SSLC ನಂತರ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಯೋಚನೆಯೇ ಹಾಗಾದರೆ ಈ ಲೇಖನವನ್ನು ನೋಡಿ

What Next After SSLC

SSLC ವಿಧ್ಯಾರ್ಥಿ ಜೀವನದ ಪ್ರಮುಖ ಹಂತ. ಇಂದು ಬೆಳಿಗ್ಗೆ SSLC ಫಲಿತಾಂಶ ಬಿಡುಗಡೆ ಆಗಿದ್ದು ಮುಂದಿನ ಶಿಕ್ಷಣದ ಬಗ್ಗೆ ಎಲ್ಲರಿಗೂ ಯೋಚನೆ ಇರುತ್ತದೆ. ನಮ್ಮ ಜೀವನದ ಗುರಿಗೆ ನಾವು ಯಾವ ವಿಷಯ ಆಯ್ದುಕೊಳ್ಳಬೇಕು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ. ಇಂದು SSLC ನಂತರ ಬೇಕಾದಷ್ಟು ಕೋರ್ಸ್ ಗಳು ಇವೆ. ಆದರೆ ಅದರಲ್ಲಿ ಯಾವುದು ಉತ್ತಮ ಹಾಗೂ ಯಾವುದು ಸೂಕ್ತ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಎಸ್.ಎಸ್.ಎಲ್.ಸಿ ನಂತರ ಲಭ್ಯವಿರುವ ಕೋರ್ಸ್ ಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

SSLC ನಂತರ ಯಾವ ಯಾವ ಕೋರ್ಸ್ ಇವೆ?

ಪಿಯುಸಿ :- ಶೇಕಡಾ 90% ವಿದ್ಯಾರ್ಥಿಗಳು SSLC ನಂತರ ಎರಡು ವರುಷದ ಪಿಯುಸಿ ಕೋರ್ಸ್ ಗೆ ಜಾಯಿನ್ ಆಗುತ್ತಾರೆ. ನೀವು ಎರಡು ವರುಷದ ಪಿಯುಸಿ ಕೋರ್ಸ್ ಜಾಯಿನ್ ಆಗುವ ಆಲೋಚನೆ ಇದ್ದರೆ ನಿಮಗೆ ಇಲ್ಲಿ ಮೂರು ವಿಷಯಗಳ ಮೇಲೆ ಪಿಯುಸಿ ಓದಬಹುದು.

A) ವಿಜ್ಞಾನ :- ನೀವು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಫಿಸಿಕ್ಸ್ , ಕೆಮಿಸ್ಟ್ರಿ , Maths , ಬಯೋಲಜಿ, ಕಂಪ್ಯೂಟರ್ ಸೈನ್ಸ್ , ಕನ್ನಡ, ಇಂಗ್ಲೀಷ್, ಹಿಂದಿ, ಸೈಕೋಲಜಿ, ಅಂತಹ ವಿಷಯಗಳು ಇರುತ್ತವೆ. ನೀವು ಪಿಸಿಎಂ ವಿಷಯಗಳನ್ನು ಆಯ್ಕೆ ಮಾಡಿದರೆ ನಂತರ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸಸ್, ರಕ್ಷಣಾ ಸೇವೆಗಳು, ಮರ್ಚೆಂಟ್ ನೇವಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನೀವು ಮುಂದುವರೆಯಲು ಸಾಧ್ಯ. ಪಿಸಿಬಿ ವಿಷಯಗಳನ್ನು ಓದಿದರೆ ಔಷಧ, ಫಿಸಿಯೋಥೆರಪಿ, ಕೃಷಿ, ಪೋಷಣೆ ಮತ್ತು ಆಹಾರ ಪದ್ಧತಿ, ದಂತವೈದ್ಯಶಾಸ್ತ್ರ ಹೀಗೆ ಹಲವರು ಆಯ್ಕೆಗಳು ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

B) ವಾಣಿಜ್ಯ :- ನೀವು ಈ ವಿಷಯವನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಬ್ಯುಸಿನೆಸ್ ಸ್ಟಡಿ, ಸ್ಟ್ಯಾಟಿಸ್ಟಿಕ್ಸ್, ಕಾಮರ್ಸ್, ಕಂಪ್ಯೂಟರ್ ಸೈನ್ಸ್. ಇತಿಹಾಸ, ಹಾಗೂ ಭಾಷೆ ವಿಷಯಗಳು ಇರುತ್ತವೆ. ನಿಮಗೆ ಲೆಕ್ಕ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ಇದ್ದರೆ ನೀವು ಪಿಯುಸಿಯಲ್ಲಿ ವಾಣಿಜ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಪಿಯುಸಿ ನಂತರ ಬಿಕಾಂ, ಡಿಗ್ರಿ ಮಾಡಿ ಸ್ವಂತ ಬ್ಯುಸಿನೆಸ್ ಓಪನ್ ಮಾಡಬಹುದು ಇಲ್ಲವೇ ಚಾರ್ಟರ್ಡ್ ಅಕೌಂಟೆನ್ಸಿ, ಬ್ಯಾಂಕಿಂಗ್, ವಿಮೆ, ಅಂತಹ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿದೆ.

C) ಕಲಾ :- ನೀವು ವಿಷಯವನ್ನ ಆಯ್ಕೆ ಮಾಡಿಕೊಂಡರೆ ನಿಮಗೆ ಇತಿಹಾಸ, ರಾಜಕೀಯ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ ದಂತಹ ವಿಷಯಗಳನ್ನು ನೀವು ಓದಬಹುದು. ನೀವು ಈ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಪತ್ರಿಕೋದ್ಯಮ, ಸಾಹಿತ್ಯ, ಬರವಣಿಗೆ, ಶಿಕ್ಷಕರು, ಇತಿಹಾಸ ತಜ್ಞರು ಹೀಗೆ ಹಲವಾರು ವೃತ್ತಿ ಆಯ್ಕೆಮಾಡಿಕೊಳ್ಳಲು ಅವಕಾಶ ಇದೆ.

ವೃತ್ತಿಪರ ಕೋರ್ಸ್:- ನೀವು ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಂಡರೆ ನಿಮಗೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಹಾಗೂ ಫ್ಯಾಶನ್ ಡಿಸೈನಿಂಗ್, ಡೆಸ್ಕ್‌ಟಾಪ್ ಪಬ್ಲಿಷಿಂಗ್ ಮತ್ತು ಆಭರಣ ವಿನ್ಯಾಸ, ಪ್ರಯಾಣ ಮತ್ತು ಪ್ರವಾಸೋದ್ಯಮ, ಐಟಿಐ ಅಂತಹ ಕೋರ್ಸ್ ಲಭ್ಯ ಇವೆ.

ಪ್ಯಾರಾ ಮೆಡಿಕಲ್ ಕೋರ್ಸ್‌ಗಳು: ನೀವು ಎಕ್ಸ್-ರೇ ತಂತ್ರಜ್ಞ, ಡಯಾಲಿಸಿಸ್ ತಂತ್ರಜ್ಞ, ನರ್ಸಿಂಗ್ ಅಸಿಸ್ಟೆನ್ಸ್, ನೇತ್ರ ತಂತ್ರಜ್ಞ ಅಂತಹ ಹುದ್ದೆಗಳಿಗೆ ಹೋಗಲು ಪ್ಯಾರಾ ಮೆಡಿಕಲ್ ಕೋರ್ಸ್ ಗಳು ಲಭ್ಯ ಇವೆ.

ನಿಮಗೆ ಇಷ್ಟ ಇರುವ ಕ್ಷೇತ್ರವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಯಾವ ಕೋರ್ಸ್ ಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ತಿಳಿದು ಎಚ್ಚರಿಕೆಯಿಂದ ಕೋರ್ಸ್ ಆಯ್ಕೆ ಮಾಡಿಕೊಳ್ಳಿ.

ಇದನ್ನೂ ಓದಿ: ಇತ್ತೀಚೆಗೆ ಬಿಡುಗಡೆಯಾದ 10 ಸಾವಿರ ರೂಪಾಯಿ ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಬೆಸ್ಟ್ ಫೋನ್ ಗಳು..