ಕೇಂದ್ರ ಸರ್ಕಾರದ ಉಚಿತವಾಗಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ ಎಂಬ ವಿಷಯ ಎಲ್ಲ ಕಡೆಯೂ ಹಬ್ಬುತ್ತಿದೆ ಕೆಲವರು ಈ ಸುದ್ದಿ ಸುಳ್ಳು ಎಂದು ಹೇಳುತ್ತ ಇದ್ದಾರೆ. ಆದರೆ ಇದು ಸುಳ್ಳು ಅಲ್ಲ . ನಿಜವಾಗಿಯೂ, ಕೇಂದ್ರ ಸರ್ಕಾರವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ. ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಬಹುದು. ಈ ಯೋಜನೆಯಲ್ಲಿ ನಿಮ್ಮ ಖಾತೆಗೆ ಹೊಲಿಗೆ ಯಂತ್ರ ಪಡೆಯಲು ಹಣ ನೀಡುತ್ತದೆ ಕೇಂದ್ರ ಸರ್ಕಾರ.
ಉಚಿತ ಹೊಲಿಗೆ ಯಂತ್ರ ಪಡೆಯಲು ಇರುವ ಮಾನದಂಡಗಳು:-
- ಅರ್ಜಿದಾರರು ಕಡ್ಡಾಯವಾಗಿ ಭಾರತದ ಪ್ರಜೆ ಆಗಿರಬೇಕು.
- ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಈಗಾಗಲೇ ಟೈಲರಿಂಗ್ ಕೆಲಸ ಮಾಡುತ್ತಿರಬೇಕು ಅಥವಾ ತರಬೇತಿ ಪಡೆದಿರಬೇಕು.
- ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಕನಿಷ್ಟ 18 ವರ್ಷ.
- ಉಚಿತ ಹೊಲಿಗೆ ಯಂತ್ರ ಯೋಜನೆ ಅರ್ಜಿದಾರರು ಆದಾಯ ಮತ್ತು ಜಾತಿ ಪ್ರಮಾಣಪತ್ರ ಹೊಂದಿರಬೇಕು.
ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:- ಆಧಾರ್ ಕಾರ್ಡ್, ವಿಳಾಸದ ಬಗ್ಗೆ ನಿಖರವಾದ ಮಾಹಿತಿ ಹೊಂದಿರುವ, ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಪಾಸ್ ಪೋರ್ಟ್ ಸೈಜ್ ಫೋಟೋ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?: ಇಲ್ಲಿ ಕ್ಲಿಕ್ ಮಾಡಿ ವೆಬ್ ಸೈಟ್ ಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಇಲ್ಲವೇ . ನೀವು ನಿಮ್ಮ ಹತ್ತಿರದ ಸಿಎಸ್‌ಸಿ(CSC) ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ಆ ರಸೀದಿಯನ್ನು(Receipt) ನೀಡುತ್ತಾರೆ ಅದನ್ನು ನೀವು ಭಧ್ರವಾಗಿ ಇರಿಸಿಕೊಳ್ಳಿ . ಏಪ್ರಿಲ್ ತಿಂಗಳಲ್ಲಿ ನೀವು ಹೊಲಿಗೆ ಯಂತ್ರವನ್ನು ಖರೀದಿಸಲು ಸಹಾಯಧನವನ್ನು ಪಡೆಯುತ್ತೀರಿ.
ಫಲಾನುಭವಿಗಳಿಗೆ ಸಿಗುವ ಲಾಭಗಳು :- ಹೊಲಿಗೆ ಯಂತ್ರ ಕೊಂಡುಕೊಳ್ಳಲು ಕೇಂದ್ರವು ನೇರವಾಗಿ ನಿಮ್ಮ ಖಾತೆಗೆ 15 ಸಾವಿರ ರೂ ಈ ಹಣವನ್ನು ನೀಡಲಾಗುತ್ತದೆ. ನಿಮ್ಮ ಆದಾಯವನ್ನು ಕೂಡ ನೀವು ಹೆಚ್ಚಿಸಿಕೊಳ್ಳಬಹುದ. ಕೇಂದ್ರ ಸರ್ಕಾರವು ₹20,000 ವರೆಗೆ ಸಾಲ ಸೌಲಭ್ಯವನ್ನು ನೀಡುತ್ತದೆ. ನೀವು ಈ ಹಣದಿಂದ ಹೊಲಿಗೆ ಅಂಗಡಿ ತೆರೆಯಲು ಅನುಕೂಲ ಆಗುತ್ತದೆ. ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಈ ಯೋಜನೆಯ ಫಲಾನುಭವಿ ಆಗಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವ ಕರ್ಮ ಯೋಜನೆ ಜಾರಿಗೆ ಬಂದಿದ್ದು ಯಾವಾಗ ?
17 ಸೆಪ್ಟೆಂಬರ್ 2023 ಪ್ರಧಾನಿ ನರೇಂದ್ರ ಮೋದಿಯವರ 73 ನೇ ಹುಟ್ಟುಹಬ್ಬದ. ಅಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಿ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ನಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿತು. ಈ ಯೋಜನೆಯು ಸಣ್ಣ ಉದ್ಯೋಗಿಗಳು ಮತ್ತು ನುರಿತ ಕುಶಲಕರ್ಮಿಗಳಿಗೆ ತರಬೇತಿ ನೀಡುತ್ತದೆ ಹಾಗೂ ಕೌಶಲ್ಯ ವಿಷಯಗಳ ಕುರಿತು ಸಲಹೆ ಮತ್ತು ಆಧುನಿಕ ತಂತ್ರಗಳ ಜ್ಞಾನದ ಜೊತೆಗೆ ಹಣದ ನೆರವನ್ನು ನೀಡುತ್ತದೆ. ಭಾರತದ 18 ಸಾಂಪ್ರದಾಯಿಕ ವೃತ್ತಿಗೆ ಸಹಾಯಧನ ಹಾಗೂ ವೃತ್ತಿಯ ಬಗ್ಗೆ ತರಬೇತಿ ನೀಡುತ್ತದೆ. ಮರಗೆಲಸ, ದೋಣಿ ತಯಾರಿಕೆ, ಕಮ್ಮಾರ, ಕುಂಬಾರಿಕೆ, ಶಿಲ್ಪಕಲೆ, ಚಮ್ಮಾರ, ಟೈಲರಿಂಗ್ ಅಂತಹ ಉದ್ದಿಮೆಗಳಿಗೆ ನೆರವಾಗುವುದು ಈ ಯೋಜನೆಯ ಉದ್ದೇಶ.
ಇದನ್ನೂ ಓದಿ: ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯ; ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಇದನ್ನೂ ಓದಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊಪ್ಪಳ ಇಲಾಖೆಯಿಂದ 38 ಖಾಲಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.