ಏನಿದು ನೀಲಿ ಆಧಾರ್ ಕಾರ್ಡ್ ಯಾರು ಪಡೆಯಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ?

Blue Aadhaar Card

ಸಾಮಾನ್ಯವಾಗಿ ಎಲ್ಲರಿಗೂ ನೀಡುವ ಆಧಾರ್ ಕಾರ್ಡ್ ಬಿಳಿ ಬಣ್ಣದ್ದವಿರುತ್ತದೆ. ಆದರೆ ಹುಟ್ಟಿದ ಮಗುವಿಗೆ ನೀಡುವ ಆಧಾರ್ ಕಾರ್ಡ್ ನೀಲಿ ಬಣ್ಣದ್ದು ಆಗಿರುತ್ತದೆ. ಈ ಆಧಾರ್ ಕಾರ್ಡ್ ಮಗುವಿಗೆ 5 ವರ್ಷ ಆಗುವ ತನಕ ಮಾನ್ಯತೆ ಪಡೆದಿದೆ. ಈ ಆಧಾರ್ ಕಾರ್ಡ್ ನಲ್ಲಿ ಮಗುವಿನ ಹೆಸರು ಹುಟ್ಟಿದ ದಿನಾಂಕ ಆಧಾರ್ ಕಾರ್ಡ್ ನಂಬರ್ ಮಗುವಿನ ವಿಳಾಸ ಮತ್ತು ಲಿಂಗ ಹಾಗೂ ಮಗುವಿನ ಭಾವಚಿತ್ರ ಇರುತ್ತದೆ. ಇದರಲ್ಲಿ ಮಗುವಿನ ಬಯೋಮೆಟ್ರಿಕ್ ಮಾಹಿತಿ ಇರುವುದಿಲ್ಲ. ಮಗುವಿನ ಪಾಲಕರು ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now

ನೀಲಿ ಆಧಾರ್ ಕಾರ್ಡ್(Blue Aadhaar Card) ಗೆ ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನೀಲಿ ಆಧಾರ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:- ಅಧಿಕೃತ UIDAI ವೆಬ್‌ಸೈಟ್‌ https://uidai.gov.in/ ಭೇಟಿನೀಡಿ. ಮುಖಪುಟದಲ್ಲಿ ನನ್ನ ಆಧಾರ್ ವಿಭಾಗ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಅಪಾಯಿಂಟ್ಮೆಂಟ್ ಕಾಯ್ದಿರಿಸಿ ಬಟನ್ ಒತ್ತಿ. ನಂತರ ಹೊಸ ಆಧಾರ್ ಆಪ್ಷನ್ ಆಯ್ಕೆ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ( ಪಾಲಕರ ) ಮತ್ತು ಕ್ಯಾಪ್ಚಾ ಕೊಡ್ ಹಾಕಿ. ಕುಟುಂಬದ ಮುಖ್ಯಸ್ಥರೊಂದಿಗಿನ ಸಂಬಂಧ ಅಡಿಯಲ್ಲಿ “ಮಗು (0-5 ವರ್ಷಗಳು) ಎಂಬ ಆಪ್ಷನ್ ಆಯ್ಕೆಮಾಡಿ. ನಿಮ್ಮ ಮಗುವಿನ ಬಗ್ಗೆ ಅಗತ್ಯವಿರುವ ವಿವರಗಳನ್ನು ಕಾಲಂ ನಲ್ಲಿ ಭರ್ತಿ ಮಾಡಿ ಮತ್ತು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಿ. ನಂತರ ಆಧಾರ್ ಸೇವಾ ಕೇಂದ್ರದಲ್ಲಿ ನಿಮ್ಮ ಮಗುವಿನೊಂದಿಗೆ ಭೇಟಿನೀಡಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :- ಆಧಾರ್ ಸೇವಾ ಕೇಂದ್ರ ಅಥವಾ ಶಾಶ್ವತ ದಾಖಲಾತಿ ಕೇಂದ್ರಕ್ಕೆ ಹೋಗಿ ನಿಮ್ಮ ಮಗುವನ್ನು ನೀಲಿ ಆಧಾರ್ ಕಾರ್ಡ್‌ಗೆ(Blue Aadhaar Card) ದಾಖಲಿಸುವ ಅರ್ಜಿ ನಮೂನೆಯಲ್ಲಿ ಪಡೆದುಕೊಂಡು ಆಧಾರ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ನೀಡಬೇಕು.

ಇದನ್ನೂ ಓದಿ: ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು:-

  • ಮಗುವಿನ ಫೋಷಕರ ಆಧಾರ್ ಕಾರ್ಡ್ ಸಂಖ್ಯೆ ( ತಂದೆ ಅಥವಾ ತಾಯಿ)
  • ಮಗುವಿನ ಜನನ ಪ್ರಮಾಣಪತ್ರದ ನಕಲು ಪ್ರತಿ
  • ಪೋಷಕರ ವಿಳಾಸದ ಮಾಹಿತಿಗೆ ಪಡಿತರ ಕಾರ್ಡ್ ಅಥವಾ ವಿದ್ಯುತ್ ಬಿಲ್,
  • ಮಗುವಿನ ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ನೀಡಬೇಕು ನಿಮ್ಮ ಬಳಿ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ಇಲ್ಲ ಎಂದರೆ ಆಧಾರ್ ಕೇಂದ್ರದಲ್ಲಿ ತೆಗೆದುಕೊಳ್ಳಬಹುದು.

ನೀಲಿ ಆಧಾರ್ ಕಾರ್ಡ್ ಏಕೆ ಅವಶ್ಯಕ?: ಬಾಲ್ ಆಧಾರ್ ಮಗುವಿಗೆ ಒಂದು ಅಧಿಕೃತ ಗುರುತಿನ ಪುರಾವೆ ಆಗಿದೆ. ಮಗುವಿನ ಶಾಲೆಗೆ ದಾಖಲಾತಿ, ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಮತ್ತು ಇತರ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ನೀಲಿ ಆಧಾರ್ ಕಾರ್ಡ್ ಸಹಾಯ ಆಗುತ್ತದೆ.

ನೀಲಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು :- ಆಧಾರ್ ಕಾರ್ಡ್ ದಾಖಲಾತಿ ಪ್ರಕ್ರಿಯೆ ನಡೆಯುವಾಗ ಒಬ್ಬ ಪೋಷಕರು ( ತಂದೆ ಅಥವಾ ತಾಯಿ ) ಮಾತ್ರ ಹಾಜರಿರಬೇಕು. 5 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಡೇಟಾವನ್ನು ಪಡೆಯಲಾಗುವುದಿಲ್ಲ. ಮಕ್ಕಳ ನೀಲಿ ಆಧಾರ್ ಕಾರ್ಡ್ ಗೆ ಒಬ್ಬ ಪೋಷಕರ ಆಧಾರ್ ಲಿಂಕ್ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿ 60 ದಿನಗಳ ಒಳಗೆ ನಿಮ್ಮ ವಿಳಾಸಕ್ಕೆ ಆಧಾರ್ ಕಾರ್ಡ್ ಅಂಚೆಯ ಮೂಲಕ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು UIDAI ಸಹಾಯವಾಣಿಯನ್ನು 1947 ರಲ್ಲಿ ಸಂಪರ್ಕಿಸಿ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಿ