ಯಾರು ಬೇಕಾದ್ರೂ ಬರಲಿ ನಾವಂತೂ ಕರೆಂಟ್ ಬಿಲ್ ಕಟ್ಟಂಗಿಲ್ಲ! ಕೆಇಬಿಯವರ ಜೊತೆ ವಾದಕ್ಕಿಳಿದ ಶಿಕ್ಷಕಿ! ವೈರಲ್ ವಿಡಿಯೋ

ಕಾಂಗ್ರೆಸ್ ಪಕ್ಷ ಚುನಾವಣೆಗು ಮುನ್ನ ಗೆಲ್ಲಲು ಜನರನ್ನ ಸೆಳೆಯಲು ಸಿದ್ದಪಡಿಸಿದ್ದಾ ಪ್ರಣಾಳಿಕೆ ಕರ್ನಾಟಕದ ಜನರನ್ನ ಆಕರ್ಷಸುವಲ್ಲಿ ಯಶಸ್ವಿಯಾಯಿತು. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿ ಆಗಿ ಸದ್ಯ ಸಿಎಂ ಯಾರಗಬೇಕು ಅನ್ನುವ ಕಂಗಂಟನ್ನ ಹೈಕಮಾಂಡ್ ಭೇಧಿಸುವಲ್ಲಿ ಯಶಶ್ವಿಯಾಗಿ ಡಿಕೆಶಿ ಮನವೊಲಿಸಿ ಸಿದ್ದರಾಮಯ್ಯ ಅವ್ರನ್ನ ಕರ್ನಾಟಕದ ನೂತನ ಸಿಎಂ ಅಂತ ಹೇಳಲಾಗಿದೆ. ಇದೆಲ್ಲಾ ಪ್ರಹಸನದ ನಡುವೆ ರಾಜ್ಯದ ಹಲವೆಡೆ ಉಚಿತ ವಿದ್ಯುತ್ ನೀಡುವ ಯೋಜನೆ ಅನುಷ್ಠಾನಕ್ಕೂ ಮುನ್ನವೇ ಸಾಕಷ್ಟು ಚರ್ಚೆಯಾಗ್ತಿದ್ದು, ಫ್ರೀ ಕರೆಂಟ್ ಕೊಡುವುದಾಗಿ ಭರವಸೆ ನೀಡಿದ್ದು ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ತಲೆ ನೋವುವಾಗುವಂತೆ ಕಾಣ್ತಿದೆ. ಹೌದು ಈಗ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಗೆದ್ದು ಬಂದ ಮೇಲೆ ಅನೇಕ ಕಡೆಗಳಲ್ಲಿ ಜನರು ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ ಪಟ್ಟು ಹಿಡಿದು ಕುಳಿತಿದ್ದಾರೆ. ಕೆಲವರಂತೂ ಕರೆಂಟ್ ಬಿಲ್ ನೀಡಲು ಬರುವ KEB ಸಿಂಬ್ಬಂದಿಯನ್ನ ಗ್ರಾಮದಿಂದಲೇ ಓಡಿಸಿದ್ದಾರೆ. ಇತರಹದ ಘಟನೆಗಳು ಇದೀಗ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂತಹ ಘಟನೆಗಳು ರಿಪೀಟ್ ಆಗ್ತಿದ್ದು, ಬೆಸ್ಕಾಂ ಸಿಬ್ಬಂದಿಗೆ ಮಹಿಳೆ ಅವಾಜ್ ಹಾಕಿರೋ ವಿಡಿಯೋ ಸಖತ್ ವೈರಲ್ ಆಗ್ತಿದೆ. ಹಾಗಾದ್ರೆ ಉಚಿತ ವಿದ್ಯುತ್ ನೀಡುವ ಭರವಸೆಯಿಂದ ಕರ್ನಾಟಕದಲ್ಲಿ ಏನಾಗ್ತಿದೆ ಎಲ್ಲವನ್ನ ನೋಡೋಣ ಬನ್ನಿ.

WhatsApp Group Join Now
Telegram Group Join Now

ರಾಜ್ಯದ ಬಹುತೇಕ ಕಡೆ ಕೆಇಬಿ ಸಿಬ್ಬಂದಿಗಳ ಜನರ ವಾಗ್ವಾದ

ಹೌದು ಸಾಕಷ್ಟು ಸರ್ಕಸ್ ಗಳ ನಂತರ ಕಾಂಗ್ರೆಸ್ ಇದೀಗ ಪೂರ್ಣ ಬಹುಮತದೊಂದಿಗೆ ಗೆದ್ದು ಬಂದು ಸರ್ಕಾರ ರಚಿಸುವ ತಗಾದೆಯಲ್ಲಿರುವಾಗಲೇ, ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿದ ಕೆಲವೊಂದಷ್ಟು ಯೋಜನೆಗಳು ಕಾಂಗ್ರೆಸ್ ಸರ್ಕಾರಕ್ಕೆ ತಲೆನೋವಾಗುವ ಸಾಧ್ಯತೆಗಳಿವೆ. ಹೌದು ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ರಾಜ್ಯದ ಅನೇಕ ಕಡೆಗಳಲ್ಲಿ ಜನರು ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಕೆಲವರಂತೂ ಕರೆಂಟ್ ಬಿಲ್​ ನೀಡಲು ಬರುವ ರೀಡರ್​ರನ್ನು ಗ್ರಾಮದಿಂದಲೇ ಓಡಿಸಿದ್ದಾರೆ. ಅಲ್ದೇ ಅಲ್ಲಲ್ಲಿ ರೀಡರ್​ ಜತೆ ವಾಗ್ವಾದಕ್ಕಿಳಿದ ಪ್ರಕರಣಗಳೂ ಕಂಡುಬಂದಿದೆ. ಹೌದು ಕರೆಂಟ್​ ಬಿಲ್ ಉಚಿತ, ಆದರೆ ಕಾಂಗ್ರೆಸ್ ಕೆಲ ಕಂಡೀಶನ್​ಗಳನ್ನು ಹಾಕಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗಲು ಕಾರಣವಾಗಿದ್ದು ಈ ಮಧ್ಯೆ ಇದೀಗ ಕಲಬುರಗಿಯ ಒಂದು ಗ್ರಾಮದಲ್ಲಿ ಜೆಸ್ಕಾಂ ಅಧಿಕಾರಿಯ ಜತೆ ಮಹಿಳೆಯೊಬ್ಬರು ವಾಗ್ವಾದ ನಡೆಸಿದ್ದಾರೆ. ಸದ್ಯ ಇದರ ವಿಡಿಯೋ ಎಲ್ಲೆಡೆ ವೈರಲ್​ ಕೂಡ ಆಗುತ್ತಿದೆ. ಅಂದ ಹಾಗೆ ಜೆಸ್ಕಾಂ ಸಿಬ್ಬಂದಿಯೊಬ್ಬರು ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ಕನೆಕ್ಷನ್ ಕಟ್ ಮಾಡಲು ಬಂದಿದ್ದರು. ಹೌದು ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ವಯರ್ ಕನೆಕ್ಷನ್ ಕಟ್ ಮಾಡಲು ಬಂದ ಸಿಬ್ಬಂದಿಯೊಬ್ಬರ ಜತೆ ವಾಗ್ವಾದಕ್ಕಿಳಿದ ಮಹಿಳೆ, “ಕರೆಂಟ್ ಬಿಲ್ ಕಟ್ಟಂಗಿಲ್ರಿ ಸರ್.. ಕಾಂಗ್ರೆಸ್ ಸರ್ಕಾರ್ ಎಲ್ಲಾ ಫ್ರೀ ಫ್ರೀ ಅಂದಾದಲ್ರಿ?” ಎಂದು ಪ್ರಶ್ನಿಸಿದ್ದು ಬಿಲ್ ಕಟ್ಟಮ್ಮ ಅಂತ ಕೇಳಿದ ಜೆಸ್ಕಾಂ ಸಿಬ್ಬಂದಿಯನ್ನೇ ಮಹಿಳೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯ

ಕಾಂಗ್ರೆಸ್ ದು ಬರಿ ಬೋಗಸ್ ಅಂತ ಆವಾಜ್ ಹಾಕಿದ ಮಹಿಳೆ

ಹೌದು ವಿಡಿಯೋದಲ್ಲಿ ಮಹಿಳೆ ಮಾತನಾಡುವಾಗ ಬಹಳ ಸ್ಪಷ್ಟವಾಗಿ ತುಂಬಾ ಕಾನ್ಫಿಡೆನ್ಸ್ ನಲ್ಲಿ ಮಾತನಾಡಿದ್ದಾರೆ. ಹೌದು “ಯಾರು ಬಿಲ್ ಕಟ್ಟಂಗಿಲ್ಲ ಅಂತಾ ಹೇಳಿನೇ. ನಮ್ಮಿಂದ ಕಾಂಗ್ರೆಸ್ ನವ್ರು ವೋಟ್ ಹಾಕಿಸಿಕೊಂಡ್ರು. ಹಾಗಾದ್ರೆ ಕಾಂಗ್ರೆಸ್ ಹೇಳಿದ್ದು ಬೋಗಸ್ಸಾ? ಅಂತ ಪ್ರಶ್ನೆ ಮಾಡಿದ್ದಾರೆ. ಆಗ ಸಿಬ್ಬಂದಿ ಅದೆಲ್ಲ ಆಗಲ್ಲ ಬಿಲ್ ಕಟ್ಟಿ ಅಂದಾಗ ಮಹಿಳೆ ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ಕನೆಕ್ಷನ್ ಕಟ್ ಮಾಡಲು ಜೆಸ್ಕಾಂ ಸಿಬ್ಬಂದಿ ಮುಂದಾದಾಗ ಅದು ಹೇಗೆ ಕಟ್ ಮಾಡ್ತಿರ ಕರೆಂಟ್ ಕನೆಕ್ಷನ್, ಜೂನ್‌ನಿಂದ ಕಾಂಗ್ರೆಸ್‌ನವರು ಕಟ್ಟಬೇಡಿ ಅಂದಾರ್. ಯಾರು ಬರ್ತಾರೋ ಬರ್ಲಿ.. ನಾವಂತು ಬಿಲ್ ಕಟ್ಟಂಗಿಲ್ಲ” ಎಂದು ಮಹಿಳೆ ಪಟ್ಟು ಹಿಡಿದು ಕುಳಿತಿದ್ದಾರೆ.ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ.

ಈ ರೀತಿಯ ಘಟನೆಗಳು ತುಂಬಾ ಕಡೆ ರಾಜ್ಯದ ನಾನಾ ಭಾಗಗಳಲ್ಲಿ ನಡೀತಿದೆ. ಆದರೆ ಬೆಳಕಿಗೆ ಬರುತ್ತಿಲ್ಲ ಅಷ್ಟೆ. ಈ ತರಹದ ಕೆಲವೊಂದು ಘಟನೆಗಳು ಮಾತ್ರ ಸಾಮಾಜಿಕ ಮಧ್ಯಮಗಳಿಂದ ವೈರಲ್ ಆಗ್ತಿದೆ. ಒಟ್ಟಿನಲ್ಲಿ ಚನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಲು ಪ್ರಣಾಳಿಕೆಯಲ್ಲಿ ವಿಭಿನ್ನ ಯೋಜನೆಗಳನ್ನ ಘೋಷಿಸಿದ ಇದೀಗ ಗೆದ್ದ ನಂತರ ಅದೇ ಜನಪ್ರಿಯ ಯೋಜನೆಗಳು ಮುಳುವಾಗುವ ಸಾಧ್ಯತೆ ಹೆಚ್ಚಿಗೆಯಗ್ತಿದ್ದು, ಅದರಲ್ಲೂ ವಿಶೇಷವಾಗಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಫ್ರೀ ಕರೆಂಟ್ ಭರವಸೆ ತೀವ್ರ ಕಗ್ಗಂಟಾಗಿದೆ. ಹೌದು ಹಳ್ಳಿಗಡಿನ ಜನರು ಮುಗ್ದರಾಗಿದ್ದು ಅವರನ್ನ ಮೆಚ್ಚಿಸೋದು ಒಂದು ರೀತಿಯ ಸವಾಲಿನ ಕೆಲ್ಸವೇ ಸರಿ .ಯಾಕಂದ್ರೆ ಕೆಲವೊಂದಷ್ಟು ಜನರು ಈ ಯೋಜನೆಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಓಟ್ ನೀಡಿದ್ದು, ಇದೀಗ ಅವುಗಳನ್ನ ನೀಡಲೇಬೇಕು ಅಂತ ಪಟ್ಟು ಹಿಡಿದು ಕೂತ್ತಿದ್ದಾರೆ.

ಇದನ್ನೂ ಓದಿ: “ಮೀಡಿಯಾಗಳು ನಾನು ದರ್ಶನ್ ಫ್ಯಾನ್ ಅಂತ ಸಫೋರ್ಟ್ ಮಾಡ್ಲಿಲ್ಲ” -ಚಂದನ್ ಗೌಡ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram