ರಾಜಕೀಯದಲ್ಲಿ ದೊಡ್ಡಗೌಡರ ಕುಟುಂಬ ಅಂತಲೇ ಹೆಸರು ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ದೊಡ್ಡ ಮಟ್ಟದ ಹೆಸರಿದೆ. ಅದನ್ನ ಎಲರೂ ಆಗೆಯೇ ಕಾಪಾಡಿಕೊಂಡು ಬಂದಿದ್ದಾರೆ. ಆದ್ರೆ ಮೊನ್ನೆ ನಡೆದ ಒಂದು ಘಟನೆ ಗೌಡರ ಕುಟುಂಬದವರನ್ನ ಘಾಸಿ ಗೊಳಿಸಿದ್ದು, ಸಿಟ್ಟಿನ ಭರದಲ್ಲಿ ಆಡಿದ ಮಾತುಗಳು ಇಂದು ಗೌಡರ ಕುಟುಂಬದ ಘನತೆಗೆ ಚ್ಯುತಿ ತಂದಿದೆ. ಹೌದು ಗೌಡರ ಮನೆಯ ಹಿರಿಯ ಸೊಸೆ ಮಾಜಿ ಸಚಿವ ರೇವಣ್ಣ ಅವ್ರ ಪತ್ನಿ ಭವಾನಿ ರೇವಣ್ಣ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ. ಹೌದು ಭವಾನಿ ರೇವಣ್ಣ(Bhavani Revanna) ಡಿಸೆಂಬರ್ 1 ರಂದು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ತೆರಳುತ್ತಿದ್ದ ವೇಳೆ ರಾಂಗ್ ಸೈಡ್‌ನಿಂದ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಭವಾನಿ ರೇವಣ್ಣ ತಮ್ಮ ಟೊಯೋಟಾ ವೆಲ್‌ಫೈರ್(Toyota Vellfire) ಕಾರಿನಲ್ಲಿ ಸಂಚರಿಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಘಟನೆಗೆ ರಾಂಗ್ ಸೈಡ್‌ನಿಂದ ಬಂದ ಬೈಕ್ ಸವಾರನೆ ಕಾರಣ. ಆದರೆ ಬೈಕ್ ಡಿಕ್ಕಿಯಾದ ಬೆನ್ನಲ್ಲೇ ಕಾರಿನಿಂದ ಇಳಿದ ಭವಾನಿ ರೇವಣ್ಣ ತಮ್ಮ ಎಲ್ಲಾ ಆಕ್ರೋಶ ಹೊರಹಾಕಿ ವಿವಾದಕ್ಕೆ ಗುರಿಯಾಗಿದ್ದಾರೆ. ತಮ್ಮ ಕಾರಿಗೆ ಆಗಿರುವ ಸ್ಕ್ರಾಚ್ ಹಾಗೂ ಡೆಂಟ್‌ನಿಂದ ಭವಾನಿ ರೇವಣ್ಣ ಉರಿದು ಬಿದ್ದಿದ್ದಾರೆ.
ಮಾನವೀಯತೆ ಮರೆತ ಭವಾನಿ ರೇವಣ್ಣ, ಸಾಯಲು ನನ್ನ 1.5 ಕೋಟಿ ರೂಪಾಯಿ ಕಾರೇ ಬೇಕಿತ್ತಾ? ಬಸ್ ಚಕ್ರಕ್ಕೆ ಸಿಕ್ಕಿ ಸಾಯಬೇಕಿತ್ತು ಎಂದು ದರ್ಪದಿಂದ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಸ್ಥಳೀಯರು ಬಿಟ್ಟು ಬಿಡಿ ಮೇಡಂ ಎಂದಿದ್ದಾರೆ. ಮತ್ತೆ ಉರಿದುಬಿದ್ದ ಭವಾನಿ ಎಲ್ಲರ ಮೇಲೂ ರೇಗಿದ್ದಾರೆ. ಅಲ್ದೇ ರಿಪೇರಿ ಹಣ ಕಟ್ಟುಕೊಂಡು ಸಂಧಾನ ಮಾಡೋರು ಅಂತ ಕಿರುಚಾಡಿ ಸಾಯೋಕೆ ನನ್ನ 1.5 ಕೋಟಿ ರೂಪಾಯಿ ಕಾರೇ ಬೇಕಿತ್ತಾ? ಯಾವಾದಾದರೂ ಬಸ್ ಇರಲಿಲ್ವೇ? ಆ ಬೈಕ್ ಸುಟ್ಟು ಹಾಕಿ ಎಂಬ ದರ್ಪದ ಮಾತುಗಳನ್ನಾಡಿರುವ ಮಾಜಿ ಶಾಸಕ ಹೆಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ಟ್ರೋಲ್ ಆಗಿದ್ದಾರೆ. ಅಲ್ದೇ ಭವಾನಿ ರೇವಣ್ಣ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಮಧ್ಯೆ ಒಂದೂವರೆ ಕೋಟಿ ಕಾರ್ ಎಂದು ಟ್ರೋಲ್ ಆಗಿದ್ದಾರೆ. ಹಾಗಾದ್ರೆ ಕಾರಿನ ಬೆಲೆ ನಿಜಕ್ಕೂ ಎಷ್ಟು ಒಂದೂವರೆ ಕೋಟಿ ಇದ್ಯಾ ಅ ಕಾರಿನ ಬೆಲೆ ಇಲ್ಲ ಸಿಟ್ಟಿನ ಭರದಲ್ಲಿ ಭವಾನಿ ರೇವಣ್ಣ ಸುಳ್ಳು ಹೇಳುದ್ರ ನೋಡೋಣ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಯಾವುದು ಆ ಕಾರು? ಬೆಲೆ ಎಷ್ಟು
ಹೌದು ಭವಾನಿ ರೇವಣ್ಣ(Bhavani Revanna) ಅವರ ಟೋಯೋಟಾ ವೆಲ್‌ಫೈರ್(Toyota Vellfire) ಕಾರಿನ ಆನ್ ರೋಡ್ ಬೆಲೆ(On Road Price) 1.5 ಕೋಟಿ ರೂಪಾಯಿಗೂ ಹೆಚ್ಚು. ಹೀಗಾಗಿ ಈಗ ಕಾರಿಗೆ ಆಗಿರುವ ಸ್ಕ್ರಾಚ್ ಹಾಗೂ ಡೆಂಟ್ ಸರಿಪಡಿಸಲು ಲಕ್ಷ ರೂಪಾಯಿ ಖರ್ಚಿದೆ. ಕಾರಣ ಟೋಯೋಟಾ ವೆಲ್‌ಫೈರ್ ದುಬಾರಿ ಕಾರು. ಇದರ ನಿರ್ವಹಣೆ ಕೂಡ ಅಷ್ಟೇ ದುಬಾರಿ. ಈ ದುಬಾರಿ ಕಾರಿಗೆ ಆಗಿರುವ ಸ್ಕ್ರಾಚ್ ಹಾಗೂ ಡೆಂಟ್‌ನ್ನು ವಿಮೆ(Insurance) ಮೂಲಕ ಸರಿಪಡಿಸಲು ಸಾಧ್ಯವಿದೆ. ಕಾರಿನ ರಿಪೇರಿಗೆ ತಗಲುವು ವೆಚ್ಚ ಸಂಪೂರ್ಣವಾಗಿ ವಿಮೆಯಲ್ಲಿ ಸಿಗಲಿದೆ. ಆದರೆ ಇಲ್ಲೊಂದು ತಾಂತ್ರಿಕ ಸಮಸ್ಯೆ ಇದೆ. ವಿಮೆ ಕ್ಲೈಮ್ ಮಾಡಿದರೆ ಕಾರಿನ ಹಿಸ್ಟರಿಯಲ್ಲಿ ಅಪಘಾತ ಅನ್ನೋದು ದಾಖಲಾಗಲಿದೆ. ಇದರಿಂದ ಈ ಕಾರನ್ನು ಮರು ಮಾರಾಟ ಮಾಡುವಾಗ ಬೆಲೆ ಮತ್ತಷ್ಟು ಕುಸಿತಗೊಳ್ಳಲಿದೆ. ಸಾಮಾನ್ಯವಾಗಿ ದುಬಾರಿ ಕಾರುಗಳ ಮರು ಮಾರಾಟ ದರ ಅತ್ಯಂತ ಕಡಿಮೆ. ಈ ಎಲ್ಲಾ ಲೆಕ್ಕಾಚಾರಗಳು ಭವಾನಿ ರೇವಣ್ಣ ಅವರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ಇದರ ಜೊತೆಗೆ ಹೊಸ ಕಾರು ತನ್ನದಲ್ಲದ ತಪ್ಪಿಗೆ ಸ್ಕ್ರಾಚ್ ಆಗಿದೆ ಅನ್ನೋ ನೋವು, ರಾಂಗ್ ಸೈಡ್‌ನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ ಅನ್ನೋ ಆಕ್ರೋಶ ಭವಾನಿ ರೇವಣ್ಣಗೆ ಮುಳುವಾಗಿದೆ.
ಹೀಗಾಗಿ ಮಾತಿನ ಭರದಲ್ಲಿ ಬಾಯಿಗೆ ಬಂದಿದ್ದೆಲ್ಲ ಮಾತನಾಡಿ ಮನೆಯವರ ಮರ್ಯಾದೆ ಮತ್ತು ಘನತೆಗೆ ಮುಳುವಾಗಿಬಿಟ್ಟಿದ್ದಾರೆ. ಇನ್ನು ಟೊಯೋಟಾ ವೆಲ್‌ಫೈರ್ ಕಾರಿನ ಬಗ್ಗೆ ಹೇಳೋದಾದ್ರೆ, ಈ ಕಾರು ಗಾತ್ರದಲ್ಲಿ ದೊಡ್ಡ ಕಾರು. 5,010 mm ಉದ್ದ, 1,850 mm ಅಗಲ ಹಾಗೂ 3,000 mm ವ್ಹೀಲ್‌ಬೇಸ್ ಹೊಂದಿದೆ. 2494 cc ಎಂಜಿನ್ 4 ಸಿಲಿಂಡರ್, 4 ವೇಲ್ವ್ ಹೊಂದಿದ್ದು, 141 bhp ಪವರ್ 240 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮುಖ್ಯವಾಗಿ ಈ ಕಾರು ಗರಿಷ್ಠ ಸುರಕ್ಷತೆಯನ್ನೂ ನೀಡಲಿದೆ. ಏರ್‌ಬ್ಯಾಗ್, ಎಬಿಎಸ್ ಬ್ರೇಕ್, ಇಬಿಡಿ ಬ್ರೇಕಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್, ಲೆವೆಲ್ 1 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ ಈ ಕಾರಿನಲ್ಲಿದೆ. ಹೀಗಾಗಿ ಈ ಕಾರಿನ ಬೆಲೆ ದುಬಾರಿ ಆದ್ರೂ ಕೂಡ ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಸೆಲೆಬ್ರೇಟಿಗಳು, ದೊಡ್ಡ ದೊಡ್ಡ ರಾಜಕಾರಣಿಗಳು, ಹಣ ಇರೋರು ಈ ಕಾರನ್ನ ಕೊಂಡುಕೊಳ್ಳುತ್ತಾರೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಈ ಕಾರಿನ ವಿಶೇಷತೆಗಳನ್ನು
ಇನ್ನು ಭವಾನಿ ರೇವಣ್ಣ(Bhavani Revanna) ಅವರು ಕೋಪದ ಭರದಲ್ಲಿ ಕೆಟ್ಟದಾಗಿ ಬೈದಿರಬಹುದು. ಆದರೆ, ರೇಟ್ ಬಗ್ಗೆ ಸುಳ್ಳು ಹೇಳಿಲ್ಲ. ಈ ಕಾರಿನ ಬೆಲೆ 1.5 ಕೋಟಿ ರೂಪಾಯಿಗಿಂತಲೂ ಹೆಚ್ಚಿದೆ. ಕಾರು ಕೇವಲ 2 ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ. ಬೇಸ್ ಮಾಡೆಲ್ ಹೈ ಎಂಬ ಹೆಸರಿನೊಂದಿಗೆ ಲಭ್ಯವಿದ್ದರೆ, ಇನ್ನೊಂದು ಮಾಡೆಲ್ ವಿಐಪಿ ಎಕ್ಸೆಕ್ಯುಟಿವ್ ಲಾಂಜ್ ರೂಪದಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಬೇಸ್ ಮಾಡೆಲ್ ಕಾರಿನ ಆನ್ ರೋಡ್ ಬೆಲೆ 1,48,58,511 ರೂಪಾಯಿ ಅಂದ್ರೆ 1.48 ಕೋಟಿ, ಇನ್ನೊಂದು ವೇರಿಯೆಂಟ್ಗೆ 1,60,94,733 ಕೋಟಿ ರೂಪಾಯಿ. ಅಂದರೆ ಭವಾನಿ ರೇವಣ್ಣ ಅವರು ಹೇಳಿದ್ದಕ್ಕಿಂತ ಇನ್ನೂ 10 ಲಕ್ಷ ರೂಪಾಯಿ ಅಧಿಕ. ಇನ್ನು ಇತ್ತೀಚೆಗೆ ಬಿಡುಗಡೆಯಾದ ವೆಲ್ ಫೈರ್ ಬಹುತೇಕ ಹಳೆಯ ನೋಟವನ್ನೇ ಉಳಿಸಿಕೊಂಡಿದೆ ಅಂದರೇ ಒಂದು ರೀತಿ ಸಣ್ಣ ವ್ಯಾನ್ ಮಾದರಿಯ ಐಷಾರಾಮಿ ನೋಟ. ಟೊಯೊಟಾ ಮುಂಭಾಗದಲ್ಲಿ ಆರು-ಸ್ಲಾಟ್ ಗ್ರಿಲ್ ಗಳಿದ್ದು. ಮಧ್ಯದಲ್ಲಿ ಟೊಯೋಟಾ ಲೋಗೋವನ್ನು ಅಳವಡಿಸಲಾಗಿದೆ.
ಇದು ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳಿಂದ ಹೊಂದಿದೆ. ಹೆಡ್ ಲ್ಯಾಂಪ್ ಗಳ ಕೆಳಭಾಗದಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳಿವೆ. ಯು-ಆಕಾರದ ಕ್ರೋಮ್ ಸ್ಟ್ರಿಪ್ ಎರಡು ಹೆಡ್ ಲ್ಯಾಂಪ್ ಗಳನ್ನು ಸಂಪರ್ಕಿಸುವ ಬಂಪರ್ ನಡುವೆ ಸಾಗಿದೆ. ವೆಲ್‌ಫೈರ್ ಎಂಪಿವಿ ಟೊಯೊಟಾ ಸೇಫ್ಟಿ ಸೆನ್ಸ್ ಅಡ್ವಾನ್ಸ್ ಸಿಸ್ಟಮ್ ಅನ್ನು ಹೊಂದಿದೆ. ಇದು ಅಪಘಾತದ ಮೊದಲಿನ ಸುರಕ್ಷತಾ ವ್ಯವಸ್ಥೆ, ಲೇನ್ ಟ್ರೇಸ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್ನೊಂದಿಗೆ ಬರುತ್ತದೆ. ಇದಲ್ಲದೆ, ಇದು ಆರು ಏರ್ ಬ್ಯಾಗ್ಗಳು, ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಕೂಡ ಪಡೆಯುತ್ತದೆ. ಮುಖ್ಯವಾಗಿ 1.5 ಕೋಟಿ ಇದ್ದ ತಕ್ಷಣವೇ ಈ ಕಾರು ತಗೊಂಡು ಬರೋದಿಕ್ಕೆ ಆಗುವುದಿಲ್ಲ. ಇತ್ತೀಚಿನ ಮಾಹಿತಿ ಪ್ರಕಾರ ಈ ಕಾರಿನ ವೇಟಿಂಗ್ ಪಿರಿಯೆಡ್ 14 ತಿಂಗಳು. ಅಂದರೆ, ಕಾರು ಬುಕ್ ಮಾಡಿ 1 ವರ್ಷಕ್ಕೂ ಅಧಿಕ ದಿನಗಳು ಕಾಯಬೇಕು. ಹೀಗಾಗಿ ಕಾರಿನ ಕೊಂಡುಕೊಳ್ಳುವ ಅಷ್ಟ ಅರಿತಿದ್ದ ಭವಾನಿ ರೇವಣ್ಣ ಆ ಪರಿ ಗರಂ ಆಗಿದ್ದು, ಇಷ್ಟೆಲ್ಲ ವೈರಲ್ ಆಗಿದ್ದು, ಒಟ್ಟಿನಲ್ಲಿ ಕಾರಿನ ಬೆಲೆ ದುಬಾರಿ ಆದ್ರೂ ಬಹಳ ಸೇಫ್ಟಿ ಇರೋದ್ರಿಂದಲೇ ಈ ಕಾರಿಗೆ ಹೆಚ್ಚಿನ ಒಲವು.
ಇದನ್ನೂ ಓದಿ: ಹಲವು ವೈಶಿಷ್ಟ್ಯಗಳೊಂದಿಗೆ ಹೊಸ ಬಜಾಜ್ ಪ್ಲಾಟಿನ, 80KM ಮೈಲೇಜಿನೊಂದಿಗೆ ಭಾರತೀಯ ಮಾರುಕಟ್ಟೆಗೆ
ಇದನ್ನೂ ಓದಿ: 10 ಮತ್ತು 12ನೇ ತರಗತಿ ಪಾಸಾದವರಿಗೆ ರಾಯಚೂರು ನ್ಯಾಯಾಲಯದಲ್ಲಿ ಉದ್ಯೋಗಾವಕಾಶ, ಅರ್ಜಿಯನ್ನು ಸಲ್ಲಿಸಲು ಇಲ್ಲಿದೆ ಸರಳ ಮಾಹಿತಿ