ಯುಗಾದಿ ಹಬ್ಬದ ದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ?

What is the price of gold and silver on Ugadi festival day

ಭಾರತೀಯ ಸಂಸ್ಕೃತಿಯಲ್ಲಿ, ಬಂಗಾರವನ್ನು ಲಕ್ಷ್ಮಿ ದೇವಿ ಎಂದು ಪೂಜಿಸುತ್ತಾರೆ. ಲಕ್ಷ್ಮಿ ದೇವಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂಬ ನಂಬಿಕೆ ಇದೆ. ಹೆಣ್ಣುಮಕ್ಕಳ ನೆಚ್ಚಿನ ಆಭರಣ ಅದು ಬಂಗಾರದ ಒಡವೆಗಳು. ಈ ವರ್ಷದ ಯುಗಾದಿ ಹಬ್ಬಕ್ಕೆ ಹೊಸದಾಗಿ ಒಡವೆ ಖರೀದಿಸಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ದರ ಏರಿಕೆಯ ಬಿಸಿ ತಟ್ಟುತ್ತದೆ.

WhatsApp Group Join Now
Telegram Group Join Now

ಏಷ್ಟು ಗ್ರಾಮ್ ಗೆ ಏಷ್ಟು ದರ ಏರಿಕೆ ಆಗಿದೆ?

ನಿನ್ನೆಯ ಬಂಗಾರದ ದರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನ 1 ಗ್ರಾಮ್ ಗೆ 10 ರೂಪಾಯಿ ಜಾಸ್ತಿ ಆದರೆ 8 ಗ್ರಾಮ್ ಗೆ 80 ರೂಪಾಯಿ ಹಾಗೂ 10 ಗ್ರಾಮ್ ಗೆ 100 ರೂಪಾಯಿ, 100 ಗ್ರಾಮ್ ಗೆ 1000 ರೂಪಾಯಿ ಜಾಸ್ತಿ ಆಗಿದೆ. 24 ಕ್ಯಾರೆಟ್ ಚಿನ್ನ 1 ಗ್ರಾಮ್ ಗೆ 11 ರೂಪಾಯಿ, 8 ಗ್ರಾಮ್ ಗೆ 88 ರೂಪಾಯಿ, 10 ಗ್ರಾಮ್ ಗೆ 110 ರೂಪಾಯಿ ಹಾಗೂ 100 ಗ್ರಾಮ್ ಗೆ 1100 ರೂಪಾಯಿ ದರವು ಹೆಚ್ಚಾಗಿದೆ. 18 ಗ್ರಾಮ್ ಚಿನ್ನ 1 ಗ್ರಾಮ್ ಗೆ 9 ರೂಪಾಯಿ 8 ಗ್ರಾಮ್ ಗೆ 72 ರೂಪಾಯಿ 10 ಗ್ರಾಮ್ ಗೆ 90 ರೂಪಾಯಿ ಹಾಗೂ 100 ಗ್ರಾಮ್ ಗೆ 900 ರೂಪಾಯಿ ಜಾಸ್ತಿ ಆಗಿದೆ.

ಭಾರತದ ವಿವಿಧ ನಗರಗಳ ಬಂಗಾರದ ದರ ಹೀಗಿದೆ:-

  • ಬೆಂಗಳೂರು 22 ಕ್ಯಾರೆಟ್ ಚಿನ್ನದ ದರ 65,750 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ದರ 71,730 ರೂಪಾಯಿ.
  • ಹೈದ್ರಾಬಾದ್ 22 ಕ್ಯಾರೆಟ್ ಚಿನ್ನದ ದರ 65,750 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,730 ರೂ.
  • ಪುಣೆ 22 ಕ್ಯಾರೆಟ್ ಚಿನ್ನದ ದರ 65,750 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,730 ರೂ.
  • ದೆಹಲಿ 22 ಕ್ಯಾರೆಟ್ ಚಿನ್ನದ ದರ 65,900 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,880 ರೂ.
  • ಜೈಪುರ 22 ಕ್ಯಾರೆಟ್ ಚಿನ್ನದ ದರ 65,900 ರೂ ಹಾಗೂ 24 ಕ್ಯಾರೆಟ್ ಚಿನ್ನದ ದರ 71,880 ರೂ.

ಬೆಳ್ಳಿಯ ದರ:-

ಚಿನ್ನದ ದರ ಏರಿಕೆಯ ಹಾಗೆ ಬೆಳ್ಳಿಯ ದರವು ಏರಿಕೆ ಆಗಿದ್ದು 10 ಗ್ರಾಂ ಗೆ 7.50 ರೂಪಾಯಿ ಹಾಗೂ ಒಂದು ಕೆ. ಜಿ ಬೆಳ್ಳಿಯ ದರವು 750 ರೂಪಾಯಿ ಏರಿಕೆ ಆಗಿದ್ದು. ಇಂದಿನ ಬೆಳ್ಳಿಯ ದರವು 1 ಕೆ.ಜಿ ಗೆ 83,750 ರೂಪಾಯಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಂಗಾರದ ದರ ಏರಿಕೆಯಿಂದ ಜನರಿಗೆ ಉಂಟಾಗುವ ತೊಂದರೆಗಳು:

  1. ಖರೀದಿ ಶಕ್ತಿಯಲ್ಲಿ ಕುಸಿತ: ಬಂಗಾರದ ಬೆಲೆ ಏರಿದಾಗ ಜನರು ಖರೀದಿಸಲು ಕಡಿಮೆ ಹಣವನ್ನು ಹೊಂದಿರುತ್ತಾರೆ ಆದರೆ ಬಂಗಾರ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ.
  2. ಉಳಿತಾಯ ಮತ್ತು ಹೂಡಿಕೆಗಳ ಮೇಲೆ ಪರಿಣಾಮ: ಬಂಗಾರದಲ್ಲಿ ಹೂಡಿಕೆ ಮಾಡುವ ಜನರು ಲಾಭ ಗಳಿಸಬಹುದು, ಆದರೆ ಉಳಿತಾಯ ಮಾಡುವವರು ಮತ್ತು ಇತರ ಹೂಡಿಕೆಯಲ್ಲಿ ಹಣ ಹಾಕುವವರು ನಷ್ಟ ಅನುಭವಿಸಬಹುದು. ಇದು ಭವಿಷ್ಯದ ಯೋಜನೆಗಳಿಗೆ ಹಣಕಾಸು ಒದಗಿಸುವುದನ್ನು ಕಷ್ಟಕರವಾಗಿಸುತ್ತದೆ.
  3. ಸಾಲದ ಮೇಲೆ ಹೆಚ್ಚಿನ ಬಡ್ಡಿ: ಬಂಗಾರದ ಬೆಲೆ ಏರಿದಾಗ, ಬಡ್ಡಿದರಗಳು ಸಹ ಏರುತ್ತವೆ. ಇದು ಸಾಲಗಳನ್ನು ಮರುಪಾವತಿಸುವುದನ್ನು ಕಷ್ಟಕರವಾಗಿಸುತ್ತದೆ ಮತ್ತು ಜನರ ಮೇಲೆ ಹಣಕಾಸಿನ ಹೊರೆಯನ್ನು ಹೆಚ್ಚಿಸಿದ ಹಾಗೆ ಆಗುತ್ತದೆ.
  4. ಕಳ್ಳತನದ ಪ್ರಕರಣಗಳಲ್ಲಿ ಏರಿಕೆ: ಬಂಗಾರದ ಬೆಲೆ ಏರಿದಾಗ, ಚಿನ್ನದ ಕಳ್ಳತನ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತದೆ. ಇದು ಜನರಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ಎಲ್ಲರಿಗೂ ಕೈಗೆಟುಕುವಂತಹ ಬೆಲೆಯಲ್ಲಿ ಎಥರ್ ಹ್ಯಾಲೊ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ, ಹಾಗಾದರೆ ಇದರ ಬೆಲೆ ಎಷ್ಟು ಗೊತ್ತಾ?

ಇದನ್ನೂ ಓದಿ: ಪಿಯುಸಿ ಓದಿದವರಿಗೆ ಬಳ್ಳಾರಿ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳು ಇವೆ. ಈಗಾಲೇ ಅರ್ಜಿ ಸಲ್ಲಿಸಿ