ಐಟಿ ಉದ್ಯೋಗಿಗಳು ಆತಂಕಕ್ಕೆ ಕಾರಣವಾಗಿದೆ ವಿಪ್ರೋ ಕಂಪನಿಯ ಉದ್ಯೋಗಿಗಳನ್ನು ವಜಾ ಗೊಳಿಸುವ ನಿರ್ಧಾರ

ಕೊರೊನಾ ಸಮಯದಲ್ಲಿ ಆರ್ಥಿಕವಾಗಿ ಎಲ್ಲಾ ಕಂಪೆನಿಗಳಿಗೂ ನಷ್ಟ ಉಂಟಾಗಿತ್ತು. ಹಲವಾರು ಹೊಸ ಪ್ರಾಜೆಕ್ಟ್ ಗಳು ಕೆಲಸವೂ ಆರಂಭ ಅಗಲಿಲ್ಲ. ಹಲವಾರು ಕಂಪನಿಗಳು ವರ್ಕ್ ಫ್ರೋಮ್ ನೀಡಲು ಆಗದೆ ಹಲವಾರು ಉದ್ಯೋಗಿಗಳನ್ನು ಮನೆಗೆ ಕಳಿಸಿತ್ತು. ಕೆಲವು ದೊಡ್ಡ ವಿಪ್ರೋ ಕಂಪನಿಯು ಕಡಿಮೆ ಲಾಭಾಂಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ವಿಪ್ರೋ ಮಧ್ಯಮ ಮಟ್ಟದಲ್ಲಿ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ದರಿಸಿದೆ. ವಾರ್ಷಿಕ ವಹೀವಾಟು ಸುಧಾರಿಸಲು ಮತ್ತು ವೆಚ್ಚವನ್ನು ಉಳಿಸಲು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದು ಸಾಮಾನ್ಯ ಪ್ರವೃತ್ತಿಯಾಗಿದೆ. ವಜಾ ಮಾಡಿತು. ಆದರೆ ಕೊರೊನಾ ಆತಂಕ ಕಳೆದು 2 ವರ್ಷ ಆಗುತ್ತಿದೆ. ಅಲ್ಲಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದರೂ ಭಯದ ವಾತಾವರಣ ಈಗ ಇಲ್ಲ. ಆದರೂ ಸಹ ದೊಡ್ಡ ದೊಡ್ಡ ಐಟಿ ಕಂಪನಿಗಳು ಈಗಲೂ ಸಹ ಉದ್ಯೋಗಿಗಳ ವಜಾ ಮಾಡುತ್ತಿವೆ. ಇದರಲ್ಲಿ ದೇಶದ ಪ್ರತಿಷ್ಠಿತ ವಿಪ್ರೋ ಸಂಸ್ಥೆ (Wipro) ಸಹ ಒಂದಾಗಿದೆ.

WhatsApp Group Join Now
Telegram Group Join Now

ಈ ಬಗ್ಗೆ ವರದಿ ಮಾಡಿದ ಎಕನಾಮಿಕ್ ಟೈಮ್ಸ್ 2024 ವರ್ಷದ ಆರಂಭದಿಂದ ಟೆಕ್ ಉದ್ಯಮದಲ್ಲಿ ವಿಶ್ವದಾದ್ಯಂತ ವಜಾಗೊಳಿಸುವ ಹೊಸ ಅಲೆ ಸೃಷ್ಠಿ ಆಗಿದೆ ಎಂದು ಹೇಳಿತು. ಎಕನಾಮಿಕ್ ಟೈಮ್ಸ್ ಪೇಪರ್ ನಲ್ಲಿ ತಿಳಿಸುವ ಪ್ರಕಾರ ವಿಪ್ರೋ ಕಂಪನಿಯು ನೂರಾರು employee ಗಳನ್ನು ಕಡಿತಗೊಳಿಸುವ ನಿರ್ಧಾರ ಮಾಡಿದೆ. ವಿಪ್ರೋ ಕಂಪನಿಯ ಲಾಭ ಕಡಿಮೆ ಆಗುತ್ತಿದೆ. ಆದರಿಂದ ಮಾಧ್ಯಮ ಮಟ್ಟದಲ್ಲಿ ಕೆಲವು ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ ಎಂದು ತಜ್ಞರ ಅಭಿಪ್ರಾಯ ವಾರ್ಷಿಕ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವೆಚ್ಚವನ್ನು ಕಡಿಮೆ ಮಾಡಲು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದು ಈಗ ಸಾಮಾನ್ಯವಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರತಿ ತಿಂಗಳು ನಿಮ್ಮ ಪಿಎಫ್ ಖಾತೆಗೆ ಹಣ ಜಮಾ ಆಗುತ್ತದೆಯೇ ಎಂದು ಈಗ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು. 

ಉದ್ಯೋಗಿಗಳ ಭವಿಷ್ಯಕ್ಕೆ ಮಾರಕವಾಗಿದೆ ಐಟಿ ಕಂಪನಿಗಳ ನಿರ್ಧಾರ

ಹಲವಾರು ಕನಸುಗಳನ್ನು ಹೊತ್ತು ಮನೆಯನ್ನು ತೊರೆದು ದೊಡ್ಡ ದೊಡ್ಡ ಪಟ್ಟಣಕ್ಕೆ ಉದ್ಯೋಗವನ್ನು ಅರಸಿ ಹೋಗುವ ಯುವಕ ಯುವತಿಯರಿಗೆ ಮುಂದಿನ ಭವಿಷ್ಯಕ್ಕೆ ಇದು ಮಾರಕವಾಗುತ್ತದೆ. ಉನ್ನತ ಹುದ್ದೆಗೆ ಹೋಗಲು ಒಂದೊಂದು ಮೆಟ್ಟಿಲು ಸಹ ಬಹಳ ಮುಖ್ಯ. ಒಂದು ಕೆಲಸಕ್ಕೆ ಹತ್ತಾರು ಕಂಪನಿಗಳನ್ನು ಅಲೆದು ಒಂದು ಕೆಲಸ ಪಡೆದುಕೊಂಡು ನಾಳಿನ ಉಜ್ವಲ ಭವಿಷ್ಯಕ್ಕೆ ದಿನವಿಡೀ ಕೆಲಸ ಮಾಡುವ ಉದ್ಯೋಗಿಗಳು ಮತ್ತೆ ಒಂದು ಕೆಲಸ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಮನೆಯ ಜವಾಬ್ದಾರಿ, ಓದುವಾಗ ಮಾಡಿರುವ ಸಾಲ, ಮದುವೆ ಅಥವಾ ಮಕ್ಕಳ ಬದುಕು ಎಂದು ದುಡಿಯುವವರ ಬದುಕಿಗೆ ಈ ವಜಾ ಗೊಳಿಸುವ ಪ್ರಕ್ರಿಯೆಯಿಂದ ಆರ್ಥಿಕವಾಗಿ ಕುಸಿಯುವಂತೆ ಮಾಡುತ್ತದೆ. ಪ್ರತಿ ತಿಂಗಳು ರೂಂ ಬಾಡಿಗೆ, ಕರೆಂಟ್ ಬಿಲ್ ಎಂದು ಸಾವಿರಾರು ರೂಪಾಯಿ ವೆಚ್ಚ ಇರುವಾಗ ಬಡ ವರ್ಗದ ಮತ್ತು ಮಧ್ಯಮ ವರ್ಗದ ಜನರಿಗೆ ದಿನನಿತ್ಯದ ಜೀವನಕ್ಕೆ ನೇರ ಪರಿಣಾಮ ಬೀರಲಿದೆ.

ಕಂಪನಿಗಳಿಗೆ ವಜಾ ಗೊಳಿಸುವ ನಿರ್ಧಾರದ ಹಿಂದಿರುವ ಕಾರಣ :-

ಗೂಗಲ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಂತಹ ಐಟಿ ಕಂಪನಿಗಳು ಈಗಾಗಲೇ ವೆಚ್ಚವನ್ನು ಕಡಿಮೆ ಮಾಡುವ ನೆಪದಲ್ಲಿ ಸಾವಿರಾರು ಜನರನ್ನು ವಜಾಗೊಳಿಸಿದ್ದಾರೆ. ವಿಪ್ರೋ ಪ್ರಸ್ತುತ ಕಡಿಮೆ ಲಾಭ ಪಡೆದು ಅರ್ಥಿಕಾವಾಗಿ ಸಂಕಷ್ಟ ಎದುರಿಸುತ್ತಿದೆ. ಇಟಿ’ ವರದಿ ಪ್ರಕಾರ ಕಳೆದ ತ್ರೈಮಾಸಿಕದಲ್ಲಿ 16% ಕಡಿಮೆ ಲಾಭವನ್ನು ಹೊಂದಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. ವಿಪ್ರೊದ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ಅಪರ್ಣಾ ಅಯ್ಯರ್ ಅವರು ಮಾತನಾಡಿ 3 ಜನರ ಕೆಲಸವನ್ನು ಇಬ್ಬರಿಗೆ ಹಂಚಲಾಗುತ್ತದೆ, ಹಾಗೂ ಅವರಿಗೆ ಸರಿಯಾದ ಸಂಬಳವನ್ನು ಹಾಗೂ ಉಳಿದ ಫೆಸಿಲಿಟಿ ಗಳನ್ನು ನೀಡಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ರೂ.4000 ರಿಯಾಯಿತಿಯೊಂದಿಗೆ 8GB RAM ಮತ್ತು 128GB ಸ್ಟೋರೇಜ್ ನ ಈ ಮೋಟೋ ಸ್ಮಾರ್ಟ್‌ಫೋನ್ ವಿವರಗಳನ್ನು ತಿಳಿಯಿರಿ