ಆರ್‌ಡಿ ಅಥವಾ ಮರುಕಳಿಸುವ ಠೇವಣಿ ಭಾರತದಲ್ಲಿನ ಬ್ಯಾಂಕುಗಳು ಮತ್ತು ಅಂಚೆ ಕಛೇರಿಗಳು ನೀಡುವ ಒಂದು ರೀತಿಯ ಠೇವಣಿ ಯೋಜನೆಯಾಗಿದ್ದು, ಕನಿಷ್ಠ 7 ದಿನಗಳಿಂದ ಹತ್ತು ವರುಷಗಳ ಅವಧಿಗೆ ಠೇವಣಿ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು ನಿಗದಿತ ಬಡ್ಡಿ ದರ ಸಿಗುತ್ತದೆ. ಹಾಗಾದರೆ ಯಾವ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಯೋಜನೆಗೆ ಹೂಡಿಕೆ ಮಾಡುವುದು ಉತ್ತಮ ಎಂದು ತಿಳಿಯೋಣ.
ಪೋಸ್ಟ್ ಆಫೀಸ್ ನಲ್ಲಿ ಸಿಗುವ ಬಡ್ಡಿದರದ ಮಾಹಿತಿ:- ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ₹100 ರಿಂದ ಕನಿಷ್ಠ ಹೂಡಿಕೆಯನ್ನು ಪ್ರಾರಂಭಿಸಬಹುದು. 2023 ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ, 5 ವರ್ಷಗಳ RD ಯ ಬಡ್ಡಿ ದರವನ್ನು ಸರ್ಕಾರವು 6.8% ಗೆ ಇಳಿಸಿದೆ.
SBI RD ಯೋಜನೆಯಲ್ಲಿ ಸಿಗುವ ಬಡ್ಡಿದರದ ಮಾಹಿತಿ:- SBI RD ಯೋಜನೆಗೆ ಹೂಡಿಕೆ ಮಾಡಲು ಕನಿಷ್ಠ ಠೇವಣಿ ಅವಧಿ 12 ತಿಂಗಳು ಹಾಗೂ ಗರಿಷ್ಠ ಠೇವಣಿ ಅವಧಿ 10 ವರ್ಷಗಳು.
ಬಡ್ಡಿ ದರಗಳ ವಿವರ ಹೀಗಿದೆ:-
- 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ: 6.80%
- 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ : 7.00%
- 3 ವರ್ಷದಿಂದ 4 ವರ್ಷಕ್ಕಿಂತ ಕಡಿಮೆ ಅವಧಿಗೆ: 6.50%
- 5 ವರ್ಷದಿಂದ 10 ವರ್ಷಗಳವರೆಗೆ ಅವಧಿಗೆ: 6.50%
ICICI ಬ್ಯಾಂಕ್ RD ಯೋಜನೆಯಲ್ಲಿ ಸಿಗುವ ಬಡ್ಡಿದರದ ಮಾಹಿತಿ:- ICICI ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರಿಗೆ 4.75% ರಿಂದ 7.10% ಬಡ್ಡಿದರ ಸಿಗುತ್ತದೆ. ಹಾಗೂ ಹಿರಿಯ ನಾಗರಿಕರಿಗೆ 5.25% ರಿಂದ 7.50% ಬಡ್ಡಿದರ ಸಿಗುತ್ತದೆ. ಈ ಎಲ್ಲಾ ದರಗಳು 24 ಫೆಬ್ರವರಿ 2023 ಅನ್ವಯವಾಗುತ್ತದೆ.
HDFC ಬ್ಯಾಂಕ್ RD ಯೋಜನೆಯಲ್ಲಿ ಸಿಗುವ ಬಡ್ಡಿದರದ ಮಾಹಿತಿ:- HDFC ಬ್ಯಾಂಕ್ ನಲ್ಲಿ ಠೇವಣಿಯ ಅವಧಿಯ ಮೇಲೆ ವಿಭಿನ್ನವಾದ ಬಡ್ಡಿದರಗಳು ಇವೆ:- ಬಡ್ಡಿ ದರಗಳು:
- 6 ತಿಂಗಳ ಠೇವಣಿಗೆ : 4.50%.
- 9 ತಿಂಗಳ ಠೇವಣಿಗೆ: 5.75%
- 12 ತಿಂಗಳ ಠೇವಣಿಗೆ: 6.60%
- 15 ತಿಂಗಳ ಠೇವಣಿಗೆ: 7.10%
- 24 ತಿಂಗಳು ಅಥವಾ 27 ತಿಂಗಳು ಅಥವಾ 36 ತಿಂಗಳು ಅಥವಾ 39 ತಿಂಗಳು ಅಥವಾ 48 ತಿಂಗಳು ಅಥವಾ 60 ತಿಂಗಳು ಅಥವಾ 90 ತಿಂಗಳು ಮತ್ತು 120 ತಿಂಗಳ ಅಬ್ಧಿಗೆ ಠೇವಣಿ ಮಾಡಿದರೆ: 7.00%
YES ಬ್ಯಾಂಕ್ ನಲ್ಲಿ RD ಯೋಜನೆಯಲ್ಲಿ ಸಿಗುವ ಬಡ್ಡಿದರದ ಮಾಹಿತಿ:- 6 ತಿಂಗಳಿಂದ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ 6.10% ರಿಂದ 7.75% ಬಡ್ಡಿದರ ಸಿಗುತ್ತದೆ.ಕನಿಷ್ಠ 3 ತಿಂಗಳ ಅವಧಿಗೆ ಠೇವಣಿ ಮಾಡಬಹುದು. ಹಾಗೂ ಗರಿಷ್ಠ ಠೇವಣಿಯ ಅವಧಿ ಹತ್ತು ವರ್ಷಗಳು.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
RD ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಹಲವಾರು ಉಪಯೋಗಗಳಿವೆ:
- RD ಯೋಜನೆಗಳು ಖಾತರಿಯಾದ ಆದಾಯವನ್ನು ಒದಗಿಸುತ್ತವೆ. ಠೇವಣಿ ಮೇಲಿನ ನಿಗದಿತ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ, ಇದು ನಿಮ್ಮ ಹಣಕ್ಕೆ ಉತ್ತಮ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ.
- RD ಯೋಜನೆಗಳು ಭಾರತೀಯ ಠೇವಣಿ ವಿಮಾ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಯಿಂದ ವಿಮೆ ಮಾಡಲ್ಪಟ್ಟಿವೆ. ಇದರರ್ಥ, ಬ್ಯಾಂಕ್ ದಿವಾಳಿಯಾದರೂ, ನಿಮ್ಮ ಠೇವಣಿ ₹5 ಲಕ್ಷಗಳವರೆಗೆ ಭದ್ರವಾಗಿರಬಹುದು.
- ನೀವು ಮನೆ ಖರೀದಿಸಲು, ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ಉಪಯೋಗ ಆಗಬಹುದು.
ಇದನ್ನೂ ಓದಿ: ವಿಶೇಷವಾಗಿ ಕಾರು ಪ್ರಿಯರಿಗೆ, ನಿಮ್ಮ ಕಾರಿನಲ್ಲಿ ತಪ್ಪಾಗಿ ಜೋಡಿಸಲಾದ ಚಕ್ರಗಳಿಂದ ಉಂಟಾಗುವ ಡೇಂಜರಸ್ ಸಮಸ್ಯೆಗಳು ಏನು ಗೊತ್ತಾ?
ಇದನ್ನೂ ಓದಿ: ಒಮ್ಮೆ ಚಾರ್ಜ್ ಮಾಡಿದ್ದಾರೆ ಬರೋಬ್ಬರಿ 650 KM ಮೈಲೇಜ್ ನೀಡುವ ಚೀನಾದ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ..