ್ದೆ ಡಾಲಿ ಪಾತ್ರ.
ಹೌದು ಧನಂಜಯ್ ಅವ್ರ ಸಾಫ್ಟವೆರ್ ಟು ಸ್ಯಾಂಡಲ್ ವುಡ್ ಪ್ರಯಾಣ ಅತೀ ಸುಲಭದಲ್ಲ. ನಟ ರಾಕ್ಷಸನ ತೆರೆ ಹಿಂದಿನ ಜೀವನದ ಅನಾವರಣ ಈ ವಾರದ ವೀಕೆಂಡ್ ಕಾರ್ಯಕ್ರಮದಲ್ಲಿ ನಡೆದಿದೆ. ಯಾವುದಕ್ಕೂ ಎಲ್ಲಿಯೂ ಕಣ್ಣೀರಿಡದ ಡಾಲಿ ಅಕ್ಕನ ಮುಂದೆ ವೇದಿಕೆ ಮೇಲೆಯೇ ಕಣ್ಣೀರಿಟ್ಟು ಇವ್ರು ನನ್ನ ಅಕ್ಕ ಅಲ್ಲ ನನ್ನ ಮಗಳು ಎಂದಿದ್ದಾರೆ. ಅಷ್ಟಕ್ಕೂ ಡಾಲಿ ಅವ್ರ ಅಕ್ಕ ಯಾರು ಅವರಿಗೇನಾಗಿದೆ.. ಗಟ್ಟಿ ಮನುಷ್ಯ ಧನಂಜಯ್ ಮಗು ಥರ ಅತ್ತಿದ್ಯಾಕೆ ಇದೆಲ್ಲ ವನ್ನ ನೋಡ್ತಾ ಹೋಗೋಣ ಬನ್ನಿ.
ಸಾಫ್ಟವೆರ್ ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗಿನ ಜರ್ನಿ ರೋಚಕ
ಡಾಲಿ ಧನಂಜಯ್ ಪೂರ್ತಿ ಹೆಸರು ಕಲ್ಲೇನಹಳ್ಳಿ ಅಡವಿಸ್ವಾಮಿ ಧನಂಜಯ್, ಹಾಸನ ಜಿಲ್ಲೆಯ ಅರಸೀಕೆರೆಯ ಕಲ್ಲೇನಹಳ್ಳಿ ಯವರು. ಇನ್ನು ಇವ್ರು ಶಾಲೆ ಯಲ್ಲಿರುವಾಗಲೇ ನಾಟಕ, ಏಕಪಾತ್ರಾಭಿನಯ ಸೇರಿ ದಂತೆ ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡಿದ್ರು, ವಿಧ್ಯಾಭ್ಯಾಸದಲ್ಲೂ ಮುಂದೆ ಇದ್ದ ಧನಂಜಯ ಹತ್ತನೇ ತರಗತಿ ಪರೀಕ್ಷೆ ಯಲ್ಲಿ 90 ಕ್ಕೂ ಹೆಚ್ಚುಅಂಕ ಪಡೆದು ಜಿಲ್ಲೆಗೆ ಪ್ರಥಮ ಬಂದಿದ್ದರು. ನಂತರ ಮೈಸೂರಿನ ಜಯಚಾಮರಾಜೆಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್‌ನಲ್ಲಿ ಉದ್ಯೋಗ ಕೂಡ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಚಿಕ್ಕ ವಯಸ್ಸಿ ನಲ್ಲೇ ಡಾ.ರಾಜ್ಕುಮಾರ್ ಅವರನ್ನು ನೋಡಿ ಸಿನಿಮಾದತ್ತ ಆಸಕ್ತಿ ಬೆಳೆಸಿ ಕೊಂಡಿದ್ದ ಧನಂಜಯ್, ಇನ್ಫೋಸಿಸ್‌ನಲ್ಲಿ ಉದ್ಯೋಗ ಬಿಟ್ಟು ಮೈಸೂರಿನ ರಂಗಾಯಣ ಸೇರಿ, ನಟನೆ ಕಲಿಯಲು ಮೈಸೂರಿನ ಮೈಮ್ ರಮೇಶ್ ಅವರ ನಾಟಕ ಗುಂಪನ್ನು ಸೇರಿಕೊಳ್ಳುತ್ತಾರೆ.
ರಾಮಾ ರಾಮಾರೇ ಸಿನಿಮಾ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಧನಂಜಯ್ ಜಯನಗರ 4th ಬ್ಲಾಕ್’ ಎಂಬ ಕಿರುಚಿತ್ರ ಮಾಡುತ್ತಾರೆ, ಧನಂಜಯ್ ನಟಿಸಿದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿ, ಯೌಟ್ಯೂಬ್ ನಲ್ಲಿ ಒಳ್ಳೆಯ ವೀವ್ಸ್ ಪಡೆಯುತ್ತೆ. ನಂತರ
ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಸಮಯದಲ್ಲಿ ನಿರ್ದೇಶಕ ಗುರುಪ್ರಸಾದ್ ಕಣ್ಣಿಗೆ ಬಿದ್ದ ಧನಂಜಯ್‌ಗೆ ಸಿನಿಮಾ ದಲ್ಲಿ ಅವಕಾಶ ದೊರೆಯಿತು. ಆಗ ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ ಸ್ಪೆಷಲ್ ಸಿನಿಮಾ ದಲ್ಲಿ ನಾಯಕನಾಗಿ ನಟಿಸುವ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟರು.
ನಂತರ ರಾಟೆ, ಬಾಕ್ಸರ್, ಜೆಸ್ಸಿ, ಅಲ್ಲಮ, ಹ್ಯಾಪಿ ನ್ಯೂ ಇಯರ್ ಸೇರಿದಂತೆ ಅನೇಕ ಸಿನಿಮಾ ಗಳಲ್ಲಿ ಧನಂಜಯ್ ನಟಿಸಿದರು. ಆದರೆ ಈ ಸಿನಿಮಾ ಗಳು ಅಷ್ಟರ ಮಟ್ಟಿಗೆ ಯಶಸ್ವಿ ಆಗಲಿಲ್ಲ ಈಗಾಗಿ ಸಿನಿಮಾ ರಂಗವೆ ಬೇಡ ಅಂದು ಕೊಳ್ಳುತ್ತಿದ್ದಾಗ ಸಿಕ್ಕ ಅವಕಾಶವೇ ಡಾಲಿ ಪಾತ್ರ.. ಹೌದು 2018 ರಲ್ಲಿ ತೆರೆಕಂಡ ದುನಿಯಾ ಸೂರಿ ನಿರ್ದೇಶನದ , ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ `ಟಗರು’ ಚಿತ್ರದಲ್ಲಿ ಡಾಲಿಯಾಗಿ ಖಳನಟನ ಪಾತ್ರದಲ್ಲಿ ಮಿಂಚಿದರು. ಈ ಚಿತ್ರದಲ್ಲಿನ ಇವರ ಅಭಿನಯಕ್ಕೆ ಪ್ರೇಕ್ಷಕರು ಸಂಪೂರ್ಣ ವಾಗಿ ಫಿದಾ ಆದರು. ಈ ಸಿನಿಮಾ ದಿಂದ ಧನಂಜಯ ಆಗಿದ್ದವರು ಡಾಲಿ ಧನಂಜಯ್ ಆದರು. ಡಾಲಿ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಅವರು, ನಂತರ ಸಾಲು-ಸಾಲು ಸಿನಿಮಾ ಗಳಲ್ಲಿ ನಾಯಕನಾಗಿ ನಟಿಸಿದರು. ತಮ್ಮದೇ ಹೋಂ ಬ್ಯಾನರ್ ಅಡಿಯಲ್ಲಿ ಬಡವ ರಾಸ್ಕಲ್ ಹಾಗೂ ಹೆಡ್ ಬುಷ್ ಚಿತ್ರದ ಮೂಲಕ ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.
ಇದನ್ನು ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?
ಅಕ್ಕನ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಡಾಲಿ ಧನಂಜಯ್
ಆದರೆ ಇಷ್ಟೆಲ್ಲ ಕಷ್ಟ ಗಳ ಮಧ್ಯೆಯು ಬೆಳೆದು ನಿಂತ ಎಲ್ಲಿಯೂ ಕೂಡ ತನಗೆ ಕಷ್ಟ ಆಯ್ತು ತಾನು ಕಷ್ಟ ಪಟ್ಟು ಬೆಳೆದು ಬಂದೆ ಆಗೇ ಹೀಗೆ ಅಂತ ಒಂದು ದಿನಕ್ಕೂ ಹೇಳಿಕೊಂಡಿಲ್ಲ.. ತಮ್ಮ ಕುಟುಂಬ ದವರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.. ಆದ್ರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಖುರ್ಚಿ ಎಲ್ಲವನ್ನು ಮಾಡಿಸಿದೆ.. ಡಾಲಿಯ ಪ್ರತಿ ಯೊಂದು ನೋವು ಕಷ್ಟ, ಶ್ರಮದ ಹಿಂದಿನ ಪ್ರೋತ್ಸಾಹ ಹೀಗೆ ಎಲ್ಲವು ಹೊರಬಂದಿದೆ.. ಅದರಲ್ಲಿಯೂ ಅಕ್ಕನ ಬಗ್ಗೆ ಡಾಲಿ ಆಡಿರುವ ಮಾತಿನ ಸಣ್ಣ ಪ್ರೋಮೊ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿದೆ, ಅದಕ್ಕೆ ಕಾರಣನು ಇದೆ.
ಹೌದು ಡಾಲಿಯ ಅಕ್ಕ ಎಲ್ಲರಂಥಲ್ಲ ವಿಶೇಷ ಚೇತನರು ಅಂದ್ರೆ ದೇವ್ರ ಮಕ್ಕಳು. ಹೀಗಾಗಿ ಅಕ್ಕ ನನ್ನ ವೀಕೆಂಡ್ ಟೀಮ್ ವೇದಿಕೆಯ ಮೇಲೆ ಕರೆತರುತ್ತಿದ್ದಂತೆ ಡಾಲಿ ಮಗುವಾಗಿ ಬಿಕ್ಕಿ ಬಿಕ್ಕಿ ಅತ್ತುಬಿಡ್ತಾರೆ.. ಕುರ್ಚಿಯ ಕೆಳಗಿಳಿದು ಬಂದು ಇವ್ರು ನನ್ನ ಅಕ್ಕ ಅಲ್ಲ ನನ್ನ ಮಗಳು ಅಂದಿದ್ದಾರೆ.. ಈ ಮಾತು ಡಾಲಿ ಮೇಲಿನ ಅಭಿಮಾನವನ್ನ ಮತ್ತಷ್ಟು ಹೆಚ್ಚಿಸುವಂತೆ ಮಾಡ್ತು.. ಏಕೆಂದ್ರೆ ಸಾಮಾನ್ಯ ವಾಗಿ ವಿಶೇಷ ಚೇತನರು ಅಂದ್ರೆ ಅವ್ರನ್ನ ನೋಡುವ ಪರಿಯೇ ಬೇರೆ.. ಮನೆಗೆ, ಮನೆ ಯಲ್ಲಿರೋ ಜನಕ್ಕೆ ಭಾರ ಅಂತ ಭಾವಿಸಿ ಯಾವುದಾದ್ರೂ ವಿಕಲ ಚೇತನರ ಆಶ್ರಮ ಕ್ಕೆ ಹಾಕಿ ಕೈ ತೊಳೆದು ಕೊಳ್ಳುತ್ತಾರೆ. ಆದ್ರೆ ಧನಂಜಯ್ ಮತ್ತು ಅವ್ರ ಮನೆ ಯವರು ಇದರಲ್ಲಿ ಅಪ್ಪಟ್ಟ ಚಿನ್ನ..
ಹೌದು ಧನಂಜಯ್ ಅವ್ರ ಕುಟುಂಬ ದವರು ಅಂದ್ರೆ ಅವ್ರ ಅಪ್ಪ ಅಮ್ಮ ಈಗಲೂ ಕೂಡ ಅರಸೀಕೆರೆ ಯಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡ್ತಿದ್ದಾರೆ ಸಾಲದಕ್ಕೆ ವಿಶೇಷ ಚೇತನಳಾದ ಮಗಳ ನ್ನು ಕೂಡ ಪುಟ್ಟ ಮಗುವಿ ನಂತೆ ಆರೈಕೆ ಮಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ಒಂದು ದಿನ ಕ್ಕೂ ತುಟಿ ಬಿಚ್ಚದ ಡಾಲಿ ವೇದಿಕೆಯ ಮೇಲೆ ಎಲ್ಲವನ್ನು ಮುಕ್ತವಾಗಿ ಹೇಳಿಕೊಂಡು ಮಗುವಾಗಿದ್ದಾರೆ. ಅಕ್ಕ ನನ್ನ ಮಗಳು ಅಂತ ಹೇಳಿ ಎಲ್ಲರ ಹೃದಯ ಸಿಂಹಾಸನದಲ್ಲಿ ಮಹಾ ರಾಜನಾಗಿದ್ದಾರೆ.
ಸಿನಿಮಾ ವಿಚಾರವಾಗಿ ಡಾಲಿಗೆ ಅಜ್ಜಿ ಹೇಳಿದೇನು ನೋಡಿ?
ಡಾಲಿ ಬಗ್ಗೆ ಮತ್ತು ಅವ್ರ ಅಜ್ಜಿ ಬಗ್ಗೆ ನಿಮಗೆ ಇನ್ನೊಂದು ಇಂಟರ್ಸ್ಟ್ಟಿಂಗ್ ವಿಚಾರ ಗೊತ್ತಿರಲಿಕ್ಕಿಲ್ಲ.. ಹೌದು ಡಾಲಿ ಅವ್ರ ಶ್ರಮದ ಹಿಂದಿನ ಶಕ್ತಿ ನೇ ಅವ್ರ ಅಜ್ಜಿ.. ಸಿನಿಮಾ ದಲ್ಲಿ ನೀನು ಯಾವಾಗಲೂ ಹೊಡೆಸಿಕೊಳ್ಳೋದೇ ಆಯ್ತು ನೀನು ಯಾವಾಗೋ ಹೀರೊ ಥರ ಹೊಡೆಯೋದು ಅಂತ ಕೇಳಿದ್ರಂತೆ ಅಷ್ಟು ಮುಗ್ದ ಮನಸಿನ ಜೀವ ಕೂಡ ವೀಕೆಂಡ್ ಕಾರ್ಯಕ್ರಮಕ್ಕೆ ಬಂದು ಡಾಲಿ ಅವ್ರನ್ನ ವಿಶೇಷ ವಾಗಿ ಅರಸಿ ಆರೈಸಿದೆ.. ಒಟ್ಟಿ ನಲ್ಲಿ ಸಾಧಕರ ಖುರ್ಚಿಗೆ ಈ ವಾರವು ಅರ್ಥ ಬರೋದ್ರಲ್ಲಿ ಅನುಮಾನ ವೇ ಇಲ್ಲ ಅನ್ನೋದು ಕೆಲವು ಸಣ್ಣ ಪ್ರೋಮೊ ಝಲಕ್ ಗಳೆ ಹೇಳ್ತಿವೆ.
ಇದನ್ನು ಓದಿ: ವಿನೋದ್ ರಾಜ್ ಹೆಂಡತಿ ಮತ್ತು ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ