ಬಿಗ್ ಬಾಸ್ ಮನೆಗೆ ಚಾರ್ಲಿ ಯಾಕೆ ಬರಲಿಲ್ಲ ಗೊತ್ತಾ? ವೇದಿಕೆ ಮೇಲೆ ಚಾರ್ಲಿ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?

ಸ್ನೇಹಿತರೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10(Bigboss kannada season 10) ಭಾನುವಾರ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಎಂದಿನಂತೆ ಕಿಚ್ಚ ಸುದೀಪ್(Kiccha sudeep) ಅವರು ಗತ್ತಿನಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಅವರ ಡ್ರೆಸ್ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ವೇದಿಕೆ ಏರಿದ ಸ್ಪರ್ಧಿಗಳು ನಿಮ್ಮ ಪರ್ಫ್ಯೂಮ್ ಚೆನ್ನಾಗಿದೆ ಎಂದು ಅಭಿಪ್ರಾಯ ತಿಳಿಸಿದರು. ಇದಕ್ಕೆ ಸುದೀಪ್ ಧನ್ಯವಾದ ಹೇಳಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಶೋ ಆರಂಭದಿಂದ ಹಿಡಿದು ಮೊದಲ ದಿನದ ಶೋ ಮುಗಿಯುವವರೆಗೆ ಎಲ್ಲರೂ ಕಾದಿದ್ದು ಓರ್ವ ಸ್ಪರ್ಧಿಗಾಗಿ ಆಗಿತ್ತು. ಆದರೆ, ಆ ಸ್ಪರ್ಧಿ ಬರಲೇ ಇಲ್ಲ. ಅದು ಬೇರಾರೂ ಅಲ್ಲ ಚಾರ್ಲಿ. ಹೌದು ಬಿಗ್ ಬಾಸ್​ ಮನೆಗೆ ವಿವಿಧ ಮನಸ್ಥಿತಿಯ ಸ್ಪರ್ಧಿಗಳ ಆಗಮನ ಆಗುತ್ತದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಪ್ರೊಫೆಷನ್. ಎಲ್ಲಾ ಸ್ಪರ್ಧಿಗಳಿಗೂ ತಮ್ಮದೇ ಆದ ಐಡೆಂಟಿಟಿ ಇರುತ್ತದೆ. ಆದರೆ, ಈ ಬಾರಿ ಬಿಗ್ ಬಾಸ್​ಗೆ ಸಾಕು ಪ್ರಾಣಿಯನ್ನು ಕಳುಹಿಸುವ ಆಲೋಚನೆ ಕಲರ್ಸ್ ಕನ್ನಡದವರಿಗೆ ಬಂದಿತ್ತು.

WhatsApp Group Join Now
Telegram Group Join Now

ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ ಸಿನಿಮಾ ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿದ ಚಾರ್ಲಿ ಶ್ವಾನ ಕೂಡ ಬಿಗ್ ಬಾಸ್​ಗೆ ಬರಲಿದೆ ಎಂದು ಘೋಷಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. 777 ಚಾರ್ಲಿ’ ಸಿನಿಮಾ ಮೂಲಕ ಚಾರ್ಲಿ ಸಾಕಷ್ಟು ಜನಪ್ರಿಯತೆ ಪಡೆಯಿತು. ಚಾರ್ಲಿ ಅನೇಕರಿಗೆ ಇಷ್ಟವಾದಳು. ಅವಳು ದೊಡ್ಮನೆಗೆ ಬರುವ ಬಗ್ಗೆ ಅನುಬಂಧ ಅವಾರ್ಡ್ಸ್ ವೇದಿಕೆ ಮೇಲೆ ಘೋಷಣೆ ಆಯಿತು. ಇದಕ್ಕಾಗಿ ಎಲ್ಲರೂ ಕಾದು ಕೂತಿದ್ದರು. ಆದರೆ, ಚಾರ್ಲಿಯ ಆಗಮನ ಆಗಿಲ್ಲ ಎಲ್ಲರ ನಿರೀಕ್ಷೆ ಹುಸಿ ಆಯ್ತು. ಆದ್ರೆ ಮುಂದಿನ ದಿನಗಳಲ್ಲಿ ಚಾರ್ಲಿ ಎಂಟ್ರಿ ಆಗಬಹುದು ಅನ್ನೋದು ಮೇಲ್ನೋಟಕ್ಕೆ ಕಾಣ್ತಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಟ್ಟ 17 ಸ್ಪರ್ಧಿಗಳು ಇವರೇ ನೋಡಿ?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮುಂದಿನ ವಾರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾ?

ಹೌದು ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಪೈಕಿ ಕನ್ನಡದಲ್ಲೇ ಮೊದಲ ಬಾರಿಗೆ ಓಟಿಟಿ ಅನ್ನು ಪ್ರಸಾರ ಮಾಡಲಾಗಿತ್ತು. ಅದರಂತೆಯೇ ಈ ಬಾರಿ ಮೊದಲ ಪ್ರಯತ್ನ ಎಂಬಂತೆ ರಿಯಾಲಿಟಿ ಶೋ ಒಂದರಲ್ಲಿ ವ್ಯಕ್ತಿಯನ್ನು ಹೊರತು ಪಡಿಸಿ ಪ್ರಾಣಿಯನ್ನು ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿ ಲಿಸ್ಟ್ ಮಾಡಲಾಗಿತ್ತು. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲರ ನೆಚ್ಚಿನ ಸಿನಿಮಾ 777 ಚಾರ್ಲಿ ಸಿನಿಮಾದಲ್ಲಿ ಹೈಲೈಟ್ ಆಗಿದ್ದ ಚಾರ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಲಿದೆ ಅಂತ ಘೋಷಣೆ ಮಾಡಲಾಗಿತ್ತು.

ಹೌದು ಚಾರ್ಲಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತೆ ಅಂತ ಗೊತ್ತಾದಾಗಿನಿಂದ ಜನರ ಕುತೂಹಲ ಕೆರಳಿಸಿತ್ತು. ಬಿಗ್ ಬಾಸ್ ಸೀಸನ್ 10 ಸಂಪೂರ್ಣವಾಗಿಯೂ ಮುಗಿಯುವವರೆಗೆ ಚಾರ್ಲಿ ಆ ಮನೆಯಲ್ಲಿ ಇರುತ್ತಾ ಇಲ್ಲವಾ? ಅನ್ನೋ ಸಂದೇಹ ಕೂಡ ಹಲವರಿಗಿತ್ತು. ಜೊತೆಗೆ ಚಾರ್ಲಿ ಕಂಟೆಸ್ಟೆಂಟ್ ಆಗಿ ಹೋಗುತ್ತಿರುವುದಾ? ಇಲ್ಲ ಕೆಲ ಸಮಯದವರೆಗೂ ಗೆಸ್ಟ್ ರೀತಿ ಹೋಗಿ ಬರುತ್ತಾ? ಚಾರ್ಲಿ 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವೇ.? ಚಾರ್ಲಿ ಕಂಟೆಸ್ಟೆಂಟ್ ಗಳ ಜೊತೆಗೆ ಹೇಗಿರಲಿದೆ ಎನ್ನುವ ಕುತೂಹಲ ಇತ್ತು. ಆದ್ರೆ ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದೆ.

ಹೌದು ಎಲ್ಲರ ನಿರೀಕ್ಷೆಯನ್ನ ಬಿಗ್ ಬಾಸ್ ಸೀಸನ್ 10 ಹುಸಿ ಮಾಡಿದೆ. ಯಾಕಂದ್ರೆ ಶೋ ಆರಂಭದಿಂದ ಕೊನೆವರೆಗೂ ಎಲ್ಲರು ಕಾದಿದ್ದು ಒಬ್ಬರ ಎಂಟ್ರಿಗಾಗಿ ಆದರೆ ಅವರ ಬದಲು ನಾಯಕ ನಟಿ ಸಂಗೀತ ಶೃಂಗೇರಿ ಎಂಟ್ರಿ ಆಗುತ್ತೆ. ಹೌದು 777 ಚಾರ್ಲಿ ಸಿನಿಮಾ ನಾಯಕಿ ಸಂಗೀತಾ ಶೃಂಗೇರಿ ಬಿಗ್ ಬಾಸ್ ವೇದಿಕೆ ಏರಿದ್ದರು. ಆಗ ಸುದೀಪ್ ಅವ್ರು ಮಾತು ಆರಂಭಿಸುತ್ತಾರೆ, ಇಡೀ ಕರ್ನಾಟಕ ಒಂದು ಅತಿಥಿಗಾಗಿ ಕಾಯುತ್ತಿದೆ. ಅದು ಯಾರು ಅನ್ನೋದು ನಿಮಗೆ ಗೊತ್ತು ಅಂತಾರೆ ಆಗ ಈ ಪ್ರಶ್ನೆಗೆ ಉತ್ತರಿಸಿದ ಸಂಗೀತಾ ಚಾರ್ಲಿ ಎಂದರು. ಚಾರ್ಲಿ ಹೆಸರನ್ನು ಕರೆಯುವಂತೆ ಸುದೀಪ್ ಹೇಳ್ತಾರೆ, ಚಾರ್ಲಿ.. ಚಾರ್ಲಿ.. ಟ್ರೀಟ್ ಕೊಡ್ತೀನಿ ಬಾ..ಎಂದು ಸಂಗೀತಾ ಕರೆದರೂ ಅವಳು ಬರಲೇ ಇಲ್ಲ. ಬಹುಶಃ ನೀವು ಕರೆದಿದ್ದು ಕೇಳಿರುತ್ತದೆ. ಪರ್ಮಿಷನ್ ತೆಗೆದುಕೊಳ್ಳೋಕೆ ಕಾದಿರುತ್ತದೆ. ನಾರ್ತ್ ಇಂಡಿಯಾ ಹೋಗಿದೆ, ಬರುತ್ತೆ’ ಅಂತ ಸುದೀಪ್ ಹೇಳ್ತಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಚಾರ್ಲಿಯ ಎಂಟ್ರಿ ಆಗಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದಾರೆ. ಆದ್ರೆ ಇದರ ಬಗ್ಗೆ ಅಧಿಕೃತವಾಗಿ ಏನು ಗೊತ್ತಾಗಿಲ್ಲ. 6ಜನ ಸ್ಪರ್ಧಿಗಳಿಗೆ 1ವಾರದ ಅವಕಾಶ ನೀಡಿ ಬಿಗ್ ಬಿ ಮನೆಗೆ ಕಳುಹಿಸಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಚಾರ್ಲಿ ಆಗಮನದ ಸುಳಿವು ಇದೆ ಇರಬಹುದು ಅನ್ನೋದು ಹಲವರ ಲೆಕ್ಕಾಚಾರ.

ಇದನ್ನೂ ಓದಿ: ಇನ್ಮುಂದೆ ರೇಷನ್ ಕಾರ್ಡ್ ವಿಭಜನೆ ಸಾಧ್ಯವಿಲ್ಲ; ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಸಿಗಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram