ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ 2015 ರಲ್ಲಿ ಆರಂಭಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಅನ್ನದಾತ ರೈತರಿಗಾಗಿ ಭಾರತದ ಅತಿದೊಡ್ಡ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಅಂತಲೇ ಹೇಳಬಹುದು. ಹೌದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತಿದೆ. ಕೇಂದ್ರ ಸರ್ಕಾರವಲ್ಲದೆ ರಾಜ್ಯ ಸರ್ಕಾರವೂ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ರೈತರಿಗೆ ವಾರ್ಷಿಕ ₹12000 ಆರ್ಥಿಕ ನೆರವು ನೀಡಲಾಗುತ್ತಿದೆ. ಇನ್ನು ಯೋಜನೆಯ ಅಡಿಯಲ್ಲಿ ಫಲಾನುಭವಿ ರೈತರ ಖಾತೆಗೆ ಪ್ರತಿ ವರ್ಷ 6,000 ರೂಪಾಯಿ ಜಮಾ ಮಾಡಲಾಗುವುದು. ಈ ಹಣವನ್ನು ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ 2000 ಗಳಂತೆ 4ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು.
ಈಗಾಗ್ಲೇ ಕಿಸಾನ್ ಯೋಜನೆಯ 15 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಅಂದ್ರೆ 30 ಸಾವಿರ ರೂಪಾಯಿ ಹಣವನ್ನ ಪ್ರತಿಯೊಬ್ಬ ರೈತನಿಗು ವರ್ಗಾವಣೆ ಮಾಡಲಾಗಿದೆ. ಇದೀಗ 16ನೇ ಕಂತಿನ ಹಣಕ್ಕಾಗಿ ಪ್ರತಿಯೊಬ್ಬ ಫಲನುಭವಿಯು ಎದುರು ನೋಡ್ತಿದ್ದು, ಹಣ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದಾರೆ. ಇದೀಗ ಅಂತ ಎಲ್ಲ ಫಲನುಭವಿಗಳಿಗೂ ಗುಡ್ ನ್ಯೂಸ್ ಬಂದಿದ್ದು ಹಣ ಬಿಡುಗಡೆಗೆ ದಿನಾಂಕ ನಿಗಧಿ ಮಾಡಲಾಗಿದ್ದು, ನಿಗಧಿಯ ದಿನಾಂಕಕ್ಕು ಮೊದಲೇ ಹಣ ರೈತರ ಖಾತೆ ಸೇರಲಿದ್ಯಂತೆ. ಹಾಗಾದ್ರೆ ಏನಿದು ಹೊಸ ಸುದ್ದಿ ಸಂಪೂರ್ಣ ಮಾಹಿತಿಯನ್ನ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ತಿಂಗಳು ಬರುತ್ತದೆ 16ನೇ ಕಂತಿನ ಹಣ
ಇನ್ನು ಪಿಎಂ ಕಿಸಾನ್ ಯೋಜನೆಯನ್ನು ವಿಶೇಷವಾಗಿ ಬಡ ರೈತರಿಗಾಗಿ ನೆರವು ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ, ರೈತರು ಕೃಷಿಯೊಂದಿಗೆ ತಮ್ಮ ಅಗತ್ಯ ವೆಚ್ಚಗಳನ್ನು ಪೂರೈಸಲು ಈ ಮೊತ್ತವನ್ನು ಬಳಸಬಹುದು. ಈ ಯೋಜನೆಯ ಪ್ರಯೋಜನವು ವ್ಯಕ್ತಿಯ ಬದಲಿಗೆ ಇಡೀ ರೈತ ಕುಟುಂಬಕ್ಕೆ ನೀಡಲಾಗುತ್ತದೆ. ಆದ್ರೆ ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಇನ್ನು ಈ ಯೋಜನೆಯಡಿ ಇದುವರೆಗೆ ಒಟ್ಟು 15 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಹೌದು 2023ರ ನವೆಂಬರ್ 16 ರಂದು ಜಾರ್ಖಂಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 15ನೇ ಕಂತನ್ನು ಬಿಡುಗಡೆ ಮಾಡಿದರು. ಈ ಯೋಜನೆಯಡಿ ಒಟ್ಟು 18,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತಿದೆ. ಇನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 15ನೇ ಕಂತಿನ ಹಣ ಪಡೆದ ನಂತರ ಜನರು ಯೋಜನೆಯ 16ನೇ ಕಂತಿಗಾಗಿ ಕಾಯುತ್ತಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ, ಈ ಯೋಜನೆಯ ಮುಂದಿನ ಕಂತು ಫೆಬ್ರವರಿ ಮತ್ತು ಮಾರ್ಚ್ ನಡುವೆ ಬಿಡುಗಡೆಯಾಗಲಿದೆ ಅಂತ ಹೇಳಲಾಗುತ್ತಿದೆ.
ಈಗಾಗಲೇ ತಿಳಿಸಿರುವ ಹಾಗೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ರೈತರಿಗಾಗಿ ಜಾರಿ ಮಾಡಿರುವ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಪ್ರತಿವರ್ಷ 6000 ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಅದನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ ಪ್ರತಿಕಂತಿಗೆ ಪ್ರತಿ ಕಂತಿಗೆ ಎರಡು ಸಾವಿರದಂತೆ ಹಣವನ್ನು ಜಮಾ ಮಾಡಲಾಗುತ್ತಿದ್ದು ಈಗಾಗಲೇ ಫಲಾನುಭವಿಗಳಿಗೆ 2023ನೇ ಸಾಲಿನವರಿಗೆ 15 ಕಂತುಗಳ ಹಣ ಸಿಕ್ಕಂತಾಗಿದೆ ಇದೀಗ 2024ನೇ ಸಾಲಿನ ಮೊದಲನೇ ಕಂತಿನ ಹಣ ಅಂದರೆ 16ನೇ ಕಂತಿನ ಹಣ ಬಿಡುಗಡೆಗೆ ಇದೀಗ ಕೇಂದ್ರ ಸರ್ಕಾರ ದಿನಾಂಕವನ್ನು ನಿಗದಿಪಡಿಸಿದೆ. ಪಿಎಮ್ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಕಳೆದ 2023 ನೇ ಸಾಲಿನ ನವೆಂಬರ್ ತಿಂಗಳಿನಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು.
ಇದೀಗ 24 ನೇ ಸಾಲಿನ ಮೊದಲ ಕಂತಿನ ಹಣ ಅಂದರೆ 16ನೇ ಕಂತಿನ ಹಣ ಬಿಡುಗಡೆ ಆಗಬೇಕಾಗಿದೆ ಹಾಗಾಗಿ ಕೇಂದ್ರ ಸರ್ಕಾರದಿಂದ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದ್ದು ಫೆಬ್ರವರಿ 2024ರ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲನೇ ವಾರದಲ್ಲಿ 16ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಲೋಕಸಭಾ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಗೂ ಮೊದಲೇ ಯೋಜನೆಯ ಲಾಭವನ್ನ ಫಲಾನುಭವಿಗಳಿಗೆ ತಲುಪಿಸುವ ಪ್ರಯತ್ನ ಮಾಡೋದಾಗಿ ಸರ್ಕಾರ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಯಾವ ದಿನ ಹಣ ಜಮೆ ಆಗುತ್ತೆ ಅನ್ನೋದು ತಿಳಿಯಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Google Pay ಮತ್ತು Paytm ನೊಂದಿಗೆ ಸ್ಪರ್ಧಿಸಲು ಬರುತ್ತಿದೆ TATA PAY, RBI ನಿಂದಲೂ ಪರವಾನಗಿ