ಮಲಯಾಳಂ ನಿರ್ದೇಶಕಿಗೆ ಕಾಲ್ ಶೀಟ್ ಕೊಟ್ಟ ಯಶ್; ಯಾರು ಈ ಗೀತು ಮೋಹನ್ ದಾಸ್? ಇವ್ರ ಹಿನ್ನೆಲೆ ಏನು?

ಕನ್ನಡ ಚಿತ್ರರಂಗದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದು ಸ್ವಂತ ಪರಿಶ್ರಮದಿಂದ ಬೆಳೆದ ರಾಕಿಂಗ್ ಸ್ಟಾರ್ ಯಶ್ ಸಾಧನೆಗಳ ಸರ್ದಾರ, ವಿಜಯಗಳ ಸುಲ್ತಾನ. ಹೀಗಾಗಿ ರಾಕಿಂಗ್ ಸ್ಟಾರ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಏನೋ ಒಂಥರಾ ಕ್ರೇಜ್. ಹೀಗಾಗಿ ರಾಕಿಂಗ್ ಅಭಿಮಾನಿಗಳು ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಸದ್ಯ ಅನೌನ್ಸ್ ಆಗಿದ್ದು, ಕೆಜಿಎಫ್ 2 ರಿಲೀಸ್ ಆಗಿ ವರ್ಷವಾದರೂ ಯಶ್ ಮುಂದಿನ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ ಅಂತ ಕಾತರದಿಂದ ಕಾಯುತ್ತಿದ್ದ ರಾಕಿಭಾಯ್ ಹೊಸ ಸಿನಿಮಾ ಘೋಷಣೆ ಮಾಡಿ ಫುಲ್ ಥ್ರಿಲ್ ಕೊಟ್ಟಿದ್ದಾರೆ. ಈ ಮೊದಲು ಫ್ಯಾನ್ಸ್ ಅವ್ರನ್ನ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುಂದಿನ ಸಿನಿಮಾ ಯಾವಾಗ ಯಾವಾಗ ಅಂತ ಕೇಳುತ್ತಿದ್ದರು, ಅಲ್ದೇ ಪತ್ನಿ ರಾಧಿಕಾ ಅವರನ್ನು ಅಭಿಮಾನಿಗಳು ಕಾಡಿಸುತ್ತಿದ್ದರು ಆದ್ರೂ ಎಲ್ಲಿಯೂ ಕೂಡ ಮುಂದಿನ ಸಿನಿಮಾ ಬಗ್ಗೆ ಸಣ್ಣ ಸುಳಿವನ್ನು ಕೊಟ್ಟಿರಲಿಲ್ಲ.

WhatsApp Group Join Now
Telegram Group Join Now

ಯಶ್ ಮುಂದಿನ ಸಿನಿಮಾ ಯಾವಾದು ಎಂದು ಬಹಿರಂಗವಾಗಿಲ್ಲ. ಇದೀಗ ಯಶ್ ಮುಂದಿನ ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ವೈರಲ್ ಆಗಿದೆ. ರಾಕಿಂಗ್ ಸ್ಟಾರ್ 19ನೇ ಸಿನಿಮಾದ ಟೈಟಲ್ ರಿವಿಲ್ ಆಗಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತೆ ಲೇಡಿ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಲೇಡಿ ನಿರ್ದೇಶಕಿ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಆದರೆ ಯಾರು ಎನ್ನುವುದು ಬಹಿರಂಗವಾಗಿರಲಿಲ್ಲ. ಸದ್ಯ ವೈರಲ್ ಆಗಿರುವ ಸುದ್ದಿಯ ಪ್ರಕಾರ ಆ ನಿರ್ದೇಶಕಿ ಮತ್ಯಾರು ಅಲ್ಲ ಮಲಯಾಳಂನ ಖ್ಯಾತ ನಿರ್ದೇಶಕಿ ಮತ್ತು ನಟಿ ಗೀತು ಮೋಹನ್ ದಾಸ್(Geetu Mohandas) ನಿರ್ದೇಶಕಿ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡ್ತಾ ಹೋಗೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶಿಕ್ಷಣ ಮತ್ತು ಆರೋಗ್ಯದ ಸಲುವಾಗಿ UPI ವಹಿವಾಟಿನ ಮಿತಿ ಇನ್ನು ಮುಂದೆ 5 ಲಕ್ಷಕ್ಕೆ ಏರಿಕೆಯಾಗಲಿದೆ

ಯಾರು ಈ ಗೀತು ಮೋಹನ್ ದಾಸ್ ಇವರು ಮಾಡಿರುವ ಸಿನಿಮಾಗಳು ಯಾವುವು?

ಯಶ್ ಅವ್ರು ತಮ್ಮ ಮುಂದಿನ ಸಿನಿಮಾವನ್ನ ಭಾರತೀಯ ಸಿನಿಮಾರಂಗದ ದೊಡ್ಡ ದೊಡ್ಡ ನಿರ್ದೇಶಕರು ಮತ್ತು ನಿರ್ದೇಶಕರ ಜೊತೆ ಮಾಡ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಹೀಗಿರುವಾಗ ಯಶ್ ಮಲಯಾಳಂ ಸಿನಿಮಾರಂಗದ ನಿರ್ದೇಶಕಿ ಜೊತೆ ಸಿನಿಮಾ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಅದರಲ್ಲೂ ಈಗ ಯಶ್ ವಿಭಿನ್ನ ಸ್ಕ್ರಿಪ್ಟ್ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಹೌದು ಯಶ್ ಮತ್ತು ಗೀತು ಮೋಹನದಾಸ್(Geetu Mohandas) ಕಳೆದ ಒಂದು ವರ್ಷಗಳಿಂದ ಚರ್ಚಿಸುತ್ತಿದ್ದರು, ಗೀತು ಅವರ ಸ್ಟ್ರಿಪ್ಟ್‌ಗೆ ಯಶ್ ಫಿದಾ ಆಗಿದ್ದು ಅವರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದು ಇಂದು ಸಿನಿಮಾ ಟೈಟಲ್ ಕೂಡ ಅನೌನ್ಸ್ ಆಗಿದೆ. ಹೌದು ಯಶ್ ಅವ್ರ ಮುಂದಿನ 19ನೇ ಚಿತ್ರ toxic. ಗೀತು ಮೋಹನ್ ದಾಸ್ ಅವರ ಸ್ಕ್ರಿಪ್ಟ್ ತುಂಬಾ ಪವರ್ ಫುಲ್ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಅಲ್ದೇ ಯಶ್ ನಿರೀಕ್ಷೆಗಳು ಆಕಾಶದಷ್ಟಿದೆ. ಆದರೆ ಅವರು ಮನಸ್ಸಿನ ಮಾತನ್ನು ಕೇಳುತ್ತಾರೆ. ದೊಡ್ಡ ಬೆಜೆಟ್ ಮತ್ತು ಹೆಸರಿನ ಹಿಂದೆ ಬೀಳುವ ಬದಲು ಕಥೆಗೆ ಹೆಚ್ಚು ಒತ್ತು ನೀಡುತ್ತಾರೆ ಮತ್ತು ಅದಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತಾರೆ. ಅಲ್ದೇ ನಟ ಯಶ್ ಯಾವಾಗಲೂ ಯುವ ನಿರ್ದೇಶಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಗೂಗ್ಲಿ, ಪವನ್ ಒಡೆಯರ್ ನಿರ್ದೇಶನದ ಮೂರನೇ ಸಿನಿಮಾ. ಗಜಕೇಸರಿ, ಕೃಷ್ಣ ಅವರ ಮೊದಲ ಸಿನಿಮಾ. ಮಿ. & ಮಿಸೆಸ್‌ ರಾಮಾಚಾರಿ ಕೂಡ ಸಂತೋಷ್ ಆನಂದ್‌ರಾಮ್ ಅವರ ಮೊದಲ ಸಿನಿಮಾ. ಮಾಸ್ಟರ್ ಪೀಸ್ ಕೂಡ ಮಂಜು ಮಾಂಡವ್ಯ ಅವರ ಮೊದಲ ಸಿನಿಮಾ. ಇನ್ನು ಪ್ರಶಾಂತ್ ನೀಲ್ ಅವರಿಗೆ ‘ ಕೆಜಿಎಫ್ ಕೂಡ ಎರಡನೇ ಸಿನಿಮಾ. ಈಗ ಗೀತು ಮೋಹನ್‌ದಾಸ್‌ ಕೂಡ ತಮ್ಮ ಮೂರನೇ ಸಿನಿಮಾ toxic ಅನ್ನ ಯಶ್ ಜತೆ ಮಾಡುತ್ತಿದ್ದಾರೆ.

ಇನ್ನು ನಿರ್ದೇಶಕಿ ಗಿತು ಮೋಹನ್ ದಾಸ್ 2009ರಲ್ಲಿ ಛಾಯಾಗ್ರಾಹಕ ರಾಜೀವ್ ರವಿ ಅವರನ್ನು ವಿವಾಹದ ಮೇಲೆ ನಟನೆಯಿಂದ ದೂರ ಉಳಿದರು. ನಂತರ ನಿರ್ದೇಶನದತ್ತ ಮುಖ ಮಾಡಿದರು. ಮೊದಲಿಗೆ ಕೆಳ್ಕುನ್ನುಂಡೊ ಎಂಬ ಮಲಯಾಳಂ ಕಿರುಚಿತ್ರವನ್ನು ನಿರ್ದೇಶನ ಮಾಡಿದರು. 2014ರಲ್ಲಿ ಗೀತು ಹಿಂದಿಯಲ್ಲಿ ನಿರ್ದೇಶನ ಮಾಡಿದ ಮೊದಲ ಪೂರ್ಣ ಪ್ರಮಾಣದ ಸಿನಿಮಾ ಲೈಯರ್ಸ್ ಡೈಸ್‌. ಈ ಸಿನಿಮಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದ್ದಲ್ಲದೇ, ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತು. ಆನಂತರ ನಟ ನಿವಿನ್ ಪೌಲಿ ಜತೆಗೆ ಮೂಥನ್‌ ಸಿನಿಮಾವನ್ನು ಗೀತು ಮೋಹನ್‌ದಾಸ್ ಮಾಡಿದರು. 2019ರಲ್ಲಿ ತೆರೆಕಂಡ ಈ ಸಿನಿಮಾ ಕೂಡ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತ್ತು. ಗೀತು ಮೋಹನದಾಸ್ ಲಯರ್ಸ್ ಡೈರಿ ಮತ್ತು ಮೂತುನ್ ಅಂಥ ಸಿನಿಮಾಗಳಿಗೆ ಪ್ರಸಿದ್ಧರಾಗಿದ್ದಾರೆ.

ಲಯರ್ಸ್ ಡೈರಿ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಸೇರಿದಂತೆ ವಿಶ್ವದಾದ್ಯಂತ 6 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಸದ್ಯ ಗೀತು ಅವರು ರಾಕಿಂಗ್ ಸ್ಟಾರ್ ಜೊತೆ ಮತ್ತೊಂದು ವಿಭಿನ್ನ ಕಾನ್ಸೆಪ್ಟ್‌ನ ಸಿನಿಮಾ ಮೂಲಕ ಬರ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾ 10/04/2025ಕ್ಕೆ ತೆರೆಗೆ ಬರಲಿದೆ. ಅಲ್ದೇ ಇಂದು ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಿದ್ದು ಯಶ್ ಅಭಿಮಾನಿಗಳಂತು ಫುಲ್ ಎಕೈಸ್ಟ್ ಆಗಿದ್ದು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.