Who is Mallikarjuna Mutya: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

Mallikarjuna Mutya: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಗಿದೆ ಅಂದ್ರೆ.. ಒಂದು ರಾತ್ರಿ ಕಳೆದು ಹಗಲು ಬರೋ ಅಷ್ಟ್ರಲ್ಲಿ ಎಷ್ಟು ಬದಲಾವಣೆ ಆಗ್ಬಿಡುತ್ತೆ ಅಂದ್ರೆ,ಇದ್ರಿಂದಾನೆ ಸೋಷಿಯಲ್ ಮೀಡಿಯಾ. ಸ್ಟಾರ್ ಗಳು ಹೆಚ್ಚಾಗುತ್ತಿದ್ದಾರೆ. ಕಣ್ಣು ಮುಚ್ಚಿ ಬಿಡೊದ್ರೊಳಗೆ ಫೇಮಸ್ ಆಗಿ ಮಿಲಿಯನ್ಗಟ್ಟಲೆ ಫಾಲ್ಲೋರ್ಸ ಗಳ್ಳನ್ನ ಸಂಪಾದನೆ ಮಾಡಿರ್ತಾರೆ.. ಇದೀಗ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಮಲ್ಲಿಕಾರ್ಜುನ ಮುತ್ಯಾ ಯಾರು? ಇಷ್ಟು ಚಿಕ್ಕ ವಯಸ್ಸಿಗೆ ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳೋಣ ಬನ್ನಿ.

WhatsApp Group Join Now
Telegram Group Join Now

ಹೌದು ಜೊತೆಗಿದ್ದೋರಿಗೆ ಶಾಕ್ ಆಗ್ಬೇಕು ಹೇಗಿದ್ದೋರು ಹೇಗೆ ಬದಲಾಗಿಬಿಟ್ರಪ್ಪ!ಇದೆಲ್ಲಾ ಸಾಧ್ಯನಾ ಅಂತ ಬಾಯಿ ಮೇಲೆ ಬೆರಳಿಟ್ಟು ಕೂರೋಥರ ಬೆಳೆದು ನಿಂತು ಬಿಡುತ್ತಾರೆ.. ಅದ್ರಲ್ಲೂ ನಮ್ಮ ಜನರು ತಮಗೆ ಒಳ್ಳೆದು ಮಾಡೋರೋ, ಅಥವಾ ಭವಿಷ್ಯ ನುಡಿಯುವ ಸ್ವಾಮೀಜಿಗಳೋ, ಅಥವಾ ಪವಾಡ ಪುರುಷರೋ ಇಂತವ್ರು ಮಾಡೋ ಒಂದು ಕೆಲಸ ಸಕ್ಸಸ್ ಆದ್ರೂ ಸಾಕು ಅವ್ರನ್ನ ತಲೆ ಮೇಲೆ ಹೊತ್ತು ನಡೀತಾರೆ.

ಕೇವಲ 20-25 ವರ್ಷದ ಒಬ್ಬ ಯುವಕನಿಗೆ ಸಿಕ್ಕಿರೋ ಪಾಪ್ಯುಲರಿಟಿ, ಆತನಿಗೆ ಇರೋ ಜನ ಬೆಂಬಲ,ಆತನ ಮನರಿಸಮ್,ಜನರು ಈತನಿಗೆ ತೋರಿಸೋ ಭಕ್ತಿ, ಗೌರವ,ಇದೆಲ್ಲಾ ವನ್ನ ನೋಡ್ತಿದ್ರೆ ವಾರೆ ವ್ಹಾ ಅನ್ನಿಸದೆ ಇರದು. ಮೂರ್ನಾಲ್ಕು ದಿನದಿಂದ ಯಾವುದೇ ಸೋಷಿಯಲ್ ಮೀಡಿಯಾ ನೋಡಿದ್ರು ಇವರದ್ದೇ ಸುದ್ದಿ ಇವರದ್ದೇ ಸದ್ದು ಹಾಗಾದ್ರೆ ಯಾರಿವನು ಅಂತ ನೋಡೋದಾದ್ರೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಯಾರಿವರು ಮಲ್ಲಿಕಾರ್ಜುನ ಮುತ್ಯ?

ಮೂಲತಹ ಯಾದಗಿರಿ ಜಿಲ್ಲೆಯ ಶಹಾಪುರದ ಮೊಹಲ್ಲಾ ರೋಜಾ ಅನ್ನೋ ಒಂದು ಚಿಕ್ಕ ಊರಿಂದ ಬಂದ ಮಲ್ಲಿಕಾರ್ಜುನ ಉತ್ತರ ಕನ್ನಡದ ಜನರಿಗೆ ಮಲ್ಲಿಕಾರ್ಜುನ ಮುತ್ಯಾ ಆಗಿದ್ದೆ ವಿಶೇಷ. ಯಾಕಂದ್ರೆ ಪವಾಡ ಮಾಡುವವರನ್ನ, ನಡೆದಾಡುವ ದೇವರು ಅಂತ ಜನ ಯಾರನ್ನ ನಂಬಿರುತ್ತಾರೋ ಅಂಥವರಿಗೆ ಪ್ರೀತಿ ಮತ್ತು ಗೌರವದಿಂದ ಮುತ್ಯಾ ಅಂತ ಕರೀತಾರೆ ಅದು ಕೇವಲ 20-25ರ ಅಸುಪಾಸಿನ ಯುವಕನಿಗೆ ಆ ಗೌರವ ಸಿಕ್ತಿದೆ ನಿಜಕ್ಕೂ ಅದು ಸುಲಭವಲ್ಲ.

ಅದಕ್ಕೆ ಕಾರಣ ಹುಡಕ್ತಾ ಹೋದರೆ ಮುನ್ನಲೆಗೆ ಬರೋದೇ ಮಲ್ಲಿಕಾರ್ಜುನ ಮುತ್ಯಾ ಅವ್ರ ತಂದೆ ಹನುಮಂತರಾಯ ಮುತ್ಯಾ ಅವ್ರು.. ಹೌದು ಹನುಮಂತರಾಯ ಮುತ್ಯಾ ಅವ್ರು ಭವಿಷ್ಯವಾಣಿ ನುಡಿಯೋದರ ಜೊತೆಗೆ ಕಷ್ಟ ಅಂತ ಬರುವ ಜನರ ನೋವಿಗೆ ಸ್ಪಂದಿಸಿ ಸಾಂತ್ವನ ಹೇಳಿ ಸಾಕಷ್ಟು ಪ್ರಖ್ಯಾತಿಯನ್ನ ಹೊಂದಿರುತ್ತಾರೆ ಆದ್ರೆ ಆಗ ಸೋಷಿಯಲ್ ಮೀಡಿಯಾ ಇಷ್ಟರಮಟ್ಟಿಗೆ ಬೆಳೆದಿರೋದಿಲ್ಲ ಆಗಾಗಿ ಇದೆಲ್ಲವೂ ತೆರೆಮಾರೆಯಲ್ಲೇ ಉಳಿದು ಹೋಗಿರುತ್ತೆ ಆದ್ರೆ ಹನುಮಂತರಾಯ ಮುತ್ಯಾರ ಮರಣದ ನಂತರ ಅವ್ರ 2ನೇ ಮಗನಾದ ಮಲ್ಲಿಕಾರ್ಜುನ ಮುತ್ಯಾ ಅಪ್ಪನ ಹಾದಿಯಲ್ಲಿ ಸಾಗಿ ಭವಿಷ್ಯಗಳನ್ನನ ನುಡಿಯುತ್ತಾ ಕಷ್ಟ ಅಂತ ಬಂದವರಿಗೆ ಸ್ಪಂದಿಸಿ ಈಗ ಅಪ್ಪಂನಂತೆ ಬೆಳೆದುನಿಂತಿದಾರೆ.

ಇದನ್ನು ಓದಿ: ಮೇ 5ಕ್ಕೆ ದ್ವಿತೀಯ ಪಿ.ಯು.ಸಿ ಫಲಿತಾಂಶ ಬರುತ್ತಾ!? ರಿಸೆಲ್ಟ್ ಚೆಕ್ ಮಾಡೋದು ಹೇಗೆ?

ಪುಟ್ಟ ಗ್ರಾಮವಾಗಿದ್ದ ಮೊಹಲ್ಲಾ ರೋಜಾ ಹಳ್ಳಿ ಇದೀಗ ಇಡೀ ಜಗತ್ತಿಗೆ ಗೊತ್ತಾಗಿದೆ… ಕಾರಣ ಇಷ್ಟೇ ಮಲ್ಲಿಕಾರ್ಜುನ ಮುತ್ಯಾರ ಭವಿಷ್ಯ ವಾಣಿ, ಭಕ್ತಿರಿಗೆ ಸಿಕ್ತಿರುವ ಅವರ ಸಹಾಯ, ಸಹಕಾರ, ಸಾಂತ್ವನ. ಜೊತೆಗೆ ದೊಡ್ಡ ದೊಡ್ಡ ರಾಜಕಾರಣಿಗಳು ಕೂಡ ಮುತ್ಯಾರ ಮಠ ಕ್ಕೆ ಬಂದು ಹೋಗ್ತಿರೋದು ವಿಚಿತ್ರ ಅನ್ನಿಸಿದ್ರೂ ನಂಬಲೇಬೇಕಾದ ಸತ್ಯ.. ಈ ಮಠ ದ ಮತ್ತೊಂದು ವಿಶೇಷ ಅಂದ್ರೆ ಹಗಲು ರಾತ್ರಿ ಅನ್ನದೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದ್ದರಂತೆ ಇದು ಕೂಡ ಮಲ್ಲಿಕಾರ್ಜುನ ಮುತ್ಯಾ ಇಷ್ಟು ಬೆಳೆಯಲು ಒಂದು ಕಾರಣವಾಗಿರಬಹುದು.

ಒಟ್ಟಿನಲ್ಲಿ ಜನ ಮರುಳೋ ಜಾತ್ರೆ ಮರುಳೋ ಗೊತ್ತಿಲ್ಲ ಸಿಕ್ಕ ಅವಕಾಶ ಬಳಿಸಿಕೊಂಡ್ರೆ ಸಾಧನೆಗೆ ಏಣಿ ಯಿದ್ದಂತೆ ಅನ್ನೋದಕ್ಕೆ ಮಲ್ಲಿಕಾರ್ಜುನ ಮುತ್ಯಾ ಅವ್ರೆ ಸಾಕ್ಷಿ… ಅವ್ರ ಕೆಲವೊಂದು ವರ್ತನೆಗಳು ವಿಚಿತ್ರ ಅನ್ನಿಸಿದ್ರೂ ಜನ ಅವ್ರನ್ನ ಈ ಮಟ್ಟಕ್ಕೆ ಬೆಳೆಸಿದ್ದಾರೆ ಅಂದ್ರೆ ಅದನ್ನ ನಂಬೋದು ಬಿಡೋದು ಅವರವರ ಭಕ್ತಿ ಭಾವ ನಂಬಿಕೆಗಳಿಗೆ ಬಿಟ್ಟಿದ್ದಲ್ವಾ?.

ಇದನ್ನು ಓದಿ: ಗಂಡನ ಹೊಸ ಲುಕ್ ನೋಡಿ ಗಟ್ಟಿಮೇಳ ಪ್ರಿಯಾ ರಿಯಾಕ್ಷನ್ ಹೇಗಿತ್ತು ಗೊತ್ತಾ?