ಈಗ ಭಾರತದಲ್ಲಿ ಹುಟ್ಟಿದ ಮಗುವಿನಿಂದ ಹಿಡಿದು 100 ವರ್ಷದ ಮುದುಕರ ವರೆಗೆ ಬ್ಯಾಂಕ್ ಖಾತೆ ಇರುತ್ತದೆ. ಕೆಲವರಿಗೆ ಒಂದೇ ಖಾತೆ ಇದ್ದರೆ ಕೆಲವರು ಹತ್ತೆಂಟು ಖಾತೆಗಳನ್ನು ಹೊಂದಿರುತ್ತಾರೆ. ಕೆಲವರ ಜಂಟಿ ಖಾತೆಗಳು ಇರುತ್ತವೆ. ಹಾಗಿದ್ದಾಗ ನಾವು ಎಲ್ಲಾ ಬ್ಯಾಂಕ್ ಗಳಿಗೆ ಒಂದೇ ನಂಬರ್ ಲಿಂಕ್ ಮಾಡಿಸಬಹುದಾ ಎಂಬ ಗೊಂದಲ ಇರಬಹುದು. ಈ ಗೊಂದಲಕ್ಕೆ RBI ಈಗ ಹೊಸ ನಿಯಮವನ್ನು ಜಾರಿ ಗೋಳಿಸಿದೆ. RBI ನ ಹೊಸ ನಿಯಮದ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.
ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯೋವಾಗ ನೀಡಬೇಕಾದ ಮಾಹಿತಿಗಳು ಏನು?: ನೀವು ಭಾರತದ ಯಾವುದೇ ಸರಕಾರಿ ಅಥವಾ ಪ್ರೈವೇಟ್ ಬ್ಯಾಂಕ್ ನಲ್ಲಿ ಖಾತೆ ತೆರೆಯಬೇಕು ಎಂದಾದರೆ ಮೊದಲು ನೀವು ಬ್ಯಾಂಕ್ ನಲ್ಲಿ ನೀಡುವ ಫಾರ್ಮ್ ನಲ್ಲಿ ನಿಮ್ಮ ಹೆಸರು ( ಆಧಾರ್ ಕಾರ್ಡ್ ನಲ್ಲಿ ಇರುವಂತೆ ) ಹಾಗೂ ನಿಮ್ಮ ವಿಳಾಸ ನೀವು ಹುಟ್ಟಿದ ದಿನಾಂಕ, ನಿಮ್ಮ ಲಿಂಗ, ನಿಮ್ಮ ತಂದೆ ತಾಯಿ ಅಥವಾ ಪೋಷಕರ ಹೆಸರು, ನಿಮ್ಮ ಆಧಾರ್ ಮಾಹಿತಿ ಹಾಗೂ ಪಾನ್ ಸಂಖ್ಯೆ, ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ನೀಡಬೇಕು. ಹಾಗೂ ನಿಮ್ಮ ಸಹಿ ಹಾಕಬೇಕು. ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಪಾನ್ ಕಾರ್ಡ್ ಜೆರಾಕ್ಸ್ ನೀಡಬೇಕು. ಆಯಾ ಬ್ಯಾಂಕ್ ನಲ್ಲಿ 500rs ಇಂದ 2000 ರೂಪಾಯಿಯ ವರೆಗೆ ಕನಿಷ್ಠ ಹಣ ಬ್ಯಾಂಕ್ ನಲ್ಲಿ ಇರಬೇಕು ಎಂಬ ನಿಯಮ ಇರುತ್ತದೆ. ಆ ಹಣವನ್ನು ಬ್ಯಾಂಕ್ ಗೆ ಕಟ್ಟಬೇಕು. ಇಷ್ಟು ಮಾಡಿದರೆ ನಿಮ್ಮ ಖಾತೆ ಓಪನ್ ಆಗುತ್ತದೆ.
ಒಂದು ಫೋನ್ ನಂಬರ್ ಅನ್ನು ಹೆಚ್ಚು ಬ್ಯಾಂಕ್ ಗಳಿಗೆ ನೀಡಬಹುದಾ?
ಕೆಲವರು personal ವ್ಯವಹಾರಗಳಿಗೆ ಒಂದು ಬ್ಯಾಂಕ್ ನಲ್ಲಿ ಖಾತೆ ಓಪನ್ ಮಾಡುತ್ತಾರೆ ಹಾಗೂ ಇನ್ನೊಂದು ಬ್ಯಾಂಕ್ ನಲ್ಲಿ salary ಖಾತೆ ಓಪನ್ ಮಾಡಿರುತ್ತಾರೆ. ಇನ್ನೊಂದು ಬ್ಯಾಂಕ್ ನಲ್ಲಿ ಬಡ್ಡಿ ಹೆಚ್ಚಿಗೆ ಇದೆ ಎಂದು ಬ್ಯಾಂಕ್ ಖಾತೆ ತೆರೆಯುತ್ತಾರೆ. ಹೀಗೆ ನಾನಾ ಕಾರಣಗಳಿಗೆ ಬ್ಯಾಂಕ್ ಖಾತೆ ತೆರೆಯುವವರು ಒಂದು ಮೊಬೈಲ್ ಸಂಖ್ಯೆಯನ್ನು ಹೆಚ್ಚಿನ ಖಾತೆಗಳಲ್ಲಿ ನೋಂದಾಯಿಸಲು ಅವಕಾಶ ಇದೆ ಎಂದು RBI ತಿಳಿಸಿದೆ. ಆದರೆ ಜಂಟಿ ಖಾತೆ ತೆರೆಯುವಾಗ ಮಾತ್ರ ನೀವು ಬ್ಯಾಂಕ್ ಗೆ ekyc ಮಾಡಿಸುವ ಸಂದರ್ಭದಲ್ಲಿ ಬೇರೆ ಫೋನ್ ನಂಬರ್ ನೀಡಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜಂಟಿ ಖಾತೆಗೆ ಬೇರೆ ಫೋನ್ ನಂಬರ್ ಯಾಕೆ ನೀಡಬೇಕು?: ಗ್ರಾಹಕರ ಹಿತದೃಷ್ಠಿಯಿಂದ ಈ ನಿಯಮವನ್ನು RBI ಜಾರಿಗೆ ತಂದಿದೆ. ಇದರಿಂದ ಗ್ರಾಹಕರಿಗೆ ತಮ್ಮ ವೈಯಕ್ತಿಕ ಖಾತೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.
ಬ್ಯಾಂಕ್ ಖಾತೆಗೆ EKYc ಮಾಡಿಸುವುದು ಕಡ್ಡಾಯ :- ನಿಮ್ಮ ಬ್ಯಾಂಕ್ ಖಾತೆಗೆ EKYc ಮಾಡಿಸುವುದು ಈಗ ಕಡ್ಡಾಯವಾಗಿದೆ. ಗ್ರಾಹಕರು ತಮ್ಮ ಗುರುತನ್ನು ಬ್ಯಾಂಕ್ ಗೆ ದೃಢೀಕರಿಸಲು ಹಾಗೂ ನಾವು ನೀಡಿದ ಮಾಹಿತಿ ಸರಿಯಾಗಿ ಎಂಬುದನ್ನು ತಿಳಿಸಲು ಕಡ್ಡಾಯವಾಗಿ EKYc ಮಾಡಿಸಬೇಕು. ನೀವು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿದ್ದರೆ ಹಾಗೂ ಜಂಟಿ ಖಾತೆ ಹಾಗೂ personal ಖಾತೆ ಇದ್ದರೆ ನೀವು ನಿಮ್ಮ ಪ್ರತಿ ಖಾತೆಗೂ EKYc ಮಾಡಿಸಬೇಕಾಗುತ್ತದೆ.
ಇದನ್ನೂ ಓದಿ: FD ಖಾತೆಯ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ವಿವರ ಇಲ್ಲಿದೆ