ಇಂದಿನ ದಿನಮಾನದಲ್ಲಿ ಹಣವನ್ನು ಹೂಡಿಕೆ ಮಾಡಲು ಹಲವರು ಮಾರ್ಗಗಳು ಇವೆ. ಫಿಕ್ಸೆಡ್ ಡೆಪಾಸಿಟ್, ಇನ್ಸೂರೆನ್ಸ್, ಷೇರು ಮಾರುಕಟ್ಟೆ , ಗೋಲ್ಡ್ ಇನ್ವೆಸ್ಟ್ಮೆಂಟ್, ಹೀಗೆ ಹಲವಾರು ಮಾರ್ಗಗಳು ಇವೆ. ಗ್ರಾಹಕರಿಗೆ ಎಲ್ಲಿ ಹೆಚ್ಚಿನ ಲಾಭ ಇರುತ್ತದೆಯೋ ಅಲ್ಲಿ ಹಣವನ್ನು ಹೂಡಿಕೆ ಮಾಡುವುದು ಸಾಮಾನ್ಯ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರಿಗೆ ಪಿಎಸ್‌ಯು ಒಂದು ಉತ್ತಮ ಹೂಡಿಕೆಯ ಮಾರ್ಗವಾಗಿದೆ. ಹಾಗಾದರೆ ಪಿಎಸ್‌ಯು ಲಾಭಗಳ ಬಗ್ಗೆ ತಿಳಿಯೋಣ.
PSU (Public Sector Undertakings) ಷೇರು ಎಂದರೇನು?: ಇದು ಒಂದು ಸಾರ್ವಜನಿಕ ವಲಯದ ಉದ್ಯಮದ ಷೇರು ಆಗಿದೆ. ಇದು ಸರ್ಕಾರದ ಅಧೀನದಲ್ಲಿ ಹಾಗೂ ಕೆಲವು ಕಂಪನಿಗಳ ನಿಯಂತ್ರಣದಲ್ಲಿ ಇದೆ. ಭಾರತದಲ್ಲಿ ONGC, NTPC, ಕೋಲ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಹಲವಾರು PSUಗಳಿವೆ. ಸರ್ಕಾರದ ಕೆಲವು ಕಾಯಿದೆಗಳು PSU ಷೇರುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಷೇರು ಮಾರುಕಟ್ಟೆ ಯಾವಾಗ ಏರಿಕೆ ಕಾಣುತ್ತದೆ ಹಾಗೂ ಯಾವಾಗ ಇಳಿಕೆ ಆಗುತ್ತದೆ ಎಂದು ಹೇಳುವುದು ಬಹಳ ಕಷ್ಟ. ನಮ್ಮ ದೇಶದ ಆರ್ಥಿಕ ಬೆಳವಣಿಗೆ ಹಾಗೂ ವಿದೇಶಗಳ ಆರ್ಥಿಕ ಬೆಳವಣಿಗೆ ಹಾಗೂ ಯುದ್ಧಗಳು ದೇಶ ದೇಶಗಳ ನಡುವಿನ ತಿಕ್ಕಾಟದ ಕಾರಣಕ್ಕೆ ಷೇರು ಮಾರುಕಟ್ಟೆಯಲ್ಲಿ ಏರಿಕೆ ಮತ್ತು ಇಳಿಕೆ ಆಗುತ್ತದೆ. ಈಗ PSU ಷೇರು ಮಾರುಕಟ್ಟೆಯಲ್ಲಿ ಗರಿಷ್ಠ ಮಟ್ಟದ ಆದಾಯವನ್ನು ತಲುಪಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
PSU ಬಂಡವಾಳ ಏಷ್ಟು?
ಪಿಎಸ್‌ಯು ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 20 ಲಕ್ಷ ಕೋಟಿ ರೂಪಾಯಿ. PSU ಹೂಡಿಕೆ ಮಾಡಿದವರು ಲಾಭಾಂಶ, ಅಬಕಾರಿ ಸುಂಕ, ಕಸ್ಟಮ್ ಸುಂಕ ಮತ್ತು ಕಾರ್ಪೊರೇಟ್ ತೆರಿಗೆಗಳ ರೂಪದಲ್ಲಿ ನೀಡಬೇಕು. ಜನವರಿ 19, 2024 ರಂತೆ, ಕೆಳಗಿನ ಕ್ಯೂರೇಟೆಡ್ ಪಿಎಸ್ಯು ಪೋರ್ಟ್ಫೋಲಿಯೊದಲ್ಲಿ ಹೂಡಿಕೆ ಮಾಡಲು ಒಟ್ಟು ₹17,722.75 ಬಂಡವಾಳ ಅಗತ್ಯವಿದೆ. ಈ ಪೋರ್ಟ್‌ಫೋಲಿಯೊ ಉತ್ತಮ PSU ಷೇರುಗಳನ್ನು ಹೊಂದಿದೆ ಮತ್ತು ಉತ್ತಮ ಆದಾಯ ಮತ್ತು ಲಾಭಾಂಶ ಪಾವತಿಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಕೋಲ್ ಇಂಡಿಯಾ ಷೇರು ಏರಿಕೆಗೆ ಕೆಲವು ಮುಖ್ಯ ಅಂಶಗಳ ಪಟ್ಟಿ ಇಲ್ಲಿದೆ:- ಕೋಲ್ ಇಂಡಿಯಾದ ಇ-ಹರಾಜು ಪ್ರೀಮಿಯಂ Q3 ರಲ್ಲಿ 117% ರಷ್ಟಿದ್ದರೂ, Q4 ರಲ್ಲಿ ಅದು 40% ಗೆ ಇಳಿಯುವ ನಿರೀಕ್ಷೆಯಿದೆ. 2024 ರಲ್ಲಿ, ಕಂಪನಿಯು 1% ರಷ್ಟು ಕಡಿಮೆ ಉತ್ಪಾದನೆಯನ್ನು ನಿರೀಕ್ಷಿಸುತ್ತಿದೆ. ಆದಾಗ್ಯೂ, FY25 ರಲ್ಲಿ 9% ವಾರ್ಷಿಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ನಾನ್-ಪವರ್ ಮಾರಾಟ ಮತ್ತು ಆಮದು ಪರ್ಯಾಯಗಳಿಂದ ಕೂಡ ಲಾಭ ಗಳಿಸುವ ಸಾಧ್ಯತೆಗಳಿವೆ.
ಬ್ರೋಕರೆಜ್ ಸಂಸ್ಥೆಗಳು ಕೋಲ್ ಇಂಡಿಯಾ ಷೇರುಗಳಿಗೆ ಏಷ್ಟು ರೇಟಿಂಗ್ ನೀಡಿದೆ.?
ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಕೋಲ್ ಇಂಡಿಯಾ ಸಂಸ್ಥೆಯ ಷೇರುಗಳಿಗೆ 520 ರೂಪಾಯಿ ಮೊತ್ತದ ಟಾರ್ಗೆಟ್ ಇಟ್ಟುಕೊಂಡು ಖರೀದಿ ರೇಟಿಂಗ್ ನೀಡಿದೆ. ಜೆಫರೀಸ್ ಬ್ರೋಕರೇಜ್ ಸಂಸ್ಥೆಯು ಕೂಡ ಕೋಲ್ ಇಂಡಿಯಾ ಷೇರುಗಳಿಗೆ ಖರೀದಿಗೆ ಮುಂದಾಗಿದೆ.
CLSA ಬ್ರೋಕರೇಜ್ ಸಹ ಈ ಷೇರುಗಳಿಗೆ ಬುಲಿಶ್ ರೇಟಿಂಗ್ ನೀಡಿಡೆ ಹಾಗೂ ಉತ್ತಮ ಗುಣಮಟ್ಟದ ಷೇರು ಎಂಬ ಹೆಗ್ಗಳಿಕೆಯನ್ನು ನೀಡಿದೆ. ಷೇರಿನ ಟಾರ್ಗೆಟ್ 330 ರೂಪಾಯಿ ಇದ್ದ ಟಾರ್ಗೆಟ್ ಬೆಲೆಯನ್ನು 480 ರೂಪಾಯಿ ಗೆ ಹೆಚ್ಚಿಸಿದೆ. ಇತರೆ ಬ್ರೋಕರೇಜ್ ಸಂಸ್ಥೆ ಸಿಟಿ (Citi) ಕೋಲ್ ಇಂಡಿಯಾ ಷೇರುಗಳ ಮೇಲೆ ಯಾವುದೇ ರೇಟಿಂಗ್ ನೀಡಿದೇ 430 ರೂಪಾಯಿ ಟಾರ್ಗೆಟ್ ಮೊತ್ತವನ್ನು ಹೇಳಿದೆ.
ಕೆಲವು ಕಂಪನಿಗಳ ಕರೆಂಟ್ ಮಾರ್ಕೆಟ್ ಪ್ರೈಸ್ (CMP ) ಹೀಗಿದೆ.
- ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ – 276.60 ರೂಪಾಯಿ
- ಕೋಲ್ ಇಂಡಿಯಾ ಲಿ. – 446.50 ರೂಪಾಯಿ
- ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. – 2995.30 ರೂಪಾಯಿ
- NMDC ಲಿ. – 240.95 ರೂಪಾಯಿ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- 760.10 ರೂಪಾಯಿ
ಇದನ್ನೂ ಓದಿ: ಹಿರಿಯರಿಗೆ ಗುಡ್ ನ್ಯೂಸ್, SBI bank ನಲ್ಲಿ 10 ಲಕ್ಷ ಹೂಡಿಕೆ ಮಾಡಿದರೆ 21ಲಕ್ಷ ಆದಾಯವನ್ನು ಪಡೆಯಬಹುದು