ರಾಜ್ಯದಲ್ಲಿ ನೂತನವಾಗಿ ಅಧಿಕಾರದ ಗದ್ದುಗೆ ಹಿಡಿದಿರುವ ರಾಜ್ಯ ಸರ್ಕಾರ ಪ್ರತಿನಿತ್ಯ ಒಂದಿಲ್ಲೊಂದು ಬದಲಾವಣೆಗಳನ್ನ ಮಾಡುತ್ತಾ ಕೆಲವೊಂದು ಬಾರಿ ಗುಡ್ ನ್ಯೂಸ್ ಮತ್ತು ಕೆಲವೊಮ್ಮೆ ಶಾಕಿಂಗ್ ಸುದ್ದಿಗಳನ್ನ ನೀಡುತ್ತಾ ಬಂದಿದೆ. ಹೌದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಚಿತ ಯೋಜನೆಗಳು ಪಡೆಯುವುದಕ್ಕೆ ಬಹುತೇಕ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಬೇಕೆ ಬೇಕು. ಕಾಂಗ್ರೆಸ್ ಪಕ್ಷದ ಉಚಿತ ಯೋಜನೆಗಳ ಫಲಾನುಭವಿಗಳು ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ನ್ನ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಿರಬೇಕು. ಇನ್ನು ಗೃಹ ಲಕ್ಷ್ಮೀ ಯೋಜನೆಗೂ ಸಹ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಅಲ್ದೇ ಈಗಾಗ್ಲೇ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸುತ್ತಿದ್ದಂತೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹೊಸ ಮಾರ್ಗಸೂಚಿ ಪ್ರಕಾರ ಸ್ವಂತ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಆಗಲಿದೆ ಎಂದು ಸುದ್ದಿಯಾಗಿದೆ.
ಸ್ವಂತ ಕಾರು ಹೊಂದಿದ್ದು ಬಿಪಿಎಲ್ ಕಾರ್ಡ್ ಪಡೆದಿದ್ದವರಿಗೆ ಸರ್ಕಾರ ಶಾಕ್ ನೀಡಿದ್ದು, ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಘೋಷಣೆ ಮಾಡಿದ್ದಾರೆ. ಅಲ್ದೇ ಈ ಕುರಿತು ಈಗಾಗಲೇ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವ ಸಚಿವರು ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ. ಆದ್ರೆ ಯಲ್ಲೋ ಬೋರ್ಡ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಇರಲಿದೆ. ಅದರಲ್ಲೂ ದುಡಿಯುವ ಉದ್ದೇಶದಿಂದ ಕಾರು ಖರೀದಿಸಿದವರ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ. ಶೀಘ್ರದಲ್ಲೇ ಈ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳು ಯಾವ ದಿನ ಯಾವ ತಿಂಗಳು ಜನಿಸಿದ್ರೆ ಅದೃಷ್ಟ; ಯಾವ ದಿನ ಮಕ್ಕಳ ಜನನ ಆಗದಿದ್ರೆ ಒಳ್ಳೆಯದು
ಈ ಕುರಿತು ಸಚಿವ ಮುನಿಯಪ್ಪ ಹೇಳಿದ್ದೇನು?
ಹೌದು ಯಲ್ಲೋ ಬೋರ್ಡ್ ಹೊಂದಿದ್ದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದಿಲ್ಲ ಅಂತ ಇದೀಗ ಸಚಿವ ಕೆ ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಸುದ್ದಿಗಾರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು ಜೀವನಾಧಾರಕ್ಕಾಗಿ ವಾಣಿಜ್ಯ ಬಳಕೆಗೆ ತೆಗೆದುಕೊಳ್ಳುವ ತ್ರಿಚಕ್ರ ವಾಹನ ಅಥವಾ ಕಾರು ಹೊಂದಿದ್ದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದಿಲ್ಲ ತಿಳಿಸಿದರು. ಹೌದು ಯಲ್ಲೋ ಬೋರ್ಡ್ ಇರುವಂತಹ ಯಾವುದೇ ತ್ರಿಚಕ್ರ ಅಥವಾ ಕಾರ್ ಗಳಿದ್ರೆ ಬಿಪಿಎಲ್ ಕಾರ್ಡ್ ರದ್ದಾಗಲ್ಲ ಅಂತ ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ದೇ ಇದೇ ವೇಳೆ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಈಗ ನೀಡುತ್ತಿರುವಂತ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೆ.ಜಿ ಅಕ್ಕಿ ಸೇರಿ 10 ಕೆ.ಜಿ ಅಕ್ಕಿಯನ್ನು ವಿತರಿಸುವುದಾಗಿ ಹೇಳಿತ್ತು. ಆದ್ರೇ ಅಕ್ಕಿ ಕೊರತೆಯ ಕಾರಣ ಹೆಚ್ಚುವರಿ ಐದು ಕೆ.ಜಿ ಅಕ್ಕಿಗೆ ಬದಲಾಗಿ ಪಡಿತರದಾರರ ಖಾತೆಗೆ ಹಣವನ್ನು ಜಮಾ ಮಾಡಲಾಗಿತ್ತು.
ಇದೀಗ ಹೆಚ್ಚುವರಿ ಐದು ಕೆ.ಜಿ ಅಕ್ಕಿಯನ್ನು ಸೆಪ್ಟೆಂಬರ್ ನಿಂದಲೇ ವಿತರಿಸೋದಾಗಿ ತಿಳಿಸಿದು. ಇನ್ನೂ ಹೊಸದಾಗಿ BPL, APL ಕಾರ್ಡ್‌ಗೆ ಈಗ ಅರ್ಜಿ ಸಲ್ಲಿಸಬಹುದು. ನೀತಿ ಸಂಹಿತೆ ಜಾರಿಯಾಗಿದ್ದ ಹಿನ್ನೆಲೆ ರೇಷನ್ ಕಾರ್ಡ್ ವಿತರಣೆ ಮಾಡುವುದನ್ನು ಸ್ಥಗಿತ ಮಾಡಲಾಗಿತ್ತು. ಈಗ ಹೊಸ ಪಡಿತರಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅಂತಲೂ ಹೇಳಿದ್ದಾರೆ. 5 ಕೆಜಿ ಅಕ್ಕಿ ಬದಲಾಗಿ ಜನರಿಗೆ ಹಣ ಹಾಕುತ್ತಿದ್ದೇವೆ, ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡುತ್ತೇವೆ. ಅನ್ನಭಾಗ್ಯ ಯೋಜನೆಗಾಗಿ ರಾಜ್ಯಕ್ಕೆ ಆಂಧ್ರ ಮತ್ತು ತೆಲಂಗಾಣ ಎರಡು ರಾಜ್ಯಗಳು ಅಕ್ಕಿ ಪೂರೈಸಲು ಮುಂದಾಗಿವೆ. ಹೀಗಾಗಿ ಸೆಪ್ಟಂಬರ್ ನಿಂದ ಹಣದ ಬದಲು 10 ಕೆ.ಜಿ ಅಕ್ಕಿ ನೀಡುವ ಚಿಂತನೆ ನಡೆಸಲಾಗಿದೆ. ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೇವೆ 1 ವಾರದಲ್ಲಿ ಅಲ್ಲಿನ ಅಧಿಕಾರಿಗಳು ನಿರ್ಧರಿಸುವ ಸಾಧ್ಯತೆ ಇದೆ ಅಂತ ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರು ಮತ್ತು, ಯಲ್ಲೋ ಬೋರ್ಡ್ ವಾಹನಗಳನ್ನ ಹೊಂದಿರುವವರಿಗೆ ಕೊಂಚ ನಿರಾಳವಾಗಿದ್ದು ಇನ್ಮುಂದೆ ರೇಷನ್ ಕಾರ್ಡ್ ರದ್ದಾಗುತ್ತಾ ಅನ್ನೋ ಭಯಬಿಟ್ಟು ಆರಾಮಾಗಿ ಕಾರ್ ತೆಗೆದುಕೊಂಡು ವ್ಯಾಪಾರ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಪಡೆಯಲು ಇಚ್ಛೆಸುವವರು ಇನ್ಮುಂದೆ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಪಡೆಯಬಹುದು.
ಇದನ್ನೂ ಓದಿ: ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡ ಕಿರುತೆರೆ ನಟಿ! ಲೈವ್ ಬಂದು ಕಣ್ಣೀರಿಟ್ಟ ನಟಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram