ಆರೋಗ್ಯ ವಿಮೆ ರಿಜೆಕ್ಟ್ ಆಗಲೂ ಕಾರಣಗಳು ಏನು?

health insurance

ಅನಾರೋಗ್ಯ ಆದಾಗ ಆಸ್ಪತ್ರೆಯ ಖರ್ಚು ಭರಿಸಲು ಕಷ್ಟ ಎಂದು ನಾವು ಆರೋಗ್ಯ ವಿಮೆಯನ್ನು ಮಾಡಿಸುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ವಿಮಾ ಹಣವೂ ಬಾರದೆ ನಮ್ಮ ಕೈಯ್ಯಿಂದ ಆಸ್ಪತ್ರೆಯ ಖರ್ಚು ಭರಿಸುವ ಸಂಧರ್ಭ ಬರುತ್ತದೆ. ವಿಮಾ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲಾಗಿದೆ ಆದರೂ ನಮಗೆ ವಿಮಾ ಹಣ ಬಂದಿಲ್ಲ ಎಂದು ನೀವು ಯೋಚಿಸಬಹುದು. ವಿಮಾ ಹಣವೂ ಬಾರದೆ ಇರುವುದಕ್ಕೆ ಕೆಲವು ಕಾರಣಗಳು ಇವೆ. ಹಾಗಾದರೆ ವಿಮಾ ಯೋಜನೆ ಹಣವೂ ಬಾರದೆ ನಿಮ್ಮ ಅರ್ಜಿ ಯಾವ ಯಾವ ಸಂದರ್ಭಗಳಲ್ಲಿ ತಿರಸ್ಕಾರ ಆಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಆರೋಗ್ಯ ವಿಮೆ ರಿಜೆಕ್ಟ್ ಆಗಬಹುದಾದ ಕೆಲವು ಕಾರಣಗಳು :-

  • ತಪ್ಪು ಮಾಹಿತಿ ನೀಡಿದಲ್ಲಿ:- ವಿಮಾ ಹಣಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೋಗಿಯ ಹೆಸರು, ರೋಗಿಯ ಖಾಯಿಲೆ, ದಿನಾಂಕ, ಆಸ್ಪತ್ರೆಯ ವಿವರ, ಟ್ರೀಟ್ಮೆಂಟ್ ಖರ್ಚು ಹೀಗೆ ಯಾವುದೇ ಒಂದು ವಿವರಗಳನ್ನು ತಪ್ಪಾಗಿ ನಮೂದಿಸಿದ್ದಾರೆ ವಿಮಾ ಕಂಪನಿ ನಿಮ್ಮ ಅರ್ಜಿಯನ್ನು ಅನುಮಾನಾಸ್ಪದವಾಗಿ ಅರ್ಥೈಸಿಕೊಂಡು ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡುತ್ತದೆ. ವಿಮಾ ಕಂಪನಿಯ ನಿಮ್ಮ ಮಾಹಿತಿಯನ್ನು ಪೂರ್ಣ ಪರಿಶೀಲನೆ ಮಾಡಿ ಎಲ್ಲಾ ಮಾಹಿತಿಯೂ ನಿಖರವಾಗಿ ಇದ್ದಲ್ಲಿ ಮಾತ್ರ ನಿಮ್ಮ ಅರ್ಜಿಯನ್ನು accept ಮಾಡಿ ವಿಮಾ ಹಣವನ್ನು ನೀಡುತ್ತದೆ. ಆದ್ದರಿಂದ ವಿಮಾ ಹಣಕ್ಕೆ ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಮಾಹಿತಿಯನ್ನು ನೀಡಬೇಕು.
  • ವಿಮಾ ಯೋಜನೆಯ ನಿಯಮದಲ್ಲಿ ರೋಗದ ಹೆಸರು ಇಲ್ಲದೆ ಇದ್ದಾರೆ:- ಯಾವುದೇ ವಿಮಾ ಯೋಜನೆಯ ನಿಯಮದಲ್ಲಿ ಯಾವ ಯಾವ ರೋಗಗಳಿಗೆ ವಿಮಾ ಹಣವೂ ಬರುತ್ತದೆ ಎಂಬ ಬಗ್ಗೆ ವಿಮಾ ಯೋಜನೆಗೆ ಹೂಡಿಕೆ ಮಾಡುವ ಮೊದಲು ನಿಮಗೆ ತಿಳಿಸಿರುತ್ತಾರೆ. ಆದರೆ ನೀವು ಅದನ್ನು ಗಮನಿಸದೆ ರೋಗಿಯ ವಿವರಗಳನ್ನು ವಿಮಾ ಕಂಪೆನಿಗೆ ಕಳುಹಿಸಿ ವಿಮೆಯ ಹಣವನ್ನು ಪಡೆಯಲು ಯತ್ನಿಸಿದರೆ ನಿಮಗೆ ವಿಮಾ ಹಣವೂ ಸಿಗುವುದಿಲ್ಲ.
  • ಸಕಾಲಿಕ ಆರೋಗ್ಯ ವಿಮಾ ಹಕ್ಕು ಸಲ್ಲಿಕೆ ಮಾಡದೆ ಇದ್ದಲ್ಲಿ:- ಆರೋಗ್ಯ ಪ್ರತಿ ವಿಮಾ ಪೂರೈಕೆದಾರರು ಕ್ಲೈಮ್ ಸಲ್ಲಿಕೆಗಳಿಗೆ ಸಮಯದ ಮಿತಿಯನ್ನು ನೀಡಿರುತ್ತಾರೆ. ಇದನ್ನು ಸಾಮಾನ್ಯವಾಗಿ ಸಕಾಲಿಕ ಫೈಲಿಂಗ್ ಮಿತಿ ಎಂದು ಕರೆಯಲಾಗುತ್ತದೆ. ಈ ಗಡುವನ್ನು ಅನುಸರಿಸುವುದು ಅತ್ಯಗತ್ಯ, ನಿಗದಿತ ಸಮಯದ ಒಳಗೆ ವಿಮಾ ಹಣಕ್ಕೆ ಅರ್ಜಿ ಸಲ್ಲಿಸದೆ ಇದ್ದರೆ ನಿಮ್ಮ ಅರ್ಜಿ ತಿರಸ್ಕಾರ ಆಗುತ್ತದೆ. ಸಮಯ ಕಳೆದಂತೆ, ವೈದ್ಯಕೀಯ ದಾಖಲೆಗಳು ಮತ್ತು ದಾಖಲೆಗಳು ಕಳೆದು ಹೋಗಬಹುದು ಅಥವಾ ತಪ್ಪಾಗಬಹುದು. ಕ್ಲೈಮ್‌ಗಳನ್ನು ಸಕಾಲಿಕವಾಗಿ ಸಲ್ಲಿಸುವುದು ನಿಖರವಾದ ಮೌಲ್ಯಮಾಪನ ಪ್ರಕ್ರಿಯೆಗಾಗಿ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಮುಖ್ಯ.
  • ವಿಮಾ ಯೋಜನೆಯ ಪ್ರೀಮಿಯಂ ತುಂಬದೇ ಇರುವುದು:- ಸಮಯಕ್ಕೆ ಸರಿಯಾಗಿ ವಿಮಾ ಯೋಜನೆಯ ಪ್ರೀಮಿಯಂ ಹಣವನ್ನು ತುಂಬದೇ ಇದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತದೆ. ನೀವು ನಿಗದಿತ ಅವಧಿಯಲ್ಲಿ ಪ್ರೀಮಿಯಂ ಹಣವನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪಾವತಿಸಿದರೆ ಮಾತ್ರ ನಿಮಗೆ ವಿಮಾ ಯೋಜನೆಯ ಹಣವೂ ಸಿಗುತ್ತದೆ.
  • ವಿಮಾ ಕಂಪನಿಯ ಒಪ್ಪಂದ ಹೊಂದಿರದ ಆಸ್ಪತ್ರಗೆ ದಾಖಲಾದರೆ:- ಪ್ರತಿ ವಿಮಾ ಕಂಪನಿಯು ಕೆಲವು ಆಸ್ಪತ್ರೆಗಳಿಗೆ ಅಥವಾ ಕೆಲವು ವೈದ್ಯರೊಂದಿಗೆ ವಿಮಾ ಒಪ್ಪಂದವನ್ನು ಮಾಡಿಕೊಂಡು ಇರುತ್ತಾರೆ. ಕೆಲವು ಸಮಯದಲ್ಲಿ ಆಕಸ್ಮಿಕವಾಗಿ ಅಥವಾ ಅಪಘಾತ ಸಮಯದಲ್ಲಿ ಯಾವುದಾದರೂ ಒಂದು ಆಸ್ಪತ್ರೆಗೆ ವ್ಯಕ್ತಿಯನ್ನು ಅಡ್ಮಿಟ್ ಮಾಡಿ ಟ್ರೀಟ್ಮೆಂಟ್ ಕೊಡಿಸಲಾಗುತ್ತಿದೆ. ಆ ಸಮಯದಲ್ಲಿ ಕೆಲವು ವಿಮಾ ಕಂಪನಿಯು ವಿಮಾ ಹಣವನ್ನು ನೀಡುವುದಿಲ್ಲ. ಆದೆ ರೀತಿ ಕೆಲವು ವಿಮಾ ಕಂಪನಿಗಳು ಯಾವುದೇ ಖಾಸಗಿ ಆಸ್ಪತ್ರೆ ಅಥವಾ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವಿಮಾ ಹಣ ಸಿಗುವುದು ಎಂದು ನಿಯಮದಲ್ಲಿ ತಿಳಿಸಿರುತ್ತಾರೆ. ಅಂತಹ ಸಮಯದಲ್ಲಿ ನಿಮ್ಮ ವಿಮಾ ಹಣವು ಸಿಗುತ್ತದೆ.

ಇದನ್ನೂ ಓದಿ: 50MP ಕ್ಯಾಮೆರಾ ಮತ್ತು 144Hz ಡಿಸ್‌ಪ್ಲೇಯೊಂದಿಗೆ ಹೊಸ Motorola ಇದರ ವಿಶೇಷ ರಿಯಾಯಿತಿಯನ್ನು ತಿಳಿಯಿರಿ