ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಬಳಕೆ ಆಗಿರುವ ಸೈಟ್ ಹಾಗೂ ಡಾಕ್ಯುಮೆಂಟ್ ಗಳ ಬಗ್ಗೆ ತಿಳಿಯಬಹುದು; ಹೀಗೆ ಚೆಕ್ ಮಾಡಿ

Wherever your Aadhaar card is used

ಆಧಾರ್ ಕಾರ್ಡ್ ನಂಬರ್ ಸಿಕ್ಕಿದರೆ ಈಗ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆಧಾರ್ ಕಾರ್ಡ್ ಬಳಸಿ ನಮ್ಮ ಹಲವಾರು ಪರ್ಸನಲ್ ಡಾಕ್ಯುಮೆಂಟ್ ಗಳ ಲೀಕ್ ಮಾಡುತ್ತಾರೆ. ಬ್ಯಾಂಕ್ ಖಾತೆಯ ಹಣವನ್ನು ದೋಚುತ್ತಾರೆ. ನಾವು ಯಾವುದೇ ಸರ್ಟಿಫಿಕೇಟ್ ಪಡೆಯಲು ಅಥವಾ ಸರಕಾರಿ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಸಿಕೊಂಡಿರುತ್ತೇವೆ. ಆದರೆ ಅದನ್ನು ಬಳಸಿದ ನಂತರ ನಮಗೆ ಮರೆತು ಹೋಗುತ್ತದೆ. ಕ್ರೈಮ್ ಪ್ರಕರಣಗಳು ವರದಿ ಆದಾಗ ನಮ್ಮ ಆಧಾರ್ ಕಾರ್ಡ್ ಸಹ ದುರ್ಬಳಕೆ ಆಗಿರಬಹುದು ಎಂಬ ಭಯ ಉಂಟಾಗುವುದು ಸಹಜ. ಆದರೆ ಇನ್ನೂ ಮುಂದೆ ಭಯ ಪಡುವ ಅಗತ್ಯ ಇಲ್ಲ. ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಇಂದ ನೀವು ಕಳೆದ ಆರು ತಿಂಗಳಲ್ಲಿ ಎಲ್ಲೆಲ್ಲಿ ಆಧಾರ್ ಕಾರ್ಡ್ ಬಳಸಿದ್ದಿರಿ ಎಂಬ ಮಾಹಿತಿಯನ್ನು ಪಡೆಯಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ಎಂಬುದನ್ನು ತಿಳಿಯುವುದು ಹೇಗೆ?

  • ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮಗೆ ಭಾಷೆಗಳ ಆಯ್ಕೆ ಸಿಗುತ್ತವೆ. ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ.
  • ಆಧಾರ್ ಸೇವೆಗಳು ಎಂಬ ಆಪ್ಷನ್ ಆಯ್ಕೆ ಮಾಡಿ. ನಂತರ ಅಥೆಂಟಿಕೇಷನ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಲಾಗ್ ಇನ್ ಆಗಬೇಕು.
  • ಲಾಗ್ ಇನ್ ಆಗಲು ನಿಮ್ಮ ಆಧಾರ್ ಸಂಖ್ಯೆ ಹಾಗೂ ಅಲ್ಲಿ ಕಾಣುವ ಟೆಕ್ಸ್ಟ್ ಅನ್ನು ಹೇಗೆ ಇದೆಯೋ ಹಾಗೆಯೇ ಹಾಕಿ ಹಾಗೂ ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಗೆ ಬರುವ OTP ನಮೂದಿಸಿ. ಲಾಗ್ ಇನ್ ಮೇಲೆ ಕ್ಲಿಕ್ ಮಾಡಿ
  • 4. ಅಥೆಂಟಿಕೇಷನ್ ಹಿಸ್ಟರಿ option ಕ್ಲಿಕ್ ಮಾಡಿ. ನಂತರ ನಿಮಗೆ ಒಂದು ಪೇಜ್ open ಆಗುತ್ತದೆ ಅಲ್ಲಿ select modality ಕ್ಲಿಕ್ ಮಾಡಿದರೆ ಹಲವಾರು ಆಪ್ಷನ್ ಗಳು ಸಿಗುತ್ತವೆ. ನೀವು otp ಹಾಕಿ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದರೆ ಅಥವಾ ನಿಮ್ಮ ಮುಖ ಸ್ಕ್ಯಾನ್ ಮಾಡಿ ಆಧಾರ್ ಬಳಕೆ ಆಗಿದ್ದರೆ ಅಥವಾ ಬಯೋಮೆಟ್ರಿಕ್ ಬಳಸಿದ್ದರೆ ನೀವು ಪ್ರತ್ಯೇಕವಾಗಿ 6 ತಿಂಗಳ ವರೆಗೆ ಎಲ್ಲೆಲ್ಲಿ ಆಧಾರ್ ಬಳಕೆ ಆಗಿದೆ ಎಂಬುದು ಒಂದೇ ಸ್ಕ್ರೀನ್ ನಲ್ಲಿ ಕಾಣುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸೂರ್ಯೋದಯ ಯೋಜನೆಯ ಅಡಿಯಲ್ಲಿ 300 ಯೂನಿಟ್‌ ಉಚಿತ ವಿದ್ಯುತ್‌ ಪಡೆಯಲಿರುವ ಒಂದು ಕೋಟಿ ಕುಟುಂಬಗಳು, ಕೇಂದ್ರ ಬಜೆಟ್ ಮಂಡನೆ

ನಿಮ್ಮ ಆಧಾರ್ ಕಾರ್ಡ್ ಸುರಕ್ಷಿತವಾಗಿ ಇಡುವ ವಿಧಾನಗಳು ಯಾವುವು?

  • ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ಹೋಗಿ ನಿಮಗೆ ಆಧಾರ್ ಕಾರ್ಡ್ ಬಳಸಿದ ವಿವರಗಳು ಸಿಕ್ಕಿದರೂ ನಿಮಗೆ ಎಂದರು ಅನುಮಾನ ಬಂದಲ್ಲಿ ನೀವು ಟೂಲ್ ಫ್ರೀ ನಂಬರ್ 1947 ಗೆ ಕಾಲ್ ಮಾಡಿ ಕಂಪ್ಲೇಂಟ್ ನೀಡಿದರೆ ನಿಮ್ಮ ಆಧಾರ್ ಲಾಕ್ ಆಗುತ್ತದೆ. ಅಥವಾ [email protected] ಮೇಲ್ ಅಡ್ರೆಸ್ ಗೆ ಮೇಲ್ ಕಳುಹಿಸಬಹುದು.
  • ಆಧಾರ್ ಕಾರ್ಡ್ ಡೇಟಾವನ್ನು ಸುರಕ್ಷಿತವಾಗಿ ಇರಿಸಲು ವರ್ಚುವಲ್ ಐಡಿ (VID) ಬಳಸಬಹುದು.
  • ಬಯೋಮೆಟ್ರಿಕ್ ಲಾಕ್ ಮಾಡುವುದರಿಂದ ನಿಮ್ಮ ಆಧಾರ್ ಕಾರ್ಡ್ ಡೇಟಾ ದುರ್ಬಳಕೆ ಆಗುವುದಿಲ್ಲ. ನೀವು ಬಯೋಮೆಟ್ರಿಕ್ ಬಳಕೆ ಮಾಡಬೇಕು ಎಂದರೆ ನೀವು ಬಯೋಮೆಟ್ರಿಕ್ ಅನ್ಲಾಕ್ ಮಾಡಬೇಕು.
  • My Aadhaar ಎಂಬ ಅಫೀಷಿಯಲ್(Official) ಅಪ್ಲಿಕೇಶನ್ ಬಳಸಿ ನಿಮ್ಮ ಆಧಾರ್ ಎಲ್ಲಿ ಉಪಯೋಗಿಸಿದರೆ ತಕ್ಷಣ ಮಾಹಿತಿ ನೋಡಬಹುದು.

ಇದನ್ನೂ ಓದಿ: ಗೃಹಲಕ್ಷ್ಮಿ 6ನೇ ಕಂತಿನ ಕುರಿತು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್!