ಹಿಂದೂಗಳ ಸಂಭ್ರಮ ಮುಗಿಲು ಮುಟ್ಟಿದೆ. ಹಿಂದೂಗಳ ಧಾರ್ಮಿಕ ಗ್ರಂಥ ರಾಮಾಯಣದ ಪ್ರತಿ ಪಾತ್ರವೂ ಒಂದೊಂದು ಕಥೆ ಹೇಳುತ್ತದೆ. ಜಗತ್ತಿದೆ ಸತ್ಯ ಮತ್ತು ಧರ್ಮದ ಸಾರವನ್ನು ಸಾರಿದ ಗ್ರಂಥ ಎಂದರೆ ರಾಮಾಯಣ . ಐದೂ ನೂರು ವರುಷಗಳ ಸಾವಿರಾರು ಸಂತರ ಲಕ್ಷಾಂತರ ಮಂದಿಯ ಹೋರಾಟಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಜಯ ಸಿಕ್ಕಿತು . ಆನಂತರದಲ್ಲಿ ರಾಮ ಮಂದಿರದ ಗುದ್ದಲಿ ಪೂಜೆ ಹಾಗೂ ಮಂದಿರ ಕಟ್ಟುವ ಕೆಲಸ ಆರಂಭವಾಯಿತು . ಸಾವಿರಾರು ಕಾರ್ಮಿಕರು ಹಗಲು ರಾತ್ರಿ ಎನ್ನದೆ ರಾಮ ಮಂದಿರದ ಕೆಲಸ ಪವಿತ್ರ ಕೆಲಸ ಎಂದು ತಿಳಿದು ದುಡಿಯುತ್ತಾ ಇದ್ದಾರೆ.
ಈಗಾಗಲೇ ರಾಮ ಮಂದಿರದ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಜನವರಿ 22 ಕ್ಕೆ ಎಂದು ನಿಗದಿ ಆಗಿದೆ. ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ನೆರವೇರಿಸುತ್ತಾರೆ. ದೇಶದ. ಎಲ್ಲಾ ಧರ್ಮದ ಗುರುಗಳು , ಸಂತರು , ಪ್ರತಿಷ್ಟಿತ ವ್ಯಕ್ತಿಗಳಿಗೆ ಆಹ್ವಾನ ತಲುಪಿದೆ. ಹಾಗೆಯೇ ಪ್ರತಿ ಹಿಂದೂವಿನ ಮನೆಗೂ ಆಹ್ವಾನ ಪತ್ರಿಕೆ ಹಾಗೂ ಮಂತ್ರಾಕ್ಷತೆಯನ್ನು ತಲುಪಿಸಲಾಗುತ್ತದೆ. ನಮ್ಮ ದೇಶವನ್ನು ಹೊರತು ಪಡಿಸಿ ಹೊರದೇಶಕ್ಕೆ ಸಹಾ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ. ಅದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನ್ನದಾತರಿಗೆ ಶುಭ ಸುದ್ದಿ , ರೈತರಿಗೆ ಮೋದಿ ಸರಕಾರ ನೀಡುತ್ತಿದ್ದೆ ಹೊಸದೊಂದು ಯೋಜನೆ !
ಯಾವ ಯಾವ ದೇಶಕ್ಕೆ ಆಹ್ವಾನ ಹೋಗಿದೆ ?
ವಿಶ್ವದ ಮೂಲೆ ಮೂಲೆಯಲ್ಲಿ ಇರುವ ಹಿಂದೂಗಳಿಗೆ ಆಹ್ವಾನ ನೀಡಬೇಕು ಎಂದು ಹಿಂದೂ ಸಂಘಟನೆಗಳು ಪ್ರಯತ್ನ ಮಾಡುತ್ತಾ ಇವೆ . ಅದರಂತೆಯೇ ಸರಕಾರವು ಹಲವು ದೇಶದ ಪ್ರಧಾನಿಗಳಿಗೆ ಮತ್ತು ಅಲ್ಲಿನ ಪ್ರತಿಷ್ಠಿತ ವ್ಯಕ್ತಿಗಳಿಗೆ ಆಹ್ವಾನ ನೀಡಿದೆ. ದೇಶಗಳ ಹೆಸರು ಇಂತಿವೆ :- ಅಮೆರಿಕ, ಅರ್ಜೆಂಟೀನಾ, ಕೆನಡಾ, ಜರ್ಮನಿ , ಬೆಲಾರಸ್, ಬ್ರಿಟನ್, ಬೊಟ್ಸ್‌ವಾನ, ಕೊಲಂಬಿಯಾ, ಸಿಂಗಾಪುರ, ಫಿನ್ಲೆಂಡ್, ದಕ್ಷಿಣ ಕೊರಿಯಾ , ಈಜಿಪ್ಟ್ , ಇಟಲಿ, ಜಪಾನ್, ಕೀನ್ಯಾ, ಮಲೇಷ್ಯಾ, , ನೈಜೀರಿಯಾ, ನಾರ್ವೆ, ನ್ಯೂಜಿಲೆಂಡ್, ಹೀಗೆ 55 ದೇಶಗಳ 100ಕ್ಕಿಂತ ಹೆಚ್ಚು ವಿಐಪಿ (vip) ಗಳಿಗೆ ಆಹ್ವಾನ ಕಳುಹಿಸಲಾಗಿದೆ.
ಇನ್ನಷ್ಟು ಜನ ಹೊರದೇಶದ ಗಣ್ಯರಿಗೆ ಆಹ್ವಾನ ನೀಡುವ ಬಗ್ಗೆ ಚರ್ಚೆ ಆಯಿತು .. ಆದರೆ ಸ್ಥಳಾವಕಾಶ ಕಡಿಮೆ ಇದ್ದರಿಂದ ಕೆವಲ ನೂರು ಜನ ವಿಐಪಿ ಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂಬುದಾಗಿ ವಿಶ್ವ ಹಿಂದೂ ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸ್ವಾಮಿ ವಿಜ್ಞಾನಾನಂದ ಅವರು ತಿಳಿಸಿದ್ದಾರೆ.
ಅಯೋಧ್ಯೆಗೆ ಬರುವ ಗಣ್ಯರಿಗೆ ಮಾಡಿರುವ ವ್ಯವಸ್ಥೆಗಳು ಏನು ?:- ಭಾರತದಲ್ಲಿ ಈಗ ವಿಪರೀತ ಚಳಿ ಇರುವ ಕಾರಣದಿಂದ ಗಣ್ಯರಿಗೆ ಎರಡು ದಿನ ಮುಂಚಿತವಾಗಿ ಭಾರತಕ್ಕೆ ಬರಲು ತಿಳಿಸಿದ್ದಾರೆ. ಹಾಗೆಯೇ ಅವರಿಗೆ ಉಳಿಯಲು ಫೈವ್ ಸ್ಟಾರ್ ಹೋಟೆಲ್ ( five start hotel ) ಹಾಗೂ ಸೆವೆನ್ ಸ್ಟಾರ್ಟ್ ಹೋಟೆಲ್ ಸೆವೆನ್ ಸ್ಟಾರ್ ಹೋಟೆಲ್ ( seven star hotel ) ಗಳಲ್ಲಿ ಉಳಿಯುವ ವ್ಯವಸ್ಥೆ ಮತ್ತು ಹೋಟೆಲ್ ಇಂದ ರಾಮ ಮಂದಿರಕ್ಕೆ ಬರಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೂ ಸೆಕ್ಯೂರಿಟಿ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿಗೆ ಭರ್ಜರಿ ಉಡುಗೊರೆ !! ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತಿನ ಹಣ ಇಂದೆ ಸಿಗಬಹುದು !!