M Chinnaswamy Stadium: ಎಮ್. ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭(1977)ರಿಂದ ೧೯೮೦(1980)ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ ಹೆಸರನ್ನು ಪಡೆಯಿತು. ಸುಮಾರು 40,000 ಆಸನ ಕ್ಷಮತೆ ಹೊಂದಿರುವ ಈ ಕ್ರೀಡಾಂಗಣ ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗು ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿದೆ. ಆದ್ರೆ ರಾಜ್ಯದಲ್ಲಿ ಘಟಾನುಘಟಿ ಕ್ರಿಕೆಟ್ ಆಟಗಾರರು ಇದ್ದರೂ ಯಾಕೆ ಚಿನ್ನಸ್ವಾಮಿ ಅವರ ಹೆಸರನ್ನೇ ಈ ಕ್ರೀಡಾಂಗಣಕ್ಕೆ ಇಡಲಾಯಿತು ಎಂಬುದು ಆಸಕ್ತಿಕರ ಸಂಗತಿ.
ನವಂಬರ್ 8ರಂದು ಎಂ. ಚಿನ್ನಸ್ವಾಮಿ ಅವರ ಪುಣ್ಯದಿನ. ಹೀಗಾಗಿ ಕ್ರೀಡಾಂಗಣದ ಹೆಸರಿನ ಕುರಿತು ಚರ್ಚೆಗಳು ಜೋರಾಗಿದೆ. ಹೌದು ರಾಜಧಾನಿ ಬೆಂಗಳೂರಿನಲ್ಲಿ ಇರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇದೀಗ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಈ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಎಂಬ ಹೆಸರು ಹೇಗೆ ಬಂತು, ಇದರ ಹಿನ್ನೆಲೆ ಏನು ಎಂಬ ಕುತೂಹಲ ಶುರುವಾಗಿದ್ದು, ಇದಕ್ಕೆ ಉತ್ತರ ಕೂಡ ಸಿಕ್ಕಿದೆ. ಈ ಬಗ್ಗೆ ಹರೀಶ್ ಅರಸ್ ಅನ್ನೋರು ಸುದೀರ್ಘವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಹೆಸರಿನ ಹಿಂದಿನ ಅಸಲಿಯತ್ತನ್ನ ಬಿಚ್ಚಿಟ್ಟಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಚಿನ್ನಸ್ವಾಮಿ ಅವ್ರ ಪೂರ್ತಿ ಹೆಸರು ಮಂಗಳಂ ಚಿನ್ನಸ್ವಾಮಿ. ಇವರು 1900ರ ಮಾರ್ಚ್ 29ರಂದು ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರಾದ ಚಿನ್ನಸ್ವಾಮಿ 1925ರಿಂದ 1975ರವರೆಗೆ ಸಕ್ರಿಯವಾಗಿ ವಕೀಲಿಕೆ ನಡೆಸಿದವರು. ಅನೇಕ ಪ್ರಸಿದ್ಧ ಸಂಸ್ಥೆಗಳಿಗೆ ಕಾನೂನು ತಜ್ಞರಾಗಿದ್ದರು. ಎಂಇಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿದ್ದರು. ಅಲ್ಲದೆ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿಗೂ ಅಪಾರ ಪರಿಶ್ರಮ ವಹಿಸಿದ್ದರು. ಇನ್ನು ಚಿನ್ನಸ್ವಾಮಿ ಅವರು ಬೆಂಗಳೂರಿನ ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಾಣದ ಹಿಂದಿನ ಪ್ರೇರಕ ಶಕ್ತಿ. ಅನೇಕ ಗಣ್ಯ ವ್ಯಕ್ತಿಗಳಿಂದ ಸಹಕಾರ ಪಡೆದ ಅವರು, 1969ರಲ್ಲಿ ಮಹಾತ್ಮ ಗಾಂಧಿ ರಸ್ತೆ ಪ್ರದೇಶದಲ್ಲಿ ಕ್ರಿಕೆಟ್‌ಗಾಗಿ ಮೈದಾನ ಮಂಜೂರು ಮಾಡಲು ಕರ್ನಾಟಕ ಸರ್ಕಾರವನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ಒಂದು ವ್ಯವಸ್ಥಿತವಾದ ಮತ್ತು ಸುಸಜ್ಜಿತವಾದ ಕ್ರೀಡಾಂಗಣ ಸಿದ್ದವಾಯಿತು. ಆದ್ರೆ ಕ್ರೀಡಾಂಗಣ ನಿರ್ಮಾಣದ ಹಿಂದಿನ ಶಕ್ತಿಯಾಗಿರಲು ಬಯಸಿದ ಚಿನ್ನಸ್ವಾಮಿಯವರಿಗೆ ಎಂದಿಗೂ ಕ್ರೀಡಾಂಗಣಕ್ಕೆ ತಮ್ಮ ಹೆಸರಿರಬೇಕು ಅಂತ ಬಯಸಿರಲಿಲ್ಲ. ಹೌದು ಚಿನ್ನಸ್ವಾಮಿಯವರು ತಮ್ಮ ಹೆಸರನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆ ಇಡುವುದಕ್ಕೆ ಸಹಮತ ಹೊಂದಿಲ್ಲದ ನಿಸ್ವಾರ್ಥ ಮನೋಭಾವ ಹೊಂದಿದ್ದರು. ಹೀಗಿದ್ದಾಗ್ಯೂ ಕರ್ನಾಟಕದ ಕ್ರಿಕೆಟ್ ಪ್ರಿಯರು ಅವರ ಕೊಡುಗೆಗಳಿಗೆ ಗೌರವ ತಾಳಿದವರಾಗಿದ್ದು ಕ್ರೀಡಾಂಗಣಕ್ಕೆ ಅವರ ಹೆಸರನ್ನೇ ಬಯಸಿದರು. ಹೀಗೆ ಈ ಕ್ರೀಡಾಂಗಣಕ್ಕೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಎಂದು ನಾಮಕರಣವಾಗಿದ್ದು, ಇಂದು ವಿಶ್ವಪ್ರಸಿದ್ಧಿ ಪಡೆದಿದೆ.
ಬೆಂಗಳೂರಿನಲ್ಲಿರುವ ಕ್ರೀಡಾಂಗಣಕ್ಕೆ ಕ್ರಿಕೆಟರ್ ಅಲ್ಲದವರ ಹೆಸರು ಬಂದಿದ್ದು ಹೇಗೆ?
ಇನ್ನು ವಿಚಾರದಲ್ಲಿ ಬಗ್ಗೆ ಬರೆದುಕೊಂಡಿರಿವ ಹರೀಶ್ ಅರಸು ಅವರು, ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ ಕ್ರಿಕೆಟ್ ಪಟುಗಳಿದ್ದ ನಮ್ಮ ರಾಜ್ಯದಲ್ಲಿ ಇಂತಹ ದೊಡ್ಡ ಕ್ರಿಕೆಟ್ ಸ್ಥಾವರಕ್ಕೆ ಇವರ ಹೆಸರಿರಬೇಕಾದರೆ ಈ ಮಹನೀಯರ ಸಾಮರ್ಥ್ಯ ಎಂತದ್ದಿರಬಹುದು ಅನ್ನೋದು ಎಲ್ಲರ ಬಹುಮುಖ್ಯ ಪ್ರಶ್ನೆ. ಇನ್ನು ಮಂಗಳಂ ಚಿನ್ನಸ್ವಾಮಿ 1900 ಮಾರ್ಚ್ 29ರಂದು ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರಾದ ಚಿನ್ನಸ್ವಾಮಿ ಅವರು 1925ರಿಂದ 1975ರವರೆಗೆ ಸಕ್ರಿಯವಾಗಿ ವಕೀಲಿ ವೃತ್ತಿಯನ್ನು ನಡೆಸಿದವರು. ಅವರು ಅನೇಕ ಪ್ರಸಿದ್ಧ ಸಂಸ್ಥೆಗಳಿಗೆ ಕಾನೂನು ತಜ್ಞರಾಗಿದ್ದರು. ಎಂಇಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿದ್ದರು. ಹೀಗಿದ್ದರೂ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿಗೆ ಅಪಾರ ದುಡಿದರು.
ಚಿನ್ನಸ್ವಾಮಿ ಭಾರತೀಯ ಕ್ರಿಕೆಟ್ ನಿರ್ವಾಹಕರಾಗಿ ಪ್ರಸಿದ್ಧರಾದವರು. ಅವರು ಬ್ಯಾಟಿಂಗ್ ಬೌಲಿಂಗ್ ಮಾಡಿದವರಲ್ಲ. 1952-53 ಅವಧಿಯಲ್ಲಿ ಕ್ರಿಕೆಟ್ ಅಸೋಸಿಯೇಷನ್ ಮತ್ತು ಆರ್ಮಿ ಅಧಿಕಾರಿಗಳ ಪಂದ್ಯದ ಸಮಯದಲ್ಲಿ ಒಂದು ಭಿನ್ನಾಭಿಪ್ರಾಯ ಸರಿಪಡಿಸಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕ್ರಿಕೆಟ್ ಸಂಸ್ಥೆಗೆ ಕಾರ್ಯದರ್ಶಿಗಳಾಗಿ ಪರಿಗಣಿತರಾದ ಅವರು ಮುಂದಿನ 25 ವರ್ಷಗಳ ಕಾಲ ಅದರ ಅಭಿವೃದ್ಧಿಗಾಗಿ ದುಡಿದರು. ಚಿನ್ನಸ್ವಾಮಿ 1977ರಿಂದ 1980ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದರು. ಅದಕ್ಕೆ ಮುಂಚೆ 1960ರಿಂದ 1965ರವರೆಗೆ ಕಾರ್ಯದರ್ಶಿಯಾಗಿದ್ದರು. ಅವರು ದೀರ್ಘಾವಧಿಯವರೆಗೆ ಉಪಾಧ್ಯಕ್ಷರಾಗಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1965,1973 ಮತ್ತು 1977-1980ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಚಿನ್ನಸ್ವಾಮಿ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಂಸ್ಥಾಪಕರಲ್ಲಿ ಪ್ರಮುಖರು. ಅವರು 1953ರಿಂದ 1978 ರವರೆಗೆ ಅದರ ಕಾರ್ಯದರ್ಶಿಯಾಗಿ ಮತ್ತು 1978ರಿಂದ 1990ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು 1967-68 ರಲ್ಲಿ ಆಸ್ಟ್ರೇಲಿಯಾದ ಭಾರತೀಯ ಪ್ರವಾಸಕ್ಕೆ ಖಜಾಂಚಿಯಾಗಿ ಮತ್ತು ಎರಡನೇ ಅಧಿಕಾರಿಯಾಗಿದ್ದರು. ಎರಡು ವರ್ಷಗಳ ನಂತರ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಭೇಟಿ ನೀಡಿದಾಗ ಸರಣಿಯ ವ್ಯವಸ್ಥಾಪಕರಾಗಿದ್ದರು. ಎಂಸಿಸಿ 1969ರಲ್ಲಿ ಅವರಿಗೆ ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಿತು. ಚಿನ್ನಸ್ವಾಮಿ ಅವರು ಬೆಂಗಳೂರಿನ ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಾಣದ ಹಿಂದಿನ ಪ್ರೇರಕ ಶಕ್ತಿ. ಅನೇಕ ಗಣ್ಯ ವ್ಯಕ್ತಿಗಳಿಂದ ಸಹಕಾರ ಪಡೆದ ಅವರು, 1969ರಲ್ಲಿ ಎಂಜಿ ರಸ್ತೆ ಪ್ರದೇಶದಲ್ಲಿ ಕ್ರಿಕೆಟ್‌ಗಾಗಿ ಮೈದಾನವನ್ನು ಮಂಜೂರು ಮಾಡಲು ಕರ್ನಾಟಕ ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾದರು. ಚಿನ್ನಸ್ವಾಮಿಯವರು ತಮ್ಮ ಹೆಸರನ್ನು ಕ್ರಿಕೆಟ್ ಸ್ಟೇಡಿಯಂಗೆ ಇಡುವುದಕ್ಕೆ ಸಹಮತ ಹೊಂದಿಲ್ಲದ ನಿಸ್ವಾರ್ಥ ಮನೋಭಾವ ಹೊಂದಿದ್ದರು. ಹೀಗಿದ್ದಾಗ್ಯೂ ಕರ್ನಾಟಕದ ಕ್ರಿಕೆಟ್ ಪ್ರಿಯರು ಅವರ ಕೊಡುಗೆಗಳಿಗೆ ಗೌರವ ತಾಳಿದವರಾಗಿದ್ದು ಕ್ರೀಡಾಂಗಣಕ್ಕೆ ಅವರ ಹೆಸರನ್ನೇ ಬಯಸಿದರು. ಹೀಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣ(M Chinnaswamy Stadium) ಇಂದು ವಿಶ್ವಪ್ರಸಿದ್ಧಿ ಪಡೆದಿದೆ ಅಂತ ಬರೆದುಕೊಂಡಿದ್ದಾರೆ.
ಎಂ. ಚಿನ್ನಸ್ವಾಮಿ
ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ ಕ್ರಿಕೆಟ್ ಪಟುಗಳಿದ್ದ ನಮ್ಮ ರಾಜ್ಯದಲ್ಲಿ ಇಂತಹ ದೊಡ್ಡ ಕ್ರಿಕೆಟ್ ಸ್ಥಾವರಕ್ಕೆ ಇವರ ಹೆಸರಿರಬೇಕಾದರೆ ಈ ಮಹನೀಯರ ಸಾಮರ್ಥ್ಯ ಎಂತದ್ದಿಬಹುದು!
ಮಂಗಳಂ ಚಿನ್ನಸ್ವಾಮಿ 1900 ಮಾರ್ಚ್ 29ರಂದು… pic.twitter.com/Nfxjt9On66
— Harish Arasu PRO (@PROHarisarasu) November 9, 2023
ಇದನ್ನೂ ಓದಿ: 5 ಸ್ಟಾರ್ ಹೋಟೆಲ್ ನಂತಹ ಐಷಾರಾಮಿಯನ್ನು ಹೊಂದಿರುವ ಕಿಯಾ ಕಾರ್ನಿವಲ್ ಫೇಸ್ ಲಿಫ್ಟ್ ಬಗ್ಗೆ ಒಂದಷ್ಟು ಮಾಹಿತಿಗಳು