Weekend with ramesh: ಈ ವಾರ ಸ್ಯಾಂಡಲ್‌ವುಡ್‌ನ ಹಿರಿಯ ನಟ ದತ್ತಣ್ಣ, ಜೀ ಕನ್ನಡ ವಾಹಿನಿಯ ವೀಕೆಂಡ್ ವಿಥ್ ರಮೇಶ್ ಶೋನ ಸಾಧಕರ ಕುರ್ಚಿಯನ್ನೇರಿದ್ರು . ಇಲ್ಲಿಯವರೆಗೂ ದತ್ತಣ್ಣ, ಅವರೊಬ್ಬ ನಟ ಅನ್ನೋದಷ್ಟೇ ಬಹುತೇಕರಿಗೆ ಗೊತ್ತಿತ್ತು. ಆದರೆ, ಅವರ ಕೆಲ ಸಾಧನೆ ಹೊರ ಜಗತ್ತಿಗೆ ಕಂಡಿದ್ದೆ ಇಲ್ಲ. ಆದರೆ ಇದೀಗ ಅದಕ್ಕೆ ವೀಕೆಂಡ್ ಶೋನಲ್ಲಿ ದತ್ತಣ್ಣ ಅವ್ರ ಸಾಧನೆಯ ಜೊತೆಗೆ ಆಗ ದುಡ್ಡು ಸ್ವಲ್ಪ ಜಾಸ್ತಿ ಇದ್ದಿದ್ರೆ ಅಪ್ಪ ಅಮ್ಮ ನ ಇನ್ನು ಚೆನ್ನಾಗಿ ನೋಡ್ಕೋತಿದ್ದೆ ಆದ್ರೆ ನಂಗೆ ಆ ಅವಕಾಶ ಸಿಗ್ಲೇ ಇಲ್ಲ ಅಂತ ಬಹಳ ಭಾವುಕಾರಾಗ್ತಾರೆ.
ಹೌದು 1942ರಲ್ಲಿ ಚಿತ್ರದುರ್ಗದಲ್ಲಿ ದತ್ತಣ್ಣ ಅವರು ಜನಿಸಿದರು. 6 ಜನ ಸಹೋದರರಿದ್ದ ಕುಟುಂಬದಲ್ಲಿ ದತ್ತಣ್ಣ ಉದಯೋನ್ಮುಖ ಪ್ರತಿಭೆ.. ಕನ್ನಡಲ್ಲಿ ನೀರ್ ದೋಸೆ ಸೇರಿ ಹಲವು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
ಇನ್ನು ದತ್ತಣ್ಣ ಅವರನ್ನು ನಾವು ಸಿನಿಮಾದಲ್ಲಿ ಮಾತ್ರ ನೋಡಿದ್ದೇವೆ.ಆದ್ರೆ ಅವರ ಬಗ್ಗೆ ಕೆಲವರಿಗೆ ಇನ್ನೊಂದು ವಿಷಯ ಗೊತ್ತಿಲ್ಲ ಅದೇನಪ್ಪ ಅಂದ್ರೆ, ದತ್ತಣ್ಣ ಅವರು ವಿಂಗ್ ಕಮಾಂಡರ್ ಆಗಿಯು ಕೂಡ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿ : ಮುಕೇಶ್ ಅಂಬಾನಿಯ ಫ್ರೀ ಐಪಿಎಲ್ ಹಿಂದಿನ ಕರಾಳ ರಹಸ್ಯ
ವಿಂಗ್ ಕಮಾಂಡರ್ ದತ್ತಾತ್ರೇಯ, ದತ್ತಣ್ಣ ಆಗಿದ್ದು ಹೇಗೆ?
ನಟನೆಗೂ ಮುನ್ನ HAL ನಲ್ಲಿ 10 ವರ್ಷಗಳ ಕಾಲ ಸಿಬ್ಬಂದಿ ಕಾಲೇಜಿನ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟು ಎರಡು ದಶಕಗಳಿಗೂ ಹೆಚ್ಚು ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ದೆ ದತ್ತಣ್ಣ ಎಸ್ಸೆಸೆಲ್ಸಿಯಲ್ಲಿ ರಾಜ್ಯಕ್ಕೆ ನಂಬರ್ 1 ರ್ಯಾಂಕ್ ಪಡೆದಿದ್ದರು ಅನ್ನೋದು ಮತ್ತೊಂದು ವಿಶೇಷ. ತಮ್ಮ 22ನೇ ವಯಸ್ಸಿಗೆ ಪೈಲಟ್ ಆಫೀಸರ್ ಆಗಿ ವಾಯುಸೇನೆಗೆ ದತ್ತಣ್ಣ ಆಯ್ಕೆಯಾಗಿದ್ರು.
ಹೌದು 1964ರಲ್ಲಿ ದತ್ತಾತ್ರೇಯ ಅವರು ಇಂಡಿಯನ್ ಏರ್ ಫೋರ್ಸ್‌ಗೆ ನಿಯೋಜಿತ ಅಧಿಕಾರಿಯಾಗಿ ಪ್ರವೇಶ ಪಡೆಯುತ್ತಾರೆ. ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದುವ ಮುನ್ನವೇ ಒಟ್ಟೂ 20 ವರ್ಷಗಳ ಕಾಲ ಅವರು ಇಂಡಿಯನ್ ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಆಗ ದೇಶಭಕ್ತಿ ಅನ್ನೋದು ಎಷ್ಟು ತಾರಕಕ್ಕೆ ಏರಿತ್ತು ಅಂದರೆ ತುಂಬ ಧೈರ್ಯ ಇತ್ತು. ಯಾವುದೋ ಒಳ್ಳೆಯ ಸೇವೆಗೆ ಸೇರಿದ್ದೇವೆ ಅಂತ ಅನಿಸಿತ್ತು’ ತಮ್ಮ ವೃತ್ತಿ ಬದುಕಿನ ಬಗ್ಗೆ ಈಗಲೂ ಕೂಡ ಹೆಮ್ಮೆಯಿಂದ ಮಾತನಾಡುವ ದತ್ತಣ್ಣ ಯಾಕೆ ಮದುವೆ ಆಗಿಲ್ಲ ಅನ್ನೋದು ಹಲವರ ಪ್ರಶ್ನೆ
ದತ್ತಣ್ಣ ಮದುವೆ ಆಗದಿರಲು ಕಾರಣ ಇದೆ ನೋಡಿ!
ಹೌದು ಇಷ್ಟೆಲ್ಲ ಆದರೂ ದತ್ತಣ್ಣ ಅವರು ಮದುವೆ ಆಗಿಲ್ಲ. ಇದಕ್ಕೆ ಕಾರಣ ಕೂಡ ಬಹಿರಂಗವಾಗಿದೆ.ಮದುವೆ, ಸಂಸಾರ ಅನ್ನೋದು ಒಂದು ಗೋಳು ಎಂಬುದು ಅನೇಕರ ಅಭಿಪ್ರಾಯ. ಇದೆ ಅಭಿಪ್ರಾಯಕ್ಕೆ ದತ್ತಣ್ಣ ಅವರ ಸಿಲುಕಿದ್ರು. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದತ್ತಣ್ಣ ಅವರ ಗೆಳೆಯರು ಮಾತನಾಡಿದ್ದಾರೆ. ‘ದತ್ತಣ್ಣ ಓದಿನಲ್ಲಿ ಚುರುಕಿದ್ದರು. ಜೀವನದಲ್ಲಿ ಅನೇಕ ಸಾಧನೆ ಮಾಡಿದರು. ಆದರೆ, ಮದುವೆ ಆಗಲೇ ಇಲ್ಲ.ಯಾಕಂದ್ರೆ ಯಾವಾಗಲೂ ಫ್ರೀ ಆಗಿರಬೇಕು. ಎಲ್ಲರೂ ಬಂದು ಸಂಸಾರದ ಗೋಳು ಹೇಳಿಕೊಳ್ತಾರೆ. ಅದಕ್ಕೆ ಮದುವೆ ಆಗಲ್ಲ ಎಂದು ದತ್ತಣ್ಣ ನಿರ್ಧರಿಸಿದ್ದರು’ ಇದನ್ನ ಸ್ವತಃ ದತ್ತಣ್ಣ ಅವರ ಗೆಳೆಯ ಹೇಳಿಕೊಂಡಿದ್ದಾರೆ.
ವೈವಾಹಿಕ ಜೀವನವನ್ನ ಹೊರತುಪಡಿಸಿದ್ರೆ ಹಿರಿಯ ನಟ ದತ್ತಣ್ಣ ಅವರ ಬದುಕು ಅನೇಕರಿಗೆ ಮಾದರಿ. ಹೌದು ಇಂಜಿನಿಯರಿಂಗ್ ಪದವಿ ಪಡೆದು, ಏರ್ಫೋರ್ಸ್ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿ ಬಳಿಕ ನಟನಾ ಕ್ಷೇತ್ರಕ್ಕೆ ಬಂದು ರಾಷ್ಟ್ರ ಪ್ರಶಸ್ತಿ ಪಡೆದಿದ್ದು ನಿಜಕ್ಕೂ ಅವರ ಹೆಚ್ಚುಗಾರಿಕೆ ಅನ್ನಬಹುದು.ಎಚ್.ಜಿ. ದತ್ತಾತ್ರೇಯ ಅನ್ನೋದು ದತ್ತಣ್ಣ ಅವರು ಹೆಸರು.ಆದ್ರೆ ಅವರು ಚಿತ್ರರಂಗದಲ್ಲಿ ದತ್ತಣ್ಣ ಎಂದೇ ಫೇಮಸ್. ಇನ್ನು ಇವರಿಗೆ ಚಿಕ್ಕ ವಯಸ್ಸಿಂದ ನಾಟಕದ ಹುಚ್ಚಿತ್ತು. ಅನೇಕ ನಾಟಕಗಳಲ್ಲಿ ನಟಿಸಿ ಫೇಮಸ್ ಆಗಿದ್ದರು.
ಇನ್ನೊಂದು ಇಂಟರ್ಸ್ಟ್ಟಿಂಗ್ ವಿಷಯ ಏನ್ ಗೊತ್ತಾ ದತ್ತಣ್ಣ ಅವರು ಚಿತ್ರರಂಗಕ್ಕೆ ಬರುವಾಗ ಅವರಿಗೆ ವಯಸ್ಸು 45 ವರ್ಷ ತುಂಬಿತ್ತು. ಕಾರಣ ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್ಫೋರ್ಸ್ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಚಂಡೀಗಢ, ದೆಹಲಿ, ಅಂಡಮಾನ್ ಮುಂತಾದ ಕಡೆ ಅವರು ಸೇವೆ ಸಲ್ಲಿಸಿದ್ದರು. 1987ರಲ್ಲಿ ಅವರು ಬೆಂಗಳೂರಿನ ಎಚ್ಎಎಲ್ಗೆ ವರ್ಗವಾಗಿ ಬಂದರು. ಅನಂತರ ಹಿಂದಿ ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ‘ಆಸ್ಫೋಟ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಇದಾದ ಮೇಲೆ ಕನ್ನಡ ಚಿತ್ರರಂಗದಲ್ಲಿ ದತ್ತಣ್ಣ ಅವ್ರದ್ದು ಅಳಿಸಲಾಗದ ಹೆಜ್ಜೆ ಗುರುತುಗಳು.. ಆದರೂ ದತ್ತಣ್ಣ ಅವ್ರನ್ನ ಒಂದು ನೋವು ಈಗಲೂ ಕಾಡ್ತಿದೆ.
ಅದೇನಂದ್ರೆ ತಾವು ದುಡಿಯುವ ಸಂದರ್ಭದಲ್ಲಿ ಬರುತ್ತಿದ್ದ ಚಿಕ್ಕ ಹಣದಿಂದ ಅಪ್ಪಾ ಅಮ್ಮ ನ್ನ ಚೆನ್ನಾಗಿ ನೋಡ್ಕೊಳೋಕೆ ಆಗ್ಲಿಲ್ಲ ಇವಾಗಿದ್ದ ಧೈರ್ಯ ಅವಾಗಿದಿದ್ರೆ ನಾನು ಇನ್ನು ಚೆನ್ನಾಗಿ ನೋಡ್ಕೊಟ್ಟಿದ್ದೆ.. ದಯಮಾಡಿ ಅಪ್ಪ ಅಮ್ಮ ಬದುಕಿದ್ದಾಗಲೇ ಏನೇ ಆದ್ರೂ ಚೆನ್ನಾಗಿ ನೋಡ್ಕೊಳಿ ಅಂತ ಕಣ್ಣೀರಿಟ್ಟಿದ್ದಾರೆ.
ಇದನ್ನು ಓದಿ : ದೊಡ್ಮನೆ ಅಭಿಮಾನಿಗಳಿಗೆ ಗುಡ್ ನ್ಯೂಸ್