WhatsApp UPI ಮೂಲಕ ಭಾರತೀಯರು ವಿದೇಶಗಳಲ್ಲಿ ಹಣ ಪಾವತಿಸುವ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ.

whatsApp Make International Payment

ಈಗಾಗಲೇ ವಾಟ್ಸಾಪ್ ನಲ್ಲಿ ನಾವು ನಮ್ಮ ಸ್ನೇಹಿತರಿಗೆ ಅಥವಾ QR code ಬಳಸಿ ಹಣ ಪಾವತಿ ಮಾಡಲು ಸಾಧ್ಯವಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯವಾಗಿ ಹಣ ಪಾವತಿಸುವ ಸೌಲಭ್ಯ ಜಾರಿಯಾಗಲಿದೆ. 2020 ರಲ್ಲಿ ಹಣ ಪಾವತಿ ಮಾಡುವ ವೈಶಿಷ್ಟ್ಯವನ್ನು ವಾಟ್ಸಾಪ್ ಪರಿಚಯಿಸಿತು. ಈ ವ್ಯವಸ್ಥೆಯ ಮುಂದುವರೆದ ಭಾಗವಾಗಿ ಈ ವಿದೇಶಿ ವಿನಿಯಮ ಫೀಚರ್ಸ್ ಅನ್ನು ಜಾರಿ ಗೊಳಿಸಲಿದೆ.

WhatsApp Group Join Now
Telegram Group Join Now

ನೂತನ ವ್ಯವಸ್ಥೆಯ ವಿಶೇಷತೆಗಳು:- ಈ ವೈಶಿಷ್ಟ್ಯವು ‘ಇಂಟರ್ನ್ಯಾಷನಲ್ ಪೇಮೆಂಟ್ಸ್’ ಎಂದು ಕರೆಯಲ್ಪಡುತ್ತದೆ ಮತ್ತು ಭಾರತೀಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಬಳಕೆದಾರರಿಗೆ ಅಂತರರಾಷ್ಟ್ರೀಯ ವ್ಯಾಪಾರಿಗಳಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸಿ, ಬ್ಯಾಂಕ್ ಅಂತರರಾಷ್ಟ್ರೀಯ UPI ಸೇವೆಗಳನ್ನು ಕೆಲವು ದೇಶಗಳಲ್ಲಿ ಮಾತ್ರ ಬಳಸಲು ಅನುಮತಿ ನೀಡುತ್ತದೆ.

ಇದರ ಪೂರ್ಣ ವಿವರಗಳು ಬಿಡುಗಡೆ ಆದ ಮೇಲೆ ಲಭ್ಯ ಇದೆ :- ಅಂತರರಾಷ್ಟ್ರೀಯ ಪಾವತಿ ವೈಶಿಷ್ಟ್ಯವು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಸೀಮಿತ ಸಂಖ್ಯೆಯ ಬೀಟಾ ಬಳಕೆದಾರರಿಗೆ ಲಭ್ಯವಿರುತ್ತದೆ. ಎಲ್ಲಾ ಬಳಕೆದಾರರಿಗೆ ಇದು ಇನ್ನೂ ಲಭ್ಯ ಇಲ್ಲ. ಹಾಗುನ್ ಬಿಡುಗಡೆಯ ದಿನಾಂಕ ಘೋಷಣೆ ಆದ ಮೇಲೆ ಈ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಸ್ಥೆಯು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈಗಾಗಲೇ UPI ಅಪ್ಲಿಕೇಶನ್ ಒಳನ್ನು ವಿವಿಧ ದೇಶಗಳಲ್ಲಿ ಬಳಸಲು ಅನುಮತಿ ಇದೆ:- ಕೇಂದ್ರ ಸರ್ಕಾರವು ಹಲವು ದೇಶಗಳ ನಡುವೆ ಒಪ್ಪಂದ ಮಾಡಿಕೊಂಡಿದ್ದು, ನಮ್ಮ ದೇಶದ ಫೋನ್ ಪೇ, ಗೂಗಲ್ ಪೇ ಅಪ್ಲಿಕೇಶನ್ ಗಳು ಬಳಸಿ ಭಾರತದ ನಾಗರೀಕರು ವಿದೇಶಗಳಲ್ಲಿ ಹಣ ಪಾವತಿ ಮಾಡಲು ಸಾಧ್ಯವಿದೆ. ಈಗ ಇದರ ಜೊತೆಗೆ ವಾಟ್ಸಾಪ್ ಅಪ್ಲಿಕೇಶನ್ ಮೂಲಕವೂ ವಿದೇಶಿ ವಿನಿಮಯ ಮಾಡಲು ಸಂಸ್ಥೆ ಮುಂದಾಗಿದೆ.

WhatsApp QR ಕೋಡ್ ಸ್ಕ್ಯಾನ್‌ ವ್ಯವಸ್ಥೆ ಜಾರಿಯಾಗಲಿದೆ:-

WhatsApp ಭಾರತದಲ್ಲಿ ಡಿಜಿಟಲ್ ಪಾವತಿಗಳಲ್ಲಿ ತನ್ನ ಪ್ರಾಬಲ್ಯವನ್ನು ಯೋಜಿಸುತ್ತಿದೆ. ಈ ಪಾವತಿ, ಪಾವತಿಗಳನ್ನು ತ್ವರಿತಗೊಳಿಸುವ ಹೊಸ ವೈಶಿಷ್ಟ್ಯವನ್ನು ಕಂಪನಿಯು ಪರೀಕ್ಷಿಸುತ್ತಿದೆ. WABetaInfo ವರದಿಯ ಪ್ರಕಾರ, WhatsApp QR ಕೋಡ್ ಸ್ಕ್ಯಾನ್‌ಗೆ ಶಾರ್ಟ್‌ಕಟ್ ಅನ್ನು ಒಳಗೊಂಡಿರುವ ಹೊಸ ಸ್ಥಾನವನ್ನು ಪರೀಕ್ಷಿಸಲಾಗುತ್ತಿದೆ. ಈ ಶಾರ್ಟ್‌ಕಟ್ ಚಾಟ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.

whatsapp UPI ಪೇಮೆಂಟ್ ನ ಲಾಭಗಳು :-

  • WhatsApp ನಲ್ಲಿಯೇ ಹಣ ಪಾವತಿ ಮಾಡುವ ವ್ಯವಸ್ಥೆ ಇರುವುದರಿಂದ ನಾವು ಬೇರೊಂದು ಅಪ್ಲಿಕೇಶನ್ ಬಳಸುವ ಅಗತ್ಯ ಇಲ್ಲ. ಇದರಿಂದ ನಮ್ಮ ಮೊಬೈಲ್ ಸ್ಟೋರೇಜ್ ಸಹ ಉಳಿಯುತ್ತದೆ. ಹಾಗೂ ನಮ್ಮ ಸ್ನೇಹಿತರಿಗೆ ಬೇಗ ಹಣ ಪಾವತಿ ಮಾಡಲು ಸಾಧ್ಯವಾಗುತ್ತದೆ.
  • ಡಿಜಿಟಲ್ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.
  • UPI ID ಹಾಗೂ ಅವರ ಬ್ಯಾಂಕ್ ಖಾತೆಯ ವಿವರ ಪಡೆದು ಹಣ ಪಾವತಿ ಮಾಡುವ ಜಂಜಾಟಗಳು ಇಲ್ಲ.
  • ಸುರಕ್ಷಿತವಾಗಿ ಹಣ ಪಾವತಿ ಮಾಡಲು ಸಾಧ್ಯವಿದೆ.

ಈಗಾಗಲೇ ಹಲವು ಹೊಸ ಹೊಸ ಅವಿಸ್ಕರಣಗಳನ್ನು WhatsApp ಪರಿಚಯಿಸುತ್ತಿದೆ. ಅದರ ಜೊತೆ ಜೊತೆಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು WhatsApp ಬಳಕೆದಾರರಿಗೆ ಇನ್ನಷ್ಟು ಹೆಚ್ಚಿನ ಉಪಯೋಗ ಆಗಲಿದೆ. ಮತ್ತು ಡಿಜಿಟಲ್ ಪಾವತಿಯಲ್ಲಿ ಹೊಸ ಹೆಜ್ಜೆ ಇಟ್ಟಂತೆ ಆಗುತ್ತದೆ. ಕ್ಯಾಶ್ ರಹಿತ ಪಾವತಿಯ ಬಳಕೆಯು ಭಾರತದಲ್ಲಿ ಇನ್ನಷ್ಟು ಪ್ರಚಲಿತದಲ್ಲಿ ಇರಲಿದೆ.

ಇದನ್ನೂ ಓದಿ: ಈ ಕಾರ್ಡ್ ಇದ್ರೆ ಸಾಕು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಿಲೆಂಡರ್ ಸಿಗಲಿದೆ. 

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9,000 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.